ಸದಸ್ಯ:Shamanth Padpu 17/ನನ್ನ ಪ್ರಯೋಗಪುಟ

ಗುತ್ತಿಗಾರು ಗ್ರಾಮ

ಬದಲಾಯಿಸಿ

ಸುಳ್ಯ ಸುಬ್ರಹ್ಮಣ್ಯ ಮುಖ್ಯ ರಸ್ತೆಯಲ್ಲಿ ತಾಲೂಕು ಕೇಂದ್ರ ಸುಳ್ಯದಿಂದ ಸುಮಾರು ೨೩ಕಿ.ಮೀ ಕ್ರಮಿಸಿದ ನಂತರ ದೊರೆಯುವ ಕಾಜಿಮಡ್ಕದಿಂದ ಗುತ್ತಿಗಾರು ಪೇಟೆಯ ಅಂತ್ಯದವರೆಗೆ ಎರಡೂ ಬದಿಗಳಲ್ಲಿ ಗುತ್ತಿಗಾರು ಗ್ರಾಮವೂ ಹರಡಿಕೊಂಡಿದೆ. ಉತ್ತರದಲ್ಲಿ ಬಳ್ಪ ಪೇಟೆಯವರೆಗೂ ಗ್ರಾಮದ ಗಡಿ ವಿಸ್ತರಿಸಿಕೊಂಡಿದೆ. ವಳಲಂಬೆ,ಹೊಸೋಳಿಕೆ,ಅಂಬ್ರೋಳಿ,ಬಳ್ಳಕ,ಕಿನ್ನಕುಮೇರಿ,ಮೊಗ್ರ,ಮಲ್ಕಜೆ,ಬಳ್ಪಕ್ರಾಸ್,ಕಮಿಲ,ತುಂಬತ್ತಾಜೆ,ದೇವಸ್ಯ,ಚತ್ರಪ್ಪಾಡಿ,ಪೂಜಾರಿಕೋಡಿ,ಪೈಕ, ಅಡ್ಡನಪಾರೆ,ಕಾಜಿಮಡ್ಕ ಮೊದಲಾದ ಪ್ರವೇಶಗಳು ಗ್ರಾಮದ ಹೊರವಲಯದ ಪ್ರದೇಶಗಳು ಗ್ರಾಮದ ಉತ್ತರ ಭಾಗದಲ್ಲಿ ಅಮೂಲ್ಯ ನೈಸರ್ಗಿಕ ಸಂಪತ್ತುಗಳನ್ನು ಹೊಂದಿರುವ ಬಳ್ಪ ರಕ್ಷಿತಾರಣ್ಯವಿದೆ. ಗ್ರಾಮದ ಕೇಂದ್ರದ ಪಕ್ಕದ ಬಾಕಿಲದಿಂದ ಬಳ್ಳಕದವರೆಗೆ ಆಗ್ನೇಯದಿಂದ ವಾಯುವ್ಯದ ಕಡೆಗೆ ಬಾಕಿಲ ಹೊಳೆ ಹರಿಯುತ್ತದೆ.

ಗ್ರಾಮದ ಪರಿಸರ

ಬದಲಾಯಿಸಿ

ಗುತ್ತಿಗಾರು ಪಂಚಾಯತು ವ್ಯಾಪ್ತಿಯಲ್ಲಿ ೯ ಅಂಗನವಾಡಿ,೬ ಕಿರಿ ಪ್ರಾಥಮಿಕ ಶಾಲೆ,೧ ಖಾಸಗಿ ಪ್ರೌಡ ಶಾಲೆಗಳು ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಚತುರ್ಥಲಾಯ, ದೂರವಾಣಿ ಕೇಂದ್ರ, ವಿದ್ಯುತ್ ಇಲಾಖೆಯ ಕಛೇರಿ, ಅಂಚೆ ಕಛೇರಿ ಮೊದಲಾದ ಸರಕಾರಿ ಕಛೇರಿಗಳಿವೆ. ಹಿದುಳಿದ ವರ್ಗದ ಹಾಸ್ಟೆಲಿದೆ. ರಬ್ಬರ್ ಬೆಳೆಯುವವರಿಗಾಗಿ ಪ್ರತ್ಯೇಕ ಸಹಕಾರಿ ಸಂಘವಿದೆ. ಸಿಂಡಿಕೇಟ್ ಬ್ಯಾಂಕ್ ಮತ್ತು ಕೃಷಿಕರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕುಗಳಿವೆ.

