ಬೆಂಗಳೂರಿನ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ನಿನ ಗಾಜಿನ ಮನೆ

ನನ್ನ ಹೆಸರು ಶೆರಿನ್. ನನ್ನ ಹೆಸರನ್ನು ನನ್ನ ತಂದೆಯ ಅಕ್ಕನ ನೆನಪಿನಲ್ಲಿ ಇಟ್ಟಿದಾರೆ. ನನ್ನ ಹೆಸರು ಪರ್ಷಿಯನ್ ಭಾಷೆಯಿಂದ ಆಯ್ದುಕೊಳ್ಳಲಾಗಿದೆ. ಪರ್ಷಿಯ ಭಾಷೆಯಲ್ಲಿ ಅದರ ಅರ್ಥ ಸಿಹಿ ಅಥವ ಮನೋಹರ. ನಾನು ೨೦ನೇ ಜುಲೈ ೧೯೯೯ರಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿರುವ ರಿಪಬ್ಲಿಕ್ ವೈದ್ಯಶಾಲೆಯಲ್ಲಿ ಬೆಳ್ಳಿಗೆ ೧೦ ಗಂಟೆಗೆ ಸಿಸೇರಿಯನ್ ವಿತರಣಾದ ಮೂಲಕ ಜನಿಸಿದ್ದೆ. ನಾನು ೧ ತಿಂಗಳು ಬೇಗ ಅಕಾಲಿಕವಾಗಿ ಜನಿಸಿದೇ.

ಕುಟುಂಬ

ಬದಲಾಯಿಸಿ

ನನ್ನ ಕುಟುಂಬ ಚಿಕ್ಕ ನಾಲ್ಕು ಜನರಾ ಕುಟುಂಬವಾಗಿದೇ. ನನ್ನ ಕುಟುಂಬದಲ್ಲಿ ನಾನು, ನನ್ನ ತಂದೆ, ನನ್ನ ತಾಯಿ ಮತ್ತು ನನ್ನ ಅಣ್ಣ ಇದ್ದಿವಿ. ನನ್ನ ತಂದೆಯ ಹೆಸರು ಫಿಲಿಪ್. ನನ್ನ ತಾಯಿಯ ಹೆಸರು ರಾದಾ. ನನ್ನ ಅಣ್ಣನ ಹೆಸರು ಪ್ಯಾಟ್ರಿಕ್. ನನ್ನ ಅಣ್ಣ ನನ್ನಿಂದ ೨ ವರ್ಷ ವಯಸಿನಲ್ಲಿ ದೊಡ್ಡವನು. ನಾನು ಮತ್ತೆ ನನ್ನ ಅಣ್ಣ ಕರ್ನಾತಕದಲ್ಲಿ ಜನಿಸಿ ಬೆಳೆದಿದ್ದರು ನಮ್ಮ ತಂದೆ ತಾಯಿಯ ಪೂರ್ವಿಕ ಸ್ಥಳ ಬೆಂಗಳೂರು ಅಲ್ಲ. ನನ್ನ ತಂದೆಯ ಪೂರ್ವಿಕ ಸ್ಥಳ ಕೇರಳ, ಮತ್ತು ತಾಯಿಯ ಪೂರ್ವಿಕ ಸ್ಥಳ ಕನ್ಯಾಕುಮಾರಿ. ನನ್ನ ಸಂಬಂಧಿಕರು ಊರಿನಲ್ಲಿ ವಾಸಮಾಡುತ್ತಾರೆ. ನನ್ನ ರಜೆಗಳಲ್ಲಿ ಅವರ ಮನೆಗೇ ಹೋಗುತ್ತೇನೆ.

