ಎಲ್ಲರಿಗು ನಮಸ್ಕಾರ ,

ನನ್ನ ಹೆಸರು ಆರ್. ಭರತ್ ಗೌಡ ನಾನು ೨೫ ಆಗಸ್ಟ್ ೨೦೦೪ ರಂದು ಬೆಂಗಳುರಿನ ಸೇಂಟ್ ಜಾನ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಜನಿಸಿದೆನು . ನನ್ನ ತಂದೆಯ ಹೆಸರು ಕೆ.ಪಿ ರಮೇಶ್ ಹಾಗು ನನ್ನ ತಾಯಿಯ ಹೆಸರು ಉಮಾ.ನಮ್ಮ ತಂದೆ ತಾಯಿ ಮೂಲತಹ ಕೋಲಾರು ಜಿಲ್ಲೆಯ ಬಂಗಾರಪೇಟೆ ತಾಲುಕಿನವರು.ನನ್ನ ಹವ್ಯಸಗಳು ಬ್ಯಾಸ್ಕೆಟ್ಬಾಲ್ ಆಡುವುದು , ಚಿತ್ರಗಳನ್ನು ಬಿಡಿಸುವುದು ಇತ್ಯಾದಿ.

ನಾನು ನನ್ನ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢಶಾಲ ಶಿಕ್ಷಣವನ್ನು  ಪೊಲೀಸ್ ಪಬ್ಲಿಕ್ ಸ್ಕೂಲ್ ನಲ್ಲಿ ಮುಗಿಸಿದೆ .ನಮ್ಮ ಶಾಲೆಯಲ್ಲಿ ಕೇವಲ ಪುಸ್ತಕದ ಜ್ಞಾನವಲದೆ ಪ್ರಾಪಂಚಿಕ ಜ್ಞಾನ ಹಾಗು ನಿಜ ಬದುಕಿನಲ್ಲಿ ಬೇಕಾಗುವ ವಿದ್ಯೆಯನ್ನು ನಾ ಕಲತೆ. ನನ್ನ ಬಾಲ್ಯದ ದಿನಗಳಲ್ಲಿ ನನ್ನ ಗೆಳೆಯರೊಂದಿಗೆ ಬೆರತ ಕ್ಷಣ, ಅವರೊಂದಿಗೆ ಆಟಾವಾಡಿದ ಕ್ಷಣಗಳೆಲ್ಲ ನೆನೆದುಕೊಂಡರೆ ಮುಖದಲ್ಲಿ ನಗು ಮೂಡಿಬರುತ್ತದೆ.


ಶಾಲೆಯಲ್ಲಿ ನಾನೊಬ್ಬ  ಎಸ್‌.ಪಿ.ಸಿ (ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ) ಎಂಬ ಯೋಜನೆಯಲ್ಲಿ ನಾನೊಬ್ಬ.ಪ್ರತಿ ಶನಿವಾರ ಖಾಕಿ ಬಟ್ಟೆಯನ್ನು ದರಿಸಿದರೆ ಅದೇನೋ ಒಂದು ರೀತಿಯ ಸಂತೋಷ, ಹೆಮ್ಮೆ . ಇನ್ನಿತರ ವಿದ್ಯಾಥಿ೯ಗಳ ನಡುವೆ ಖಾಕಿಯನ್ನು ದರಿಸಿ ನಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಅದೇನೋ ಒಂದು ರೀತಿಯ ಹೆಮ್ಮೆ ಹಾಗು ಅನ್ಯರ ನಡುವೆ ವಿಬ್ಬಿನ್ನವಾದ ಅನುಭವ. ಶಾಲೆಯ ಶಿಕ್ಷರೊಂದಿಗೆ ಇದ್ದಂತಹ ಬಾಂಧವ್ಯ ಹಾಗು  ಗೆಳೆಯರೊಂದಿಗೆ ಮಾಡಿದ ತುಂಟತನ ಇವೆಲ್ಲ  ಮನದಲ್ಲಿ ಒಂದು ರೀತಿಯ ಸಂತೋಷ ತರುತ್ತದೆ.

