ಸದಸ್ಯ:Saptami.chincholi
ಕುಟುಂಬ
ಬದಲಾಯಿಸಿನನ್ನ ಹೆಸರು ಸಪ್ತಮಿ.ಚಿಂಚೋಳಿ.ತಂದೆ- ರಾಜಶೇಖರ್.ಚಿಂಚೋಳಿ, ತಾಯಿ- ವಿಜಯಲಕ್ಷ್ಮೀ, ಹಿರಿಯ ಸಹೋದರ (ಅಣ್ಣ)- ಸಿದ್ದೇಶ್. ಚಿಂಚೋಳಿ.ಇದು ನಮ್ಮ ಚಿಕ್ಕದಾದ ಮತ್ತು ಚೊಕ್ಕದಾದ ಕುಟುಂಬ.ಅಣ್ಣ ಇಂಜಿನಿಯರಿಂಗ್ ಅನ್ನು ಪಿ.ಇ.ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ತಾಯಿ ಗೃಹಿಣಿ.ತಂದೆ ಭಾಷ್ ಕಂಪನಿಯಿಂದ ನಿವೃತ್ತಿ ಹೊಂದಿದ್ದಾರೆ. ನನ್ನ ಹುಟ್ಟೂರು- ಗುಲ್ಬರ್ಗ. ತಾಯಿಯ ಊರು ಗುಲ್ಬರ್ಗ. ತಂದೆಯ ಊರು ಗುಲ್ಬರ್ಗದಲ್ಲಿರುವ ಸುಂಟನೂರು ಎಂಬ ಹಳ್ಳಿ.ತಂದೆ ಮತ್ತು ಅಣ್ಣನಿಗೆ ಕನ್ನಡದಲ್ಲಿ ಬಹಳ ಆಸಕ್ತಿ. ವಿಶೇಷವಾಗಿ ತಂದೆಯವರಿಗೆ ಕನ್ನಡಲ್ಲಿ ಕಥೆಗಳನ್ನು ಬರೆಯುವುದೆಂದರೆ, ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದುವುದೆಂದರೆ ಬಲು ಇಷ್ಟ. ಇವರ ಕೆಲವು ಲೇಖನಗಳು ಬಸವ ಕಿರಣ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಇವರಿಂದ ನನಗೂ ಮತ್ತು ಅಣ್ಣನಿಗೂ ಕನ್ನಡದಲ್ಲಿ ಮೊದಲಿನಿಂದಲೂ ಎಲ್ಲಿಲ್ಲದ ಆಸಕ್ತಿ. ನನ್ನ ಹವ್ಯಾಸಗಳು- ಪುಸ್ತಕಗಳನ್ನು ಓದುವುದು,ಹಾಡುವುದು, ಹಾಡುಗಳನ್ನು ಆಲಿಸುವುದು. ನಾನು ಓದಿರುವ ಪುಸ್ತಕಗಳಲ್ಲಿ ನನಗೆ ಬಹಳ ಇಷ್ಟವಾದ ಪುಸ್ತಕವೆಂದರೆ "ಅನುಪಮಾ ನಿರಂಜನ"ರ ಆತ್ಮಕಥನ - "ನೆನಪು: ಸಿಹಿ ಕಹಿ" ಮತ್ತು "ಎಂ.ವಿ.ಸೀತಾರಾಮಯ್ಯ"ನವರ - "ಮಾದನ ಮಗಳು" (ಸಾಮಾಜಿಕ ಕಾದಂಬರಿ).
