ಪರಿಚಯ ಬದಲಾಯಿಸಿ

ನನ್ನ ಹೆಸರು ಶ್ರೀ ಗೌರಿ. ನಾನು ೧೮ ವರ್ಷದವಳು. ನನ್ನ ಮಾತೃ ಭಾಷೆ ಕನ್ನಡ. ನಾನು ಮೂಲತಃ ಬೆಂಗಳೂರಿನವಳು.

ಸೆಪ್ಟೆಂಬರ್ ೧೨ರಂದು ನನ್ನ ಹೆಸರು ಭಾರತದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕುಟುಂಬ ಬದಲಾಯಿಸಿ

ನನ್ನ ಕುಟುಂಬದಲ್ಲಿ ನನ್ನ ತಂದೆ , ತಾಯಿ ಮತ್ತು ತಂಗಿ ಇದ್ದಾರೆ. ನನ್ನ ತಂದೆಯ ಹೆಸರು ಚಂದ್ರಶೇಖರ್ ಗೌಡರ್. ನನ್ನ ತಾಯಿಯ ಹೆಸರು ಪ್ರಭಾ. ಇವರಿಬ್ಬರೂ ವ್ಯಾಪಾರಸ್ಥರು . ನನ್ನ ತಂಗಿ ಪ್ರಿಯಾ , ೯ನೇ ತರಗತಿಯಲ್ಲಿ ಓದುತ್ತಿ ದ್ದಾಳೆ. ನಾನು ನನ್ನ ತಂದೆ ತಾಯಿ ಮತ್ತು ತಂಗಿಯ ಜೊತೆ ಜಯ ಪ್ರಕಾಶ್ ನಗರದಲ್ಲಿ ವಾಸಿಸುತ್ತಿದ್ದೇನೆ.

ಇವರೆಲ್ಲರೂ ನನಗೆ ತುಂಬಾ ಪ್ರೀತಿ ಪಾತ್ರರಾಗಿದ್ದಾರೆ. ನಾನು ಮಾಡುವ ಎಲ್ಲಾ ಕೆಲಸಗಳಲ್ಲಿ ನನಗೆ ಹುರಿದುಂಬಿಸುತ್ತಾರೆ.

ಶಿಕ್ಷಣ ಬದಲಾಯಿಸಿ

ನಾನು ನನ್ನ ಮೊದಲ ಕೆಲವು ವರ್ಷಗಳು 'ದೀ ಸೌತ್ ಸ್ಕೂಲ್' ಎಂಬ ಶಾಲೆಯಲ್ಲಿ ಓದಿದೆ. ಅದಾದ ನಂತರ 'ಕ್ಯಾಪಿಟಾಲ್' ಶಾಲೆಯಲ್ಲಿ ೨ನೇ ತರಗತಿಯಿಂದ ೧೦ನೇ ತರಗತಿಯವರೆಗೂ ಶಿಕ್ಷಣ ಪಡೆದೆ. ಈ ಎರಡೂ ಶಾಲೆಗಳು ನನ್ನನು ಸಲುಹಿ ಬೆಳೆಸಿದ್ದಾರೆ. ನನ್ನಲ್ಲಿನ ಒಳ್ಳೆ ಗುಣಗಳನ್ನು ಕಂಡು ಹಿಡಿದು ಮುಂದೆ ಬರಲು ಸಹಾಯ ಮಾಡಿದ್ದಾರೆ.

ದೇವರ ದಯೆಯಿಂದ ನನಗೆ ಬಹಳ ಒಳ್ಳೆ ಶಿಕ್ಷಕರು ಸಿಕ್ಕಿದ್ದರು. ಅವರನ್ನು ನಾನು ಎಂದೂ ಮರೆಯುವುದಿಲ್ಲ.

ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಪಡೆದೆ. ಈ ಎರಡು ವರ್ಷಗಳಲ್ಲಿ ನನ್ನ ಜಗತ್ತಿನ ಬಗ್ಗೆ ಇದ್ದ ತಿಳುವಳಿಕೆಯೇ ಬದಲಾಗಿದ್ದು ಇಲ್ಲೆ.

ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮೊದಲನೇ ವರ್ಷದ ಡಿಗ್ರಿ ಓದುತ್ತಿದ್ದೇನೆ. ನಾನು ಕಲಿಯುತ್ತಿರುವ ವಿಷಯಗಳು ಅರ್ಥಶಾಸ್ತ್ರ , ಮನೋವಿಜ್ಞಾನ ಹಾಗೂ ಸಮಾಜಶಾಸ್ತ್ರ.

ಹವ್ಯಾಸಗಳು ಬದಲಾಯಿಸಿ

ನನಗೆ ಬಾಲ್ಯದಿಂದ ಕುಣಿಯಲು ಬಲು ಇಷ್ಟ. ಹಾಗಾಗಿ ನನ್ನ ಬಿಡುವಿನ ಸಮಯದಲ್ಲಿ ಕಂಟೆಂಪೋರರಿ ಶೈಲಿಯ ನೃತ್ಯ ಮಾಡುತ್ತೇನೆ.ಇದನ್ನು ನಾನು ಕಲಿತದ್ದು ಕೆಡೆನ್ಸಿಯಾ ಎಂಬ ನಾಟ್ಯ ಶಾಲೆಯಲ್ಲಿ. ಕಾಲೇಜಿನ ನಾಟಕ ತಂಡದ ಸದಸ್ಯೆಯಾಗಿದ್ದೇನೆ. ನಾಟಕ ಮತ್ತು ನೃತ್ಯ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದದು. ಅದಲ್ಲದೆ ಕ್ಯಾಲಿಗ್ರಾಫಿ ಕಲಿತ್ತಿದ್ದೇನೆ.ಇದು ನನ್ನ ಹವ್ಯಾಸಗಳಲ್ಲಿ ಒಂದು.

ಗುರಿ ಬದಲಾಯಿಸಿ

ನಾನು ಚೆನ್ನಾಗಿ ಓದಿ ನನ್ನ ದೇಶದ ಜನರಿಗೆ ಉಪಯುಕ್ತ ವಾಗುವಂಥಹ ಕೆಲಸ ಮಾಡಬೇಕೆಂದುಕೊಂಡಿದ್ದೇನೆ.

ನನ್ನ ಪೋಷಕರು ನನ್ನ ಬಗ್ಗೆ ಹೆಮ್ಮೆಯಿಂದ ಬೀಗುವಂತೆ ಮಾಡ ಬೇಕೆಂಬುದೇ ನನ್ನ ಕನಸು.

ಇದಲ್ಲದೆ ಜಗತ್ತಿನ ಪ್ರಮುಖ ಪ್ರವಾಸಿ ತಾಣಗಳಾದ ರೋಮ್, ಪ್ಯಾರಿಸ್, ನ್ಯೂ ಯಾರ್ಕನಲ್ಲಿ ಸುತ್ತಾಡಬೇಕು ಕೆಲವು ದಿನಗಳ ಕಾಲ ಅಲ್ಲಿದ್ದು ಹೊಸ ಹೊಸ ವಿಚಾರಗಳನ್ನು ತಿಳಿಯಬೇಕೆಂಬ ಆಸೆ ಇದೆ.