ಸದಸ್ಯ:Rohithkr9900/sandbox
ಜಾನ್ ಮಿಲ್ಲಿಂಗ್ಟನ್ ಸಿಂಜ್ | |
---|---|
ಜನನ | ಎಡ್ಮಂಡ್ ಜಾನ್ ಮಿಲ್ಲಿಂಗ್ಟನ್ ಸಿಂಜ್ ೧೬ ಎಪ್ರಿಲ್ ೧೮೭೧ Rathfarnham, ಕಂಟ್ರಿ ಡಬ್ಲಿನಲ್ಲಿ, ಐರ್ಲೇಂಡ್ |
ಮರಣ | ೨೪ ಮಾರ್ಚ್ ೧೯೦೯ (೩೭ ವರ್ಷ) Elpis ಆಸ್ಪತ್ರೆ, ಡುಬ್ಲಿನಲ್ಲಿ, ಐರ್ಲೇಂಡ್ |
ರಾಷ್ಟ್ರೀಯತೆ | ಐರಿಷ್ (ಬ್ರಿಟಿಷ್ ಭಾಷೆ) |
ವೃತ್ತಿ(ಗಳು) | ನಾಟಕಕಾರ, ಕವಿ, ಗದ್ಯ ಬರಹಗಾರ, ಪ್ರವಾಸ ಕಥನ ಲೇಕಕರು |
ಗಮನಾರ್ಹ ಕೆಲಸಗಳು | ಡ್ರಾಮ |
ಜಾನ್ ಮಿಲ್ಲಿಂಗ್ಟನ್ ಸಿಂಜ್
ಎಡ್ಮಂಡ್ ಜಾನ್ ಮಿಲ್ಲಿಂಗ್ಟನ್ ಸಿಂಜ್ (೧೬ ಎಪ್ರಿಲ್ ೧೮೭೧ - ೨೪ ಮಾರ್ಚ್ ೧೯೦೯) ಒಬ್ಬ ಐರಿಷ್ ನಾಟಕಕಾರ, ಕವಿ, ಗದ್ಯ ಬರಹಗಾರ, ಪ್ರವಾಸ ಕಥನ ಲೇಕಕರು ಮತ್ತು ಜಾನಪದ ಸಂಗ್ರಾಹಕರಾಗಿದ್ದರು. ಇವರು ಐರಿಷ್ ಲಿಟವರಿ ರಿವೈವಲ್ನಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಅಬ್ಬೆ ರಂಗಕಲೆಯ ಸಂಸ್ಥಾಪಕರಲೊಬ್ಬರು. ಸಿಂಜ್ರವರು ನ್ಯೂಟನ್ ವಿಲ್ಲಾಸನ Rathfarnham ಕಂಟ್ರಿ ಡುಬ್ಲಿನಲ್ಲಿ ೧೬ ಎಪ್ರಿಲ್ ೧೮೭೧ ರಂದು ಜನಿಸಿದರು. ಅವರು ಎಂಟು ಮಕ್ಕಳ ಕುಟುಂಬದಲ್ಲಿ ಕಿರಿಯ ಮಗ. ಅವರ ಪೋಶಕರು ಪ್ರೊಟೆಸ್ಟೆಂಟನ ಮೇಲ್ ಮಧ್ಯಮವರ್ಗದ ಸದಸ್ಯರಾಗಿದ್ದರು. ಅವರ ತಂದೆ ಜಾನ್ ಹ್ಯಾಚ್ ಸಿಂಜ್ ವಕೀಲರಾಗಿದ್ದರು. ಸಿಂಜರ ತಾತನ ಹೆಸರು ಸಹ ಜಾನ್ ಹ್ಯಾಚ್ ಸಿಂಜ್, ಅವರೊಬ್ಬರು ಶಿಕ್ಷಕ ಅಭಿಮಾನಿಯಗಿದ್ದರು ಮತ್ತು ಕುಟುಂಬದ ಎಸ್ಟೇಟನಲ್ಲಿ ಪ್ರಾಯೋಗಿಕ ಶಾಲೆಯನ್ನು ಸ್ಥಾಪಿಸಿದ್ದರು. ಸಿಂಜರವರ ತಾಯಿಯವರಿಗೆ ಕೌಂಟಿ ಗ್ವಾಲೆಯಲ್ಲಿರುವ ಭೂಮಿಯಿಂದ ಖಾಸಗಿ ವರಮಾನ ಬರುತ್ತಿತ್ತು.