ವಿದ್ಯಾಭ್ಯಾಸ
ಬದಲಾಯಿಸಿನನ್ನ ಶಿಕ್ಷಣದ ಬಗ್ಗೆ ಹೇಳಬೇಕೆಂದರೆ, ನಾನು ೨ನೇಯ ತರಗತಿಯವರೆಗೂ ಆದರ್ಶ ಶಾಲೆಯಲ್ಲಿ ಓದಿದೆ. ನಂತರ ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ ಹತ್ತನೆಯ ತರಗತಿಯವರೆಗೂ ಓದಿ, ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸಿದೆ. ಈ ಹಂತದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದುಂಟು ಮತ್ತು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಬಹಳ ನೆನಪಿನಲ್ಲಿರುವುದು- ಬಸವಕೇಂದ್ರ, ಶ್ರೀ ಮುರುಘಾಮಠ, ಚಿತ್ರದುರ್ಗ ಆಯೋಜಿಸಿದ್ದ ವಚನ ಕಮ್ಮಟ ಸ್ಪರ್ಧೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದೆ (ಇಡೀ ಶಾಲೆಗೆ ನಾನು ಒಬ್ಬಳೆ ಆಗಿದ್ದೆ). ಪ್ರತೀ ವರ್ಷ ನಡೆಯತ್ತಿದ್ದ ವಚನ ವಾಚನ ಸ್ಪರ್ಧೆಯಲ್ಲಿ ಬಹುಮಾನ ಬರುತಿತ್ತು. ಅಂತೆಯೇ ಕನ್ನಡ ನಾಟಕ ಸ್ಪರ್ಧೆಯಲ್ಲಿ , ಪ್ರಬಂಧ ರಚನೆಯಲ್ಲಿ, ಆಶುಭಾಷಣ ಸ್ಪರ್ಧೆಗಳಲ್ಲೂ ಭಾಗವಹಿಸಿ ಗೆದ್ದದುಂಟು.ಶಾಲೆಯಲ್ಲಿ ಸ್ನೇಹಿತರೊಡನೆ ಮಾಡಿದ ಚೇಷ್ಟೆಗಳು ಮತ್ತು ಆಡಿದ ಆಟಗಳು ಇನ್ನು ಅಚ್ಚಳಿಯದಂತೆ ಮನದಲ್ಲಿ ಹಾಗೆಯೇ ಉಳಿದಿದೆ.ಬಾಲ್ಯ ಸ್ನೇಹಿತರೊಡನೆ ಕಳೆದ ಆ ಸಮಯ ಅದ್ಭುತ ಅಮೋಘ.ವರ್ಷಕ್ಕೊಮ್ಮೆ ನಡೆಯುತ್ತಿದ್ದ ಶಾಲಾ ವಾರ್ಷಿಕೋತ್ಸವ ಮರೆಯಲಾಗುವುದಿಲ್ಲ ಅಂದು ಹುಚ್ಚೆದ್ದು, ನಮಗೆ ತೃಪ್ತಿಯಾಗುವವರೆಗು ಕುಣಿದು ಕುಪ್ಪಳಿಸುತ್ತಿದ್ದೆವು.ನಂತರ ನನ್ನ ಕಾಲೇಜು ಜೀವನ. ಎಂದೂ ಮರೆಯಲಾಗದ ದಿನಗಳು ಅವು.ನನ್ನ ಜೀವನ ತಿರುವು ಕಂಡ ಹಂತ ಎಂದರೆ ತಪ್ಪಲ್ಲ. ಈ ವಿದ್ಯಾಸಂಸ್ಥೆ ಶಾರದಾ ವಿಕಾಸ ಪಿ.ಯು. ಕಾಲೇಜ್ (ದೀಕ್ಷಾ).