ಸಾಂಡ್ರ.ಎಸ್
SANDRA SELVANARAYANAN
ಸಾಂಡ್ರ.ಎಸ್
ಜನನ
ಸಾಂಡ್ರ ಸೆಲ್ವನಾರಾಯಣನ್

೦೩.೦೭.೨೦೦೦
ಬೆಂಗಳೂರು
ರಾಷ್ಟ್ರೀಯತೆಇಂಡಿಯನ್
ಇತರೆ ಹೆಸರುಗಳುಸ್ಯಾಂಡಿ, ಸ್ಯಾನ್
ವಿದ್ಯಾರ್ಹತೆಬಿಕಾಂ ಮೊದಲನೇ ವರ್ಷ
ಉದ್ಯೋಗವಿದ್ಯಾಭ್ಯಾಸ


ಜನನ ಬದಲಾಯಿಸಿ

ನನ್ನ ಹೆಸರು ಸಾಂಡ್ರ.ಎಸ್. ನಾನು ಬೆಂಗಳೂರಿನ ವಾಸಿ. ಬೆಂಗಳೂರು ನಗರದಲ್ಲಿ ೦೩ನೇ ಜುಲೈ ೨೦೦೦ದಲ್ಲಿ ಹುಟ್ಟಿದ್ದೆ. ಹುಟ್ಟಿ ಬೆಲೆದ್ದಿದ್ದು ಮತ್ತು ಶಾಲಾಬ್ಯಾಸಯೆಲ್ಲ ಬೆಂಗಳೂರಿನಲ್ಲಿ. ನಾನು ನನ್ನ ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಿನಿ.

ಕುಟುಂಬ ಬದಲಾಯಿಸಿ

ನನ್ನ ತಂದೆ ವ್ರುತ್ತಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ. ನನ್ನ ತಾಯಿ ಒಬ್ಬ ಗೃಹಿಣಿ. ನಾನು ಅವರ ಕಿರಿಯ ಮಗಳು. ನನಗೆ ಒಬ್ಬ ಅಕ್ಕ ಇದ್ದಾರೆ. ನನ್ನ ಸಹೋದರಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಇವರೆಲ್ಲರ ಕಣ್ಮನಿ.

ಶಿಕ್ಷಣ ಬದಲಾಯಿಸಿ

೧ನೇ ತರಗತಿಯಿಂದ ೪ನೇ ತರಗತಿಯವರೆಗು ಲೂರ್ಡ್ಸ್ ಇಂಗ್ಲೀಷ್ ಸ್ಕೂಲಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿರುವೆನು. ನಾನು ಹೆಚ್ಚುವರಿ ಪಠ್ಯಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿ, ಬಹುಮಾನಗಳನ್ನು ಗೆಲ್ಲುತ್ತಿದ್ದೆ. ೫ನೇ ತರಗತಿಯಿಂದ ೭ನೇ ತರಗತಿಯವರೆಗು ಸೈಂಟ್ ಆನ್ಸ್ ಗರ್ಲ್ಸ್ ‍‍‍‍‍‍‍‍‍‍‍‍‍‍‍‍ಮಿಡಿಲ್ ಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿರುವೆನು. ೮ನೇ ತರಗತಿಯಿಂದ ೧೦ನೇ ತರಗತಿಯವರೆಗು ಸೈಂಟ್ ಆನ್ಸ್ ಗರ್ಲ್ಸ್ ‍‍‍‍‍‍‍‍‍‍‍‍‍‍‍ಹೈ ಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿರುವೆನು. ನಾನು ನನ್ನ ಶಾಲಾ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ .೧೧ ಮತ್ತು ೧೨ನೇ ತರಗತಿಯವರೆಗು ಸೈಂಟ್ ಆನ್ಸ್ ಗರ್ಲ್ಸ್ ‍‍‍‍‍‍‍‍‍‍‍‍‍ಪಿ.ಯು. ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿರುವೆನು. ೧೨ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಒಟ್ಟು ೬೦೦ ಅಂಕಗಳಿಗೆ ೫೬೧ ಅಂಕಗಳನ್ನು ನಾನು ಗಳಿಸಿದೆ ಹಾಗೂ ನನ್ನ ಕಾಲೇಜಿನಲ್ಲಿ ನಾನು ಮೊದಲ ಸ್ಥಾನ ಪಡೆದುಕೊಂಡೆ. ತದನಂತರ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಎರಡನೆಯ ಸೆಮಿಸ್ಟರ್ ಬಿ.ಕಾಂನಲ್ಲಿ ಅಧ್ಯಯನ ಮಾಡುತಿದ್ದೇನೆ.ಈ ಕಾಲೇಜಿನಲ್ಲಿ ನನಗೆ ಎಲ್ಲಾ ತರಹದ ವಿಷಯಗಳಲ್ಲಿ ಕಲಿಯಲು ತುಂಬಾ ಪ್ರೇರಣೆ ಸಿಗುತಿದೆ.

