Shankar ninganur
ಶಂಕರ ನಿಂಗನೂರ
ಶಂಕರ ನಿಂಗನೂರ ಅವರು ಬೆಳಗಾವಿ ಜಿಲ್ಲೆ, ಅಥಣಿ ತಾಲೂಕಿನ ಕಟಗೇರಿ ಗ್ರಾಮದವರು. ನಂತರ ತಂದೆಯ ಜೊತೆಗೆ ಐನಾಪೂರ ಗ್ರಾಮದಲ್ಲಿ ನೆಲೆ ನಿಂತು ಪ್ರಾಥಮಿಕ ದಿಂದ ಪಪೂ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದ್ದಾರೆ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಕ.ವಿ.ವಿ ಧಾರವಾಡದಿಂದ ಪ್ರಥಮ ಶ್ರೇಣಿಯಲ್ಲಿ ಎಮ್.ಎ ಪದವಿ , ಶಾಸನಶಾಸ್ತ್ರ ಮತ್ತು ಬಸವಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿ ಪಡೆದಿದ್ದಾರೆ.ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯಕ್ಕೆ "ಪ್ರೀಡಮ್ ಮೋವಮೆಂಟ್ ಇನ್ ಅಥಣಿ ತಾಲೂಕಾ" ಎಂಬ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ. ೨೦೧೪ ರಲ್ಲಿ ಜರುಗಿದ ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಸದ್ಯ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಇತಿಹಾಸ ಉಪನ್ಯಾಸಕರಾಗಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾಗಿ ಹಾಗೂ ಕಲ್ಲೋಳಿ ಪಟ್ಟಣ ಪಂಚಾಯತಿಯ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುರೇಶ ಹನಗಂಡಿ ಅವರೊಂದಿಗೆ"ಇಂದ್ರವೇಣಿ, ಕಲ್ಲೋಳಿಯ ಐತಿಹಾಸಿಕ ಚರಿತ್ರೆ" ಹಾಗೂ ಸಹಕಾರ ಪ್ರಭೆ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ.