ನಾನು ಶಲಾಕ.ಸಂತ ಅಲ್ಯೂಯಶಿಯಸ್ ಕಾಲೇಜಿನ ಬಿ.ಎ. ೨ನೇ ವರ್ಷದ ವಿದ್ಯಾರ್ಥಿನಿ.ನನಗೆ ನನ್ನ ಮನಸ್ಸಿನ ಮಾತನ್ನು ಹೇಳಬೇಕೆಂಬ ಮನಸ್ಸಿನಿಂದ ಇದನ್ನು ಬರೆಯುತ್ತಿದ್ದೇನೆ.ನನಗೆ ನನ್ನ ಅಜ್ಜಿ 'ಶಲಾಕ' ಎಂಬ ಹೆಸರಿಟ್ಟರು.ನಾನು ಬಾಲ್ಯದಲ್ಲಿ ಎಲ್ಲರ ಪ್ರೀತಿ ವಾತ್ಸಲ್ಯದಿಂದ ಬೆಳೆದೆ.ಕಲಿಯುವುದರಲ್ಲೂ ಹಿಂದೆಬೀಳಲಿಲ್ಲ.ನನ್ನ ತಂದೆಗೆ ನಾನು ಎಲ್ಲದರಲ್ಲೂ ಮುಂದೆ ಬರಬೇಕೆಂಬ ಆಸೆಯಿತ್ತು.ಹಾಗೆಯೇ ನನಗೆ ಬಾಲ್ಯದಲ್ಲಿ ನೃತ್ಯಾಭ್ಯಾಸ, ಸಂಗೀತ ಕಲಿಯಲು ಪೋತ್ಸಾಹಕೊಟ್ಟರು.ಆದರೆ ನನ್ನ ದೌರ್ಭಾಗ್ಯದಿಂದ ನನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಳ್ಳಬೇಕಾಯಿತು.ಈಗ ಪ್ರತಿಯೊಂದಕ್ಕೂ ತಾಯಿಯ ಆಸರೆ.ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕೆಂದು ತನ್ನ ಹಿರಿಯರ ಮಹದಾಸೆ.ಅವರ ಇಚ್ಛೆಯಂತೆ ಚೆನ್ನಾಗಿ ಕಲಿತು ಮುಂದೆ ಬರಬೇಕೆಂದು ಪ್ರಯತ್ನಿಸುತ್ತೇನೆ.ನನ್ನ ಪಿತಾಮಹರು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಹಾಯನೀಡುತ್ತಿದ್ದರು.ಅವರ ಆದರ್ಶದಂತೆ ನಾನು ನನ್ನ ಮುಂದಿನ ವಿದ್ಯಾಭ್ಯಾಸ,ನಂತರ ಜೀವನವನ್ನು ಒಳ್ಳೇ ರೀತಿಯಲ್ಲಿ ನಡೆಸಲು ಪ್ರಯತ್ನಿಸುತ್ತೇನೆ.

ನಾನು ಮಂಗಳೂರಿನಲ್ಲಿ ೧೨ನೇ ಆಗಸ್ಟ ೧೯೯೬ರಲ್ಲಿ ಜನಿಸಿದೆ..ಆದುದರಿಂದ ನನಗೆ ಮಂಗಳೂರು ಎಂದರೆ ತುಂಬಾ ಪ್ರೀತಿ.ನನ್ನ ತಂದೆ ಪುತ್ತೂರಿನಲ್ಲಿ ಜೀವವಿಮ ಕಛೇರಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.ಆದುದರಿಂದ ನನ್ನ ಬಾಲ್ಯವನ್ನು ಪುತ್ತೂರಿನಲ್ಲಿ ಕಳೆದೆ.ನನ್ನ ವಿದ್ಯಾಭ್ಯಾಸ ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಮಾಡಿದೆ.ನನ್ನ ಹವ್ಯಾಸ ಕಥೆ ಓದುವುದು,ಬರೆಯುದು ಮತ್ತು ಗಿಟಾರ್ ಬಾರಿಸುವುದು.ನನ್ನ ತಂದೆಯ ಹೆಸರು ಶಿವ ಪ್ರಸಾದ್.ತಾಯಿ ಪ್ರಮೀಳ ಮತ್ತು ಅಣ್ಣ ಚಿರಾಗ್.ಇವರು ನನ್ನ ಪ್ರೀತಿಪಾತ್ರರು.