Shrinidhi AC
ನನ್ನ ಹೆಸರು ಶ್ರೀನಿಧಿ. ಮಂಗಳೂರಿನಿಂದ ಮೂಡಬಿದಿರೆಗೆ ಹಾದುಹೋಗುವ ದಾರಿಯ ಪಕ್ಕದಲ್ಲಿರುವ ಕುಪ್ಪೆಪದವು ಎಂಬ ಚಿಕ್ಕ ಹಳ್ಳಿಯೇ ನಮ್ಮ ಊರು.ನನ್ನ ಹವ್ಯಾಸಗಳು ಚಿತ್ರ ಮಾಡುವುದು,ಕಥೆ-ಕಾದಂಬರಿ ಓದುವುದು.ಸಮಯವಿದ್ದಾಗ ಯಕ್ಷಗಾನ ನೋಡುವುದು.ನಾಟಕಗಳನ್ನು ನೋಡುವುದು ಕೂಡ ನನ್ನ ಆಸಕ್ತಿಯ ವಿಷಯವಾಗಿದೆ. ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಮ್ಮದೇ ಊರಿನಲ್ಲಿರುವ ಸರಕಾರಿ ಶಾಲೆಯಲ್ಲಿ ಮುಗಿಸಿದೆ.ನಂತರದ ಶಿಕ್ಷಣವನ್ನು ರೋಸಾ ಮಿಸ್ತಿಕಾ ಹೈಸ್ಕೂಲಿನಲ್ಲಿ ಮುಗಿಸಿದೆ.ನನಗೆ ಚಿಕ್ಕಂದಿನಿಂದಲೂ ವಿಜ್ಞಾನ ಎಂಬ ವಿಷಯದಲ್ಲಿ ಆಸಕ್ತಿಯಿರುವುದರಿಂದ ನಾನು ಸಂತ ಜೋಸೆಫ್ ಕಾಲೇಜಿನಲ್ಲಿ ವಿಜ್ಞಾನ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡೆ.ನನಗೆ ರಸಾಯನ ಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯಿದ್ದು ಅದರಲ್ಲಿ ಎಮ್ .ಎಸ್.ಸಿ. ಮಾಡಬೇಕೆಂಬ ಉದ್ದೇಶದಿಂದ ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ವಿಭಾಗದ ಬಿ.ಎಸ್.ಸಿ ಮಾಡುತ್ತಿದ್ದೇನೆ. ನನ್ನ ತಂದೆಯ ಹೆಸರು ಹರಿಶ್ಚಂದ್ರ,ತಾಯಿ-ಶೋಭಾ.ತಂದೆ ಮರದ ಕೆಲಸ ಮಾಡುತ್ತಾರೆ.ತಾಯಿ ಗೃಹಿಣಿ.ನನಗೆ ಇಬ್ಬರು ಮುದ್ದಾದ ತಮ್ಮಂದಿರಿದ್ದಾರೆ.ದೊಡ್ಡ ತಮ್ಮನ ಹೆಸರು ನಿತಿನ್.ಅವನು ಸುಕಂದಕಟ್ಟೆ ಕಾಲೇಜುಬಜ್ಪೆಯಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗವನ್ನು ಕಲಿಯುತ್ತಿದ್ದಾನೆ.ಚಿಕ್ಕ ತಮ್ಮ ನಿತೇಶ್ ನಮ್ಮ ಊರಿನಲ್ಲಿ ಸರಕಾರಿ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.ನನ್ನ ಆದರ್ಶ ವ್ಯಕ್ತಿಯೆಂದರೆ ನನ್ನ ಅಮ್ಮ.ಏಕೆಂದರೆ ಎಂತಹ ಕಷ್ಟದ ಸಮಯದಲ್ಲೂ ಧೈರ್ಯದಿಂದ ಇರುತ್ತಾರೆ. ನಮ್ಮ ಸಮಸ್ಯೆಗಳನ್ನು ಹೇಗೆ ನಾವೇ ನಿವಾರಿಸಿಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ನನಗೆ ಪೂರ್ಣಚಂದ್ರ ತೇಜಸ್ವಿಯವರೆಂದರೆ ತುಂಬಾ ಇಷ್ಟ. ಏಕೆಂದರೆ ಅವರ ತುಂಬಾ ಕೃತಿಗಳು ಸಹಜ ವಿಜ್ಞಾನದ ಕಲ್ಪನೆಯನ್ನೊಳಗೊಂಡಿವೆ.ಇದನ್ನು ಸಾಮಾನ್ಯ ಜನರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ಸುತ್ತಮುತ್ತಲಿನ ವಾತವರಣವನ್ನೊಳಗೊಂಡಿವೆ.ಸುಂದರವಾದ ಪ್ರಾಣಿ-ಪಕ್ಷಿಗಳ ಚಿತ್ರಣ ಮನಸೂರೆಗೊಳ್ಳುವಂತಿದೆ. ನನಗೆ ಪ್ರಾಣಿ-ಪಕ್ಷಿಗಳೆಂದರೆ ತುಂಬಾ ಇಷ್ಟ.ಆದರಲ್ಲೂ ನಾಯಿ ,ಬೆಕ್ಕುಗಳೆಂದರೆ ತುಂಬ ಇಷ್ಟ.ನಮ್ಮ ಮನೆಯಲ್ಲಿ ಸೋನು ಎಂಬ ಬೆಕ್ಕಿದೆ.ಅದು ನಾವು ಸಂಜೆ ಮನೆಗೆ ಹೋಗುವವರೆಗೆ ನಮ್ಮ ಮನೆಯ ಟಾಂಕಿಯ ಮೇಲೆ ನಮ್ಮನ್ನೇ ಕಾಯುತ್ತ ಕುಳಿತ್ತಿರುತ್ತದೆ.ನಾವು ಮನೆಗೆ ಹೋದ ಕೂಡಲೆ ಅದು ನಮ್ಮೊಂದಿಗೆ ಮನೆಯನ್ನು ಪ್ರವೇಶಿಸುತ್ತದೆ.ಇದರಿಂದ ತಿಳಿಯಬಹುದು.ಪ್ರಾಣಿಗಳಿಗೂ ನಮ್ಮಂತೆಯೇ ಪ್ರೀತಿ ಇದೆ.ನನ್ನ ಜೀವನದ ಮುಖ್ಯ ಉದ್ದೇಶ ಎಂದರೆ ಮುಂದೆ ದುಡಿದು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.