ಕಾಲೇಜು ಮೆಟ್ಟಿಲನ್ನುಹತ್ತಿದಾಗ ಒಂದು ತೆರನಾದ ಖುಷಿ. ಹೊಸ ವಾತಾವರಣ, ಹೊಸ ಸ್ನೇಹಿತರು, ಹೊಸ ಜನ. ಹೀಗೆ ಎಲ್ಲವೂ ಹೊಸತು. ಆದರೆ ನಾನು ಆ ವಾತಾವರಣಕ್ಕೆ ಬೇಗ ಹೊಂದಿಕೊಂಡೆ. ಒಳ್ಳೆಯ ಸ್ನೇಹಿತರು ದೊರಕಿದರು. ಕಾಲೇಜು ಸುರುವಾಗಿ ಮುಗಿದದ್ದೇ ತಿಳಿಯಲಿಲ್ಲ, ದಿನಗಳು ಬಹಳ ಬೇಗ ಕಳೆದವು. ಮಾಸಿಹೋಗದಂತ ಹಲವಾರು ಸಿಹಿ ಮತ್ತು ಕಹಿ ನೆನಪುಗಳು ಇವೆ.ಈಗ ನಾನು ಓದುತ್ತಿರುವ ಸಂಸ್ಥೆಯ ಬಗ್ಗೆ ಹೇಳಬೇಕು ಅಂದರೆ ಬಹಳ ಪ್ರತಿಷ್ಠಿತವಾದದ್ದು. ಇಲ್ಲಿನ ಕಟ್ಟುಪಾಡುಗಳು ಮತ್ತು ನಿಯಮಗಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಈಗ ಯಾವುದಕ್ಕೂ ತೊಂದರೆಯಿಲ್ಲ ಎಲ್ಲದಕ್ಕೂ ಹೊಂದಿಕೊಂಡಿದ್ದೇನೆ. ಬಹಳ ಖುಷಿಯಾಗುತ್ತಿದೆ. ಹೊಸ ತೆರನಾದ ವಾತಾವರಣ.ಹೊಸ ಅನುಭವ. ಕ್ರೈಸ್ಟ್ ವಿಶ್ವವಿದ್ಯಾಲಯವು ನನಗೆ ಇಲ್ಲಿ ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
ಜೀವನದ ಮುಖ್ಯ ತಿರುವು
ಬದಲಾಯಿಸಿ"ತಾಯಿ ಜನ್ಮ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ" ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ನನ್ನ ಜೀವನದಲ್ಲಿ ಒಂದೊಂದು ಹಂತದಲ್ಲಿಯೂ ಗುರುಗಳು ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಂತೆಯೇ ಪೋಷಕರದ್ದೂ ಹೌದು.ಅವರೆಲ್ಲರಿಗೂ ನನ್ನ ಕೃತಜ್ಙತೆಗಳು. ಎಂದಿಗೂ ಅವರಿಗೆ ನಾನು ಚಿರಋಣಿ. ಅಂತಹವರಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಹಾಗೂ ಗುರುವಿನ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರೇ "ನಿಧಿಶ್ ಕೃಷ್ಣ". ಇವರು ನನಗೆ ಕಾಲೇಜಿನಲ್ಲಿ ಜೀವಶಾಸ್ತ್ರ ವಿಷಯವನ್ನು ಪಾಠ ಮಾಡುತ್ತಿದ್ದರು. ನನ್ನ ಶಿಕ್ಷಣ ಜೀವನಕ್ಕೆ ತಿರುವು ಕೊಟ್ಟ ಪ್ರಮುಖ ವ್ಯಕ್ತಿ. ಜೀವನದಲ್ಲಿ ಮುಂದೆ ಏನು ಮಾಡಬೇಕೆಂದು ತಿಳಿಯದಿದ್ದ ನನಗೆ ಸ್ಪಷ್ಟ ಮತ್ತು ಸರಿಯಾದ ದಾರಿ ತೊರಿಸಿದ ವ್ಯಕ್ತಿ ಇವರು. ಈಗ ನಾನು ಇಂತಹ ಸ್ಥಾನದಲ್ಲಿ ಇರುವುದಕ್ಕೆ ಕಾರಣ ಇವರೆ. ನಮ್ಮ ಸಮಾಜಕ್ಕೆ ಇಂತಹ ಗುರುಗಳ ಅವಶ್ಯಕತೆ ಬಹಳ ಇದೆ. ಇವರಿಗೆ ನನ್ನ ಅನಂತ ಅನಂತ ವಂದನೆಗಳು ಮತ್ತು ಹೃತ್ಪೂರ್ವಕ ಕೃತಜ್ಙತೆಗಳು.