ಸದಸ್ಯ:Shwetha mundruppady/ನನ್ನ ಪ್ರಯೋಗಪುಟ2

'''ಬಾಲೇಶ್ವರ ಆದಿನಾಥ ಸ್ವಾಮಿ ಬಸದಿ, ಪಂಜಿಕಲ್ಲು'''

ಈ ಬಸದಿಯು ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿದೆ. ಬಂಟ್ವಾಳದಿಂದ ಮೂಡಬಿದ್ರೆ ಮಾರ್ಗವಾಗಿ 6 ಕಿಲೋಮೀಟರ್ ಬಂದು ನಂತರ ಅಣ್ಣಳಿಕೆ ಎಂಬಲ್ಲಿ ಬಲಕ್ಕೆ ತಿರುಗಿ ಅಲ್ಲಿಂದ 2 ಕಿಮೀ ಕ್ರಮಿಸಿದರೆ ಬಸದಿ ಸಿಗುತ್ತದೆ. []

ನಿರ್ಮಾಣ

ಬದಲಾಯಿಸಿ

ಬಸದಿಯನ್ನು ಬಾಲೇಶ್ವರ ಕುಟುಂಬದವರು ಸುಮಾರು 200 ವರ್ಷಗಳ ಹಿಂದೆ ಕಟ್ಟಿಸಿದ್ದಾರೆ.

ಇತಿಹಾಸ

ಬದಲಾಯಿಸಿ

ಪ್ರಾಚೀನ ಕಾಲದಲ್ಲಿ ಈ ಗ್ರಾಮದಲ್ಲಿ ಜಾಸ್ತಿ ಹಂದಿಗಳು ಇದ್ದ ಕಾರಣ ಅವರನ್ನು ಭೇಟೆಯಾಡುದಕ್ಕಾಗಿ ಬೇಡರು ಕಾಡಿನಲ್ಲಿ ಹೋಗುತ್ತಿದ್ದರು.  ಒಂದು ಸಂದರ್ಭ ಅವರು ಮಾತ್ರ ಹಂದಿಯನ್ನು ಬೇಟೆಯಾಡಿದರು. ಅದಕ್ಕೆ ಬಾಣ ಬಿಡಲು ಗುರಿ ಇಟ್ಟಾಗ ಈ ಬಸದಿಯ ಬಳಿಯಲ್ಲಿ ಬೆಂಕಿ ಬಿತ್ತು. ಆಗ ಬೇಡ ಹಂದಿಯನ್ನು ಬಿಟ್ಟು ವಸತಿಗೆ ಬಂದ. ಆದರೆ ಆ ಹಂದಿ ಅಲ್ಲಿ ಕಲ್ಲಾಗಿ ಹೋಗಿತ್ತು. ಆದುದರಿಂದ ಈ ಬಸದಿಯನ್ನು ಪಂಜಿಕಲ್ಲು ಬಸದಿಯೆಂದು ಕರೆಯುತ್ತಾರೆ.

