ಸದಸ್ಯ:Shruthi kp/sandbox
ಪಶ್ಚಿಮ ಕರಾವಳಿಯ ಐತಿಹಾಸಿಕ ಕೇಂದ್ರವೆಂದೇ ಪ್ರಸಿದ್ಧವಾದ ಬಾರಕೂರು, ಉಡುಪಿಯಿಂದ ಸುಮಾರು ೧೮ಕಿ.ಮಿ ಉತ್ತರದಲ್ಲಿದೆ. ಅನೇಕ ವಂಶಗಳ ಅರಸರುಗಳ ಆಳ್ವಿಕೆಯನ್ನು ಕಂಡಿರುವುದು ಈ ಊರು. ಈಗಲೂ ಐತಿಹಾಸಿಕ ಮಹತ್ವದ ಕೋಟೆಯ ಉತ್ಖನನ ನಡೆಯುತ್ತಿದೆ. ಅನೇಕ ವಿಶೇಷತೆಗಳನ್ನೊಳಗೊಂಡ ಪುರಾತನ ದೇವಾಲಯಗಳು ಹಾಗೂ ಬಸದಿಗಳು ಈ ಊರಿನಲ್ಲಿ ಈಗಲೂ ಪ್ರವಾಸಿಗಳನ್ನು ಸೆಳೆಯುತ್ತಿವೆ. ಬಾರಕೂರಿನಿಂದ ಒಂದು ಕಿ.ಮೀ ಉತ್ತರಕ್ಕೆ ಹಾಲಾಡಿಯ ಕಡೆಗೆ ರಾಜ್ಯ ಮಾರ್ಗದಲ್ಲಿ ಕ್ರಮಿಸಿದರೆ ನೀವು ಚೌಳೀಕೇರಿಯನ್ನು ತಲುಪುತ್ತೀರಿ. ನಂದರಾಯ ಕೆರೆ ದೇವಾಲಯಗಳನ್ನು ಕಟ್ಟಿಸುವ ಬದಲಿಗೆ ಊರಿನ ಜನರ ಸರ್ವತೋಮುಖ ಅಭಿವೃದ್ಧಿಗೆ ಕೆರೆಯನ್ನು ಕಟ್ಟಿಸೋಣ. ಕೃಷಿಗೆ ಸಹಾಯಕವಾಗುವ, ಪಶುಸಂಗೋಪಣೆಗೆ ಅನುಕೂಲ ಒದಗಿಸುವ ಹಾಗೂ ಶ್ರೀಸಾಮಾನ್ಯರಿಗೆ ಬೇಸಿಗೆಯಲ್ಲಿ ನೀರಿನ ಬವಣೆಯನ್ನು ನೀಗಿಸುವಂತಹ ವಿವಿಧ ಉದ್ದೇಶಗಳನ್ನು ಸಾಕಾರಗೊಳಿಸುವ ಕೆರೆಯನ್ನು ಕಟ್ಟಿಸೋಣ ಎಂಬ ದೃಢ ಇಂಗಿತವನ್ನು ಮನದಲ್ಲಿ ಇರಿಸಿಕೊಂಡು ಸವಿಸ್ತಾರವಾದ ಹಾಗೂ ನಾಲ್ಕೂ ದಿಕ್ಕಿನಿಂದಲೂ ಸೋಪಾನಗಳನ್ನು ಹೊಂದಿರುವ ಉತ್ತಮವೂ ಸದೃಢವೂ ಆದ ಕೆರೆಯನ್ನು ನಿರ್ಮಿಸಿ ಲೋಕಾರ್ಪಣ ಮಾಡಿದ. ಅಂದಿನ ಆಳರಸನ ಹೆಸರು ನಂದರಾಯ ಎಂದೆನ್ನುತ್ತಾರೆ. ಇಲ್ಲಿಯ ಹಿರಿಯ ಚೇತನಗಳು. ಈ ಕೆರೆಯ ನೀರನ್ನು ಬಳಸಿಕೊಂಡು ಸುತ್ತಮುತ್ತಲಿನ ನೂರಾರು ಎಕರೆ ಜಮೀನಿನಲ್ಲಿ ಮೂರು ಬೆಳೆಗಳನ್ನು ಇತ್ತೀಚಿನವರೆಗೂ ಬೆಳೆಯುತ್ತಿದ್ದುದನ್ನು ಈ ಹಿರಿಯರನೇಕರು ಸ್ಮರಿಸುತ್ತಾರೆ. ವಿದ್ಯಾ ಸಿದ್ಧಿ ಗಣಪತಿ ಇಲ್ಲಿಯ ಗಣಪತಿಗೆ ಕಡಲೆಯನ್ನು ಸಮರ್ಪಿಸಿ ಪ್ರಾರ್ಥಿಸಿಕೊಂಡರೆ ವಿದ್ಯಾರ್ಥಿಗಳಿಗೆ ವಿದ್ಯೆಯು ಚೆನ್ನಾಗಿ ಒಲಿದು, ಗಣಪತಿಯ ಅನುಗ್ರಹದಿಂದ ಅವರು ಉನ್ನತ ಮಟ್ಟವನ್ನು ತಲುಪುತ್ತಾರೆ ಎಂಬುದು ಇಲ್ಲಿಯ ಸ್ಥಳ ವಿಶೇಷ. ಈ ವಿಚಾರವು ಇಲ್ಲಿಗೆ ನಿತ್ಯವೂ ಆಗಮಿಸಿ ದೇವರಲ್ಲಿ ಪ್ರಾರ್ಥಿಸುವ ಭಕ್ತರ ದೃಢವಾದ ನಂಬಿಕೆಯೂ ಆಗಿದೆ. ಕಲ್ಲಿನ ಮಾಡು : ಕಲ್ಲು ಹಾಸುಗಳಿಂದ ಮಾಡಿದ ಇಲ್ಲಿಯ ವಿಶಾಲವಾದ ಮುಂಭಾಗದ ಮಾಡು, ಉತ್ತರದಿಂದ ದಕ್ಷಿಣಕ್ಕೆ ಸುಮಾರು ೧೩೦ ಅಡಿಗಳು ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ೩೦ ಅಡಿಗಳ ಅಳತೆಯದ್ದಾಗಿದೆ. ಈ ದೇವಾಲಯವು ಸುಮಾರು ೧೧೦೦ ವರ್ಷಗಳ ಹಳೆಯದೆಂಬುದು ತಜ್ಞರ ಅಭಿಪ್ರಾಯವಾಗಿದೆ. ಈತನಕ ಯಾವುದೇ ದುರಸ್ತಿಯನ್ನೂ ಕಾಣದ ಈ ಮಾಡಿನ ಕೆಳಗೆ ಬೇಸಿಗೆಯಲ್ಲಿ ಸದಾ ತಂಪು ಇರುತ್ತದೆ. ಭೋರ್ಗರೆವ ಮಳೆಯಿದ್ದಾಗಲೂ ಒಂದು ಹನಿ ನೀರು ಈ ಮಾಡಿನಡಿಯಲ್ಲಿ ಸೋರುವುದಿಲ್ಲ. ಇಂತಹ ಕಾರ್ಯಕೌಶಲವನ್ನು ಮೆರೆದ ನಮ್ಮ ಪುರಾತನ ಕುಶಲಕರ್ಮಿಗಳು ತಮ್ಮ ಹೆಸರನ್ನು ಎಲ್ಲಿಯೂ ಕೆತ್ತಿಲ್ಲ. ಈ ಕೌಶಲದ ಕಲ್ಲಿನ ಮಾಡನ್ನು, ಲೋಕೋಪಕಾರಿ ನಂದರಾಯನ ಕೆರೆಯನ್ನು ಹಾಗೂ ವಿದ್ಯಾ ಸಿದ್ಧಿಯ ಗಣಪನ ದರುಶನವನ್ನು ಮಾಡಲು ಬಾರಕೂರಿನ ಚೌಳೀಕೇರಿಗೆ ಬನ್ನಿ.