ನನ್ನ ಬಟ್ಟೆ ನನ್ನ್ನ ಹಕ್ಕು

ಮಾನವನ ಇತಿಹಾಸ ಕೆದಕಿದಾಗ ಮೊದಲು ವಸ್ತ್ರ ಅಗತ್ಯ, ಅನಿವಾಯ್ರ ಆಗಿರಲಿಲ್ಲ. ನಾಗರಿಕತೆ ಬೆಳೆದು ಬಂದಂತೆ ಉದುಪು ನೋಡಿ ವ್ಯಕ್ತಿಯನ್ನು ಅಳೆಯುವುದು ಪ್ರಾರಂಭವಾಯಿತು. ಆದರೆ ಇದೇನು ಹೆಚ್ಚು ವರ್ಶ ಮುಂದುವರೆಯಲಿಲ್ಲ. ಇಂದಿನ ದಿನಗಳಲ್ಲಿ ವಸ್ತ್ರಸಂಹಿತೆ ಬಗ್ಗೆ ಪರ-ವಿರೋದ ವಾದಗಲು ಹುಟ್ಟಿಕೊಂಡರೂ ಇದರ ಹಿಂದಿರುವ ತಿರುಳನ್ನು ತೆಗೆದು ಹಾಕಲಾಗುವುದಿಲ್ಲ.ವಸ್ತ್ರನೈತಿಕತೆ, ಅನೈತಿಕತೆಯನ್ನು ಬಿಂಬಿಸುತ್ತದೆ ಎಂಬುದು ಅದು ಯಾವ ಸಮಾಜದಲ್ಲಿ ಅನಾವರನಗೊಳ್ಳುತ್ತೆ ಎನ್ನುವುದರ ಮೇಲೆ ಅವಲಂಬಿತ.