Roel Veigas
Joined ೨೯ ಜುಲೈ ೨೦೧೫
ನನ್ನ ಹೆಸರು ರೋಯೆಲ್ ವೇಗಸ್.ನಾನು ಬೆಳ್ತಂಗಡಿ ತಾಲೂಕಿನ ಬದ್ಯಾರ್ ಎಂಬ ಊರಿನ ನಿವಾಸಿ.ನನ್ನ ತಂದೆಯ ಹೆಸರು ಹಿಲರಿ ವೇಗಸ್,ತಾಯಿಯ ಹೆಸರು ನಥಾಲಿಯ ವೇಗಸ್.ನನಗೊಬ್ಬ ಸಹೋದರನಿದ್ದಾನೆ ಅವನ ಹೆಸರು ಜೋಯೆಲ್ ವೇಗಸ್.ನನ್ನ ಪ್ರಾಥಮಿಕ ಶಿಕ್ಷಣವನ್ನು ಸಂತ ರಫಾಯೆಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದೆ.ಮುಂದಿನ ವಿದ್ಯಾಭ್ಯಾಸವನ್ನು ಸಂತ ತೆರೆಸ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಪಡೆದು ಈಗ ಸಂತ ಅಲೊಷಿಯಸ್ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದೆನೆ.
ನನ್ನ ಹವ್ಯಾಸಗಳೆಂದರೆ ಕಾದಂಬರಿಗಳನ್ನು ಓದುವುದು,ಆಟೊಟಗಳಲ್ಲಿ ಭಾಗವಹಿಸುವುದು,ಲೇಖನಗಳನ್ನು ಬರೆಯುವುದು,ಕವನಗಳನ್ನು ಬರೆಯುವುದು ಇತ್ಯಾದಿ.ನನಗೆ ಭಾಷಣಗಳನ್ನು ಮಾಡುವುದರಲ್ಲಿ ಮತ್ತು ಲೇಖನಗಳನ್ನು ಬರೆಯುವುದರಲ್ಲಿ ವಿಶೆಷ ಅಭಿರುಚಿಯಿದೆ. ನಾನು ಎರಡನೇ ಪಿ.ಯು.ಸಿ.ಯಲ್ಲಿ ಓದುತ್ತಿರುವಾಗ ನನಗೆ ವೈ.ಸಿ.ಎಸ್.ಲ್ಲಿ ಸೇವೆ ಮಾಡುವ ಸದವಕಾಶವೊಂದು ಒದಗಿ ಬಂತು.ನಾನು ಅದನ್ನು ಎರಡೂ ಕೈಗಳಿಂದ ಬಾಚಿಕೊಂಡೆ,ಮತ್ತು ಇದರಿಂದ ನನಗೆ ಎರಡು ರಾಷ್ಟ್ರಮಟ್ಟದ ತರಭೇತಿ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶ ಪಡೆದೆ.ಇಲ್ಲಿಂದಲೇ ನನಗೆ ಲೇಖನ ಮತ್ತು ಕವನ ಬರೆಯುವುದರಲ್ಲಿ ಅಭಿರುಚಿ ಹುಟ್ಟಿತು.ಆದುದರಿಂದ ಇಂದು ನಾನು ಏನಿದ್ದರೂ ವೈ.ಸಿ.ಎಸ್.ನಿಂದ ಎಂದು ಹೇಳಲು ಹೆಮ್ಮೆಪಡುತ್ತೆನೆ. ನಾನು ಭಾಷಣ ಮತ್ತು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಎರಡನೇ ಸ್ಥಾನವನ್ನು ಗಳಿಸಿದ್ದೇನೆ.ಇದಿಷ್ಟು ನನ್ನ ಸಣ್ಣದಾದ ಪರಿಚಯ. ಧನ್ಯವಾದಗಳು
ಈ ಸದಸ್ಯರ ಊರು ಮಂಗಳೂರು. |