ನಮಸ್ಕಾರ. ನನ್ನ ಹೆಸರು ರೋಹಿತ್ ಉಪಾಧ್ಯಾಯ, ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ನಾ ಹುಟ್ಟಿ, ಬೆಳೆದು, ಈಗ ಅಲ್ಲೇ ಇದ್ದೇನೆ, ನಾನು ಒಬ್ಬ ಶಾಂತ ಸ್ವಭಾವದ ಹುಡುಗ. ಯಾರ ತಂಟೆಗೂ ಹೋಗದ ನನ್ನಲ್ಲೆ ಹೊಸತನ್ನು ಕಂಡುಕೊಳ್ಳಲು ಪ್ರಯತ್ನಿಸುವವ. ನಾನು ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬ.ಏ ಕಲಿಯತ್ತಿದ್ದೆನೆ. ಪತ್ರಿಕೋದ್ಯಮ ಅರ್ಥಶಾಸ್ತ್ರ ಹಾಗು ಇಂಗ್ಲೀಷ್ ಲಿಟ್ರೇಚರ್ ನಾನು ಆಯ್ಕೆ ಮಾಡಿಕೊಂಡಿರು ಹಾದಿಗಳು. 
                                                                                                       
    ನಾನು ಯಾವಾಗು ಎನಾದ್ರು ಕೆಲಸ ಮಾಡುತ್ತಾನೆ ಇರುತ್ತೆನೆ, ಕೆಲಸ ಇಲ್ಲಾಂದ್ರೆ ನನಗೆ ನನ್ನ ಮನಸ್ಸನ್ನು ಹಿಡಿತಕ್ಕೆ ತಗೆದುಕೊಳ್ಳಲಾಗುವುದಿಲ್ಲ. ಅದರಿಂದ ಎನೇ ಕೆಲಸ ಇರಲಿ ನಾನು ರೆಡಿ. ಆದರು ಕೆಲವೊಮ್ಮೆ ಏನೂ ಕೆಲಸ ಇಲ್ಲಾಂದ್ರೆ ನನ್ನ ಕೈಯ್ಯಲ್ಲಿ ಉಳಿಯುವುದು ಒಂದೆ ದಾರಿ. ಅದೇ ಹಾಡು. ಈ ಹಾಡು ಎಂದರೆ ನನಿಗೆ ತುಂಬಾ ಇಷ್ಟ. ಹಾಗಾಗಿ. ಹಾಗಾಗಿ ಏನು ಇಲ್ಲಾಂದ್ರ ನನಿಗೆ ಹಾದೆ ಗತಿ.
    ಕೆಲಸ ಅಂದ್ನಲ್ಲ. ಎಲ್ಲಾ ಕೆಲಸ ಅಂದ್ರೆ ಎಲ್ಲಾ ಕೆಲಸ ಮಾದಲು ತಯಾರು ನಾನಿಲ್ಲ. ಕೆಲಸಕ್ಕೂ ಕೆಲವು ಇತಿ-ಮತಿಗಳಿವೆ. ಕಂಪ್ಯೂಟರ್ ಅಂದರೆ ನನಗೆ ಇಷ್ಟ. ಹಾಗಾಗಿ ಕಂಪ್ಯೂಟರ್‍ನಲ್ಲಿ ಏನೆ ತೊಂದರೆ ಇರಲಿ, ಅದನ್ನು ಹುಡುಕಿ ಸರಿಯಾಗಿಸುವ ಜವಾಬ್ದಾರಿ ನಂದು. ಕಂಪ್ಯೂಟರ್ ಮಾತ್ರವಲ್ಲ, ಮೋಬೈಲ್ ಸರಿಮಾಡುವುದರಲ್ಲೂ ನಾನು ನಿಪುಣ. ಹಾಗಾಗಿ ಇವೆರು ತಂತ್ರಾಜ್ಙಾನದಲ್ಲಿ ತೊಂದರೆ ಇದ್ದರು ನನ್ನನ್ನು ಸಂಪರ್ಕಿಸಿ.
    ಮಂಗಳಾದೇವಿಯಲ್ಲಿ ನನ್ನ ಮನೆ. ನನ್ನ ತಂದಯ ಅಜ್ಜನ ಕಾಲದಿಂದಲೂ ನಾವು ಇಲ್ಲೆ ನೆಲೆಸಿದ್ದೇವೆ. ಆದ್ದರಿಂದ ನನ್ನ ತಂದೆಯವರು ದೇವಸ್ಥಾನದ ಅನುವಾಂಶಿಕ ಮೊಕ್ತೇಸರರಾಗಿದ್ದಾರೆ. ಹಾಗು ನಮಗೆ ನಾಲ್ಕು ವರ್ಷಕ್ಕೊಮ್ಮ ದೇವಿಯ ಪೂಜೆ ಮಾಡುವ ಭಾಗ್ಯ ಸಿಗುತ್ತದೆ. ಮಂಗಳಾದೇವಿಯಲ್ಲಿ ನಮ್ಮ ಮನೆ ದೇವಸ್ಥಾನದ ಪಕ್ಕದಲ್ಲೆ ಇದೆ.