ಹವ್ಯಾಸಗಳು ಬದಲಾಯಿಸಿ

ನನ್ನ ಹವ್ಯಾಸಗಲು ಯಾವುವೆಂದರೆ - ಪುಸ್ತಕಗಳನ್ನು ಓದುವುದು,ಹಾಡುವುದು,ನೃತ್ಯ ಮಾಡುವುದು ಮತ್ತು ಭಯಾನಕ ಚಲನಚಿತ್ರಗಳನ್ನು ವೀಕ್ಷಿಸುವುದು. ಪುಸ್ತಕಗಳನ್ನು ಓದುವಾಗ ನನ್ನ ಮನಸ್ಸು ಸಂತೋಷವಾಗುತ್ತದೆ. ನನಗೆ ಭಯಾನಕ ಕಥೆಯ ಪುಸ್ತಕಗಳನ್ನು ಓದುವುದು ತುಂಬಾ ಇಷ್ಟ. ನನಗೆ ಕಾದಂಬರಿಗಳನ್ನು ಓದುತ್ತಿದ್ದಾಗ ಹೇಗೆ ಸಮಯ ಕಳೆದುಹೋಗಿರುವುದು ಎಂಬುದು ಗೊತ್ತಾಗುವುದಿಲ್ಲಾ. ನನಗೆ ಚಿಕ್ಕಂದಿನಿಂದಲೂ ಬಹಳ ಇಷ್ಟವಾದ ಕಥೆ ಪುಸ್ತಕ 'ಲೆವಿಸ್ ಕ್ಯಾರೊಲ್' ಅವರು ಬರೆದ 'ಆಲಿಸ್'ಸ್ ಅಡ್ವೆಂಚರ್ಚರ್ಸ್ ಇನ್ ವಂಡರ್ ಲ್ಯಾಂಡ್'. ನನಗೆ 'ಷೇಕ್ಸ್ ಪಿಯರ್' ಅವರು ಬರೆದ 'ರೋಮಿಯೋ ಮತ್ತು ಜೂಲಿಯೆಟ್' ಎಂಬ ಸಣ್ಣ ಕಥೆ ಬಹಳ ಇಷ್ಟ.ಹಾಡುಗಾರಿಕೆ ನನಗೆ ಸಂತೋಷ ನೀಡುತ್ತದೆ. ಮಧುರ ಹಾಡುಗಳೆಂದರೆ ನನಗೆ ಇಷ್ಟ. ಅದು ನನ್ನನ್ನು ಶಾಂತವಾಗಿಟ್ಟುಕೊಳ್ಳುತ್ತದೆ.ನಾನು ನೃತ್ಯ ಮಾಡಲು ಇಷ್ಟಪಡುತ್ತೇನೆ.ಅನೇಕ ವಿಧದ ನೃತ್ಯಗಳಲ್ಲಿ ನನಗೆ ಬ್ಯಾಲೆ ಮತ್ತು ಜಾನಪದ ನೃತ್ಯ ಇಷ್ಟ.

ಆಸಕ್ತಿ ಬದಲಾಯಿಸಿ

 
ಕನ್ಯಾಕುಮಾರಿ  - ತಿರುವಳ್ಳುವರ್ ಮೂರ್ತಿ. ಕನ್ಯಾಕುಮಾರಿಯು ಭಾರತದ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಗರ. ಅಲ್ಲದೆ, "ದೇವರ ಸ್ವಂತ ಜಿಲ್ಲೆ" ಎಂದು ಕರೆಯುತ್ತಾರೆ.
 
