ಫೆಡರಲ್ ಬ್ಯಾಂಕ್
ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್ ಒಂದು ಖಾಸಗಿ ರಂಗದ ಪಾರಂಪರಿಕ ಅನುಸೂಚಿತ ಬ್ಯಾಂಕ್ ಆಗಿದೆ. (Traditional Private Sector Scheduled Bank) ಸ್ವಾತಂತ್ರ್ಯ ಪೂರ್ವದಲ್ಲಿ ದಿ ಟ್ರಾವಂಕೂರ್ ಫೆಡರಲ್ ಬ್ಯಾಂಕ್ ಎಂದು ಸ್ಥಾಪಿತವಾದ ಒಂದು ಚಿಕ್ಕ ಸಂಸ್ಥೆ ನಷ್ಟದಲ್ಲಿದ್ದಾಗ ಶ್ರೀ ಕೆ.ಪಿ. ಹಾರ್ಮಿಸ್ ಎಂಬ ನ್ಯಾಯವಾದಿಯೊಬ್ಬರು ೧೯೪೭ (1947) ರಲ್ಲಿ ಅದನ್ನು ಖರೀದಿಸಿ ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್ ಎಂದು ನಾಮಕರಣ ಮಾಡಿದರು. ಕೇರಳದ ಆಲುವ (ಆಲ್ವೇಯಿ, ಆಲುವೆ) ಪೆರಿಯಾರ್ ನದಿ ದಡದಲ್ಲಿ ಇದರ ಮುಖ್ಯ ಕಛೇರಿ ಸ್ಥಾಪನೆಯಾಯಿತು. ಅಂದಿನಿಂದ ಮೊದಲ್ಗೊಂಡು ಇಂದಿನವರೆಗೂ ಗ್ರಾಹಕಸ್ನೇಹಿಯಾಗಿ, ಜನಾನುರಾಗಿಯಾಗಿ ಬೆಳೆದುಬಂದ ಬ್ಯಾಂಕ್ ಇಂದಿಗೆ 1250ಕ್ಕೂ ಹೆಚ್ಚು ಶಾಖೆಗಳೊಂದಿಗೆ ತನ್ನ ಸೇವೆಯನ್ನು ನೀಡುತ್ತಿದೆ.[೧][೨]
ಸಂಸ್ಥೆಯ ಪ್ರಕಾರ | ಖಾಸಗಿರಂಗ |
---|---|
ಸ್ಥಾಪನೆ | Kochi, 1945 |
ಮುಖ್ಯ ಕಾರ್ಯಾಲಯ | Federal Towers, Aluva, Kochi - 683 101, Kerala, India. |
ವ್ಯಾಪ್ತಿ ಪ್ರದೇಶ | Republic of India |
ಪ್ರಮುಖ ವ್ಯಕ್ತಿ(ಗಳು) | Shyam Srinivasan (Managing Director & CEO), Prof Abraham Koshy (Chairman) |
ಉದ್ಯಮ | Banking and allied industries |
ಉತ್ಪನ್ನ | Loans, Savings, etc. |
ಆದಾಯ | ಟೆಂಪ್ಲೇಟು:INRconvert (2014) |
ಜಾಲತಾಣ | www.federalbank.co.in |
ಸ್ಥಾಪಕರು
ಬದಲಾಯಿಸಿಶ್ರೀ ಕುಳಂಗರ ಪೌಲೋ ಹಾರ್ಮಿಸ್, ಒಬ್ಬ ದಾರ್ಶನಿಕ ಬ್ಯಾಂಕರ್, ಗ್ರೇಟರ್ ಕೊಚ್ಚಿನ್ ಉಪನಗರಗಳಲ್ಲಿ ಒಂದು ಸಣ್ಣ ಹಳ್ಳಿಯಾದ ಮೂಕ್ಕನ್ನೂರಿನಲ್ಲಿ 18 ಅಕ್ಟೋಬರ್, 1917 ರಂದು ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಜನಿಸಿದರು.
ವಕೀಲರಾಗಿ ಶಿಕ್ಷಣ ಪೂರೈಸಿದ ಶ್ರೀ ಹಾರ್ಮಿಸ್ ರವರು ಪೆರುಂಬಾವೂರ್ ನ್ಯಾಯಾಲಯದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆದರೆ ಶೀಘ್ರದಲ್ಲೇ ವಾಣಿಜ್ಯ ಬ್ಯಾಂಕಿಂಗ್ ನತ್ತ ಆಸಕ್ತರಾದ ಹಾರ್ಮಿಸ್ ರವರು 1945 ರಲ್ಲಿ ದಿ ಟ್ರಾವಂಕೂರ್ ಫೆಡರಲ್ ಬ್ಯಾಂಕ್ ನ ನಿಯಂತ್ರಣವನ್ನು ತೆಗೆದುಕೊಂಡು ಅದರ ಮುಖ್ಯ ಕಾರ್ಯ ನಿರ್ವಾಹಕರಾದರು. ಮುಂದಿನ ೩೪ ವರ್ಷಗಳ ಅವರ ಅಧಿಕಾರಾವಧಿಯಲ್ಲಿ ಅವರು ದೇಶಾದ್ಯಂತ ೨೮೪ ಶಾಖೆಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.[೩]
ಉಲ್ಲೇಖಗಳು
ಬದಲಾಯಿಸಿ- ↑ "Federal Bank Q4 profit up marginally at Rs 281 cr". The Economic Times. Archived from the original on 2016-03-05. Retrieved 2017-07-25.
- ↑ "Federal Bank to expand overseas footprints".
- ↑ "Federal Bank SBI co-branded cards launched". The Hindu.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Official Site of the bank Archived 2009-09-03 ವೇಬ್ಯಾಕ್ ಮೆಷಿನ್ ನಲ್ಲಿ.
- HORMIS : Legend of a Great Banker with Passion for Development,Biography of K.P. Hormis by K.P Joseph Kalarickal
- IDRBT Banking Technology Excellence Awards Archived 2014-10-27 ವೇಬ್ಯಾಕ್ ಮೆಷಿನ್ ನಲ್ಲಿ.
- IBA Awards for Innovation in Banking 2013 - Indian Banking Archived 2014-01-03 ವೇಬ್ಯಾಕ್ ಮೆಷಿನ್ ನಲ್ಲಿ.
- http://www.federalbank.co.in/-/milestones-main-content Archived 2017-02-02 ವೇಬ್ಯಾಕ್ ಮೆಷಿನ್ ನಲ್ಲಿ.
- www.topnews.in/companies/federal-bank
- https://www.nseindia.com/content/corporate/eq_FEDERALBNK_base.pdf Archived 2017-02-02 ವೇಬ್ಯಾಕ್ ಮೆಷಿನ್ ನಲ್ಲಿ.
- http://www.federalbank.co.in/documents/10180/8800650/Annual+Report+2016.pdf
- www.slideshare.net/PaulJose8/federal-bank-project
- www.dnb.co.in/Publications/topbanks2016/IndiasTopBanks2016.pdf
- Kerala economy : trajectories, challenges, and implications,Author :D. Rajasenan, Gerard de Groot, SEPTRA Project
ಜಾಲತಾಣ ಕೊಂಡಿ Archived 2009-09-03 ವೇಬ್ಯಾಕ್ ಮೆಷಿನ್ ನಲ್ಲಿ.