ಸದಸ್ಯ:Shashankg165/ನನ್ನ ಪ್ರಯೋಗಪುಟ/Bank of Baroda
[೧] ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಆಫ್ ಬರೋಡಾ ಭಾರತ ಸರ್ಕಾರದ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕಂಪೆನಿಯಾಗಿದ್ದು, ಮುಂಬೈನಲ್ಲಿ ಇದರ ಕಾರ್ಪೊರೇಟ್ ಕಚೇರಿ ಇದೆ.ಗುಜರಾತ್ನಲ್ಲಿ ವಡೋದರಾ (ಮೊದಲು ಬರೋಡಾ ಎಂದು ಕರೆಯಲಾಗುತ್ತಿತ್ತು) ಎಂಬ ಊರಿನಲ್ಲಿ ಇದರ ಪ್ರಧಾನ ಕಚೇರಿ ಇದೆ.೨೦೧೭ರ ಮಾಹಿತಿ ಆಧರಿಸಿ, ಬ್ಯಾಂಕ್ ಆಫ್ ಬರೋಡಾ, ಫೋರ್ಬ್ಸ್ ಗ್ಲೋಬಲ್ ೨೦೦೦ ಅಧ್ಯಾಯನ ಪಟ್ಟಿಯಲ್ಲಿ ೧೧೪೫ ನೇ ಸ್ಥಾನದಲ್ಲಿದೆ.ಬ್ಯಾಂಕ್ ಆಫ್ ಬರೋಡಾ ೩.೫೮ ಟ್ರಿಲಿಯನ್ (ಆಸ್ತಿಯ ಮೂಲಕ ಭಾರತದ ೫ ನೇ ಅತಿದೊಡ್ಡ ಬ್ಯಾಂಕ್ ಆಗಿದೆ), ೫೫೩೮ ಶಾಖೆಗಳು ಭಾರತ ಮತ್ತು ವಿದೇಶಗಳಲ್ಲಿ, ಮತ್ತು ೧೦೪೪೧ ಎಟಿಎಂಗಳನ್ನು ಹೊಂದಿದೆ.೫೨೪೨೦ ಉದ್ಯೋಗಿಗಳು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇತಿಹಾಸ ಬರೋಡಾ ಮಹಾರಾಜರಾದ, ಮಹಾರಾಜ ಸಯಾಜಿರಾವ್ ಗೈಕ್ವಾಡ್ III ೨೦ ಜುಲೈ ೧೯೦೮ ರಂದು ಗುಜರಾತ್ನ ಪ್ರಿನ್ಸ್ಲಿ ಸ್ಟೇಟ್ ಆಫ್ ಬರೋಡಾದಲ್ಲಿ ಈ ಬ್ಯಾಂಕ್ ಅನ್ನು ಸ್ಥಾಪಿಸಿದರು.ಭಾರತದ ಇತರ ೧೩ ಪ್ರಮುಖ ವಾಣಿಜ್ಯ ಬ್ಯಾಂಕುಗಳ ಜೊತೆಯಲ್ಲಿ, ೧೯೬೯ರ ಜುಲೈ ೧೯ ರಂದು ಭಾರತ ಸರ್ಕಾರವು ಬ್ಯಾಂಕ್ ಆಫ್ ಬರೋಡಾ ಅನ್ನು ಸಹ ರಾಷ್ಟ್ರೀಕೃತಗೊಳಿಸಿತು. ೧೯೦೮ ರಲ್ಲಿ, ಮಹಾರಾಜ ಸಯಾಜಿರಾವ್ ಗೈಕ್ವಾಡ್ III, ಬ್ಯಾಂಕ್ ಆಫ್ ಬರೋಡಾ ಅನ್ನು ವಾಣಿಜ್ಯೋದ್ಯಮಿಗಳಾದ ಸಂಚಾರಾವ್ ಗೈಕ್ವಾಡ್, ರಾಲ್ಫ್ ವಿಟೆನಾಕ್, ವಿಟಾಲ್ಡಾಸ್ ಥಾಕ್ಸೆರ್, ತುಲಸಿದಾಸ್ ಕಿಲಾಚಂದ್ ಮತ್ತು ಎನ್.ಎಂ. ಚೋಕ್ಷಿಯವರೊಂದಿಗೆ ಸ್ಥಾಪಿಸಿದರು.ಎರಡು ವರ್ಷಗಳ ನಂತರ, ಅಹ್ಮದಾಬಾದ್ನಲ್ಲಿ ಮೊದಲ ಶಾಖೆಯನ್ನು ಸ್ಥಾಪಿಸಿತು.ವಿಶ್ವ ಸಮರ IIರ ನಂತರ ಬ್ಯಾಂಕ್ ಸ್ಥಳೀಯವಾಗಿ ಬೆಳೆಯಿತು. ನಂತರ ೧೯೫೩ ರಲ್ಲಿ ಮೊಂಬಾಸ ಮತ್ತು ಕಂಪಾಲಾದಲ್ಲಿ ಶಾಖೆಯನ್ನು ಸ್ಥಾಪಿಸುವ ಮೂಲಕ ಉಗಾಂಡಾದ ಭಾರತೀಯರ ಸಮುದಾಯಗಳಿಗೆ ಮತ್ತು ಕೀನ್ಯಾದಲ್ಲಿ ಭಾರತೀಯರಿಗೆ ಸೇವೆ ಸಲ್ಲಿಸಲು ಹಿಂದೂ ಮಹಾಸಾಗರವನ್ನು ದಾಟಿತು. ಮುಂದಿನ ವರ್ಷ ಕೀನ್ಯಾದಲ್ಲಿ ನೈರೋಬಿಯಲ್ಲಿ ಎರಡನೆಯ ಶಾಖೆ ಪ್ರಾರಂಭವಾಯಿತು ಮತ್ತು ೧೯೫೬ ರಲ್ಲಿ ಟಾಂಜಾನಿಯಾದಲ್ಲಿಯು ಸಹ ಶಾಖೆ ತೆರೆಯಿತು. ನಂತರ ೧೯೫೭ ರಲ್ಲಿ ಲಂಡನ್ ನಲ್ಲಿ ಶಾಖೆಯನ್ನು ಸ್ಥಾಪಿಸುವ ಮೂಲಕ ವಿದೇಶದಲ್ಲಿ ಬೃಹತ್ ಹೆಜ್ಜೆಯನ್ನು ಬ್ಯಾಂಕ್ ಆಫ್ ಬರೋಡಾ ತೆಗೆದುಕೊಂಡಿತು. ಏಕೆಂದರೆ ಲಂಡನ್ ಬ್ರಿಟಿಷ್ ಕಾಮನ್ವೆಲ್ತ್ ಕೇಂದ್ರ ಮತ್ತು ಅತ್ಯಂತ ಪ್ರಮುಖ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಕೇಂದ್ರವಾಗಿತ್ತು. ೧೯೫೮ ರಲ್ಲಿ ಬ್ಯಾಂಕ್ ಆಫ್ ಬರೋಡಾ,ಹಿಂದು ಬ್ಯಾಂಕ್ (ಕಲ್ಕತ್ತಾ;೧೯೪೩)ಅನ್ನು ಸ್ವಾಧೀನಪಡಿಸಿಕೊಂಡಿತು, ಅದು ಬ್ಯಾಂಕ್ ಆಫ್ ಬರೋಡಾದ ಮೊದಲ ದೇಶೀಯ ಸ್ವಾಧೀನವಾಗಿದೆ. ೧೯೬೧ ರಲ್ಲಿ, ಹೊಸ ನಾಗರಿಕ ಬ್ಯಾಂಕ್ ಆಫ್ ಇಂಡಿಯಾ,ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಂಡಿತು. ಈ ವಿಲೀನದಿಂದ ಮಹಾರಾಷ್ಟ್ರದಲ್ಲಿ ತನ್ನ ಶಾಖೆಯ ಜಾಲವನ್ನು ಹೆಚ್ಚಿಸಲು ಸಹಾಯ ಮಾಡಿತು. ಫಿಜಿನಲ್ಲಿ ಬ್ಯಾಂಕ್ ಆಫ್ ಬರೋಡಾ ಕೂಡ ಒಂದು ಶಾಖೆಯನ್ನು ತೆರೆಯಿತು. ಮುಂದಿನ ವರ್ಷ ಮಾರಿಷಸ್ನಲ್ಲಿ ಶಾಖೆ ತೆರೆಯಿತು. ಬ್ಯಾಂಕ್ ಆಫ್ ಬರೋಡಾ ೧೯೬೩ ರಲ್ಲಿ, ಗುಜರಾತ್ನ, ಸೂರತ್ ಬ್ಯಾಂಕಿಂಗ್ ಕಾರ್ಪೊರೇಷನ್ ಅನ್ನು ಸ್ವಾಧೀನಪಡಿಸಿಕೊಂಡಿತು. ಮುಂದಿನ ವರ್ಷವು ಸಹ ದಕ್ಷಿಣ ಗುಜರಾತ್ನ ಉಂಬರ್ಗಾಂವ್ ಪೀಪಲ್ಸ್ ಬ್ಯಾಂಕ್ ಮತ್ತು ತಮಿಳುನಾಡು ರಾಜ್ಯದ ತಮಿಳುನಾಡು ಸೆಂಟ್ರಲ್ ಬ್ಯಾಂಕ್ಗಳನ್ನೂ ಸ್ವಾಧೀನಪಡಿಸಿಕೊಂಡಿತು.[೨] ೧೯೭೨ ರಲ್ಲಿ, ಉಗಾಂಡಾದ ಬ್ಯಾಂಕ್ ಆಫ್ ಇಂಡಿಯಾ ಅನ್ನು ಸ್ವಾಧೀನಪಡಿಸಿಕೊಂಡಿತು.ಎರಡು ವರ್ಷಗಳ ನಂತರ, ದುಬೈ ಮತ್ತು ಅಬುಧಾಬಿಗಳಲ್ಲಿ ಒಂದು ಶಾಖೆ ತೆರೆಯಿತು. ೧೯೮೦ ರಲ್ಲಿ, ಬಹ್ರೈನ್ನಲ್ಲಿ ಶಾಖೆಯೊಂದನ್ನು ಪ್ರಾರಂಭಿಸಿತು ಮತ್ತು ಸಿಡ್ನಿ,(ಆಸ್ಟ್ರೇಲಿಯಾದಲ್ಲಿ) ಒಂದು ಪ್ರತಿನಿಧಿ ಕಚೇರಿಯನ್ನು ತೆರೆಯಿತು.ಬ್ಯಾಂಕ್ ಆಫ್ ಬರೋಡಾ,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್, ಜಂಟಿಯಾಗಿ ಹಾಂಗ್ ಕಾಂಗ್ನಲ್ಲಿ ಐಉಬಿ ಇಂಟರ್ ನ್ಯಾಶನಲ್ ಫೈನಾನ್ಸ್ ಅನ್ನು ಸ್ಥಾಪಿಸಿದೆ.ಪ್ರಾರಂಭದಲ್ಲಿ ಮೂರು ಬ್ಯಾಂಕುಗಳು ಸಮಾನ ಪಾಲನ್ನು ತೆಗೆದುಕೊಂಡಿತು. ಅಂತಿಮವಾಗಿ (೧೯೯೯ ರಲ್ಲಿ), ಬ್ಯಾಂಕ್ ಆಫ್ ಬರೋಡಾ ತನ್ನ ಪಾಲುದಾರರನ್ನು ಖರೀದಿಸಿತು. ೨೦೧೦ ರಲ್ಲಿ, ಮಲೇಷ್ಯಾದ ಸರ್ಕಾರವು, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್,ಈ ಮೂರು ಬ್ಯಾಂಕ್ಗಳು ಜಂಟಿಯಾಗಿ,ಮಲೇಷ್ಯಾದಲ್ಲಿ ಸಂಘಟಿಸಿದ ಬ್ಯಾಂಕ್ಗೆ ವಾಣಿಜ್ಯ ಬ್ಯಾಂಕಿಂಗ್ ಪರವಾನಗಿ ನೀಡಿತು.