ಜೀವನ ಚರಿತ್ರೆ
ಬದಲಾಯಿಸಿಆರಂಭಿಕ ಜೀವನ
ಬದಲಾಯಿಸಿ೧೮೭೨ರಲ್ಲಿ ಸಿಂಜ್ ಚಿಕ್ಕವಯಸಿನಲ್ಲಿರುವಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಸಿಂಜರ ತಾಯಿಯ ತಮ್ಮ ಕುಟುಂಬದವರನ್ನೆಲ್ಲ ಕರೆದುಕಂಡು ರಾತ್ಗರನಲ್ಲಿರುವ ತಮ್ಮ ತಾಯಿಯ ಮನೆಯ ಪಕ್ಕದಲ್ಲಿರುವ ಮನೆಯಲ್ಲಿ ವಾಸಮಾಡುತ್ತಿದ್ದರು. ಸಿಂಜರವರು ತಮ್ಮ ಬಾಲ್ಯವನ್ನು ತುಓಂಬಾ ಸಂತೋಷವಾಗಿ ಕಳೆದರು. ಸಿಂಜ್ ಡಬ್ಲಿನ್ ಮತ್ತು ಬ್ರೇ ನಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಣ ಮುಗಿಸಿದರು. ನಂತರ ರಾಯಲ್ ಐರಿಷ್ ಅಕಾಡೆಮಿ ಆಫ಼್ ಮ್ಯೂಸಿಕ್ ನಲ್ಲಿ ಪಿಯಾನೋ, ಕೊಳಲು, ಪಿಟೀಲು ನುಡಿಸುವುದನ್ನು ಕಲಿತರು. ಅವರು ಸಂಗೀತ ಅಧ್ಯಯನ ಮಾಡುವುದಕೋಸ್ಕರ ಬೇರೆ ಬೇರೆ ದೇಶಗಳಿಗೆ ತೆರಳಿ ನಂತರ ತಮ್ಮ ಮನಸ್ಸನ್ನು ಸಾಹಿತ್ಯದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು. ಅವರು ತುಂಬ ಪ್ರತಿಭಾವಂತ ವಿದ್ಯಾರ್ಥಿಯಾದ ಕಾರಣ ೧೮೯೧ರಲ್ಲಿ ಕೌಂಟರಪಾಯಂಟನಲ್ಲಿ ವಿದ್ಯಾರ್ಥಿವೇತನ ಪಡೆದರು. ಅವರು ತಮ್ಮ ಬಿ.ಎ ವ್ಯಾಸಂಗವನ್ನು ೧೮೯೨ರಲ್ಲಿ ಡಬ್ಲಿನ್ ಟ್ರೆನಟಿ ಕಾಲೇಜಿನಲ್ಲಿ ಮುಗಿಸಿದರು. ಸಿಂಜ್ ರವರು ಡಬ್ಲಿನ್ ನ್ಯಾಚುರಾಲಿಸ್ಟ್ ಫೀಲ್ಡ್ ಕ್ಲಬ್ ಸೇರಿದರು ಮತ್ತು ಚಾರ್ಲ್ಸ್ ಡಾವಿನ್ ರವರ ಕೃತಿಗಳನ್ನು ಓದಲು ಪ್ರಾರಂಭಿಸಿದರು. ಸಿಂಜ್ ನಂತರ ಐರಿಷ್ ಪ್ರಾಚೀನತೆ ಮತ್ತು ಅರನ್ ದ್ವೀಪಗಳಕಡೆ ಆಸಕ್ತಿಯನ್ನು ಬೆಳೆಸಿಕೊಂಡರು, ಮತ್ತು ಐರಿಷ್ ಲೀಗ್ ನಲ್ಲಿ ಸದಸ್ಯರಾಗಿ ಸೇರಿದರು. ನಂತರ ೧೮೯೩ರಲ್ಲಿ ವರ್ಡ್ಸ್‌ವರ್ತ್ ಎಂಬ ಪದ್ಯವನ್ನು ಪ್ರಕಟಿಸಿದರು.
