===== ನಂಜಾಟೆ ಗಿಡ =====
       
          ಶಾಖೋಪಶಾಖೆಗಳಿಂದೊಡಗೂಡಿ ಸಾಧಾರಣ ೬-೭ ಅಡಿ ಬೆಳೆಯುವ ಗಿಡ. ೨ ಅಂಗುಲ ಅಂತರದಲ್ಲಿ ಹಸಿರಾದ
ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿರುತ್ತವೆ.೬ಅಂಗುಲ ಉದ್ದ,೨ ಅಂಗುಲ ಅಗಲದ ಎಲೆಗಳು ದೀರ್ಘವೃತ್ತಾಕಾರವಾಗಿದೆ.

ಬುಡ ಹಾಗೂ ತುದಿಯಲ್ಲಿ ಕಿರಿಯಗಲವಾಗಿದೆ.ಎಲೆಯನ್ನು ಚಿವುಟಿದಾಗ ಹಾಲು ಬರುತ್ತದೆ.ಗಿಡದ ತುಂಬಾ ೫ ದಳಗಳ ಬಿಳಿಯ ಹೂವು ಬರುವುವು. ನಳಿಕೆಯಂತೆ ಹೊರಭಾಗವು ದಳಗಳಿಂದ ಹರಡಿಕೊಂಡಿದೆ.ಹೂವು ಮೃದುವಾಗಿರುವುದರ ಜೊತೆಗೆ ಮಧುರವಾದ ಪರಿಮಳವೂ ಇದೆ.ನಂಜಾಟೆಯ ಹೂವುಗಳು ಔಷದೀಯ ಮೂಲವಾಗಿದೆ.ಇದರಲ್ಲಿ ವರ್ಷವಡೀ ಹೂವುಗಳಿರುತ್ತವೆ.ನಂಜಾಟೆಯಲ್ಲಿ ೩-೪ ವಿಧಗಳೂ ಇವೆ.

        ಇದಕೆ ಹಲವಾರು ಹೆಸರುಗಳಿವೆ, ಅವೆಂದರೆ ಹಿಂದಿಯಲ್ಲಿ-ಚಾಂದನಿ, ಕೊಂಕಣಿಯಲ್ಲಿ-ಅನಂತ, ಕನ್ನಡದಲ್ಲಿ-ನಂದೀ ಬಟ್ಟಲು,ನಂಜಾಟೆ, 

ಮರಾಠಿಯಲ್ಲಿ-ಅನಂತ. ಇದರ ಸಸ್ಯಶಾಸ್ತ್ರೀಯ ಹೆಸರು-ಟ್ಯಾಬರ ನಿಮಾಂಟಾನಾ ಡಯವರಿಕೆಟ,ಕುಟುಂಬ-ಅಪೊಸೈನೇಸಿ


          * ಔಷಧೋಪಯೋಗ


  • ಸರ್ಪಸುತ್ತಿಗೆ

ನಂಜಾಟೆ ಬೇರನ್ನು ಲಿಂಬೆ ರಸದಲ್ಲಿ ತೇಯ್ದು ಎರಡು ಚಮಚ ಗಂಧ ಸೇವಿಸಬೇಕು.ಅದೇ ಗಂಧವನ್ನು ಸರ್ಪಕಟ್ಟೆಗೆ ಲೇಪಿಸಬೇಕು.ದಿನಕ್ಕೆ ೧ ಸಾರಿ ೮ ದಿವಸ

  • ಅಗ್ರಕ್ಕೆ

ನಂಜಾಟೆ ಬೇರು,ಸೇವಂತಿಗೆ ಮುಗುಳು,ಶ್ರೀಗಂಧವನ್ನು ನೀರಲ್ಲಿ ತೇಯ್ದು ಸೇವಿಸಿ ೩ ದಿವಸ ನಾಲಿಗೆಗೆ ಹಚ್ಚಬೇಕು.

  • ಪ್ರಸೂತಿಯಾದಾಗ ನಂಜೇರದಂತೆ

ನಂಜಾಟೆ ಬೇರು,ತೊಂಡಜ್ಜಿ ಬೇರು ಲಿಂಬೆ ರಸದಲ್ಲಿ ಸಮಪ್ರಮಾಣದಲ್ಲಿ ತೇಯ್ದು ೫ ಚಮಚ ಗಂಧ ಮಾಡಿ ಹಡೆದ ಒಂದು ತಾಸಿನ ನಂತರ

ಬಾಣಂತಿಗೆ ಕೊಡಬೇಕು.ದಿನಕ್ಕೆ ೨ಸಾರಿ ಸ್ವಲ್ಪ ಗಂಧವನ್ನು ೨ಕಾಲುಗಳ ಪಾದಕ್ಕೂ ೧೦ ದಿವಸ ತಿಕ್ಕಬೇಕು.
  • ಕಂಚಹಪ್ಯ್ರಾ ಹಾವು ಕಡಿದರೆ

ನಂಜಾಟೆ ಬೇರು ಹಾಗೂ ಹುಲ್ಲು ಸಾರಂಗ ಗಿಡದ ಬೇರು ಎರಡನ್ನೂ ಲಿಂಬೇರಸದಲ್ಲಿ ತೇಯ್ದು,೫ ಚಮಚ ಗಂಧ ಮಾಡಿ ಸೇವಿಸಲು ಕೊಡಬೇಕು. ಹಾಗೂ ಇದೇ ಗಂಧವನ್ನು ಹಾವು ಕಡಿದ ಜಾಗದಲ್ಲಿ ದಿನಕ್ಕೆ ಮೂರು ಬಾರಿ ಒಂದು ವಾರ ಹಚ್ಚಬೇಕು

  • ವಿಷ ಜೇಡ ಕಡಿದಾಗ

ನಂಜಾಟೆ ಬೇರನ್ನು ತೇಯ್ದು ಸೇವಿಸಬೇಕು,ಮತ್ತು ಗಂಧವನ್ನು ಗಾಯಕ್ಕೆ ಲೇಪಿಸಬೇಕು.

  • ಹಸಿ ಬಾಣಂತಿಯರಿಗೆ ನಂಜೇರದಂತೆ

ನಂಜಾಟೆ ಬೇರು,ಮಾದಾಳ(ಮಾವಲಿಂಗ)ದ ಬೇರು ಮತ್ತು ಗರುಡಪಾತಾಳದ ಬೇರನ್ನು ತೇಯ್ದು ೫ ಚಮಚ ಗಂಧಮಾಡಿ ಹೆರಿಗೆಯಾದ ಒಂದು ತಾಸಿನ ನಂತರ ಸೇವಿಸಬೇಕು.ಅದೇ ಗಂಧವನ್ನು ದಿನಕ್ಕೆರಡು ಸಾರಿ ಮೂರು ದಿವಸ ಕೈ ಕಾಲು ಪಾದಕ್ಕೆ ಸವರಬೇಕು

        ಇವು ನಂಜಾಟೆ ಗಿಡದ ಕೆಲವು ಔಷದೀಯ ಗುಣಗಳು                                                                                                                               


ಈ ಲೇಖನದ ಮೂಲ- ರಾಮಚಂದ್ರ ಎಂ ಶೇಟ ಶಿರಸಿ ಉ.ಕ.,ನಿರಂತರ ಪ್ರಗತಿ