ಸದಸ್ಯ:Shwetha mundruppady/ನನ್ನ ಪ್ರಯೋಗಪುಟ7

ಶ್ರೀ ಚಂದ್ರನಾಥಸ್ವಾಮಿ ಬಸದಿ, ವಾಲ್ಪಡಿ, ಪೆರಿಬೆಟ್ಟು

ಈ ಬಸದಿಯ ಹೆಸರು ವಾಲ್ಪಾಡಿ ಶ್ರೀ ಚಂದ್ರನಾಥಸ್ವಾಮಿ ಬಸದಿ, ಪೆರಿಬೆಟ್ಟು. ಈ ಬಸದಿಯು ಮಂಗಳೂರು ತಾಲೂಕಿನ ವಾಲ್ಪಾಡಿ ಗ್ರಾಮದ ವಾಲ್ಪಾಡಿ ಎಂಬ ಊರಿನಲ್ಲಿದೆ. ಮೂಡುಬಿದರೆ-ನಾರಾವಿ ರಸ್ತೆಯ ಕೊಣಜೆ ಕುಕ್ಕದ ಕಟ್ಟಿ-ದರೆಗುಡ್ಡೆ ರಸ್ತೆಯಲ್ಲಿ ವಾಲ್ಪಾಡಿಗೆ ಬಂದು 3 ಕಿ.ಮೀ. ದೂರದಲ್ಲಿರುವ ಬಸದಿಯನ್ನು ತಲುಪಬಹುದು.

ನಿರ್ಮಾಣ

ಬದಲಾಯಿಸಿ

ಬಸದಿಯನ್ನು ಪೆರಿಬೆಟ್ಟು ಮನೆಯ ದುಗ್ಗಣ್ಣ ಶೆಟ್ಟಿಯವರು 1895ನೇ ಇಸವಿಯಲ್ಲಿ ಕಟ್ಟಿಸಿದ್ದರು.[]

ವಿಗ್ರಹಗಳು

ಬದಲಾಯಿಸಿ

ಬಸದಿಯಲ್ಲಿ ಶ್ರೀ ಪದ್ಮಾವತೀ ಅಮ್ಮನವರ ಮೂರ್ತಿ, ಬ್ರಹ್ಮ ದೇವರ ಮೂರ್ತಿಯಿದೆ. ಎದುರು ಮಾನಸ್ತಂಭ ಇಲ್ಲ. ಬಸದಿಯ ಎಡ-ಬಲ ಬದಿಗಳಲ್ಲಿರುವ ಗೋಪುರವನ್ನು ವಿಶೇಷ ಪೂಜೆ-ಇತರ ಕಾರ್ಯಕ್ರಮಗಳು ನಡೆಯುವಾಗ ಜನರು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಬಸದಿಯ ಎದುರಿನ ಪ್ರಾರ್ಥನಾ ಮಂಟಪದ ಗೋಡೆಯ ಮೇಲೆ ದ್ವಾರಪಾಲಕರ ಬಣ್ಣದ ಚಿತ್ರಗಳಿವೆ. ಗೋಡೆಗಳ ಮೇಲೆ ಬೇರೆ ಯಾವುದೇ ಚಿತ್ರಗಳಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ಅಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ತೀರ್ಥಂಕರ ಮಂಟಪದಲ್ಲಿ ಗಂಧಕುಟಿಯಿದೆ. ಗಂಧಕುಟಿಯ ಬಳಿಯಲ್ಲಿ ಗಣಧರ ಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳು ಇವೆ. ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ. ಮೂಲ ಸ್ವಾಮಿ ಮೂರ್ತಿ ಪಂಚಲೋಹ ಆಗಿದ್ದು, ಇದು ಸುಮಾರು 9ಅಡಿ ಎತ್ತರ ಇರಬಹುದು. ಖಡ್ಗಾಸನ ಭಂಗಿಯಲ್ಲಿದ್ದು, ಪ್ರಭಾವಳಿಯನ್ನು ಹೊಂದಿದೆ. ಕೆಳಗೆ ಯಕ್ಷ-ಯಕ್ಷಿಯರ ಮೂರ್ತಿಗಳಿದ್ದು, ಪ್ರಭಾವಳಿಯು ನಯವಾಗಿದ್ದು, ಬದಿಗಳಲ್ಲಿ ವಿಭಿನ್ನ ಅಲಂಕಾರಿಕ ಆಕೃತಿಗಳನ್ನೂ, ಮೇಲ್ಗಡೆ ಕೀರ್ತಿಮುಖವನ್ನೂ ಹೊಂದಿದೆ. ಕೆಳಗಡೆ ಚಂದ್ರ ಲಾಂಛನವು ಸ್ಪಷ್ಟವಾಗಿ ಕಂಡುಬರುತ್ತದೆ. ಬಸದಿಯ ಅಂಗಳದ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಇಲ್ಲಿ ತ್ರಿಶೂಲ, ನಾಗರಕಲ್ಲು ಇತ್ಯಾದಿಗಳು ಇವೆ. ಇವೆಲ್ಲವನ್ನೂ ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಸುತ್ತಲೂ ಮುರಕಲ್ಲಿನಿಂದ ಪ್ರಾಕಾರ ಗೋಡೆಯನ್ನು ನಿರ್ಮಿಸಲಾಗಿದೆ.

ನಿತ್ಯ ಪೂಜೆ ನಡೆಯುತ್ತದೆ. ಮಾತೆ ಪದ್ಮಾವತೀ ದೇವಿಯ ಮೂರ್ತಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ದಿನವೂ ಮೂಲಸ್ವಾಮಿಗೆ ಕ್ಷೀರಾಭಿಷೇಕ, ಜಲಾಭಿಷೇಕ ಮಾಡಲಾಗುವುದು. ವಿಶೇಷ ದಿನಗಳಲ್ಲಿ ಮಂಗಳಾರತಿ ಪೂಜೆ ಮಾಡಲಾಗುತ್ತದೆ. ಇಲ್ಲಿಯ ಪದ್ಮಾವತೀ ಅಮ್ಮನವರಿಗೆ ವಿಶೇಷ ಹರಕೆಗಳು ಬರುತ್ತವೆ. ಬಸದಿಯಲ್ಲಿ ಒಂದು ದಿನದಲ್ಲಿ ಒಂದು ಬಾರಿ ಪೂಜೆ ನಡೆಯುತ್ತದೆ. ಈ ಬಸದಿಯಲ್ಲಿ ವಾರ್ಷಿಕ ಪೂಜೆ, ಮಹಾನವಮಿ ಪೂಜೆ, ದೀಪಾವಳಿ ನೋಂಪಿ, ಶ್ರಾವಣ ಮಾಸದ ಪೂಜೆ ಹೀಗೆ ಕೆಲವು ವಿಶೇಷ ಪೂಜೆಗಳು ನಡೆಯುತ್ತವೆ.

ಉಲ್ಲೇಖಗಳು

ಬದಲಾಯಿಸಿ

ಟೆಂಪ್ಲೇಟು:Rerlist

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರ ದರ್ಶನ (೧ ed.). ಉಜಿರೆ: ಮಂಜುಶ್ರೀ ಪಿಂಟರ್ಸ್. p. ೨೮೯-೨೯೦.