ಸದಸ್ಯ:ShriGowri.C.G/ನನ್ನ ಪ್ರಯೋಗಪುಟ

ಮೈಸೂರು ನರಸಿಂಹಚಾರ ಶ್ರೀನಿವಾಸ

ಮೈಸೂರು ನರಸಿಂಹಚಾರ ಶ್ರೀನಿವಾಸ ಬದಲಾಯಿಸಿ

ಮೈಸೂರು ನರಸಿಂಹಚಾರ ಶ್ರೀನಿವಾಸ ಭಾರತೀಯ ಸಮಜಶಾಸ್ತ್ರಜ್ಞ ಮತ್ತು ಸಾಮಾಜಿಕ ಮಾನವಶಾಸ್ತ್ರಜ್ಞ.

ಇವರು ಹೆಚ್ಚಾಗಿ ತಮ್ಮ ಜಾತಿ, ವರ್ಣ ಪದ್ದತಿ, ಸಂಸ್ಕೃತೀಕರಣ, ಪಶ್ಚಿಮಾತಿಯಕರಣಗಳ ಬಗ್ಗೆ ಮಾಡಿದ ಸಂಶೋಧನೆಗಾಗಿ ಹೆಸರು ಪಡೆದಿದ್ದಾರೆ.

ಪ್ರಧಾನ ಜಾತಿಯ ವಿಷಯವನ್ನು ಕುರಿತು ಮೊದಲು ಮಾತನಾಡಿದವರು ಶ್ರೀನಿವಾಸ.

ಶ್ರೀನಿವಾಸ ಒಬ್ಬ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.

ಮೈಸೂರಿನಲ್ಲಿ ೧೬ ನವೆಂಬರ್ ತಿಂಗಳಿನ ೧೯೧೬ರಂದು ಹುಟ್ಟಿದರು.

ವೃತ್ತಿಜೀವನ ಬದಲಾಯಿಸಿ

ಇವರು ಪ್ರಖ್ಯಾತ ಸಮಜಶಾಸ್ತ್ರಜ್ಞ ಜಿ. ಎಸ್. ಘುರೆ ಅವರ ವಿದ್ಯಾರ್ಥಿಯಾಗಿ ಸಮಾಜಶಾಸ್ತ್ರದ ಇಲಾಖೆಯಲ್ಲಿ ಮುಂಬೈನ ವಿಶ್ವವಿದ್ಯಾಲಯದಲ್ಲಿ ಬಹಳಷ್ಟು ಕಲಿತರು. ನಂತರ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯನ್ನು ಸೇರಿದರು.

ಮುಂದೆ, ಬರೊಡಾ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಸಮಾಜಶಾಸ್ತ್ರದ ಇಲಾಖೆಯನ್ನು ತೆರೆಯಲು ಬಹಳ ಸಹಕಾರ ನೀಡಿದರು.

ಮೈಸೂರಿನಲ್ಲೇ ಇದ್ದಾಗ ಮದುವೆ ಮತ್ತು ಕುಟುಂಬದ ಬಗ್ಗೆ ಪುಸ್ತಕವೊಂದನ್ನು ಬರೆದರು. ಮೇಲಿನ ಹೆಚ್ಚಿನ ಶಿಕ್ಷಣಕ್ಕಾಗಿ ಆಕ್ಸಫರ್ಡ್ ವಿಶ್ವವಿದ್ಯಾಲಯಕ್ಕೆ ಹೋದರು.

ಇವರು ಬಹಳಷ್ಟು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉದಾಹರಣೆಗೆ ದೆಹಲಿ ವಿಶ್ವವಿದ್ಯಾಲಯ, ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ, ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಹಾಗೂ ಮುಂದುವರೆದ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ.

ಶ್ರೀನಿವಾಸರವರು ಭಾರತದ ಅತಿ ಗೌರವಾನ್ವಿತ ಸಮಾಜಶಾಸ್ತ್ರಜ್ಞ . ಸಮಾಜಶಾಸ್ತ್ರದ ವಿಷಯಕ್ಕೆ ಇವರು ಅಪಾರ ಕೊಡುಗೆ ನೀಡಿದ್ದಾರೆ. ಇವರ ವಿಭಿನ್ನತೆ ಎಂದರೆ ಅವರು ಹೆಚ್ಚಾಗಿ ಜನಾಂಗೀಯ ಶೈಲಿಯ ಭಾಗಿದಾರ ವೀಕ್ಷಣೆಯಿಂದ ಸಂಶೋಧನೆ ಮಾಡುತ್ತಿದ್ದರು.

