ಸದಸ್ಯ:Reethu S/ನನ್ನ ಪ್ರಯೋಗಪುಟ
ಬ್ರೆಡ್ ರೋಲ್
ಬದಲಾಯಿಸಿ
ಬ್ರೆಡ್ ರೋಲ್ (ಸಾದಾ ಅಥವಾ ಬೆಣ್ಣೆಯ ಜೊತೆಗೆ ತಿನ್ನಲಾಗುವ ತಿಂಡಿ) ಉಟದ ಜೊತೆಖಾದ್ಯವಾಗಿ ಬಡಿಸಲಾಗುವ ಒಂದು ಚಿಕ್ಕ, ಅನೇಕವೇಳೆ ದುಂಡನೆಯ ಬ್ರೆಡ್ ತುಂಡು. ರೋಲ್ ಅನ್ನು ಇಡಿಯಾಗಿ ಅಥವಾ ಅಡ್ಡಡ್ಡವಾಗಿ ಕತ್ತರಿಸಿ ಎರಡೂ ಅರ್ಧಬಾಗಗಳ ನಡುವೆ ಹೂರಣವನ್ನು ತುಂಬಿ ಬಡಿಸಬಹುದು ಮತ್ತು ತಿನ್ನಬಹುದು. ರೋಲ್‍ಗಳನ್ನು ಸಾಮಾನ್ಯವಾಗಿ ಬ್ರೆಡ್‍ನ ಹೋಳುಗಳನ್ನು ಬಳಸಿ ತಯಾರಿಸಲಾಗುವ ಖಾದ್ಯವನ್ನು ಹೋಲುವ ಸ್ಯಾಂಡ್‍ವಿಚ್‍ಗಳನ್ನು ತಯಾರಿಸಲೂ ಬಳಸಲಾಗುತ್ತದೆ.
ಬ್ರೆಡ್ ರೋಲ್ ಎಂಬುವಂತಯ ತಿಂಡಿ ಇಟಲಿ ಮತ್ತು ಜರ್ಮಿನಿ ಅಂತಯ ದೇಶಗಲಲ್ಲಿ ಅತ್ಯಂತ ಪ್ರಮುಖವಾದದು. ಬ್ರೆಡ್ ರೋಲ್ ಸಾಮಾನ್ಯವಾಗಿ ಅಮೇರಿಕಾ ಮತ್ತು ಮುಂತಾದ ದೇಶಗಲಲ್ಲಿ ತುಂಬಾ ಬಲೆಕೆ ಆಗುತ್ತದೆ. ಬೆಳ್ಲಿಗೆ ತಿಂಡಿ ಅಥವಾ ಸಂಜೆಯ ಸಮಯದಲ್ಲಿ ಸೇವನೆ ಮಾಡುವಂತಯ ಸ್ನಾಕ್ಸ್(ತಿಂಡಿ) ಇದಾಗಿದೆ. ಬ್ರೆಡ್ ಮಾಡುವುದಕ್ಕೆ ಬೆಕಾಗುವ ಸಾಮಗ್ರಿಗಳು ಇವು :
೧) ಹಿಟ್ಟು ೨) ಉಪ್ಪು ೩) ಯೀಸ್ಟ್ ೪) ಸಕ್ಕರೆ ೫) ನೀರು(ಬೆಚ್ಚಗಿನ ನೀರು)
ಬ್ರೆಡ್ ತಿನ್ನುವುದರಿಂದ ನಮ್ಮ ದೇಹಕ್ಕೆ ಆಗುವ ಉತ್ತಮ ಪರಿನಾಮಗಳು ಏನು ? ಕಡಿಮೆ ಅಂಶದ ಕೊಬ್ಬು ಬ್ರೆಡ್ ಅಲ್ಲಿ ಇರುವುದರಿಂದ ನಮ್ಮ ಅರೋಗ್ಯಕ್ಕೆ ಅಷ್ಟೊಂದು ಸಮಸ್ಯಗಳು ಆಗುವುದಿಲ್ಲ. ಇದರ ಜೊತೆಗೆ ಫೈಬರ್ ಸಹ ಸೇರಿಕೊಂಡಿರುವುದರಿಂದ ದೇಹಕ್ಕೆ ಒಳ್ಳೆಯದು. ಕಾರ್ಬೋಹೈಡ್ರೇಟ್ಗಳು ಬ್ರೆಡಿನ ಒಂದು ಪ್ರಮುಖವಾದ ಅಂಶ. ಕಾರ್ಬೋಹೈಡ್ರೇಟ್ಗಳು