ಸದಸ್ಯ:Sindhu BA/ನನ್ನ ಪ್ರಯೋಗಪುಟ4
ಕುದುರೆ ಮಸಾಲೆ ಸೊಪ್ಪು
ಬದಲಾಯಿಸಿಕುದುರೆ ಮಸಾಲೆ ಸೊಪ್ಪಿನಗಿಡ ಪೌಷ್ಟಿಕರವಾದ ಮೂಲಿಕೆ ಗಿಡ ಎಂದು ಕಂಡು ಬಂದಿದೆ . ಮನುಷ್ಯನ ವಿವಿಧ ದೈಹಿಕ ಸಮಸ್ಯೆಗಳನ್ನು ಪರಿಹರಿಸಿ ನವಚೈತನ್ಯ ನೀಡುವ ಶಕ್ತಿ ಈ ಸೊಪ್ಪಿಗಿದೆ. ಈ ಸೊಪ್ಪನ್ನು ಬೆಳೆಸುವ ಕ್ರಮ ಕಷ್ಟವೇನಿಲ್ಲ, ಈ ಬಹೊಪಯೋಗಿ ಸೊಪ್ಪನ್ನು ವಿಶೇಷ ಪರಿಶ್ರಮಇಲ್ಲದೆ ಬೆಳೆಸಬಹುದು. ಕುದುರೆ ಮಸಾಲೆ ಸೊಪ್ಪಿನಗಿಡ ಒಂದು ಅಡಿಯಷ್ಟು ಬೆಳೆಯಬಲ್ಲದು. ಎಲೆಗಳು ತುಂಬಾ ಹಸಿರಾಗಿದ್ದು, ಒಂದಾದ ಮೇಲೊಂದರಂತೆ ಜೋಡಿಸಿದ್ದು, ಇದರ ಹೂಗಳು ಕಡುಗೆಂಪು ಅಥವಾ ಊದಾ ಬಣ್ಣ ಹೊಂದಿರುತ್ತದೆ. ಈ ಗಿಡಕ್ಕೆ ನಿರ್ದಿಷ್ಟ ವಾತಾವರಣದ ಅಗತ್ಯವಿಲ್ಲ, ಅಂದರೆ ಈ ಗಿಡಎಲ್ಲಾರೀತಿಯ ಮಣ್ಣು ಹಾಗೂ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಮಡಿಗಾಕೋ ಸಟೈವ. ಇದು ಮೂಲತಃ ಯುರೋಪಿನದು. ಅರಬರು ಇದನ್ನು ಸಸ್ಯಕ್ಷೇತ್ರದ ರಾಜರ ರಾಜ ಎಂದುಕರೆದಿದ್ದಾರೆ. ಅರಬ್‍ದೇಶದ ಜನರು ಈ ಸೊಪ್ಪನ್ನು ಸತ್ವಶಾಲಿ ಆಹಾರವೆಂದು ಕುದುರೆಗೆ ಬಳಸುತ್ತಾರೆ. ಸಮಶೀತೋಷ್ಣ ಮತ್ತು ಉಷ್ಣವಲಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಇದನ್ನು ಭಾರತದಲ್ಲಿ ಯಥೇಚ್ಛವಾಗಿ ಬೆಳೆದು, ಕುದುರೆಗಳಿಗೆ ವಿಶೇಷವಾಗಿ ಸಂಸ್ಥೆ ಪಂದ್ಯಕ್ಕೆ ಸೀಮಿತವಾದ ಕುದುರೆಗಳಿಗೆ ಆಹಾರವಾಗಿಕೊಡಲಾಗುತ್ತಿದೆ.[೧] ಈ ಸೊಪ್ಪಿನಲ್ಲಿ ಎ, ಬಿ, ಡಿ, ಜಿ ಹಾಗೂ ಸ್ವಲ್ಪ ಮಟ್ಟಿನ ಸಿ ಜೀವಸತ್ವಗಳಿದ್ದು, ಹೆಪ್ಪುಗಟ್ಟುವ ಕೆ ಜೀವಸತ್ವ ಕೂಡಾ ಇರುತ್ತದೆ. ಲವಣಾಂಶಗಳಾದ ಕ್ಯಾಲ್ಸಿಯಂ, ಮೆಗ್ನೇಷಿಯಂ ರಂಜಕ, ಕ್ಲೋರಿನ್, ಸೋಡಿಯಂ, ಗಂಧಕ ಮತ್ತು ಸಿಲಿಕಾನ್‍ಗಳು ಇವೆ. ಸಾಮಾನ್ಯವಾಗಿ ಮನುಷ್ಯನ ಬೆಳವಣಿಗೆ ಹಾಗೂ ಅಂಗಾಂಗಗಳು