ಬೆಳೆಗಳು

ಬದಲಾಯಿಸಿ

ಗುತ್ತಿಗಾರು ಪಂಚಾಯತಿಯ ೧೭ ಮಂದಿ ಸದಸ್ಯರಲ್ಲಿ ಮಾಜಿ ಶಾಸಕರೊಬ್ಬರನ್ನು ಹೊಂದಿದೆ. ರಾಜ್ಯದಲ್ಲಿ ಅತೀ ಹೆಚ್ಚು ರಬ್ಬರ್ ಬೆಳೆಯುವ ತಾಲೂಕು.ಸುಳ್ಯದಲ್ಲಿ ಅತೀ ಹೆಚ್ಚು ರಬ್ಬರ್ ಬೆಳೆಯುವ ಗ್ರಾಮ ಗುತ್ತಿಗಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಅಡಕೆ,ತೆಂಗು,ಗೇರು,ಶುಂಠಿ,ಅರಿಶಿಣ,ಅನಾನಸು,ಕೋಕೋ,ಬಾಳೆ ಹೀಗೇ ವಿವಿಧ ರೀತಿಯ ವಾಣಿಜ್ಯ ಹಾಗೂ ತೋಟಗಾರಿಕಾಬೆಳೆಗಳಿವೆ. ಗುತ್ತಿಗಾರು ಅತೀ ಹೆಚ್ಚು ರಬ್ಬರ್ ಬೆಳೆಯುವ ಪ್ರದೇಶವಾಗಿದ್ದು ಇದೀಗ ಉತ್ತಮ ಮಾರುಕಟ್ಟೆಯಿದ್ದು ತೀವ್ರವಾದ ಆರ್ಥಿಕ ಪ್ರಗತಿಗೆ ಕಾರಣವಾಗಿದೆ.

ದೇವಸ್ಥಾನಗಳು ಮತ್ತು ದೈವಗಳು

ಬದಲಾಯಿಸಿ

ಮರಕತದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನವು ರಾಜ್ಯದ ಎಲ್ಲಾ ಕಡೆಯ ಭಕ್ತರನ್ನು ಆಕರ್ಷಿಸುವಂತ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವುದು ವಿಶೇಷ.ವಳಲಂಬೆಯ ಶಂಕಪಾಲ ಸುಬ್ರಹ್ಮಣ್ಯ ದೇವಾಲಯವು ಗ್ರಾಮದ ಪ್ರಮುಖ ಆರಾಧನಾ ಕೇಂದ್ರವಾದರೂ ಮನೆ ಮನೆಗಳಲ್ಲಿ ಭೂತ ದೈವಾರಾಧನೆಯೇ ಪ್ರಮುಖ ಆರಾಧನೆಯಾಗಿದೆ ಗುಳಿಗ,ಕಲ್ಲುರ್ಟಿ,ಗುರುಕಾರ್ನೂರು,ಪಂಜುರ್ಲಿ,ಪುರುಷದೈವ ಹೀಗೆ ನೂರೊಂದು ದೈವ ಆರಾಧಿಸಲ್ಪಡುತ್ತದೆ.[][]

ಉಲ್ಲೇಖಗಳು

ಬದಲಾಯಿಸಿ
  1. ಸಂಪಾದಕರು-ಡಾ|ಯು.ಪಿ. ಶಿವಾನಂದ;ಪ್ರಕಾಶಕರು-ಸುದ್ದಿ ಬಿಡುಗಡೆ ಸುಳ್ಯ,ದ.ಕ;ವರ್ಷ-೨೦೦೩;ಪುಟ ಸಂಖ್ಯೆ (೬೫೮-೬೫೯)
  2. http://www.onefivenine.com/india/villages/Dakshin-Kannad/Sulya/Guthigaru