ಸದಸ್ಯ:Shashankg165/ನನ್ನ ಪ್ರಯೋಗಪುಟ/1
ಹನ್ನಾ ಕೌಲೆ
ಪರಿಚಯ
ಬದಲಾಯಿಸಿಹನ್ನಾ ಕೌಲೆ ಅವರು ಇಂಗ್ಲಿಷ್ ನಾಟಕಗಾರ್ತಿ ಮತ್ತು ಕವಯಿತ್ರಿ.ಇವರು ೧೪ ಮಾರ್ಚ ೧೭೪೩,ಟಿವರ್ಟನ್,ಡೆವೊನಲ್ಲಿ ಜನಿಸಿದರು.ಇವರ ಮೊದಲ ಹೆಸರು ಹನ್ನಾ ಪಾರ್ಕ್ಹೌಸ್.ಇವರ ತಂದೆ ಹನ್ನಾ(ನೀ ರಿಚರ್ಡ್ಸ್) ಮತ್ತು ತಾಯಿ ಫಿಲಿಪ್ ಪಾರ್ಕ್ಹೌಸ್.ಈಕೆಯ ತಂದೆ ಟಿವರ್ಟನಲ್ಲಿ ಪುಸ್ತಕ ವ್ಯಾಪಾರಿಯಾಗಿದ್ದರು.ಹತ್ತೊಂಬತ್ತನೆಯ ಶತಮಾನದ ನಂತರ ಕೌಲೆ ಅವರ ನಾಟಕಗಳು ಮತ್ತು ಕವಿತೆಗಳು ವ್ಯಾಪಕವಾದ ಜನಪ್ರಿಯತೆ ಗಳಿಸಲಿಲ್ಲವಾದರೂ, ವಿಮರ್ಶಕ ಮೆಲಿಂಡಾ ಫಿನ್ಬರ್ಗ್ ಅವರು "ಹದಿನೆಂಟನೇ ಶತಮಾನದ ಕೊನೆಯ ಭಾಗದಲ್ಲಿ ಅಗ್ರಗಣ್ಯ ನಾಟಕಕಾರರಲ್ಲಿ ಒಬ್ಬಳಾಗಿದ್ದಳು" ಎಂದು ಇಂಗ್ಲೀಷ್ಪತ್ರಿಕೆಯಲ್ಲಿ ಲೇಖನ ಬರೆದಿದ್ದರು.ಈಕೆಯ ಸ್ಪಾರ್ಕ್ಲಿಂಗ್ ಸಂಭಾಷಣೆ ಮತ್ತು ಸ್ಮರಣೀಯ ಹಾಸ್ಯ ಪಾತ್ರಗಳು ಜನಪ್ರಿಯವಾಗಿದ್ದವು.ಈಕೆಯ ಸಮಕಾಲೀನರಾದ ಗೋಲ್ಡ್ಸ್ಮಿತ್ ಮತ್ತು ಶೆರಿಡನ್ ಸಹ ಈಕೆಯನ್ನು ಹೊಗಳಿದ್ದಾರೆ.ಇವರು ೧೮೦೯ನಲ್ಲಿ ನಿಧನರಾದರು.
ಮೂಲಗಳು ಈಕೆ ೧೭೬೮ ಅಥವಾ ೧೭೭೨ರಲ್ಲಿ ಮದುವೆಯಾಗಿರಬಹುದು ಎಂದು ತಿಳಿಸುತ್ತದೆ.ಈಕೆಯ ಪತಿಯ ಹೆಸರು ಥಾಮಸ್ ಕೌಲೆ.ಮದುವೆಯಾದ ಬಳಿಕ ದಂಪತಿಗಳು ಲಂಡನ್ಗೆ ತೆರಳಿದರು, ಅಲ್ಲಿ ಥಾಮಸ್ ಸ್ಟಾಂಪ್ ಆಫೀಸ್ನಲ್ಲಿ ಅಧಿಕೃತರಾಗಿ ಮತ್ತು ಅರೆಕಾಲಿಕ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದರು.೧೮೧೩ರಲ್ಲಿ ರಂಗಭೂಮಿಯಲ್ಲಿ ನಿರ್ದಿಷ್ಟವಾಗಿ ಘೋರ ರಾತ್ರಿ ಕಳೆದ ನಂತರ ಹನ್ನಾ ತನ್ನ ಪತಿಗೆ ತಾನು ಉತ್ತಮವಾದ ನಾಟಕವನ್ನು ಬರೆಯಬಹುದೆಂದು ಹೆಮ್ಮೆ ವ್ಯಕ್ತಪಡಿಸಿದಳು,ಮತ್ತು ಹದಿನೈದು ಜಾಗದಲ್ಲಿ ದಿ ರನ್ಅವೇ ಆಗುವ ಮೊದಲ ಡ್ರಾಫ್ಟ್ ಅನ್ನು ಬಿಡಲಾಯಿತು ಎಂದು ಪುನರಾವರ್ತಿತ ಕಥೆಯು ಹೇಳುತ್ತದೆ. ಅವರ ಕಲಾತ್ಮಕ ಆಕಾಂಕ್ಷೆಗಳ ಜೊತೆಗೆ, ಆಕೆಯ ಪತಿಯ ಅಹಿತಕರ ಗಳಿಕೆಗಳು ಥಿಯೇಟರ್ ವ್ಯಾಪಾರಕ್ಕೆ ಪ್ರವೇಶಿಸಲು ಆರ್ಥಿಕ ಪ್ರೋತ್ಸಾಹ, ಹನ್ನಾಗೆ ನೀಡಿತು.ನಾಟಕ ಮಹಿಳೆಯರಿಗೆ ತೆರೆದ ಅತ್ಯಂತ ಲಾಭದಾಯಕ ಬರವಣಿಗೆಯ ರೂಪವಾಗಿದೆ.ಪ್ರಸಿದ್ಧ ನಟ-ಮ್ಯಾನೇಜರ್ ಡೇವಿಡ್ ಗ್ಯಾರಿಕ್ ಮತ್ತು ಡ್ರೂರಿ ಲೇನ್ ನಿರ್ಮಿಸಿದ ದಿ ರನ್ ವೇ ನಾಟಕ ೫೦ಕ್ಕೂ ಹೆಚ್ಚು ಭಾರಿ ಪ್ರದರ್ಶನ ಕಂಡು ಬಹಳ ಯಶಸ್ಸು ಮತ್ತು ಹಣ ಮಾಡಿ ಕೊಟ್ಟಿತು.[೧]
ಈಕೆಯ ಪ್ರಸಿದ್ಡನಾಟಕಗಳು ಕೆಳಗಿನಂತಿವೆ
ಬದಲಾಯಿಸಿಅ)ಡ್ಯೂಪ್ ಯಾರು? (೧೭೭೯) ನಾಯಕನಾದ ಗ್ರ್ಯಾಂಗರ್ ತನ್ನ ಪ್ರೇಮಿ, ಎಲಿಜಬೆತ್ನನ್ನು ನೋಡಲು ಪಟ್ಟಣದಲ್ಲಿ ಆಗಮಿಸುತ್ತಾನೆ.ಆದರೆ ಅವರ ಅಶಿಕ್ಷಿತ ತಂದೆಯಾದ ಅಬ್ರಹಾಂ ಡೋಯ್ಲಿ, ತಾವು ಕಂಡಿರುವ ಅತ್ಯಂತ ವಿದ್ಯಾವಂತ ವ್ಯಕ್ತಿಯಾದ ಗ್ರ್ಯಾಡಸ್ ಎಂಬವನೊಂದಿಗೆ ತನ್ನ ಮಗಳ ಮದುವೆ ಮಾಡಲು ನಿರ್ಧರಿಸುತ್ತಾನೆ.ಸಮಯ ಕಳಿದ ಬಳಿಕ ಅಬ್ರಹಾಂ ಡೋಯ್ಲಿಗೆ,ಗ್ರ್ಯಾಡಸ್ ಬರೀ ಪುಸ್ತಕದ ಬದ್ನೆಕಾಯಿ ಎಂದು ತಿಳಿದು ಬಂತು.ಇದೆ ಸಮಯದಲ್ಲಿ ಗ್ರ್ಯಾಂಗರ್ ಅಬ್ರಹಾಂ ಡೋಯ್ಲಿ ಬಳಿ ಬಂದು ತಾನು ಮಹಾನ್ ಪಂಡಿತ ಎಂದು ಹೇಳುತ್ತಾನೆ.ಅಬ್ರಹಾಂ ಡೋಯ್ಲಿ ಗ್ರ್ಯಾಂಗರ್ ಮತ್ತು ಗ್ರ್ಯಾಡಸ್ ನಡುವೆ ಎಂದು ಸ್ಪರ್ಧೆ ಏರ್ಪಡಿಸುತ್ತಾರೆ.ಕೊನೆಗೆ ಸ್ಪರ್ಧೆಯಲ್ಲಿ ಗ್ರ್ಯಾಂಗರ್ ಬಹಳ ಕಷ್ಟಪಟ್ಟು ತನ್ನ ಪ್ರೇಯಸಿಯ ಕೈ ಹಿಡಿಯುತ್ತಾನೆ.