ಆರಾಧನೆ

ಬದಲಾಯಿಸಿ

ಅನಂತನಾಥ ತೀರ್ಥಂಕರನಿಗೆ ಪೂಜೆ ನಡೆಯುತ್ತದೆ. ಪದ್ಮಾವತಿ ದೇವಿಗೆ ಸೀರೆ ಉಡಿಸಿ,  ಬಳೆಗಳನ್ನು ಹಾಕಿ, ಹೂವಿನಿಂದ ಅಲಂಕಾರ ಮಾಡಿ, ಪೂಜೆ ಮಾಡಲಾಗುತ್ತದೆ. ಬಸದಿಯಲ್ಲಿ ಹೊಂಬುಚ್ಚದಂತೆ ಅಮ್ಮನವರ ಎದುರು ಹೂಹಾಕಿ ನೋಡುವ ಕ್ರಮವಿದೆ. ನಿತ್ಯಪೂಜೆ ಮಾಡಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಗುತ್ತದೆ. ಬಸದಿಯಲ್ಲಿ ವಿಶೇಷವಾಗಿ ನವರಾತ್ರಿ ಪೂಜೆ, ದೀಪಾವಳಿ ಪೂಜೆ, ಮಹಾವೀರ ಸ್ವಾಮಿ ನಿರ್ವಾಣ ರಕ್ಷಾವಳಿ, ಶ್ರಾವಣ ಮಾಸದ ಪ್ರತಿ ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತವೆ. ಮಹಾವೀರ ಜಯಂತಿಯ ವಿಶೇಷ ಹಬ್ಬ ಪೂಜೆ ನಡೆಯುತ್ತದೆ . ಯುಗಾದಿಯ ದಿನ, ನೂಲ ಹುಣ್ಣಿಮೆಯ ದಿನ ವಿಶೇಷ ಪೂಜೆಗಳು, ಹಬ್ಬಗಳು ನಡೆಯುತ್ತವೆ. ಶುಕ್ರವಾರ ನೋಂಪು, ಅನಂತ ನೋಂಪುಗಳು ನಡೆಯುತ್ತದೆ.

ಮೂರ್ತಿಗಳು

ಬದಲಾಯಿಸಿ

ಕೆಳಗಿನ ಗರ್ಭಗೃಹದಲ್ಲಿ ಶ್ರೀಪದ್ಮಾವತಿ ಅಮ್ಮನವರ ಮೂರ್ತಿ ಮೂಲ ತೀರ್ಥಂಕರ ಬಲಭಾಗದಲ್ಲಿ ಇದೆ. ಬ್ರಹ್ಮದೇವರ ಮೂರ್ತಿಯು ಇದೆ. ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರಗಳಿವೆ. ಪ್ರಾರ್ಥನಾ ಮಂಟಪದಲ್ಲಿ ಎರಡು ಕಂಬಗಳಿರುವ ಮಂಟಪವಿದೆ. ಅಲ್ಲಿ ಜಯಘಂಟೆ,  ಜಾಗಟೆಗಳನ್ನು ತೂಗು ಹಾಕಲಾಗಿದೆ. ತೀರ್ಥಂಕರರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥಂಕರರ ಮಂಟಪವೆಂದು ಕರೆಯುತ್ತಾರೆ. ಗಂಧಕುಟಿಯು ತೀರ್ಥಂಕರರ ಮಂಟಪದಲ್ಲಿದೆ. ಇದರ ಬಳಿಯಲ್ಲಿ ಗಣಧರಪಾದ,ಶ್ರುತ, ಬ್ರಾಹ್ಮದೇವರು ಇತ್ಯಾದಿ ಮೂರ್ತಿಗಳಿವೆ.ಪ್ರತಿದಿನ ನಿತ್ಯ ಪೂಜೆ ನಡೆಯುತ್ತದೆ. ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದೆ. ಅಮ್ಮನವರ ಮೂರ್ತಿ ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಮೂಲನಾಯಕ ಶ್ರೀ ಆದಿನಾಥಸ್ವಾಮಿ ಮೂರ್ತಿ ಶಿಲೆಯದ್ದು. ಒಂದು ಅಡಿಯಷ್ಟು ಎತ್ತರ. ಪದ್ಮಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಳಿ ಇದೆ. ಬಸದಿಯ ಅಂಗಳದಲ್ಲಿ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ತ್ರಿಶೂಲ, ನಾಗರಕಲ್ಲು, ಕ್ಷೇತ್ರಪಾಲ ಇವೆ. ಅವುಗಳನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಲಿಕಲ್ಲುಗಳು ಮತ್ತು ಅಷ್ಟದಿಕ್ಪಾಲಕರ ಕಲ್ಲುಗಳಿವೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರ ದರ್ಶನ (೧ ed.). ಉಜಿರೆ: ಮಂಜುಶ್ರೀ ಪಿಂಟರ್ಸ್. p. ೩೧೫-೩೧೬.