Sabeenabanua/sandbox
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. indica
Binomial name
ಈಶ್ವರ ಬಳ್ಳಿ

ವರ್ಣನೆ ಬದಲಾಯಿಸಿ

ಸಾಮಾನ್ಯವಾಗಿ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು. ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಲಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ. ಇದರ ಬೇರುಗಳಲ್ಲಿ ಸುಗಂಧ ತೈಲವಿರಿತ್ತದೆ.

ಸರಳ ಚಿಕಿತ್ಸೆಗಳು ಬದಲಾಯಿಸಿ

ಜ್ವರ ಮತ್ತು ಕೆಮ್ಮು ನಿವಾರಣೆಗೆ ಬದಲಾಯಿಸಿ

ಈಶ್ವರಬಳ್ಳಿಯ ಬೇರನ್ನು ನಯವಾದ ಚೂರ್ಣ ಮಾಡಿ, ೧/೪ ಟೀ ಚಮಚ ಚೂರ್ಣವನ್ನು ನೀರಿನಲ್ಲಿ ನೆನೆ ಹಾಕಿ ಕಷಾಯಮಾಡಿ ಶೋಧಿಸಿ ೩-೪ ಟೀ ಚಮಚದಷ್ಟು ದಿವಸಕ್ಕೆ ಎರಡು ಸೇವಿಸಿದರೆ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆಗೆ ಬದಲಾಯಿಸಿ

ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ಚೂರ್ಣಿಸಿ, ಈ ನಯವಾದ ಚೂರ್ಣವನ್ನು ೨ ರಿಂದ ೨.೫ ಗ್ರಾಂ ಸೇವಿಸಿದ ಮೇಲೆ ಬಿಸಿನೀರು ಕುಡಿಯುವುದು.

ವಿಷಮ ಜ್ವರ, ಸನ್ನಿ ಜ್ವರದ ನಿವಾರಣೆಗೆ ಬದಲಾಯಿಸಿ

ಶುದ್ಧವಾದ ೧/೨ ಲೀಟರ್ ತಣ್ಣೀರಿನಲ್ಲಿ ೧೫ಗ್ರಾಂ ಈಶ್ವರಿಬೇರು ಜಜ್ಜಿ ಹಾಕಿ ನೆನೆಸಿಡುವುದು. ತಿಳಿಯಾದ ನೀರನ್ನು ಶೋಧಿಸಿ, ಒಂದೆರಡು ಟೀ ಚಮಚ ದಿವಸಕ್ಕೆ ೪-೫ ಬಾರಿ ಸೇವಿಸಿದರೆ ವಿಷಮ ಜ್ವರ ಗುಣಮುಖವಾಗುತ್ತದೆ.

ಹಾವಿನ ವಿಷ, ಸರ್ಪದ ವಿಷದ ನಿವಾರಣೆಗೆ ಬದಲಾಯಿಸಿ

ಸರ್ಪದ ವಿಷ ನಿವಾರಣೆಗೆ ಇದರ ಎಲೆಯ ಕಷಾಯ ಮಾಡಿ ಸೇವಿಸುತ್ತಾರೆ. ಹಾವಿನ ವಿಷ ನಿವಾರಣೆಗೆ ೨ಗ್ರಾಂ ಇದರ ಹಸಿ ಎಲೆಗಳು, ೨ಗ್ರಾಂ ಮೆಣಸು ನುಣ್ಣಗೆ ಅರೆದು ಗಾಯದ ಮೇಲೆ ಮಂದವಾಗಿ ಲೇಪಿಸುತ್ತಾರೆ.

ದೃಷ್ಟಿ ದೋಷ ನಿವಾರಣೆಗೆ ಬದಲಾಯಿಸಿ

ಇದರ ಬೇರಿನ ನಯವಾದ ಚೂರ್ಣಮಾಡಿ, ಸ್ವಲ್ಪ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.

ಮುಟ್ಟಿನ ದೋಷ ನಿವಾರಣೆಗೆ ಬದಲಾಯಿಸಿ

ಇದರ ಬೇರಿನ ನಯವಾದ ಚೂರ್ಣಮಾಡಿ, ಕಡಿಮೆ ಪ್ರಮಾಣದಲ್ಲಿ ಬೆಲ್ಲ ಅಥವಾ ನಿಂಬೆರಸದ ಅನುಪಾನದೊಂದಿಗೆ ಸೇವಿಸಿದರೆ ಮುಟ್ಟಿನ ದೋಷ ನಿವಾರಣೆಯಾಗುತ್ತದೆ.[೧]

ಉಲ್ಲೇಖ ಬದಲಾಯಿಸಿ

  1. ಅಪೂರ್ವ ಗಿಡಮೂಲಿಕೆಗಳು ಮತ್ತು ಸರಳಚಿಕಿತ್ಸೆಗಳು, ವೈದ್ಯ: ಎ. ಆರ್. ಎಂ. ಸಾಹೇಬ್ ವಲಯಾರಣ್ಯಾಧಿಕಾರಿಗಳು, ಪ್ರಕಾಶಕರು ದಿವ್ಯಚಂದ್ರ ಪ್ರಕಾಶನ, ಪುಟ ಸಂಖ್ಯೆ-೫೦