ಸದಸ್ಯ:Shwetha mundruppady/ನನ್ನ ಪ್ರಯೋಗಪುಟ4

'''ಶಾಂತನಾಥ ಬಸದಿ, ಆರಿಕಲ್ಲು'''

ಆರಿಕಲ್ಲು ಶಾಂತಿನಾಥ ಸ್ವಾಮಿ ಬಸದಿಯು ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದಲ್ಲಿದೆ.

ಶಿಲಾ ವಿನ್ಯಾಸ

ಬದಲಾಯಿಸಿ

ಬಸದಿಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಬಲಬದಿಯ ಗೋಡೆಯ ಮೇಲೆ ಸರಸ್ವತಿ ಮತ್ತು ಎಡಬದಿಯ ಗೋಡೆಯ ಮೇಲೆ ಲಕ್ಷ್ಮೀಯ  ವರ್ಣಚಿತ್ರಗಳನ್ನು ಕಾಣಬಹುದು. ಒಳಗೆ ಪ್ರವೇಶಿಸಿದಾಗ, ಸಿಗುವ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲದಿದ್ದರೂ ಇಲ್ಲಿ ಜಯಘಂಟೆ ಮತ್ತು ಜಾಗಟೆ ಗಳನ್ನು ತೂಗಿ ಹಾಕಲಾಗಿದೆ. ಇದಕ್ಕಿಂತ ಮುಂದೆ ಇರುವ ಮಂಟಪದಲ್ಲಿ ಗಂಧಕುಟಿ ಇದೆ. ಆದರೆ ಇಲ್ಲಿ ಯಾವುದೇ ಹೆಚ್ಚಿನ ಪೂಜಾ ಮೂರ್ತಿಗಳಿಲ್ಲ, ಬಳಿಯಲ್ಲಿ ಶ್ರೀ ಪದ್ಮಾವತೀ ದೇವಿಯ ಮೂರ್ತಿ ಇದ್ದು ಅದಕ್ಕೆ ಸೀರೆಉಡಿಸಿ, ಬಳೆಗಳನ್ನು ಹಾಕಿ ಪೂಜೆ ಮಾಡಲಾಗುತ್ತದೆ. ದೇವಿಯ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿರುವ ಯಾವುದೇ ಬಿಂಬಗಳ ಮೇಲೆ ಹಳೆಯ ಬರವಣಿಗೆಯು ಕಂಡು ಬರುವುದಿಲ್ಲ. ಗರ್ಭಗೃಹದಲ್ಲಿ ಶ್ರೀ ಶಾಂತಿನಾಥ ಸ್ವಾಮಿಯ ಚಿಕ್ಕದಾಗಿರುವ ಪಂಚ ಲೋಹದ ವಿಗ್ರಹವಿದೆ. ಖಡ್ಗಾಸ ಭಂಗಿಯಲ್ಲಿರು ಈ ಮೂರ್ತಿಯ ಮೂರು ಬದಿಯಲ್ಲಿ ಮಕರ ತೋರಣದ ಅಲಂಕಾರವಿರುವ ಪ್ರಭಾವಳಿಯಿದೆ.ಬಸದಿಯ ಪ್ರಾಂಗಣದ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ.[]

ಹುಂಬುಚದಂತೆ ಅಮ್ಮನವರ ಎದುರು ಹೂ ಹಾಕಿ ಪ್ರಸಾದ ನೋಡುವ ಅಥವಾ ಅನುಮತಿ ಕೇಳುವ ಪದ್ಧತಿ ಇದೆ. ದಿನವೂ ಬಸದಿಯ ಈ ಮೂಲ ಸ್ವಾಮಿಗೆ ಕ್ಷೀರಾಭಿಷೇಕ, ಜಲಾಭಿಷೇಕ ಇತ್ಯಾದಿಗಳನ್ನು ಮಾಡಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಇಲ್ಲಿ ಮೂರು ಬಾರಿಯ ಪೂಜೆ ಯ ಬದಲು ಶ್ರಾವಕರ ಅನುಕೂಲದ ಅನುಸಾರ ದಿನಕ್ಕೆ ಒಂದು ಬಾರಿ ಪೂಜೆಯನ್ನು ನಡೆಸಲಾಗುತ್ತದೆ .

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರ ದರ್ಶನ (೧ ed.). ಉಜಿರೆ: ಮಂಜುಶ್ರೀ ಪಿಂಟರ್ಸ್. p. ೩೧೯.