Snehithpatel
ಹೆಸರು: ಸ್ನೇಹಿತ್ ಪಟೇಲ್
ತರಗತಿ; ಪ್ರಥಮ ಬಿ ಕಾಂ
ದಾಖಲಾತಿ ಸಂಖ್ಯೆ: ೧೫೩೫೨೫
ಸ್ನೇಹಿತ್ ಪಟೇಲ್ ಆದ ನಾನು ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ತಾಲೂಕಿನ ಕಡಿದಾಳದಿಂದ ಬಂದಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜು ವಸತಿ ನಿಲಯದಲ್ಲಿ ಇರುತ್ತೆನೆ.
- ವಿದ್ಯಾಭ್ಯಾಸ
ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಜೇ.ವಿ.ಎಸ್ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ಮುಗಿಸಿದ್ದೇನೆ. ನಂತರ ನನ್ನ ಪಿ.ಯು.ಸಿ ವಿದ್ಯಾಭ್ಯಾಸವನ್ನು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಅದೇ ಕಾಲೇಜಿನಲ್ಲಿ ಪ್ರಥಮ ಬಿ ಕಾಂ ನಲ್ಲಿ ಓದುತ್ತಿದ್ದೇನೆ.
- ಹವ್ಯಾಸಗಳು
ನಾನು ಉತ್ತಮ ಆಟಗಾರನಾಗಿದ್ದು ಕ್ರಿಕೆಟ್ ಮತ್ತು ವಾಲಿಬಾಲ್ ನನ್ನ ನೆಚ್ಚಿನ ಆಟಗಳಾಗಿವೆ. ಚಲನಚಿತ್ರ ನೋಡುವುದು, ಸಂಗೀತ ಕೇಳುವುದು, ಗೆಳೆಯರೊಂದಿಗೆ ಸಮಯ ಕಳೆಯುವುದು ನನ್ನ ಇತರ ಹವ್ಯಾಸಗಳಾಗಿವೆ.
- ಸಾಧನೆಗಳು
ನಾನು ಒಬ್ಬ ಉತ್ತಮ ವಾಲಿಬಾಲ್ ಆಟಗಾರನಾಗಿದ್ದು ಜಿಲ್ಲಾಮಟ್ಟಕ್ಕೆ ಹೋಗಿದ್ದೇನೆ. ಅಂತರಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದೇನೆ.ಮತ್ತು ಥ್ರೋಬಾಲ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಹೋಗಿದ್ದೇನೆ. ನಾನು ಪಿ.ಯು.ಸಿ ಪರೀಕ್ಷೆಯಲ್ಲಿ ೮೯% ಅಂಕಗಳಿಸಿದ್ದೇನೆ.
- ಗುರಿ
ನಾನು ಬಿ ಕಾಂ ಮುಗಿದ ನಂತರ ಎಂ ಬಿ ಎ ಅಥವಾ ಸಿ ಎಸ್ ಮಾಡಬೇಕೆಂದಿರುವೆ.