ವಿದ್ಯಾಭ್ಯಾಸ

ಬದಲಾಯಿಸಿ
 
ಕ್ರೈಸ್ಟ್ ಯೂನಿವರ್ಸಿಟಿಯ ಭಾಷಾ ಉತ್ಸವ

ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡುತಿದ್ದೆನೇ. ನನ್ನ ಪ್ರಾಥಮಿಕ, ಮಧ್ಯಮ ಮತ್ತು ಪ್ರೌಢ ಶಿಕ್ಷಣವನ್ನು ನಿರ್ಮಲ ಶಾಲೆಯಲ್ಲಿ ಮುಗಿಸಿದೇ. ನನ್ನ ಶಿಶುವಿಹಾರದಿಂದ ೧೦ನೇಯ ತರಗತಿಯವರೆಗೆ ನನ್ನ ಶಿಕ್ಷಣವನ್ನು ಅಲ್ಲಿಯೇ ಮುಂದುವರಿಸಿದರಿಂದ ನನ್ನ ಶಾಲೆ ನನ್ನ ಎರಡನೆಯ ಮನೆಯಾಗಿತ್ತು. ನನಗೆ ತುಂಬ ಪ್ರೀತಿಯಾದ ವಿಷಯ ಇಂಗ್ಲೀಷ್ ಮತ್ತು ಕನ್ನಡ. ಈ ವಿಷಯಗಳಲ್ಲಿರುವ ಕಥೆಗಳು ಮತ್ತು ಪದ್ಯಗಳನ್ನು ಓದುವುದನ್ನು ನನಗೆ ಬಹಳ ಇಷ್ಟವಾಗಿತ್ತು. ನನ್ನ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಸಂತ ಜೋಸೆಫ್ ಭಾರತಿಯ ಸಂಯುಕ್ತ ಪೂರ್ವ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮುಗಿಸಿದ್ದೆ. ಆ ಎರಡು ವರ್ಷಗಳಲ್ಲಿ ಅಲ್ಲಿನ ಶಿಕ್ಷಕರು ನನ್ನ ಜೀವನದಲ್ಲಿ ಬಹಳ ಪ್ರಭಾವಿಕರಾಗಿದರು. ಪೂರ್ವ ವಿಶ್ವವಿದ್ಯಾಲಯದಲ್ಲಿ ಗಣಕಯಂತ್ರ ವಜ್ಞಾನ ಮತ್ತು ಅಕೌಂಟೆನ್ಸಿ ನನ್ನ ಮೆಚ್ಚಿನ ವಿಷಯಗಳಾಗಿದ್ದವು. ಈಗಾ ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮಾಡುತಿದ್ದೇನೆ. ಬಿ.ಕಾಮ್ ಮೊದಲ ವರ್ಷದಲ್ಲಿ ಓದುತಿದ್ದಿನಿ.

ಮೆಚ್ಚಿನ ವಿಷಯಗಳು

ಬದಲಾಯಿಸಿ
 
ಬ್ಯಾಸ್ಕೆಟ್ಬಾಲ್

ನನ್ನ ಅಚ್ಚುಮೆಚ್ಚಿನ ಬಣ್ಣ ನೀಲಿ. ನನ್ನ ನೆಚ್ಚಿನ ಭಕ್ಷ್ಯ ಬಿರಿಯಾನಿ, ಕಬಾಬ್ ಮತ್ತು ಮೀನು ಫ್ರೈ. ವಾಲಿಬಾಲ್, ಬ್ಯಾಸ್ಕೆಟ್ಬಾಲ್, ಅಥ್ಲೆಟಿಕ್ಸ್ ಮತ್ತು ಈಜು ನನ್ನ ಮೆಚ್ಚಿನ ಕ್ರೀಡೆಗಳು. ಕಾಲಕ್ಷೇಪವಾಗಳು ನಾನು ನನ್ನ ಮಿತ್ರರೊಂದಿಗೆ ಮಾತಾಡುತ್ತೆನೆ ಅಥವ ಚಲನಚಿತ್ರಗಳನ್ನು ವೀಕ್ಷಿಸುತ್ತೆನೇ. ನನ್ನ ಮೆಚ್ಚಿನ ಕನ್ನಡ ಚಲನಚಿತ್ರಗಳು 'ಉಗ್ರಂ' ಮತ್ತು 'ಗೂಗ್ಲಿ'. ನನ್ನ ಮೆಚ್ಚಿನ ಇಂಗ್ಲಿಷ ಚಲನಚಿತ್ರಗಳು 'ಥಾರ್', 'ಅವೆಂಜರ್ಸ್' ಮತ್ತು 'ಸಾಲ್ಟ್'.

