Seemadeso
ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್;
ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್ ಬ್ರಿಟನ್ನಿನ ಪ್ರಸಿದ್ಧ ಭೌತವಿಜ್ಞಾನಿ ಮತ್ತು ಖಗೋಳ ವಿಜ್ಞಾನಿ. ಇವರು ಕ್ರಿ.ಶ ೧೮೩೧,ಜೂನ್ ೧೫ರಂದು ಜನಿಸಿದರು. ಇವರು ಭೌತ ಹಾಗೂ ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ. ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್, ಪ್ರಹರಿಸುತ್ತಿರುವ ವಿದ್ಯುತ್ ಮತ್ತು ಕಾಂತೀಯ ತರಂಗಗಳ ನಡುವಿನ ಅಂತರವರ್ತನೆಗಳಿಗೆ ಕುರಿತಂತೆ ಗಣಿತ ಶಾಸ್ತ್ರಿಯ ಸೂತ್ರಗಳನ್ನು ನಿರೂಪಿಸಿದರು. ಇವರು ಬೆಳಕು ಒಂದು ರೂಪದ ವಿದ್ಯುತ್ ಕಾಂತೀಯ ವಿಕಿರಣ ಎಂದು ಪ್ರತಿಪಾದಿಸಿದರು. ಈ ಮಹತ್ವದ ಸಂಶೋಧನೆ ಹೆನ್ರಿಕ್ ಹಾರ್ಟ್ ರೇಡಿಯೋ ತರಂಗಗಳನ್ನು ಸಂಶೋಧಿಸಲು ನಾಂದಿಯಾಯಿತು. ಇದಕ್ಕೂ ಮೊದಲು ಜೇಮ್ಸ್ ಕ್ಲರ್ಕ್ ವರ್ಣ ಗ್ರಹಿಕೆಯ ಮತ್ತು ವರ್ಣ ಅಂಧತೆಯ ಕುರಿತು ಆಳವಾದ ಅಭ್ಯಾಸಮಾಡಿ, ಮ್ಯಾಕ್ಸ್‌ವೆಲ್ ಬಿಲ್ಲೆ ಯನ್ನು ಕಂಡುಹಿಡಿದರು. ಮ್ಯಾಕ್ಸ್‌ವೆಲ್ ರವರ ಮತ್ತೊಂದು ಮಹತ್ವದ ಸಂಶೋಧನೆಯೆಂದರೆ, ಶನಿಗ್ರಹದ ಸುತ್ತಲೂ ಇರುವ ಉಂಗುರಗಳು ಘನ ವಸ್ತುವಿನಿಂದ ರಚನೆಯಾದದ್ದಲ್ಲ. ಅದು ಸಣ್ಣ ಸಣ್ಣ ಕಣಗಳಿಂದ ರಚನೆಯಾದದ್ದು ಎಂದು ತೋರಿಸಿಕೊಟ್ಟರು. ಇವರ ಇನ್ನೊಂದು ಮಹತ್ವದ ಕೊಡುಗೆಯೆಂದರೆ ಅನಿಲಗಳ ಚಲನ ಸಿದ್ಧಾಂತ ವಿಕಾಸಗೊಳಿಸಿದ್ದು . ಇವರು ೧೮೭೯ ರಲ್ಲಿ ವಿಧಿವಶರಾದರು