ಸದಸ್ಯ:Ruthvikgowda79/ನನ್ನ ಪ್ರಯೋಗಪುಟ
ವಿಜಯ್ ಮಲ್ಯ | |
---|---|
Nationality | ಹಿಂದು |
Occupation | ಉಧ್ಯಮಿ |
ಕಿಂಗ್ ಆಫ್ ಗುಡ್ ಟ್ಯಮ್ಸ್
ಬದಲಾಯಿಸಿಮುನ್ನಡಿ
ಬದಲಾಯಿಸಿವಿಜಯ್ ಮಲ್ಯ ಭಾರತದ ಓರ್ವ ಪ್ರಭಾವಿ ಉದ್ಯಮಿ, ಯುನೈಟೆಡ್ ಬ್ರಿವರಿಸ್,ಭಾರತದ ಮಧ್ಯ ಉದ್ಯಮ ಸಾಮ್ರಾಜ್ಯದ ದೊರೆ, ಈ ದೇಶದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಕಿಂಗ್ ಫಿಷರ್ ಏರ್ಲೈನ್ಸ್ ಮಾಲಿಕ. ಆದರೆ ಇವರ ಏರ್ಲೈನ್ಸ್ ಉಧ್ಯಮ ಯಶಸ್ಸು ಕಾಣದೆ ನೆಲಕಚ್ಚಿದೆ. ಸಾಲ ಮರುಪಾವತಿ ಮಾಡಲಾಗದೆ ಹಾಗು ಹಲವು ಕಾರಣಗಳಿಂದ ಮುಚ್ಚಿಹೋಗಿದೆ. ಇದರ ಮೆಲಿನ ಸಾಲ ತೀರಿಸಲಾಗದೆ ಉದ್ದೇಶಪೊರ್ವಕ ಸುಸ್ತಿದಾರರಾಗಿದ್ದಾರೆ. ಮಲ್ಯ ಸುಮಾರು ೯೦೦೦ ಸಾವಿರ ಕೋಟಿಯಷ್ಟು ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಫೆಡರಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮುಂತಾದ ಕೆಲವು ಬ್ಯಾಂಕ್ ಒಕ್ಕೂಟಗಳಿಗೆ ಮರುಪಾವತಿಸದೆ ಆರೋಪ ಏಸಗಿದ್ದಾರೆ. ಈ ತನಿಖೆಗೆ ಸಂಭಂದಪಟ್ಟಂತೆ ಕೋರ್ಟ್ ಹಲವಾರು ಬಾರಿ ಸಮನ್ಸ್ ನೊಟೀಸು ಜಾರಿಮಾಡಿ ಹಾಜಾರಾಗುವಂತೆ ಆದೇಶ ಹೊರಡಿಸಿದ್ದರು, ಭಾರತಕ್ಕೆ ಮರಳದೆ ವಿದೇಶದಲ್ಲೆ ಅಂದರೆ ಸದ್ಯ ಬ್ರಿಟನ್ ದೇಶದಲ್ಲಿ ನೆಲೆಸಿದ್ದಾರೆ. ಅವರು ನಮ್ಮ ದೇಶವನ್ನು ತೊರೆದ ಕಾರಣ ತಮ್ಮ ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಕಾಲದಲ್ಲಿ ಭಾರತದಲ್ಲಿ ದೊರೆಯಂತೆ ಮೆರೆದ ಉದ್ಯಮಿ, ಇಂದು ತಾನು ಮಾಡಿದ ಸಾಲವನ್ನು ತೀರಿಸಲಾಗದೆ ಹಾಗು ಕಾರಣಂತರಗಳಿಂದ ಹೊರದೇಶಕ್ಕೆ ಹಾರಿ ಹೋಗಿದ್ದಾರೆ. ಇವರ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಯ ಮೇಲೆ ನಾನಾ ಬ್ಯಾಂಕುಗಳಲ್ಲಿ ಸುಮಾರು ೯೦೦೦ ಸಾವಿರ ಕೋಟಿಯಷ್ಟು ಸಾಲದ ಹೊರೆ ಇದೆ, ಹಾಗಾಗಿ ಇವರನ್ನು ಬ್ಯಾಂಕುಗಳು ಉದ್ದೇಷಪೂರ್ವಕ ಸುಸ್ತಿದಾರ[ಮಾಡಿದ ಸಾಲವನ್ನು ಮರು ಪಾವತಿಸಲು ಶಕ್ತರಾಗಿಯು ಹಾಗೆಯೇ ಉಳಿಸಿಕೊಂಡವರು]ರ ಪಟ್ಟಿಗೆ ಸೇರಿಸಿದೆ. ಮರಳಿ ದೇಶಕ್ಕೆ ವಾಪಸಾಗುವಂತೆ ಆಕ್ರೋಶ, ಆದೇಶಗಳು ಮೊಳಗುತ್ತಿವೆ. ಹೌದು, ಇದು ನಮ್ಮ ಕರುನಾಡಿನ ಉಧ್ಯಮಿ, ಮಧ್ಯದ ದೊರೆ,ಕಿಂಗ್ ಆಫ್ ಗುಡ್ ಟ್ಯಮ್ಸ್, ವಿಜಯ್ ವಿಟ್ಠಲ್ ಮಲ್ಯರ ಬದುಕಿನ ಕೆಟ್ಟ ದಿನಗಳು.
ಹಿನ್ನಲೆ
ಬದಲಾಯಿಸಿಇವರು ೧೯೫೫ರಲ್ಲಿ ಜನಿಸಿದರು, ತಂದೆ ವಿಟ್ಠಲ್ ಮಲ್ಯ, ಆರ್ಮಿಯಲ್ಲಿ ವ್ಯದ್ಯರಾಗಿ ಕಾರ್ಯನಿರ್ವಹಿಸಿದ್ದರು,ವಿಜಯ್ ಮಲ್ಯ ಅವರ ಸಾಮ್ರಾಜ್ಯಕ್ಕೆ ಬಲಿಷ್ಟ ಅಡಿಪಾಯ ಹಾಕಿ ಕೊಟ್ಟರು. ೨೦೦೭ರಲ್ಲಿ ವ್ಯಟ್ ಏಂಡ್ ಮೆಕೇ ಎಂಬ ಬ್ರಿಟನ್ ಮೂಲದ ಕಂಪನಿಯನ್ನು ಸ್ವಾದೀನ ಪಡಿಸಿಕೊಂಡು ಮದ್ಯ ಉದ್ಯಮದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ಅದೆ ವರ್ಷ ಅವರು ತಮ್ಮ ಕನಸಿನ ಕಿಂಗ್ ಫಿಷರ್ ಏರ್ಲೈನ್ಸ್ ಪ್ರಾರಂಭಿಸಿದರು.