ನನಗೆ ಚಿಕ್ಕ ವಯಸಿನಲ್ಲಿಯೇ ಓದುವುದಲ್ಲಿ ಆಸಕ್ತಿ ಇತ್ತು. ಪತ್ರಿಕೆಗಳನ್ನು, ಪಠ್ಯ ಪುಸ್ತಕಗಳನ್ನು, ಪತ್ತೇದಾರಿ ಕಥೆಗಳನ್ನು ಮತ್ತು ಮಕ್ಕಳ ನಿಯತಕಾಲಿಕೆಗಳನ್ನು ಚಿಕ್ಕ ವಯಸ್ಸಿನಲ್ಲಿಯೆ ಓದಲು ಪ್ರಾರಂಭಿಸಿದೆ. ಪುಸ್ತಕಗಳನ್ನು ಓದುವುದು ಮತ್ತು ಸಂಗೀತವನ್ನು ಕೇಳುವುದು ನನ್ನ ಹವ್ಯಾಸಗಳಾಗಿದೇ. ಸಣ್ಣ ಕಥೆಗಳು, ಕಾದಂಬರಿಗಳು, ವಿಜ್ಞಾನ ಕಥೆಗಳನ್ನು ಓದುವುದು ನನಗೆ ಬಹಳ ಇಷ್ಟ. ಆನಂದವಾಗಿರುವಾ ಅಂತ್ಯಗಳುಲ್ಲ ಪುಸ್ತಕಗಳು ನನಗೆ ಬಹಳ ಇಷ್ಟ. 'ಆಲಿವರ್ ಟ್ವಿಸ್ಟ್' ನನ್ನ ಅಚ್ಚುಮೆಚ್ಚಿನ ಪುಸ್ತಕ. ಇದು ಸಂತೋಷವನ್ನು ಕಂಡುಕೊಂಡ ಒಂದು ಅನಾಥ ಹುಡುಗನ ಕಥೆ. ಪುಸ್ತಕಗಳ ಮೂಲಕ ನಿಜ ಪ್ರಪಂಚವನ್ನು ಮರೇತು, ಕಷ್ಟಗಳನ್ನು ಮರೇತು ಆನಂದ ತುಂಬಿರುವ ಕನಸಿನ ಲೋಕಕ್ಕೆ ಹೋಗಬಹುದು. ಸಂಗೀತಗಳನ್ನು ಕೇಳುವುದು ನನ್ನ ಆತ್ಮದಲ್ಲಿ ಉಲ್ಲಾಸ ಮತ್ತು ಶಾಂತ ಗಾಂಭೀರ್ಯವನ್ನು ತುಂಬುತ್ತದ್ದೆ.

ಕನಸುಗಳು

ಬದಲಾಯಿಸಿ
 
ರೈನ್ ಫಾಲ್ಸ್

ನನ್ನ ಕನಸು ಇಡೀ ಪ್ರಪಂಚ ಪರ್ಯಟನೆಯಲ್ಲಿ ಹೋಗುವುದು. ಭಾರತದಲ್ಲಿ ಊಟಿ, ಕೂರ್ಗ್, ಹಿಮಾಲಯ, ಡಾರ್ಜಿಲಿಂಗ್, ಮೇಘಾಲಯ ಮತ್ತು ಬೇರೆ ಪ್ರಕೃತಿಯ ವಿಸ್ಮಯ ತುಂಬಿದ ಸ್ಥಳಗಳಿಗೆ ಹೋಗುವುದು ನನ್ನ ಕನಸು. ಇಟಲಿ, ಸ್ಪೇನ್, ಸ್ವಿಟ್ಜರ್ಲ್ಯಾಂಡ್, ಕೆನಡಾ ಮುಂತಾದ ಹೋಗಬೇಕೆಂಬ ಕನಸಿದೆ. ಭವಿಷ್ಯದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದು, ಸಂಕಟದಲ್ಲಿರುವವರಿಗೆ ಸಂತೋಷವನ್ನು ನೀಡುವುದು ನನ್ನ ಕನಸಾಗಿದೇ. ನಾನು ಇಷ್ಟಪಡುವ ಪುಸ್ತಕಗಳಂತೆ ನಾನು ಒಂದು ಪುಸ್ತಕವನ್ನು ಬರೆಯುವುದು ನನ್ನ ಬಯಕೆಯಾಗಿದೆ. ನನಗೆ ದೀರ್ಘ ಕಾರಿನ ಸವಾರಿಗಳಲ್ಲಿ ನನ್ನ ಗೆಳಯರೊಂದಿಗೆ ಹೋಗುವ ಆಸೆ ಇದೆ.