ಆ)ದಿ ಬೆಲ್ಲೆಸ್ ಸ್ಟ್ರಾಟೇಜೆಮ್ (೧೭೮೦) ಹದಿನೆಂಟನೇ ಶತಮಾನದ ಲಂಡನ್ನ ಫ್ಯಾಶನ್ ಸಮಾಜದಲ್ಲಿ ಸ್ಥಾಪಿಸಿದ ಮನೋಭಾವ ಮತ್ತು ಪ್ರಣಯದ ಬಗ್ಗೆ ಇದು ಒಂದು ಲಘು ಹೃದಯದ ಹಾಸ್ಯ. ದಿ ಬೆಲ್ಲೆಸ್ ಸ್ಟ್ರಾಟೇಜಮ್ನಲ್ಲಿನ ಕೌಲಿಯ ಶೈಲಿಯು ಅವಳ ಪೂರ್ವಾಧಿಕಾರಿಗಳನ್ನು ಸೂಚಿಸುತ್ತದೆ ಎಂದು ವಿದ್ವಾಂಸರು ಸಾಮಾನ್ಯವಾಗಿ ಗಮನಿಸುತ್ತಾರೆ.ಇದು ಈಕೆಯ ಅತ್ಯಂತ ಪ್ರಸಿದ್ದ ನಾಟಕವಾಗಿದ್ದು,ಹಾಸ್ಯ ನಾಟಕದ ಪಂಡಿತೆ ಎಂದು ಜನರು ಈಕೆಯನ್ನು ಕರೆಯುತ್ತಿದ್ದರು.
ಹೀಗೆ,ಅಲ್ಬಿನಾ (೧೭೭೯),ಅ ಬೋಂಡ್ ಸ್ಟ್ರೋಕ್ ಫ಼ರ್ ಅ ಹಸ್ಬೆಂಡ್ (೧೭೮೩) ಇನ್ನು ಅನೇಕ ನಾಟಕಗಳು ಬರೆದಿದ್ದಾರೆ.
ಕೌಲೆ ಅವರ ಕವಿತೆ
ಬದಲಾಯಿಸಿ೧೭೮೬ರಲ್ಲಿ "ಸ್ಕಾಟಿಷ್ ವಿಲೇಜ್, ಅಥವಾ ಪಿಟ್ ಕೇರ್ನೆ ಗ್ರೀನ್" ಮತ್ತು ೧೮೦೧ರಲ್ಲಿ "ದಿ ಸೀಜ್ ಆಫ್ ಎಕ್ರೆ: ಎ ಎಪಿಕ್ ಪೊಯೆಮ್",ಇವುಗಳ ಮೂಲಕ ಹನ್ನಾ ಕೌಲೆ, ವಿಭಿನ್ನ ಕವಯಿತ್ರಿ ಎಂದು ಗುರುತಿಸಿಕೊಂಡಿದ್ದಾರೆ.೧೭೮೭ರ ಬೇಸಿಗೆಯಲ್ಲಿ, "ಅನ್ನಾ ಮಟಿಲ್ಡಾ" ಎಂಬುವರ ಅಡಿಯಲ್ಲಿ ಹನ್ನಾ ಮತ್ತು ಕವಿ ರಾಬರ್ಟ್ ಮೆರ್ರಿ "ದಿ ವರ್ಲ್ಡ್" ಎಂಬ ನಿಯತಕಾಲಿಕದ ಪುಟಗಳಲ್ಲಿ ಕಾವ್ಯಾತ್ಮಕ ಪತ್ರವ್ಯವಹಾರವನ್ನು ಪ್ರಾರಂಭಿಸಿದರು.ಅವರ ಕವಿತೆಗಳು ಭಾವನಾತ್ಮಕ ಮತ್ತು ನಿಕಟತೆಯಿಂದ ಕೂಡಿತ್ತು.ಮೊದಲಿಗೆ ಇಬ್ಬರೂ ಇತರರ ಗುರುತನ್ನು ತಿಳಿದಿರಲಿಲ್ಲ, ನಂತರ ಅವರು ಭೇಟಿಯಾದರು ಮತ್ತು "ಡೆಲ್ಲಾ ಕ್ರುಸ್ಕಾನ್ಸ್" ಎಂಬ ಕವಿತೆ ಆಂದೋಲನದಲ್ಲಿ ಭಾಗವಹಿಸಿದರು.[೨]
ವೃತ್ತಿಜೀವನದ ನಂತರ