ಮಧುರೈ - ಮೀನಾಕ್ಷಿ ದೇವಾಲಯ .ಮಧುರೈ ಭಾರತದ ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿಯಾಗಿದೆ. ಮೀನಾಕ್ಷಿ ದೇವಸ್ಥಾನ ಮಧುರೈ ನಗರದಲ್ಲಿರುವ ಒಂದು ಐತಿಹಾಸಿಕ ಹಿಂದೂ ದೇವಾಲಯವಾಗಿದೆ.

ನನಗೆ ಪ್ರಯಾಣದಲ್ಲಿ ತುಂಬಾ ಆಸಕ್ತಿಯಿದೆ. ಹೊಸ ಹೊಸ ಜಾಗಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಸ್ತಿ. ನಾನು ಚಿಕ್ಕವಳಿದ್ದಾಗ ನನ್ನ ತಂದೆ ನಮ್ಮನ್ನು ಸಾಕಷ್ಟು ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು . ನನ್ನ ತಂದೆಯು ತನ್ನ ವ್ಯವಹಾರದ ಉದ್ದೇಶಕ್ಕಾಗಿ ಪ್ರಪಂಚದ ವಿವಿಧ ಭಾಗಗಳಿಗೆ ಹೋಗುವುದನ್ನು ನೋಡಿದ ನಂತರ, ನನಗೂ ಪ್ರಯಾಣಿಸಲು ಆಸಕ್ತಿ ಮೂಡಿತು.ನಾನು ತಮಿಳುನಾಡಿನ ಹಲವು ಸ್ಥಳಗಳನ್ನು ಭೇಟಿ ಮಾಡಿದ್ದೇನೆ.ನಾನು ಚೆನ್ನೈ,ವೆಲ್ಲೂರ್,ಮಧುರೈ,ಕಡಲೂರು,ಕನ್ಯಾಕುಮಾರಿ,ಪಾಂಡಿಚೆರಿ,ಮಹಾಬಲಿಪುರಂ ಮತ್ತು ತಿರುನೆಲ್ವೇಲಿಗೆ ಪ್ರಯಾಣಿಸಿದ್ದೇನೆ.ನಾನು ಕೇರಳಕ್ಕೆ ಭೇಟಿ ಮಾಡಿದಾಗ,ಕೇರಳದ ವಾತಾವರಣ ನನಗೆ ಇಷ್ಟವಾಯಿತು.

ಮತ್ತೊಂದು ಇಷ್ಟವಾದ ಕೆಲಸವೆಂದರೆ ಅಡುಗೆ ಮಾಡುವುದು.ನನಗೆ ವಿರಾಮ ಸಮಯವಿರುವಾಗ ,ವಿವಿಧ ಪಾಕವಿಧಾನಗಳನ್ನು ಪ್ರಯತ್ನಿಸಲು ನಾನು ಬಯಸುತ್ತೇನೆ. ಪ್ರಪಂಚದಾದ್ಯಂತದ ವಿವಿಧ ಪಾಕಪದ್ಧತಿಗಳಲ್ಲಿ ನಾನು ಭಾರತೀಯ ಪಾಕಪದ್ಧತಿಗಳನ್ನು ಅಡುಗೆ ಮಾಡಳು ಇಷ್ಟಪಡುತ್ತೇನೆ. ಕ್ರೀಡಾಂಗಣದಲ್ಲಿ ಕ್ರಿಕೆಟ್ ವೀಕ್ಷಿಸಲು ನನಗೆ ತುಂಬಾ ಆಸಕ್ತಿ ಇದೆ.ಅದು ನನಗೆ ಉತ್ಸಾಹ ಹಾಗು ನನ್ನ ಒತ್ತಡದಿಂದ ನನ್ನನ್ನು ಬಿಡುಗಡೆ ಮಾಡುತ್ತದೆ. ಹಾಲಿವುಡ್ ಸಿನಿಮಾಗಳ್ಳನ್ನು ನೋಡಲು ಇಚ್ಚಿಸುತ್ತೇನೆ.

