ಪರಿಚಯ ಬದಲಾಯಿಸಿ

ನನ್ನ ಹೆಸರು ಸಹನ. ಕಶ್ಯಪ್, ನನ್ನ ಊರು ಕರ್ನಾಟಕ ರಾಜ್ಯದ ಬೆಂಗಳೂರು. ನಾನು ಹುಟ್ಟಿದ್ದು, ಬೆಳೆದದ್ದು ಬೆಂಗಳೂರಿನಲ್ಲೇ ಆಗಿದ್ದು, ನನ್ನ ವಿದ್ಯಾಬ್ಯಾಸವು ಬೆಂಗಳೂರಿನಲ್ಲೆ ನಡೆಯುತ್ತಿದೆ. ನನ್ನ ತಂದೆ ಎನ್.ಶ್ರೀನಿವಾಸ್ ಹಾಗು ತಾಯಿ ಸವಿತ ಶ್ರೀನಿವಾಸ್. ನನ್ನ ತಮ್ಮ ಸಮರ್ಥ.ಕಶ್ಯಪ್, ಅವನು "ವಾಣಿ" ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ.  

ವಿದ್ಯಾಭ್ಯಾಸ ಬದಲಾಯಿಸಿ

 
aerial shot of Christ University
ಒಂದನೆ ತರಗತಿಯಿಂದ ಹತ್ತನೇ ತರಗತಿಯವರೆಗೆ ಓದಿದ್ದು "ಸೈಂಟ್ ಆನ್ಸ್" ಶಾಲೆಯಲ್ಲಿ, ನಂತರದ ಎರಡು ವರ್ಷದ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ "ಎಮ್.ಈ.ಎಸ್ ಕಿಶೋರ್ ಕೇಂದ್ರ" ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ. ಈಗ ನನ್ನ ಡಿಗ್ರೀ ವ್ಯಾಸಂಗವನ್ನು "ಕ್ರೈಸ್ಟ್ ವಿಶ್ವವಿದ್ಯಾಲಯ"ದಲ್ಲಿ ಬಿ.ಎ ವಿಭಾಗದ ಕಮ್ಯುನಿಕೇಶನ್, ಇಂಗ್ಲಿಷ್ ಮತ್ತು ಸೈಕೋಲಜಿ ವಿಷಯಗಳಲ್ಲಿ ಮುಂದುವರೆಸಿದ್ದೇನೆ.

ಆಸಕ್ತ್ತಿ ಬದಲಾಯಿಸಿ

ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಇದ್ದ ನನಗೆ ಕ್ರಿಕೆಟ್ ಆಟವು ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವಲ್ಲಿ ಹೆಚ್ಚು ಪ್ರೇರೇಪಿಸಿತು. ಕ್ರಿಕೆಟ್ ಆಟವನ್ನು ಬಹಳ ಇಷ್ಟಪಟ್ಟು ಚಿಕ್ಕಂದಿನಲ್ಲೇ ತರಬೇತಿಗೆ ಸೇರಿಕೊಂಡೆ, ಅದರಲ್ಲಿ ಬಹಳ ಪ್ರೀತಿ ಮತ್ತು ಶ್ರದ್ಧೆಯ ಫಲದಿಂದ ನನಗೆ ರಾಜ್ಯ ಮಟ್ಟದಲ್ಲಿ ಆಡುವ ಅವಕಾಶ ದೊರೆಯಿತು. ಕ್ರೀಡೆ ಬಿಟ್ಟರೆ ನನಗೆ ಕಲೆ, ಸಾಹಿತ್ಯದಲ್ಲಿ ಹೆಚ್ಚು ಒಲವು, ಪದವಿ ಪೂರ್ವ ಶಿಕ್ಷಣ ಪಡೆಯುವಾಗ ನಾನು ಕಾಲೇಜಿನಲ್ಲಿ ನಾಟಕಗಳನ್ನು ಮಾಡುತ್ತಿದ್ದೆ. ಮತ್ತು ಈಗ ಕಾಲೇಜಿನಲ್ಲಿ ಬೀದಿ ನಾಟಕಗಳಲ್ಲಿ, ಮೂಕಿ ನಾಟಕಗಳಲ್ಲಿ ಪಾಲ್ಗೋಂಡು ಅದರಲ್ಲಿ ಯಶಸ್ವಿಯಾಗುತ್ತಿದ್ದೇನೆ. ಸಾಹಿತ್ಯವು ನನ್ನ ಜೀವನಕ್ಕೆ ಹತ್ತಿರವಾಗಿದ್ದು, ನಾನು ಹೆಚ್ಚು ಕಥೆಗಳನ್ನು, ಕವನಗಳನ್ನು, ಸಣ್ಣ ಕಥೆಗಳನ್ನು ಓದುತ್ತೇನೆ. ಮತ್ತು ಆಗಾಗ ಸಣ್ಣ ಕಥೆಗಳನ್ನು, ಕವನಗಳನ್ನು ಬರೆಯುತ್ತೇನೆ ಕೂಡ. ಇಷ್ಟಲ್ಲದೆ ನಾನು ಸಮಾಜ ಸೇವೆಗೆ, ಸಮಾಜದ ಒಳಿತಿಗೆ ಹೆಚ್ಚು ಒತ್ತನ್ನು ಕೊಡುತ್ತೇನೆ, ಅದಕ್ಕಾಗಿ "ರೊಟರಾಕ್ಟ್" ಎಂಬ ಸಂಸ್ಥೆಯಲ್ಲಿ ಸ್ವಯಂಸೇವಕಳಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಬಡ ಮಕ್ಕಳಿಗೆ ಶಿಕ್ಷಣ, ಬಡ ಹೆಣ್ಣು ಮಕ್ಕಳಿಗೆ ಆರೋಗ್ಯ ಸೌಕರ್ಯ ಇತರೆ ಸೇವೆಗಳನ್ನು ಈ ಸಂಸ್ಥೆಯು ಅವರಿಗೆ ಸಿಗುವಂತೆ ಸಹಾಯ ಮಾಡುತ್ತದೆ. ಇವುಗಳು ನನಗೆ ತೃಪ್ತಿ ಕೊಡುತ್ತದೆ.

ಈಗ ನಾನು ವಿಶ್ವವಿದ್ಯಾಲಯದಲ್ಲಿ "ಕೊಮ್ಮ್ಯುನಿಕೇಶನ್ ಆಂಡ್ ಮೀಡಿಯ" ಓದುತಿದ್ದು, ಮುಂದಿನ ದಿನಗಳಲ್ಲಿ ಪತ್ರಕರ್ತೆಯಾಗಬೇಕೆಂದಿದ್ದೇನೆ. ರಂಗಭೂಮಿಯಲ್ಲಿ ವಿಶೇಷವಾದ ಆಸಕ್ತಿ ಇದ್ದು, ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕೆಂಬ ಆಸೆಯಿದೆ.