ಉದಯೋನ್ಮುಖ ಬರಹಗಾರ
ಬದಲಾಯಿಸಿಪದವಿ ಪಡೆದ ನಂತರ ಸಿಂಜ್ ರವರು ವೃತ್ತಿಪರ ಸಂಗೀತಗಾರನಾಗುವುದಕ್ಕೋಸ್ಕರ ಸಂಗೀತವನ್ನು ಅಧ್ಯಯನ ಮಾಡುವುದಕ್ಕೆ ಜರ್ಮನಿಗೆ ತೆರಳಿದರು. ಜನವರಿ ೧೮೯೪ರಲ್ಲಿ ಸಿಂಜ್ ರವರಿಗೆ ಸಾರ್ವಜನಿಕವಾಗಿ ಸಂಗೀತ ಪ್ರದರ್ಶನ ಮಾಡುವುದಕ್ಕೆ ಅವಕಾಶ ದೊರೆಯಿತು. ಆದರೆ ಜನರ ಮುಂದೆ ಸಂಗೀತ ಪ್ರದರ್ಶನ ಮಾಡಲು ಮುಜುಗರ ಪಟ್ಟು ಮತ್ತು ಅವರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನವು ಭಾಗಶಃ ಕಾರಣವಾಗಿ, ಸಂಗೀತವನ್ನು ತ್ಯಜಿಸಿದರು ಮತ್ತು ಸಾಹಿತ್ಯದ ಕಡೆ ಆಸಕ್ತಿಯನ್ನು ಮುಂದುವರೆಸಲು ನಿರ್ಧರಿಸಿದರು. ಜೂನ್ ೧೮೯೫ರಲ್ಲಿ ಸಿಂಜ್ ರವರು ಐರ್ಲೆಂಡಗೆ ಹಿಂದಿರುಗಿ ಸಾಹಿತ್ಯ ಮತ್ತು ಭಾಷೆಯನ್ನು ಕಲಿಯವಿದಕ್ಕಾಗಿ ಜನವರಿ ೧೮೯೬ರಲ್ಲಿ ಪ್ಯಾರಿಸ್ ಗೆ ತೆರಳಿದರು. ಬೇಸಿಗೆ ರಜೆಯನ್ನು ಸಂತೋಷವಾಗಿ ಕಳೆಯುವುದರ ಸಲುವಾಗಿ ಸಿಂಜ್ ರವರು ತಮ್ಮ ಕುಟುಂಬ ಸಮೇತರಾಗಿ ಡಬ್ಲಿನ್ ಗೆ ಹೊರಟರು. ಅಲ್ಲಿ ಸಿಂಜ್ ಚೀರೀ ಮ್ಯಥೆನಸ್ ಎಂಬ ಹುಡುಗಿಯನ್ನು ನೋಡುತ್ತಾರೆ, ಆ ಹುಡುಗಿಯನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ. ಆದರೆ ಆ ಹುಡುಗಿಯು ಮುದುವೆಯಾಗಲು ಒಪ್ಪಿಕೊಳ್ಳುವುದಿಲ್ಲ ಏಕೆಂದರೆ ಅವರಿಬ್ಬರು ಧರ್ಮವು ಬೇರೆ ಬೇರೆಯಾದ ಕಾರಣ ಸಿಂಜ್ ರವರನ್ನು ತಿರಸ್ಕರಿಸಿದಳು. ಈ ನಿರಾಕರಣೆಯು ಸಿಂಜರ ಮೇಲೆ ಹೆಚ್ಚಿನ ಪರಿಣಾಮ ಬೀರಿತ್ತು. ೧೮೯೬ರಲ್ಲಿ ಸಿಂಜ್ ಪ್ಯಾರಿಸ್ ಗೆ ಹಿಂದಿರುಗುವ ಮೊದಲು ಒಂದು ಬಾರಿ ಭಾಷೆ ಅಧ್ಯಯನ ಮಾಡುವುದಕ್ಕಾಗಿ ಇಟಲಿಗೆ ತೆರಳಿದರು. ನಂತರ ಅವರು ಯೀಟ್ಸ್, ಅಗಸ್ಟಾ, ಲೇಡಿ ಗ್ರೆಗೊರಿ ಮತ್ತು ಜಾರ್ಜ್ ವಿಲಿಯಂ ರಸೆಲರ ಜೊತೆ ಸೇರಿಕೊಂಡು ಐರಿಷ್ ನ್ಯಾಷನಲ್ ಥಿಯೇಟರ್ ಸೊಸೈಟಿಯನ್ನು ರೂಪಿಸಿದರು, ಅದರ ಸಹಾಯದಿಂದ ಅಬ್ಬೆ ರಂಗಕಲೆಯನ್ನು ಸ್ಥಾಪಿಸಿದರು. ೧೮೯೮ರಂದು ಸಿಂಜ್ ರವರು ಬೇಸಿಗೆ ಕಾಲವನ್ನು ಅರನ್ ದ್ವೀಪಗಳಲ್ಲಿ ಕಳೆದರು, ಮತ್ತು ನಂತರದ ಐದು ವರ್ಷಗಳ ಬೇಸಿಗೆಯನ್ನು ಸಹ ಕಥೆಗಳನ್ನು ಮತ್ತು ಜಾನಪದಗಳನ್ನು ಸಂಗ್ರಹಿಸುವುದಕ್ಕಾಗಿ ಅರನ್ ದ್ವೀಪದಲ್ಲೆ ಕಳೆದರು. ಅವರು ಬ್ರಿಟನಿಗೆ ಆಗಾಗ ಭೇಟಿಕೊಡುತ್ತಿದ್ದರು. ಈ ಕಾಲದಲ್ಲಿ ಅವರು When the Moon has set ಎಂಬ ತಮ್ಮ ಮೊದಲ ನಾಟಕವನ್ನು ಬರೆದರು. ನಂತರ ಅದನ್ನು ಐರಿಷ್ ಲಿಟರರಿ ಥೀಯೇಟರ್ ನಲ್ಲಿ ಪ್ರದರ್ಶಿಸುವ ಸಲುವಾಗಿ ಲೇಡಿ ಗ್ರೆಗೊರಿಯವರಿಗೆ ೧೯೦೦ರಲ್ಲಿ ಕಳುಹಿಸಿದರು. ಆದರೆ ಅವರು ಅದನ್ನು ತಿರಸ್ಕರಿಸಿದರು. ೧೯೦೩ರಲ್ಲಿ ಸಿಂಜ್ ಪ್ಯಾರಿಸ್ ತ್ಯಜಿಸಿ ಲಂಡನ್ಗೆ ತೆರಳಿದರು. ಅವರು ರೈಡರ್ಸ್ ಟು ಸೀ ಮತ್ತು ದ ಶ್ಯಾಡೋ ಆಫ಼್ ದ ಗ್ಲೆನ್ ಎಂಬ ಎರಡು ಏಕಾಂಕ ನಾಟಕಗಳನ್ನು ಬರೆದರು. ಈ ನಾಟಕಗಳನ್ನು ಪ್ರದರ್ಶಿಸುವ ಸಲುವಾಗಿ ಅನುಮತಿಯನ್ನು ಪಡೆಯಲು ಲೇಡಿ ಗ್ರೆಗೊರಿಗೆ ಕಳುಹಿಸಿದರು. ಅವರ ಒಪ್ಪಿಗೆಯ ಮೆರೆಗೆ ೧೯೦೩ರಲ್ಲಿ ಮೋಲೆಸ್ವರ್ತ್ ಹಾಲ್ನಲ್ಲಿ ದ ಶ್ಯಾಡೊ ಆಫ಼್ ದ್ ಗ್ಲೆನ್ ಪ್ರದರ್ಶಿಸಿದರು. ಮುಂದಿನ ವರ್ಷ ಫೆಬ್ರವರಿಯಲ್ಲಿ 'ರೈಡರ್ಸ್ ಟು ಸೀ' ಎಂಬ ನಾಟಕವನ್ನು ಅದೇ ಸ್ಥಳದಲ್ಲಿ ಪ್ರದರ್ಶಿಸಿದರು. ಎರಡು ನಾಟಕಗಳಲ್ಲಿ ಅರನ್ ದ್ವೀಪಗಳಲ್ಲಿ ಸಿಂಜ್ ರವರು ಸಂಗ್ರಹಿಸಿದ ಕಥೆಗಳನ್ನು ಆಧರಿಸಿದೆ.
ನಾಟಕಗಳು
ಬದಲಾಯಿಸಿಅಬ್ಬೆ ರಂಗಕಲೆ ಸ್ಥಾಪಿಸಿದಾಗ ಸಿಂಜ್ ರವರನ್ನು ಸಾಹಿತ್ಯ ಸಲಹೆಗಾರನಾಗಿ ನೇಮಕ ಮಾಡಿದರು. ೧೯೦೪ ರಲ್ಲಿ 'ರೈಡರ್ಸ್ ಟು ಸೀ', 'ದ ವೆಲ್ ಆಫ಼್ ಸೈಂಟ್ಸ್' ೧೯೦೫ರಲ್ಲಿ ಅಬ್ಬೆಯಲ್ಲಿ ಪ್ರದರ್ಶಿಸಿದರು. ನಂತರ ೧೯೦೬ರಲ್ಲಿ ಬರ್ಲಿನ್ನಲಿರುವ ಡ್ಯುಟ್ಷೆಸ್ ಥಿಯೇಟರನಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು. ೧೯೦೭ ರಲ್ಲಿ 'ದ್ ಪ್ಲೇ ಬಾಯ್ ಆಫ಼್ ಅ ವೆಸ್ಟ್ರನ್ ವರ್ಲ್ಡ್' ಮತ್ತು ೧೯೧೦ ರಲ್ಲಿ 'ಡೆಯಿರ್ಡ್ರೆ ಆಫ಼್ ದ ಸಾರೋಸ್'.
