Sharonthomas16
Joined ೩ ಮಾರ್ಚ್ ೨೦೧೫
ಸಂತೆಯಲ್ಲೆ ನಿಂತರೂನು
ಬದಲಾಯಿಸಿ
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನೆ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನೆ ಸೇರಬಲ್ಲೆ ನಿನ್ನನೆ
ನಾನು ಮಾತ್ರ ಬಲ್ಲೆ ನಿನ್ನನೆ
ಲ ಲ ಲ ....
ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪಲೆ ಬೇಯುವೆ
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ
ಜೀವಗಳ ಭಾಷೆಯಿದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರು ಕಾಯಿಸಿ ನೋಡು
ನಿನ್ನಿಂದ ನನ್ನ ನೀನೆ ಕಾಪಾಡು.....ಹೃದಯವೆ....
ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆನೆ ಕೈಯ ಹಿಡಿ ಇನ್ನು ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ ನಾಳೆ ಬಾ ಎಂದು
ಆಗಲೇ ಬೇಡ ದೂರ ಎಂದೆಂದೂ....ಹೃದಯವೆ..