ಏರ್ಲೈನ್ಸ್ ಆರಂಭ
ಬದಲಾಯಿಸಿ"ನಾವು ಸಾರಿಗೆ ವ್ಯಾಪಾರ ಪ್ರವೇಶಿಸುವ, ಆದರೆ ನಾವು ಆತಿಥ್ಯ ವ್ಯಾಪಾರ ಎಂದು ಹೋಗುವ," ಏಂದು ತನ್ನ ಕೋರ್ ತಂಡದ ಎದುರು ಮಲ್ಯ ಹೇಳಿದ್ದರು.ಅವರ ಕಿಂಗ್ ಫಿಷರ್ ಏರ್ಲೈನ್ಸ್ ತಂಡದ ಕನಸು ನನಸಾಗುವಲ್ಲಿ ಪಟ್ಟುಬಿಡದೆ ಕಾರ್ಯಪ್ರವೃತ್ತರಾಗಿ ಅಂತಿಮವಾಗಿ ಭಾರತೀಯ ಆಕಾಶ ಮಾರ್ಗವನ್ನು ವಶಪಡಿಸಿಕೊಳ್ಳುವ ಗುರಿ ಹೊಂದಲಾಗಿದತ್ತು. ವಿಮಾನಯಾನ ಆರಂಭಿಸಲು, ಕಿಂಗ್ ಫಿಷರ್ ಏರ್ಲೈನ್ಸ್ ಬಿಡುಗಡೆ ದಿನಾಂಕವನ್ನು ತಮ್ಮ ಮಗ ಸಿದ್ಧಾರ್ಥ್ ಮಲ್ಯ ಹುಟ್ಟುಹಬ್ಬದ ಕೊಡುಗೆಯಾಗಿ ಮೇ ೭ ೨೦೦೫ರಂದು ವಿಮಾನಯಾನ ಆರಂಭಿಸಿದರು.ಮೊದಲ ಹಂತದಲ್ಲಿ ಸಂಸ್ಥೇ ಕೇವಲ ದೇಶದೊಳಗೆ ಕಾರ್ಯಚರಣೆ ಆರಂಭಿಸಿತು.
ಸಂಸ್ಥೆಯ ಬೆಳವಣಿಗೆ
ಬದಲಾಯಿಸಿ"ವಿಮಾನದ ಪರಿಚಾರಕರು (ಮಲ್ಯ ಅವರನ್ನು ಸ್ವತಃ ನೇಮಕ ಮಾಡಿದ್ದರು) ಸಾಕಷ್ಟು ಇದ್ದರು, ಆಹಾರ ಉತ್ತಮ, ವಿಮಾನದೊಳಗಿನ ಮನರಂಜನೆ ಇನ್ನೂ ಉತ್ತಮ, ಪ್ರಥಮ ದರ್ಜೆ ಪ್ರಯಾಣಿಕರಿಗೆ ಕಾಯುವ ಕೋಣೆಗಳು ಹೊಂದಿತ್ತು". ಹೊಸ ವಿಮಾನಗಳನ್ನು ನೇಮಿಸಿಕೊಂಡರು, ನಂತರ, 2007 ರಲ್ಲಿ ಏರ್ ಡೆಕ್ಕನ್, ಭಾರತದ ಮೊದಲ ಕಡಿಮೆ ಶುಲ್ಕ ವಾಹಕ, ಜಿ.ಆರ್.ಗೋಪಿನಾಥ್ ಪ್ರಾಯೋಜಿಸಿದ ಏರ್ ಡೆಕ್ಕನ್ ವಿಮಾನಗಳನ್ನು ಸ್ವಾಧೀನ ಪಡಿಸಿಕೊಂಡು. ಕಿಂಗ್ ಫಿಷರ್ ಅನ್ನು ಭಾರತದ ದೊಡ್ಡ ವಿಮಾನಯಾನ ಸಂಸ್ದೆಯನ್ನಾಗಿ ಬೆಳೆಸಿ, ಈ ವಿಮಾನಯಾನ ಸಂಸ್ಥೆಯನ್ನು ದೊಡ್ಡ ಬ್ರ್ಯಾಂಡ್ ಆಗಿ ಬೆಳೆಸಿ ತಮ್ಮ ಮೇಲಿನ ಬರವಸೆಯನ್ನು ಉಳಿಸಿಕೊಂಡರು. ಏರ್ ಡೆಕ್ಕನ್ ಆ ಸಮಯದಲ್ಲಿ ದೇಶದಲ್ಲಿ ದೊಡ್ಡ ಜಾಲವನ್ನು ಹೊಂದಿತ್ತು. ಕಿಂಗ್ ಫಿಷರ್ ಏರ್ಲೈನ್ಸ್ ವಿಲೀನಗೊಂಡ ಆರಂಭದಲ್ಲಿ ಏಪ್ರಿಲ್ 2008 ರಲ್ಲಿ ಮಲ್ಯ ಅದನ್ನು ಮರುನಾಮಕರಣ ಮಾಡಿದ ನಂತರ ಕಿಂಗ್ಫಿಷರ್ ರೆಡ್ ಎಂದು ಕರೆಯಲಾಯಿತು. ಸೆಪ್ಟೆಂಬರ್ 2008 ರಲ್ಲಿ ಮಲ್ಯ ಕಿಂಗ್ಫಿಷರ್ ಸಂಸ್ಥೆಯ ಪ್ರಪ್ರಥಮ ಅಂತರರಾಷ್ಟ್ರೀಯ ವಿಮಾನ ಬೆಂಗಳೂರಿನಿಂದ ಲಂಡನ್ ನಡುವೆ ಆರಂಭಿಸಿದರು.ನಂತರ ಜಾಗತಿಕ ಆರ್ಥಿಕ ಬಿಕ್ಕಟ್ಟು ಅಪ್ಪಳಿಸಿತು. ಕಿಂಗ್ ಫಿಷರ್ ಬಿಕ್ಕಟ್ಟು ಮೊದಲ ಕೆಲವು ವರ್ಷಗಳು ತಣ್ಣಗೆ ಉಳಿದುಕೊಂಡಿದತು, ಆದರೆ ಅಂತಿಮವಾಗಿ ಆರ್ಥಿಕ ಒತ್ತಡ ತಲೆದೂರಿಸಲು ಆರಂಭಿಸಿದವು.
ಅಂತ್ಯದ ದಿನಗಳು
ಬದಲಾಯಿಸಿ"ಕಿಂಗ್ ಆಫ್ ಗುಡ್ ಟ್ಯಮ್ಸ್" 59 ವರ್ಷದ ಮಲ್ಯ ಮೊದಲು 2012ರಲ್ಲಿ ಆರ್ಥಿಕ ಸಮಸ್ಯೆಗಳುನ್ನು ಎದುರಿಸುವಂತಾಯಿತು. ಕಿಂಗ್ಫಿಷರ್ ಏರ್ಲೈನ್ಸ್ ಸಂಸ್ಥೆಯು ಭಾರತೀಯ ವಾಯು ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಕನಸಿನೊಂದಿಗೆ, ವಿಮಾನಯಾನ ಉಧ್ಯಮವನ್ನು 2005 ರಲ್ಲಿ ಪ್ರಾರಂಭ ಮಾಡಿದಾಗ. ತನ್ನ ಐಷಾರಾಮ, ಮನೊರಂಜನೆ ಮತ್ತು ಉನ್ನತ ಮಟ್ಟದ ಸೇವೆಗಳನ್ನೊಳಗೊಂಡ ಕಿಂಗ್ ಫಿಷರ್ ಗ್ರಾಹಕರ ಮನ ಗೆದ್ದಿತ್ತು'. ೨೦೦೭ರಲ್ಲಿ ಸಂಸ್ಥೆ ಏರ್ ಡೆಕ್ಕನ್ ವಿಮಾನ ಸಂಸ್ಥೆಯನ್ನು ಸ್ವಾದೀನಪಡಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯಚರಣೆಯನ್ನು ಆರಂಭಿಸಿತು. ಬಹುಷಃ ಈ ಸ್ವಾದಿನವೆ ಸಂಸ್ಥೆಯ ವಿನಾಷಕ್ಕೆ ಕಾರಣ ಎಂಬುದು ಹಲವು ಪಂಡಿತರ ಅಭಿಪ್ರಾಯ. ಆದೆ ಸಮಯದಲ್ಲಿ ಜಾಗತಿಕ ಆರ್ಥ ವ್ಯವಸ್ಥೆಯಲ್ಲಿ ಏರುಪೇರಾಗಿ ಖಚ್ಚಾ ತೈಲಗಳ ಬೆಲೆ ಗಗನಕ್ಕೇರಿತು, ಇದರಿಂದ ಕಂಪನಿಗೆ ಸಂಕಷ್ಟದ ಪರಿಸ್ತಿತಿ ಎದುರಾಯಿತು, ಯಾವುದೇ ಲಾಭ ಮಾಡಲಿಲ್ಲ, ವಿಮಾನದ ಚಾಲಕರಿಗೆ, ಗಗನಸಕಿಗಳಿಗೆ ಸಂಬಳ ಕೊಡುವುದೇ ಕಷ್ಟವಾಗಿತ್ತು.ಆಂತರಿಕವಾಗಿ ಹಾಗು ಜಾಗತಿಕವಾಗಿ ಆದ ಕೆಲವು ಮಹತ್ತರ ಬೆಳವಣಿಗೆಗಳು ಸಂಸ್ಥೆಯನ್ನು ಆರ್ಥಿಕ ಬಿಕಟ್ಟಿಗೆ ಸಿಲುಕಿಸಿತು. ಅಂತಿಮವಾಗಿ ಫೆಬ್ರವರಿ ೨೦೧೩ರಂದು ಕಿಂಗ್ ಫಿಷರ್ ವಿಮಾನಗಳ ಹಾರಾಟದ ಪರವಾನಿಗೆಯನ್ನು ರದ್ದುಪಡಿಸಲಾಯಿತು. ಕಿಂಗ್ಫಿಶರ್ ಏರ್ಲೈನ್ಸ್ ವಿಫಲವಾಗಿದಕ್ಕೆ ಕಾರಣಗಳು ಬಹಳಷ್ಟು ಇವೆ. ವಿಮಾನಗಳ ಸಂಖ್ಯೆಯನ್ನು 66ರಿಂದ28 ವಿಮಾನಗಳಿಗೆ ತನ್ನ ಪಡೆಯನ್ನು ಕತ್ತರಿಸಿತು. ಹಣದ ಸಮಸ್ಯೆ ಆರಂಭವಾಯಿತು. ಮಾರಾಟಗಾರರು ಮತ್ತು ನೌಕರರಿಗೆ ಪಾವತಿ ತಡವಾಯಿತು. ನಂತರ ಅಧಿಕವಾದ ತ್ಯಲಗಳ ಬೆಲೆ, ಸಂಸ್ಥೇಗೆ ಯಾವುದೆ ರೀತಿಯಲ್ಲು ಪ್ರಯೋಜನಕಾರಿ ಆಗಲಿಲ್ಲ. ಇಂದು ಕಿಂಗ್ ಫಿಷರ್ ಏರ್ಲೈನ್ಸ್ ಅಂದಾಜು 7,000 ಕೋಟಿಯಷ್ಟು ಹಣವನ್ನು ಬ್ಯಾಂಕುಗಳಿಗೆ ನೀಡಬೇಕಿದೆ. ಕಿಂಗ್ ಫಿಷರ್ ಜಾಗತಿಕವಾಗಿ ಒಂದು ಪ್ರೀತಿಯ ವಿಮಾನಯಾನ ಸಂಸ್ಥೆ ಹಾಗು ಬ್ರಾಂಡ್ ಆಗಿತ್ತು, ಸರ್ಕಾರ ಅಥವಾ ಬ್ಯಾಂಕುಗಳು ಸಂಸ್ಥೆಯ ವಿಮಾನಯಾನ ಸೇವೆಯನ್ನು ಮರಳಿ ಗ್ರಾಹಕರಿಗೆ ಒದಗಿಸುವಂತಹ ಗಂಭೀರ ಪ್ರಯತ್ನ ಮಾಡುತಿಲ್ಲ. ಉಲ್ಲೇಖಗಳು page text.[೧]https://www.google.co.in/webhp?sourceid=chrome-instant&ion=1&espv=2&ie=UTF-8#