ಕ್ರಿಯಾಶೀಲವಾಗಿರಲು ಈ ಮೂಲಾಂಶಗಳ ಅಗತ್ಯ ಹೆಚ್ಚಾಗಿರುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆಯವರ ಪ್ರಕಾರ ಈ ಸೊಪ್ಪಿನಲ್ಲಿಗೋಧಿ ಮತ್ತು ಜೋಳಕ್ಕಿಂತ 1 ರಿಂದ 1.5 ಪಟ್ಟು ಸಾರಜನಕ ಹೆಚ್ಚಾಗಿರುವುದು ಸಂಶೋಧನೆಗಳಿಂದ ತಿಳಿದಿದೆ. ಶರ್ಕರ ಪಿಷ್ಟಗಳು ಆಹಾರಧಾನ್ಯಗಳಲ್ಲಿ ಆದಷ್ಟು ಇವೆ. ಇದರಲ್ಲಿ ಕೆಲವು ಅಮೈನೋ ಆಮ್ಲಗಳು, ಲೈಸಿನ್, ಥೈರೋಸಿದ್ ಮತ್ತು ಟ್ರಿಪ್ಪೊಸಿನ್ ಅಡಕವಾಗಿದೆ. ಇದರಲ್ಲಿನಾರಿನ ಅಂಶ ಶೇಕಡಾ90ರಷ್ಟು ಇರುತ್ತದೆ. ಈ ಸೊಪ್ಪು ಸುಲಭವಾಗಿ ಪಚನವಗುತ್ತದೆ.
ಔಷಧೀಯ ಗುಣಗಳು
ಬದಲಾಯಿಸಿಕುದುರೆ ಮಸಾಲೆ ಗಿಡದ ಬೀಜಗಳು, ಎಲೆಗಳು ಹಾಗೂ ಕಾಂಡ ಮಹತ್ತರವಾದ ಗುಣಲಕ್ಷಣಗಳನ್ನು ಹೊಂದಿವೆ. ಈ ವಿಶಿಷ್ಟ ಲಕ್ಷಣಗಳು, ಗಿಡದ ಬೇರುಗಳು ಮಣ್ಣಿನಿಂದ ಹೀರಿಕೊಳ್ಳುವ ಆಹಾರಾಂಶಗಳಿಂದ ಬರುತ್ತದೆ. ಕುದುರೆ ಮಸಾಲೆ ಗಿಡವು ನೀರಿನಲ್ಲಿ ಕರಗುವಂತಹ ಆಹಾರಾಂಶಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ಅಮೇರಿಕ ಸಂಯುಕ್ತ ಸಂಸ್ಥಾನದ ಡಾ. ಬೀಸ್‍ಚೊನ್ಸ್ ಎಂಬ ಕೃಷಿ ವಿಜ್ಞಾನಿಯು ಹೆಳಿದ್ದಾರೆ. 100 ಗ್ರಾಂ ಕುದುರೆ ಮಸಾಲೆ ಸೊಪ್ಪಿನಲ್ಲಿ ಕನಿಷ್ಟ 130 ರಿಂದ 142 ರಷ್ಟು ಕ್ಷಾರೋತ್ಪನ್ನ ಮೂಲವಸ್ತುಗಳು ಇರುತ್ತವೆ. ಆದುದರಿಂದ ಈ ಗಿಡಮೂಲಿಕೆಯು ಅನೇಕ ರೋಗರುಜಿನೆಗಳನ್ನು ಗುಣಪಡಿಸಬಲ್ಲದು. ಇದು ಸ್ವಲ್ಪ ಮಟ್ಟಿಗೆ ಬೇಧಿ ನಿರೋಧಕ ಪಚನಕಾರಿ, ಮೂತ್ರ ವರ್ಧಕ ಮತ್ತು ಶಕ್ತಿ ವರ್ಧಕವೂ ಹೌದು. ಅಲ್ಲದೆ, ಸೋಂಕು ರೋಗತಡೆಗಟ್ಟುವ ಶಕ್ತಿ ಈ ಗಿಡಮೂಲಿಕೆಗಿದೆ.