ಬದಲಾಯಿಸಿ೧೭೮೩ರಲ್ಲಿ ಥಾಮಸ್ ಕೌಲೆಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸಸಿಕ್ಕಿತು.ಆದ್ದರಿಂದ ಥಾಮಸ್ ಕೌಲೆ ತನ್ನ ಪತ್ನಿ ಹನ್ನಾ ಕೌಲೆಯನ್ನು, ತಮ್ಮ ಮಕ್ಕಳನ್ನು ಬೆಳೆಸುವುದ್ದಕ್ಕಾಗಿ ಲಂಡನ್ನಲ್ಲೆ ಬಿಟ್ಟು ಭಾರತಕ್ಕೆ ತೆರಳಿದ.ಆದರೆ ಥಾಮಸ್ ಕೌಲೆ ೧೭೯೭ರಲ್ಲಿ ಭಾರತದಲ್ಲೆ ನಿಧನನಾದ.೧೭೮೦ರಲ್ಲಿ ಕೋವೆಂಟ್ ಗಾರ್ಡನ್ನಲ್ಲಿ ನಿರ್ಮಾಣವಾದ ದಿ ಬೆಲ್ಲೆಸ್ ಸ್ಟ್ರಾಟೇಜೆಮ್ ನಾಟಕ,ಲಂಡನ್ ನಲ್ಲಿ ಮೊದಲ ಬಾರಿಗೆ ೨೮ ರಾತ್ರಿಗಳು ಮತ್ತು ೧೧೮ ಬಾರಿ ಪ್ರದರ್ಶನ ಕಂಡಿತು.ಇದರಿಂದ ಬಂದ ಹಣದಲ್ಲೇ ಕೌಲೆ ಜೀವನ ಸಾಗಿಸುತ್ತಿದ್ದಳು.ಹನ್ನಾ ಕೌಲೆಯವರ ಕೊನೆಯ ನಾಟಕವಾದ "ದಿ ಟೌಂವ್ನ್ ಬಿಫೋರ್ ಯು" ಅನ್ನು ೧೭೯೫ ರಲ್ಲಿ ನಿರ್ಮಿಸಲಾಯಿತು.ಆದರೆ ಇದು ಅಷ್ಟೇನು ಹಣ ಮಾಡಲಿಲ್ಲ.೧೮೦೧ರಲ್ಲಿ ಕೌಲೆ ತಾನೆ ಹುಟ್ಟಿ ಬೆಳೆದ ಊರು,ಟಿವರ್ಟನ್,ಡೆವೊನ್ಗೆ ತೆರಳಿದರು.ಜನರಿಂದ ದೂರ ಉಳಿಯಬೇಕೆಂದು ತನ್ನ ಊರಿಗೆ ಹೊರೆಟ ಈಕೆ ೧೮೦೯ರಲ್ಲಿ ಯಕೃತ್ತು ವೈಫಲ್ಯದಿಂದ ನಿಧನರಾದರು.
ಇಂಗ್ಲೀಷ್ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನಿಡಿದ ಈಕೆ,೧೮ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟನ್ನಿನ ಅತ್ಯುತ್ತಮ ನಾಟಕಗಾರ್ತಿ ಎಂಬ ಹೆಗ್ಗಳಿಕೆ ಈಕೆ ಪಾತ್ರರಾಗಿರುತ್ತಾರೆ.ಈಕೆಯ ಹಾಸ್ಯಮಯನೀಯ ನಾಟಕವಾದ "ದಿ ಬೆಲ್ಲೆಸ್ ಸ್ಟ್ರಾಟೇಜೆಮ್" ಅನೇಕ ಭಾಷೆಗಳಿಗೆ ಅನುವಾದವಾಗಿದೆ.ಈಕೆಯ ಬರವಣಿಗೆಯಿಂದ ಪ್ರೇರಿತವಾಗಿ ಇನ್ನು ಅನೇಕ ಮಹಿಳೆಯರು ತಮ್ಮ ಬರವಣಿಗೆಯ ಪ್ರತಿಭೆಯನ್ನು ಹೊರ ತಂದರು.ಈಕೆಯ ಕೆಲವು ನಾಟಕಗಳು ಸಿನಿಮಾ ರೂಪಗೊಂಡು ಯಶಸ್ಸನ್ನು ಕಂಡಿತು.ಈಕೆಯ ಬರವಣಿಗೆಯ ಚಮತ್ಕಾರ ತಿಳಿಯಬೇಕಾದರೆ ನಾವು ಒಮ್ಮೆ ಆದರೂ ಈಕೆಯ ನಾಟಕ ಅಥವ ಕವಿತೆಯನ್ನು ಓದಬೇಕು.ಇಂತಯ ಮಾದರಿ ಮಹಿಳೆಯರ ಬಗ್ಗೆ ಇಂದನ ಪೀಳಿಗೆ ಅವರು ತಿಳಿದು ಆಕೆಯಂತೆ ಸಾಹಿತ್ಯ ಕ್ಷೇತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯ .
ಉಲೇಖಗಳು
ಬದಲಾಯಿಸಿ