ನಾನು ಜನರೊಡನೆ ಅಷ್ಟು ಬೇಗ ಬೆರೆಯುವುದಿಲ್ಲ. ಮೊದಲು ಅವರ ಬಗ್ಗೆ ಚೆನ್ನಾಗಿ ಅರಿತು ನಂತರ ಅವರೊಡನೆ ಮಾತನಾಡುತ್ತೇನೆ. ಹಾಗೆಯೆ ಇವರ ವಿಷಯದಲ್ಲು ಆದದ್ದು. ಯಾವಾಗ ಇವರೊಡನೆ ಮಾತನಾಡಲು ಪ್ರಾರಂಭಿಸಿದೆನೊ ಅಂದಿನಿಂದ ನನ್ನ ಜ್ಙಾನಾರ್ಜನೆಯು ಶುರುವಾಯಿತು.ನನ್ನ ಗುರಿಯನ್ನು ಗುರುತಿಸಿದೆ ಮತ್ತು ಅದನ್ನು ಸಾಧಿಸುವುಡೆಗೆ ಸೂಕ್ತ ದಾರಿಯನ್ನು ಹುಡುಕಿ, ಅದರೆಡೆಗೆ ನಡೆದೆ. ಹೀಗೆ ದಿನಗಳು ಉರುಳಿದಂತೆ ನನ್ನ ಆತ್ಮಶಕ್ತಿ ಬೆಳೆಯತೊಡಗಿತು, ಇನ್ನು ಹೆಚ್ಚು ಹೆಚ್ಚು ಓದಲು ಪ್ರೇರಣೆ ದೊರಕಿತು. ಅಲ್ಲದೆ ಓದಿನೆಡೆಗೆ ಆಸಕ್ತಿ ಹೆಚ್ಚುತ್ತಾ ಹೋಯಿತು.ಇವರಿಗೆ ಎಷ್ಟೇ ಧನ್ಯವಾದಗಳನ್ನು ಅರ್ಪಿಸಿದರೂ ಅದು ಕಡಿಮೆ. ಇವರು ತೋರಿದ ದಾರಿಯಲ್ಲಿ ನಡೆದು ಯಶಸ್ವಿಯಾಗುತ್ತೇನೆ ಎಂಬ ಆಶ್ವಾಸನೆಯನ್ನು ಇವರಿಗೆ ಈ ಮೂಲಕ ನೀಡುತ್ತಿದ್ದೇನೆ. ಇಂತಹ ಗುರುವಿನ ಬಗ್ಗೆ ಎಷ್ಟು ಮಾತನಾಡಿದರು ಮುಗಿಯುವುದಿಲ್ಲ. ಈ ಕಾಲೇಜು ನನ್ನಲ್ಲಿ ಇರುವ ಪ್ರತಿಭೆಯನ್ನು ತೋರಿಸಲು ಒಂದು ವೇದಿಕೆಯನ್ನು ಮಾಡಿಕೊಟ್ಟಿತು ಅದಕ್ಕೆ ನಾನು ಆಭಾರಿ.
ಇದಿಷ್ಟು ನನ್ನ ಜೀವನದ ಕಿರು ಪರಿಚಯ. ಡಿ.ವಿ.ಜಿ ಅವರ ಸಾಲುಗಳನ್ನು ನೆನೆಯುತ್ತಾ...."ಇನ್ನೇನು ಮತ್ತೇನು ಗತಿಯೆಂದು ಬೆದರದಿರು| ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ?|| ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು| ತಣ್ಣಗಿರಿಸಾತ್ಮವನು- ಮಂಕುತಿಮ್ಮ||".
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Saptami.chincholi |