[೨] ಕುದುರೆ ಮಸಾಲೆ ಸೊಪ್ಪು ಮೂತ್ರಜನಕಾಂಗದ ಮೆಲೆ ತಕ್ಷಣ ಪರಿಣಾಮಉಂಟುಮಾಡುವುದು. ಇದನ್ನು ಯಶಸ್ವಿಯಾಗಿ ಮೂತ್ರಕೋಶದ ಉರಿಯೂತ ಮತ್ತು ಜಿಲೋದರ ತೊಂದರೆಗಳಲ್ಲಿ ಚಿಕಿತ್ಸೆಗಾಗಿ ಉಪಯೋಗಿಸುತ್ತಾರೆ. ಕುದುರೆ ಮಸಾಲೆ ಸೊಪ್ಪಿನ ತಾಜಾ ಎಲೆಗಳಿಂದ ಹಿಂಡಿ ತೆಗೆದ ರಸವು ಹೃದಯ ರೋಗ ನಿವಾರಣೆಯಾಗಲು ಬಹಳ ಉಪಯೋಗಕಾರಿಯಾಗಿದೆ. ಈ ರಸ ಬಹಳ ಶಕ್ತಿವರ್ಧಕ. ಇದನ್ನು ಕ್ಯಾರೆಟ್ ರಸದೊಂದಿಗೆ ಸೇರಿಸಿ ತೆಗೆದುಕೊಂಡಾಗಇದರ ಶಕ್ತಿ ಪ್ರಬಲಗೊಳ್ಳುವುದು. ಇದನ್ನು ದಿನನಿತ್ಯ ಉಪಯೋಗಿಸಿದಲ್ಲಿ ಹೊಟ್ಟೆಯ ನೋವಿನಿಂದ ಮುಕ್ತವಾಗಬಹುದು. ಬೀಜಗಳಿಂದ ತಯಾರಿಸಿದ ಕಷಾಯ ಸೇವಿಸಿದರೆ ಅತೀ ಮಹತ್ವದಕ್ಷಾರ ಸಂಬಧದ ಸೂಕ್ಷ್ಮ ಆಮ್ಲಗಳು ದೇಹ ಸೇರುತ್ತದೆ. ಇದಲ್ಲದೆ ಹೊಟ್ಟೆ ತಲ್ಲಣಗೊಂಡ ಸಮಯದಲ್ಲಿ ಈ ಕಷಾಯ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಮನಸ್ಸಿಗೆ ಉಲ್ಲಾಸ ತರುವಂತಹ ಸ್ವಾದಿಷ್ಟ ಕಷಾಯ. ಅದ್ದರಿಂದ ಇದನ್ನು ಮುಂಜಾನೆ ಸೇವಿಸಿದರೆ ಉತ್ತಮ. ಅಲ್ಲದೆ ಈ ಕಷಾಯ ಸಂಧಿವಾತದ ರೋಗಕ್ಕೂಉಪಯೋಗಕಾರಿಯಾಗಿದೆ. ಈ ಕಷಾಯವನ್ನು ದಿನಕ್ಕೆ 6 ಲೋಟಗಳಂತೆ ಎರಡು ವಾರತೆಗೆದುಕೊಂಡರೆ ಸಂಧಿವಾತ ಸಮಸ್ಯೆಗೆ ಉತ್ತಮ ಪರಿಣಾಮ ಸಿಗುವುದು. ಇದರ ರಸದೊಂದಿಗೆ ಕ್ಯಾರೆಟ್ ರಸ ಹಾಗೂ ಲೆಟ್ಯೂನ್ ರಸ ಸೇರಿಸಿ ಪ್ರತಿದಿನವೂ ತೆಗೆದುಕೊಂಡಲ್ಲಿ ಕೂದಲಿನ ಉತ್ತಮ ಬೆಳವಣಿಗೆ ಕಾಣಬಹುದು.
ಬಳಕೆಯ ವಿಧಾನಗಳು
ಬದಲಾಯಿಸಿಕುದುರೆ ಮಸಾಲೆ ಗಿಡಮೂಲಿಕೆಗಳನ್ನು ವಿವಿಧ ನಮೂನೆಗಳಲ್ಲಿ ಉಪಯೋಗಿಸುತ್ತೇವೆ.ಇದರ ಬೀಜಗಳನ್ನು ಮೊಳಕೆ ಬರಿಸಿ ಬಳಸಲಾಗುವುದು. ಅತ್ಯುತ್ತಮ ಬೀಜಗಳನ್ನು ಮೊಳಕೆ ಬರಿಸಿದಾಗ ಅವು ರಸವತ್ತಾಗಿದ್ದು ಹೆಚ್ಚಿನ ಪೌಷ್ಟಿಕಾಂಶ ಪಡೆಯುತ್ತವೆ. ತರಕಾರಿ ಸಲಾಡ್ ಮತ್ತು ಸೂಪ್‍ಗಳಲ್ಲಿ ಇವನ್ನು ಬಳಸಬಹುದು. ಕಷಾಯ ತಯಾರಿಸಲು ಬೀಜಗಳನ್ನಾದರೂ ಬಳಸಬಹುದು ಹಾಗೂ ಗಿಡದ ಎಲೆಗಳನ್ನು ಒಣಗಿಸಿಯೂ ತಯಾರಿಸಬಹುದು.
ಉಲ್ಲೇಖ
ಬದಲಾಯಿಸಿಔಷಧ ಯುಕ್ತ ಅಪೂರ್ವ ಸಸ್ಯಗಳು- ಶಶಿಧರ