ಸದಸ್ಯ:Shrividya A/ನನ್ನ ಪ್ರಯೋಗಪುಟ

ಕಂದು ಕಾಡು ಗೂಬೆ

ಕಂದು ಕಾಡು ಗೂಬೆ (ಸ್ಟ್ರಿಕ್ಸ್ ಲೆಪ್ಟೋಗ್ರಾಮಿಕ) ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ, ಪೂರ್ವದಿಂದ ಪಶ್ಚಿಮ ಇಂಡೋನೇಷ್ಯಾ, ತೈವಾನ್, ಮತ್ತು ದಕ್ಷಿಣ ಚೀನಾದಲ್ಲಿ ಕಂಡುಬರುತ್ತದೆ. ಈ ಗೂಬೆಯು ದಕ್ಷಿಣ ಏಷ್ಯಾದಲ್ಲಿ ವಾಸಿಸುವ ತಳಿಗಾರ. ಈ ಜಾತಿಯು ಗೂಬೆಗಳ ಕುಟುಂಬದ ಒಂದು ಭಾಗವಾಗಿದೆ, ಇದನ್ನು ವಿಶಿಷ್ಟ ಗೂಬೆಗಳು(ಸ್ಟ್ರಿಗಿಡೆ)ಎಂದು ಕರೆಯಲಾಗುತ್ತದೆ, ಇದರಲ್ಲಿ ಹೆಚ್ಚಿನ ಜಾತಿಯ ಗೂಬೆಗಳಿವೆ. ಇದು ಕಿವಿ ರಹಿತ ಗೂಬೆ ಕುಲಕ್ಕೆ ಸೇರಿದೆ.

ವರ್ಣನೆ

ಬದಲಾಯಿಸಿ

ಕಂದು ಬಣ್ಣದ ಮರದ ಗೂಬೆ ಮಧ್ಯಮ ದೊಡ್ಡದಾಗಿದೆ, ಮೇಲ್ಭಾಗಗಳು ಏಕರೂಪವಾಗಿ ಕಡು ಕಂದು ಬಣ್ಣದ್ದಾಗಿದ್ದು, ಭುಜಗಳ ಮೇಲೆ ಮಸುಕಾದ ಬಿಳಿ ಚುಕ್ಕೆ ಇರುತ್ತದೆ. ಒಳಭಾಗಗಳು ಕಂದು ಬಣ್ಣದ ಗೆರೆಗಳಿಂದ ಕೂಡಿರುತ್ತವೆ. ಮುಖದ ಮೇಲಿರುವ ರೆಕ್ಕೆಗಳ ಸಂಗ್ರಹಣೆಯು ಒಳಬಾಗಿದಂತಿದ್ದು ಕಂದು ಬಣ್ನದಾಗಿದೆ , ಕಣ್ಣುಗಳು ಕಡು ಕಂದು ಬಣ್ಣದ್ದಾಗಿರುತ್ತವೆ, ಬಿಳಿ ಕುತ್ತಿಗೆ ಇದೆ.

ಉದ್ದ 34-45 ಸೆಂ. ರೆಕ್ಕೆಯ ಉದ್ದ 286-400 ಮಿಮೀ. ಬಾಲದ ಉದ್ದ 151-299 ಮಿಮೀ. ತೂಕ 800-1100 ಗ್ರಾಂ. ಈ ಜಾತಿಯ ಹೆಣ್ಣು ಗೂಬೆಗಳು ಗಂಡು ಗೂಬೆಗಳಿಗಿಂತ ದೊಡ್ಡದಾಗಿದೆ. []

ಕರೆ ಹೂ ಹೂ ಎಂದು ಜೋರಾದ ಕಿರುಚಾಟದಂತಿರುತ್ತದೆ. ಈ ಜಾತಿಯ ಇತರೆ ತಳಿಗಳು ಬೇರೆ ಬೇರೆ ರೀತಿಯಲ್ಲಿ ಕೂಗುತ್ತದೆ ಹಾಗು ಕಾಣ ಸಿಗುತ್ತದೆ.

ಬೇಟೆ ಮತ್ತು ಆಹಾರ

ಬದಲಾಯಿಸಿ

ಇಲಿಗಳು ಮತ್ತು ಶ್ರೂಗಳಂತಹ ಸಣ್ಣ ಸಸ್ತನಿಗಳು, ಸಣ್ಣ ಪಕ್ಷಿಗಳು, ಕಪ್ಪೆಗಳು ಮತ್ತು ಸರೀಸೃಪಗಳನ್ನು ಸೇವಿಸುತ್ತದೆ. ಮೀನುಗಳೂ ಸಹ ಇದರ ಆಹಾರವಾಗಿದೆ ಎಂದು ವರದಿಯಾಗಿದೆ.

ಅಭ್ಯಾಸಗಳು

ಬದಲಾಯಿಸಿ

ಈ ಗೂಬೆಗಳು ನಾಚಿಕೆ ಸ್ವಭಾವವುಳ್ಳವು, ಪ್ರಕೃತಿ ಪ್ರೇಮಿಯಾಗಿದ್ದು, ಹಗಲು ಹೊತ್ತಿನಲ್ಲಿ ತುಂಬಾ ಎಲೆಗಳಿಂದ ಕೂಡಿರುವ ಮರಗಳಲ್ಲಿ ವಿಶ್ರಾಂತಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