ಬ್ಯಾಂಕ್ ಆಫ್ ಬರೋಡಾದ ಮುಖ್ಯ ನಿರ್ದೇಶಕರ ಮಂಡಳಿ ರವಿ ವೆಂಕಟೇಶನ್ (ಅಧ್ಯಕ್ಷರು) ಪಿ.ಎಸ್. ಜಯಕುಮಾರ್ (ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ) ಭಾರತ್ ದಂಗರ್ (ನಿರ್ದೇಶಕ)
ಬ್ಯಾಂಕ್ ಆಫ್ ಬರೋಡಾದ ಮುಖ್ಯ ಸೇವೆಗಳು
ಗ್ರಾಹಕ ಬ್ಯಾಂಕಿಂಗ್ ೧.ಕಾರ್ಪೊರೇಟ್ ಬ್ಯಾಂಕಿಂಗ್ ೨.ಕ್ರೆಡಿಟ್ ಕಾರ್ಡ್ಗಳು ೩.ಹಣಕಾಸು ಮತ್ತು ವಿಮೆ ೪.ಹೂಡಿಕೆ ಬ್ಯಾಂಕಿಂಗ್ ೫.ಅಡಮಾನ ಸಾಲಗಳು ೬.ಖಾಸಗಿ ಬ್ಯಾಂಕಿಂಗ್ ೭.ಖಾಸಗಿ ಷೇರುಗಳ ನಿರ್ವಹಣೆ ೮.ಆರ್ಥಿಕ ನಿರ್ವಹಣೆ
ಇತ್ತೀಚಿನ ಬೆಳವಣಿಗೆಗಳು
೧.ಗುರುಗ್ರಾಮ್ನಲ್ಲಿ ಸಿಕಂದರ್ಪುರ್ ಮೆಟ್ರೋ ನಿಲ್ದಾಣದ ಅರೆ ಹೆಸರಿಸುವ ಹಕ್ಕನ್ನು ಬ್ಯಾಂಕ್ ಆಫ್ ಬರೋಡಾ ಸ್ವಾಧೀನಪಡಿಸಿಕೊಂಡಿತು. ಮೊದಲ ಬಾರಿಗೆ ಸಾರ್ವಜನಿಕ ವಲಯದ ಬ್ಯಾಂಕೋಂದು ಮೆಟ್ರೋ ನಿಲ್ದಾಣದ ಹೆಸರಿಸುವ ಹಕ್ಕನ್ನು ಪಡೆದುಕೊಂಡಿದೆ.
೨.ಒಲಿಂಪಿಕ್ಸ್ ೨೦೧೬ರ ಮಹಿಳಾ ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಭಾರತದ ನಂ.೧ ಶ್ರೇಯಾಂಕದ ಪುರುಷ ಬ್ಯಾಡ್ಮಿಂಟನ್ ಆಟಗಾರ,ಕೆ.ಶ್ರೀಕಾಂತ್ ಅವರೊಂದಿಗೆ ಬ್ಯಾಂಕ್ ಆಫ್ ಬರೋಡಾ ೩ ವರ್ಷದ ಪ್ರಮುಖ ಪ್ರಾಯೋಜಕತ್ವದ ಒಪ್ಪಂದವನ್ನು ಮೊಹರು ಮಾಡಿದೆ.
೩.ಭಾರತದ ಮೊದಲ ಆತಿಥೇಯ ಫಿಫಾ ವಿಶ್ವ ಕಪ್ ೨೦೧೭ರ, ಪ್ರಾಯೋಜಕವಾಗಿ ಬ್ಯಾಂಕ್ ಆಫ್ ಬರೋಡಾ ಸೇವೆ ಸಲ್ಲಿಸುತ್ತಿದೆ.
ಹೀಗೆ ಸಾರ್ವಜನಿಕ ವಲಯದ ಪ್ರಮೂಖ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ಸೇವೆಗಳನ್ನು ಇಡೀ ವಿಶ್ವಕ್ಕೆ ಹರಡುತ್ತಾ ಮತ್ತು ಸಾವಿರಾರು ಜನರಿಗೆ ಉದ್ಯೋಗ ನಿಡುತ್ತಾ, ಭಾರತದ ಬ್ಯಾಂಕಿಂಗ್ ಕ್ಷೇತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕರೆದುಕೊಂದು ಹೋಗಿದೆ.