ತಂತ್ರಜ್ಞಾನಗಳ ವಿಜೃಂಭಣೆ

ಜಾಗತಿಕ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಎಲ್ಲ ಕ್ಷೇತ್ರದಲ್ಲೂ ಪ್ರಗತಿ ಇದೆ. ಖರೀದಿ ಸಾಮರ್ಥ್ಯವೂ ಹೆಚ್ಚಾಗಿದೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬುದಕ್ಕೆ ಪ್ರಸ್ತುತ ಮಾರುಕಟ್ಟೆಯ ಬೆಳವಣಿಗೆಯೇ ಸಾಕ್ಷಿ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಮೊದಲು ಪಲಿತಾಂಶ ಅರಿವಿಗೆ ಬರುವುದು ಭಾರತೀಯ ರಸ್ತೆಯ ಮೇಲೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿಯನ್ನು ಭಾರತೀಯ ಮಾರುಕಟ್ಟೆ ಕಂಡಿದೆ. ಕಂಡುಕೇಳರಿದಷ್ಟು, ಎಲ್ಲರೂ ದಂಗಾಗುವಷ್ಟು ಮೊಡೆಲ್ ಗಳು ಬಂದಿವೆ, ಬರುತ್ತಲೇ ಇವೆ.

ಭಾರತ ಅದರಲ್ಲೂ ಕರ್ನಾಟಕ ಪ್ರಗತಿಯತ್ತ ಸಾಗುತ್ತಿರುವ ರಾಜ್ಯ. ಕೃಷಿ, ಹೈನುಗಾರಿಕೆ, ಐಟಿ, ಬಿಟಿ, ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕೆ, ಶಿಕ್ಷಣ, ಹೀಗೆ ಎಲ್ಲ ಕ್ಷೇತ್ರದಲ್ಲೂ ರಾಜ್ಯ ಮುಂಚೂಣಿಯಲ್ಲಿವೆ. ಪ್ರಗತಿ ಇರುವುದು ರಾಜ್ಯಕ್ಕೆ ಎಂಬ ಮಾತಿನಂತೆ ಅಭಿವೃದ್ಧಿಯತ್ತ ರಾಜ್ಯ ಮುಖ ಮಾಡಿದೆ. ಸರಕಾರ ಮತ್ತು ಸಾರ್ವಜನಿಕರ ಪರಿಶ್ರಮದ ಹಿನ್ನೆಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲೂ ಪ್ರಗತಿಯ ಮುನ್ಸೂಚನೆ ದೊರೆತರೆ, ಬಹುತೇಕ ಪ್ರದೇಶಗಳು ಪ್ರಗತಿಯೊಂದಿಗೆ ಹೆಜ್ಜೆಯನ್ನಿಟ್ಟಿವೆ. ಇದರ ಪರಿಣಾಮ ಹಳ್ಳಿ ಹಳ್ಳಿಯಲ್ಲೂ ವಾಹನಗಳ ಎಂಜಿನ್ ಹಾಗೂ ಹರ್ನ್ ಗಳು ಕೇಳಲಾರಂಭಿಸಿವೆ.

ಸಂಶೋಧನೆ

ಆಟೋಮೊಬೈಲ್ ಕ್ಷೇತ್ರದಲ್ಲಿ ಇಂದು ಇದ್ದ ತಂತ್ರಜ್ಞಾನ ನಾಳೆಯ ಹಳೆಯದಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಯಾವುದೇ ಕಂಪನಿ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ವೇಳೆ ತಾವು ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತಾ ತಂತ್ರಜ್ಞಾನ ಘೋಷಿಸುತ್ತಾರೆ. ಇದರಿಂದಾಗಿ ಪ್ರತಿಯೊಂದು ಕಂಪನಿಗಳು ಪ್ರತಿ ಬಾರಿಯೂ ಹೊಸ ಹೊಸ ತಂತ್ರಜ್ಞಾನಗಳಿಂದ ಕೂಡಿದ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತೆವೆ. ತಂತ್ರಜ್ಞಾನ, ಸೌಲಭ್ಯ, ಆಕರ್ಷಣೆ, ಆರಾಮದಾಯಕ ಪ್ರಯಣಕ್ಕೆ ಪೂರಕ ವಾತಾವರಣ ಕಲ್ಪಿಸುತ್ತಿದ್ದಂತೆ ಅದರ ವೆಚ್ಚವೂ ಅಧಿಕವಾಗುತ್ತದೆ. ಇದಕ್ಕೆ ಪ್ರತಿಯಾಗಿ ವೆಚ್ಚ ಕಡಿತ ತಂತ್ರಜ್ಞಾನ ಎಂಬ ಹೊಸ ಪರಿಕಲ್ಪನೆ ಇದೀಗ ಮೂಡಿದೆ. ಕಳದ ಒಂದು ದಶಕದಿಂದ ಹತ್ತು ಹಲವು ಸಂಶೋಧನೆ ನಡೆದಿವೆ. ಸುರಕ್ಷತೆ, ಭದ್ರತೆ, ಜೀವಾಪಾಯ, ಹಣಕಾಸು, ಮೈಲೇಜ್, ಲಕ್ಸುರಿ ಹೀಗೆ ಎಲ್ಲ ಕ್ಷೇತ್ರದಲ್ಲೂ ಬದಲಾವಣೆ ಕಾಣಬಹುದು. ದಿನಕ್ಕೊಂದು ಸಂಶೋಧನೆಯನ್ನು ನಾವು ಕಾಣಬಹುದು. ಈ ಎಲ್ಲ ಸಂಶೋಧನೆ,ಬೆಳೆವಣಿಗೆ ಆಟೋಮೊಬೈಲ್ ಪ್ರಿಯರಿಗೆ ಮಾತ್ರ ನಿಜಕ್ಕೂ ಹೊಸ ಕನಸು ಮೂಡಿಸಲು ಸಾಕಾರವಾಗಿದೆ ಎಂದರೂ ತಪ್ಪಲ್ಲ.