ಹುಲಿಕಲ್ಲು ಅರಕಲಗೂಡು ತಾಲ್ಲೂಕು ಹಾಸನ ಜಿಲ್ಲೆ

ಇದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಕಂಡುಬರುವ ಒಂದು ಗ್ರಾಮವಾಗಿದೆ. ಇಲ್ಲಿ ಇತಿಹಾಸ ಪ್ರಸಿದ್ಧವಾದ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನವಿದೆ. ಈ ಊರಿಗೆ ಹುಲಿಕಲ್ಲು ಎಂಬ ಹೆಸರು ಬರಲು ಹಲವು ಕಥೆಗಳನ್ನು ಈ ಊರಿನ ಹಿರಿಯರು ಹೇಳಿದ್ದು ಅದರಲ್ಲಿ ಕಲ್ಲಿನ ಮೇಲೆ ಹುಲಿಯೊಂದರ ಹೆಜ್ಜೆ ಮೂಡಿದ್ದರಿಂದ ಈ ಊರಿಗೆ ಹುಲಿಕಲ್ಲು ಎಂಬ ಹೆಸರು ಬಂತು ಎಂಬುದು ಹಿರಿಯರೊಬ್ಬರ ಮಾತು ಇಲ್ಲಿ ಪ್ರತಿವರ್ಷ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವರ ಜಾತ್ರೆ ಜರುಗುತ್ತದೆ ಈ ಊರಿನಲ್ಲಿ ಇತಿಹಾಸ ಪ್ರಸಿದ್ಧವಾದ ಹಳೆ ದೇಶ್ವರ ದೇವಸ್ಥಾನವು ಸಹ ಕಂಡುಬರುತ್ತದೆ