ಕೃತಿಗಳು ಬದಲಾಯಿಸಿ

ಶ್ರೀನಿವಾಸರವರ ಅತ್ಯುತ್ತಮ ಕೃತಿಗಳ ಪಟ್ಟಿ :

 
ನೆನಪಿನಲ್ಲಿರುವ ಗ್ರಾಮ

●ದಕ್ಷಿಣ ಕರ್ನಾಟಕದ ಕೂರ್ಗಿನಲ್ಲಿನ ಧರ್ಮ ಮತ್ತು ಸಮಾಜ

●ಭಾರತದ ಹಳ್ಳಿಗಳು

●ಆಧುನಿಕ ಭಾರತದಲ್ಲಿ ಜಾತಿ

●ಆಧುನಿಕ ಭಾರತದಲ್ಲಿ ಸಾಮಾಜಿಕ ಬದಲಾವಣೆ

●ನೆನಪಿನಲ್ಲಿರುವ ಗ್ರಾಮ

●ಭಾರತ : ಸಾಮಾಜಿಕ ರಚನೆ

●ಪ್ರಧಾನ ಜಾತಿ ಮತ್ತು ಇತರ ಪ್ರಬಂಧಗಳು

●ಸಂಸ್ಕೃತಿಕರಣದ ಒಗ್ಗೂಡಿಸುವ ಪಾತ್ರ

●ಗ್ರಾಮ,ಜಾತಿ,ಲಿಂಗ ಮತ್ತು ವಿಧಾನ

●ಭಾರತೀಯ ಸಮಾಜ ಮೂಲಕ ವೈಯಕ್ತಿಕ ಬರಹಗಳು

●ಕ್ರಾಂತಿಯಲ್ಲಿ ವಾಸ ಮತ್ತು ಇತರ ಪ್ರಬಂಧಗಳು

ಕೊಡುಗೆಗಳು ಬದಲಾಯಿಸಿ

ತಮ್ಮ ಪುಸ್ತಕ 'ನೆನಪಿನಲ್ಲಿರುವ ಗ್ರಾಮ'ದಲ್ಲಿ ಅವರು ಹೆಚ್ಚಾಗಿ ಕರ್ನಾಟಕದ ರಾಮಪುರದ  ಬಗ್ಗೆ ಬರೆದಿದ್ದಾರೆ. ಯಾವುದೇ ಗ್ರಾಮದಲ್ಲಿ ೩ ಮಹತ್ವದ ಮನುಷ್ಯರಿರುತ್ತಾರೆ : ಗ್ರಾಮದ ಮುಖ್ಯಸ್ಥ, ಜಮೀನ್ದಾರ, ಕುಲ್ಲೇ ಗೌಡ ಅಥವಾ ನಾಡು ಗೌಡ.

ಗ್ರಾಮಗಳ ಸಾಮಾನ್ಯ ಗುಣಲಕ್ಷಣಗಳನ್ನು ಪಟ್ಟಿ ಮಾಡಿದರು - ಅಂತರ್ಜಾತಿ , ಸಾಮುದಾಯಿಕ ಉದ್ಯೋಗ ಧರ್ಮಾಚರಣೆ, ಸಾಮಾಜಿಕ ಜೀವನ,  ಒಂದೇ ರೀತಿಯ ಸಂಸ್ಕೃತಿ ಮತ್ತು ಜನರನ್ನು ಆಳುವ ಪಂಚಾಯಿತಿ.

ಇವರ ಕೃತಿ 'ದಕ್ಷಿಣ ಕರ್ನಾಟಕದ ಕೂರ್ಗಿನಲ್ಲಿನ ಧರ್ಮಾ ಮತ್ತು ಸಮಾಜ'ದ ಕಾರಣ ರೂಪಿಸಲಾದ ವಿಷಯ ಬ್ರಾಹ್ಮಣಿಕರಣ.

ಕೆಳ ಜಾತಿಯವರು ಬ್ರಾಹ್ಮಣರ ಹಾಗೆ ವರ್ತಿಸುವುದು. ಇದರ ಅರ್ಥ, ಅವರ ಆಚರಣೆಗಳು, ಜೀವಿತಾವಧಿಗಳನ್ನು ಅನುಕರಣಿಸುವುದು - ಜನಿವಾರ ಧಾರಣೆ, ಪೂಜೆ ಪುನಸ್ಕಾರಗಳು , ಮಡಿವಂತಿಕೆ , ಉದ್ಯೋಗ ಬದಲಾವಣೆ, ಸಸ್ಯಾಹಾರಾವೃತ.