 
ಚೆನ್ನೈ ಸೆಂಟ್ರಲ್ - ಚೆನ್ನೈ ಭಾರತದ ತಮಿಳುನಾಡಿನ ರಾಜಧಾನಿಯಾಗಿದೆ.ಚೆನ್ನೈ ಸೆಂಟ್ರಲ್, ಚೆನ್ನೈ ನಗರದ ಮುಖ್ಯ ರೈಲ್ವೇ ನಿಲ್ದಾಣವಾಗಿದೆ.

ಕಡಲತೀರಗಳು ಮತ್ತು ಜಲಪಾತಗಳನ್ನು ಹೊಂದಿರುವ ಸ್ಥಳಗಳಿಗೆ ಭೇಟಿ ನೀಡಲು ನಾನು ಇಷ್ಟಪಡುತ್ತೇನೆ. ಕಡಲತೀರಗಳು ಹೊಂದಿರುವ, ನಾನು ಭೇಟಿ ನೀಡಿದ ಕೆಲವು ಸ್ಥಳಗಳು : ಮರೀನಾ ಬೀಚ್( ಚೆನ್ನೈ),ರಾಕ್ ಬೀಚ್ (ಪಾಂಡಿಚೆರಿ),ತಿರುಚೆಂಡುರ್ ಬೀಚ್,ಕನ್ಯಾಕುಮಾರಿ ಬೀಚ್,ಮಹಾಬಲಿಪುರಂ ಬೀಚ್ ಮತ್ತು ಕೋರ್ಟಲ್ಲಮ್ ಜಲಪಾತ. ವಿವಿಧ ಸ್ಥಳಗಳಿಗೆ ಪ್ರಯಾಣಿಸುವಾಗ ಪ್ರಪಂಚದ ವಿವಿಧ ಭಾಗಗಳಲ್ಲಿರುವ ಜನರ ಸಂಪ್ರದಾಯಗಳು,ಭಾಷೆ ಮತ್ತು ನಡವಳಿಕೆಯ ಬಗ್ಗೆ ನಾವು ತಿಳಿಯಬಹುದು. ನಾನು ಪ್ರಯಾಣಿಸುವ ನನ್ನ ಆಸಕ್ತಿಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.ನನ್ನ ಪ್ರಯಾಣದ ಪಯಣ ಮುಂದುವರಿಯುತಾ ಹೊಗುತ್ತದೆ.

ವಿಕಿಪೀಡಿಯದ ಉಪಯೋಗ ಬದಲಾಯಿಸಿ

ವಿಕಿಪೀಡಿಯದ ಟೈಪಿಂಗ್ನಿಂದ ನನ್ನ ಕನ್ನಡದ ಜ್ಞಾನ ಹೆಚ್ಚಾಗಿದೆ. ಅನೇಕ ಹೊಸ ಕನ್ನಡ ಅಕ್ಷರಗಳನ್ನು ಕಲಿಸಿದೆ ವಿಕಿಪೀಡಿಯ. ನಾನು ಮೊದಲನೆಯ ಬಾರಿ ಕನ್ನಡದಲ್ಲಿ ಟೈಪಿಂಗ್ ಕಲಿತದ್ದು ವಿಕಿಪೀಡಿಯದಿಂದಲೇ. ಎಲ್ಲಾ ಮಾಹಿತಿಗಲನ್ನು ಅಪ್ಡೇಟ್ ಮಾಡಿರುವ ಎಲ್ಲರಿಗು ತುಂಬಾ ಧನ್ಯವಾದಗಳು.ಇದರಿಂದ ಅನೇಕ ವಿಷಯಗಳು, ಮಾಹಿತಿಗಳು ಅರಿಯಲಾಗಿದೆ. ನನಗೆ ಹೇಗೆ ಈ ವಿಕಿಪೀಡಿಯ ಸಹಾಯ ಮಾಡಿದೆಯೋ ಅದೇ ರೀತಿ ನನ್ನಲ್ಲಿ ಆಗುವಷ್ಟು ನಾನು ಕೂಡ ಸಹಾಯಿಸುತ್ತೇನೆ, ನನ್ನ ಕಾಣಿಕೆಗಳು ಹೆಚ್ಚುಮಾಡಿಸುತ್ತೆನೆ.