ನಿಧನ
ಬದಲಾಯಿಸಿಸಿಂಜ್ ಮಾರ್ಚ್ ೧೯೦೯ ರಂದು ಡಬ್ಲಿನ್ Elpis ಆಸ್ಪತ್ರೆಯಲ್ಲಿ ನಿಧನರಾದರು ಮತ್ತು ಅವರ ಸಮಾಧಿಯನ್ನು ಮೌಂಟ್ ಜೆರೋಮ್ ಗ್ರೇವ್ಯರ್ಡ್, ಹೆರಾಲ್ಡ್ ಕ್ರಾಸ್, ಡಬ್ಲಿನ್ ನಲ್ಲಿ ಮಾಡಲಾಯಿತು. ೧೯೪೦ ರವರಿಗೆ ಅಬ್ಬೆ ಥಿಯೇಟರ್ನಲ್ಲಿ ಪ್ರದರ್ಶನಗೊಂಡ ಸಿಂಜ್ ನಾಟಕಗಳು ನಾಟಕಗಳಿಗಿರಬೇಕಾದ ಪ್ರಮುಖ ಶೈಲಿ ಸ್ಥಾಪಿಸಲು ಸಹಾಯ ಮಾಡಿತು. ಇತ್ತೀಚಿನ ವರ್ಷಗಳಲ್ಲಿ ಅರನ್ ದ್ವೀಪಗಳಲ್ಲಿರುವ ಸಿಂಜ್ ಕಾಟೆಜಗಳನ್ನು ಪ್ರವಾಸಿಗರ ಆಕರ್ಷಣೆಯಾಗಿ ಪುನಃ ಸ್ಥಾಪಿಸಲಾಗಿದೆ. ೨೦೧೦ರಲ್ಲಿ ಜೊಸೆಫ಼್ ಒಕಾನ್ನರ್ ಘೋಸ್ಟ್ ಲೈಟ್ ಎಂಬ ಕಾದಂಬರಿಯನ್ನು ಸಿಂಜ್ ಮತ್ತು Allgood ಜೊತೆಗಿನ ಸಂಬಂಧವನ್ನು ಆಧರಿಸಿ ಬರೆದರು.
ಕೃತಿಗಳು
ಬದಲಾಯಿಸಿ- ಇನ್ ದ ಶ್ಯಾಡೊ ಆಫ಼್ ದ ಗ್ಲೆನ್, ೧೯೦೩
- ರೈಡರ್ಸ್ ಟು ಸೀ, ೧೯೦೪
- ದ್ ವೆಲ್ ಆಫ಼್ ದ ಸೈಂಟ್ಸ್, ೧೯೦೫
- ದ ಅರನ್ ಐಲಾಂಡ್ಸ್, ೧೯೦೭
- ದ ಪ್ಲೇಬಾಯ್ ಆಫ಼್ ಅ ವೆಸ್ಟ್ರನ್ ವರ್ಲ್ಡ್, ೧೯೦೭
- ದ ಟಿಂಕರ್ಸ್ ವೆಡ್ಡಿಂಗ್, ೧೯೦೮
- ಕವನಗಳು ಮತ್ತು ಅನುವಾದ, ೧೯೦೯
- ಡೆಯಿರ್ಡೆ ಆಫ಼್ ದ ಸಾರೋಸ್, ೧೯೧೦
- ಇನ್ ವಿಕ್ಲೊ ಅಂಡ್ ವೆಸ್ಟ್ ಕೆರ್ರಿ, ೧೯೧೨
- ಕಲಿಕ್ಟೆಡ್ ವರ್ಕ್ಸ್ ಆಫ಼್ ಜಾನ್ ಮಿಲ್ಲಿಂಗಟನ್ ಸಿಂಜ್ ೪ ಸಂಪುಟಗಳು, ೧೯೬೨-೧೯೬೮