ಸಂಸ್ಕೃತಿಕರ್ಣ ಎಂದರೆ ಕೆಳ ಜಾತಿಗೆ ಸೇರಿದ ಜನ ಯಾವುದಾದರೂ ಮೇಲಿನ ಜಾತಿ ವರ್ಗದ ಹಾಗೆ ವರ್ತಿಸುವುದು. ಶೂದ್ರರು ಜನಿವಾರ ಧರಿಸಿ ವಿಶ್ವಕರ್ಮ ಬ್ರಾಹ್ಮಣರಾದರು. ಹೀಗಾಗುವ ಕಾರಣ ಸಮಾಜದಲ್ಲಿ ಇದ್ದಂತಹ ತಾರತಮ್ಯಗಳು. ಬ್ರಾಹ್ಮಣರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರುವುದಕ್ಕೆ ಕೆಳ ಜಾತಿಯ ಜನ ಹೀಗೆ ವರ್ತಿಸಿದರು.

ಆದರೆ ಶ್ರೀನಿವಾಸರವರು ಪ್ರಧಾನ ಜಾತಿಯ ಕಡೆ ಗಮನ ಸೆಳೆದರು. ಕೆಲ ಪ್ರದೇಶಗಳಲ್ಲಿ ಒಂದು ಜಾತಿ ಪ್ರಧಾನವಾಗಿರುತ್ತದೆ. ಈ ಜಾತಿ ಸಾಂಖೀಕವಾಗಿ ಹೆಚ್ಚು, ರಾಜಕೀಯ ಮತ್ತು ಆರ್ಥಿಕವಾಗಿ ಪ್ರಬಲವಾಗಿ ಇರುತ್ತದೆ.

ಇದಲ್ಲದೇ ನಗರದ ಸಂಪಾದನೆ ಹಾಗೂ ಆಡಳಿತದ ವೃತ್ತಿ ಉಳ್ಳವರು ಸಮಾಜದಲ್ಲಿ ಪ್ರಧಾನ್ಯತೆ ಪಡೆಯುತ್ತಾರೆ.

ಇವರು ಪಶ್ಚಿಮಾತ್ಯಿಕರಣವನ್ನು ಜನಕ್ಕೆ ಪರಿಚಯಿಸಿದರು. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಆದಂತಹ ಎಲ್ಲ ಬದಲಾವಣೆಯನ್ನು ಪಶ್ಚಿಮಾತ್ಯಿಕರಣ ಎಂದು ಕರೆದರು. ಆಧುನಿಕ ತಂತ್ರಜ್ಞಾನ, ಸಂಸ್ಥೆಗಳು, ಜ್ಞಾನ, ಹೊಸ ವಿಚಾರಗಳನ್ನು ಬ್ರಿಟಿಷರು ಭಾರತಕ್ಕೆ ತಂದರು.

ಶ್ರೀನಿವಾಸರವರು ತಮ್ಮ ಕೆಲಸಗಳಿಂದ ಉನ್ನತ ಹೆಸರು ಪಡೆದಿದ್ದಾರೆ.

ಮುಂಬೈನ ವಿಶ್ವವಿದ್ಯಾಲಯ ಮತ್ತು ಫ್ರಾನ್ಸ್ ಸರ್ಕಾರ ಗೌರವ ಪ್ರಶಸ್ತಿ ನೀಡಿತು.

ಭಾರತ ಸರ್ಕಾರ ಪದ್ಮ ಭೂಷಣವನ್ನು ಕೊಟ್ಟು ಪ್ರಶಂಸಿಸಿತು.

ಉಲ್ಲೇಖಗಳು ಬದಲಾಯಿಸಿ

Sociology - Wikipediahttps://en.wikipedia.org/wiki/Sociology

M. N. Srinivas - Wikipediahttps://en.wikipedia.org/wiki/M._N._Srinivas

Mysore Narsimhacharya Srinivas : Biography and Contribution to ...www.yourarticlelibrary.com/sociology/mysore-narsimhacharya-srinivas.../35019

The Remembered Village - Wikipediahttps://en.wikipedia.org/wiki/The_Remembered_Village