ಜೀರ್ಣವಾದ ಮೇಲೆ ದೇಯಕ್ಕೆ ಶಕ್ತಿಯನ್ನು ತುಂಬುತ್ತದೆ. ಇದರಿಂದ ನಮ್ಮಗೆ ಕಡಿಮೆ ಅಂತರಗಳಲ್ಲಿ ಹಸಿವಾಗುವುದಿಲ್ಲ. ಇದರ ಪರಿಣಾಮ ಮನುಷ್ಯ ಕಡಿಮೆ ಅಹಾರವನ್ನು ಸೆವನೆ ಮಾಡುತ್ತಾನೆ. ಬ್ರೆಡ್ ಸೇವನೆಯಿಂದ ದೇಹಕ್ಕೆ ಎಷ್ಟು ಉಪಯುಕ್ತವೊ ಅದರಿಂದ ಅಡ್ಡ ಪರಿಣಾಮಗಳು ಅಷ್ಟೆ ಇವೆ. ಕೆಲವೊಂದು ಈ ಕೆಳಗೆ ಇವೆ :- ೧) ಗ್ಲುಟನ್ ಜೇರ್ಣಾಂಗ ಭಾಗಗಲ್ಲಿ ಗಾಯಗಳನ್ನು ಮಾಡಬಹುದು. ೨) ಇದರಿಂದ ಸುಸ್ತು, ಉಬ್ಬುವುದು, ಹೊಟ್ಟೆ ನೋವು ಮುಂತ್ತಾದ ಲಕ್ಷಣಗಳು ಕಾಣಿಸುತ್ತದೆ. ೩) ರಕ್ತದ ಸಕ್ಕರೆ ಹೆಚ್ಚಾಗುತ್ತೆ.
ಇಟಾಲಿಯನ್ ರೂಪದ ಬ್ರೆಡ್ ಒಂದು ಸಣ್ಣ ಚಿಯಾಬಟಾ, ಇದನ್ನು ಬಲಸಿ "ಪನಿನಿ" ಮಾಡುತ್ತಾರೆ. ನಾರ್ವೆ ಅಂತಯ ದೇಶಗಲಲ್ಲಿ ಬ್ರೆಡನ್ನು ಸಾಮಾನ್ಯವಾಗಿ ಬೆಣ್ಣೆ ಮತ್ತು ಜಾಮ್ ಜೊತೆಗೆ ತಿನ್ನುತ್ತಾರೆ. ಜರ್ಮಿನಿಯಲ್ಲಿ ಬೇರೆ ಬೇರೆ ರೀತಿಯ ಬ್ರೆಡ್ಗಲು ಸಿಗುತ್ತವ. ವೈಟ್ ಬ್ರೆಡ್, ಬ್ಲಾಕ್ ಬ್ರೆಡ್ ಮತ್ತು ವಿವಿಧವಾದ ಬ್ರೆಡ್ ರೋಲ್ಗಳನ್ನು ನೋಡಬಹುದು. ಬ್ರಿಟಿಷ್ ದೇಶದಲಲ್ಲಿ ಬ್ರೆಡ್ ಅನ್ನು ಹೆಸರಿಸುವ ಮಾರ್ಗ ತುಂಬಾ ವಿಭಿನ್ನವಾದದು. ಹಿಟ್ಟನ್ನು ತಯಾರಿಸುವ ರೀತಿ ಅಥವಾ ರೋಲ್ ಅನ್ನು ಬೇಯಿಸುವ ಆಧಾರದ ಮೇಲೆ ಅದನ್ನು ನಾಮಕರಿಸುತ್ತಾರೆ. ಹಲವಾರು ರೀತಿಯ ಮಸಾಲೆಗಳು , ಗಿಡಮೂಲಿಕೆಗಳು , ಕೊತ್ತಂಬರಿ , ಜೀರಿಗೆ , ಬೀಜಗಳು ಉದಾಹರಣೆಗೆ ಏಳ್ಳನ್ನು ಬಳಸುತ್ತಾರೆ.
ಕೆಲವೊಮ್ಮೆ ಗಸಗಸೆ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಸಹ ಸೇರಿಸುತ್ತಾರೆ.