ಇವೆಲ್ಲದರ ನಡುವೆ ಹತ್ತನೆಯ ತರಗತಿಗೆ ಬಂದೆವು ಒದಿನ ಕಡೆಗೆ ಗಮನಹರಿಸುತ್ತ ಆಟವಾಡುವುದನ್ನು ಮರೆತವು.ಪರಿಕ್ಷೆಯು ಮುಗಿದಿತ್ತು ಕೊರೋನ ಎಂಬ ಮಹಾಮಾರಿ ನಮ್ಮೆಲರನ್ನು ಆವರಿಸಿತು .

ನನ್ನ ಮುಂದಿನ ಶಿಕ್ಷಣಕ್ಕಾಗಿ ನಾನು  ಸೇಂಟ್ ಜೋಸೆಫ್ಸ್ ಪ್ರಿ-ಯೂನಿವರ್ಸಿಟಿ ಕಾಲೇಜಿಗೆ ಸೇರದೆನು . ಹೊಸ ವಾತವರಣ , ನಲ್ಮೆಯ ಗೆಳೆಯರು .ನನ್ನ ಎರಡು ವರ್ಷದ ಶಿಕ್ಷಣ ಲ್ಯಪ್ ಟಾಪ್ ಎಂಬ ಡಬ್ಬದ್ದ ಮುಂದೆ ಕಳೆದೆನು.  ಮನೆಯ ನಾಲ್ಕು ಗೋಡೆ ಕಾಲೇಜ್ ಆಗಿತು ಲ್ಯ ಪ್ಟಾ ಟಾ ಪ್ ಶಿಕ್ಷಕರಾಗಿ ಪರಿವರ್ತನೆಗೊಂಡಿತ್ತು. ಇವೆಲ್ಲದರ ನಡುವೆ ನಡೆದಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಆಸಕ್ತಿ ತೊಡಗಿಸಿಕಂಡು ಆ ಸ್ಪರ್ಧೆಯಲ್ಲಿ ಗೆದ್ದು ನನ್ನ ಆಸಕ್ತಿ ಇನ್ನೂಂದರಲ್ಲಿ ಇರುವುದ್ನು ಗುರುತಿಸಿದೆ.

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಬಾಗಿಯಾಗ ನಾನು ಕಲಿತ ವಿಷಯ ಬಹಳ .

ಕೆಲವು ಕಯ೯ಕ್ರಮಗಳಲ್ಲಿ ಭಾಗವಹಿಸುತ್ತಾ ಸೂಲುತ್ತ , ಇನ್ನೂ ಮ್ಮೆ ಗೆಲ್ಲುತ್ತಾ ಗೆಳೆಯರೊಂದಿಗೆ ಆಟವಾಡುತ್ತಾ ಪಾಠ ಕಲೆತೆವು.

" ಪ್ರತಿಯೊಂದು ಸೋಲು ಒಂದು ಪಾಠ  ಕಲಿಸುತ್ತದೆ ಪ್ರತಿಯೊಂದು ಪಾಠ ವ್ಯಕ್ತಿಯನ್ನು ಬದಲಿಸುತ್ತದೆ"

                                  --ಎ.ಪಿ.ಜೆ ಅಬ್ದುಲ್ ಕಲಾಂ


ನಮ್ಮ ಕಾಲೆಜಿನಲ್ಲಿ ಕನ್ನಡ ಹಾಗೂ ಅದಕ್ಕೆ ಸಂಬಂದಿಸಿದಂತಹ ಕಾರ್ಯಕ್ರಮಗಳು ಬಹು ಹೆಚ್ಚು, ಇವೆಲ್ಲ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಕಲೆತ ಪಾಠ ಕೇವಲ ತ್ಕಾಲಿಕ ವಲ್ಲದೆ ಜೀವನ ಪರಿಯಂತ ಇರಬೇಕಾದಂತ ಗುಣ .ಉದಾಹರಣೆಗೆ ನಮ್ಮ ಕಾಲೇಜಿನಲ್ಲಿ ನಡೆದ ನೃತ್ಯದ ಸ್ಪರ್ಧೆಗೆ ನನಗೆ ನಾಯಕತ್ವ ನೀಡಿದ ನಮ್ಮ ಕನ್ನಡದ ಶಿಕ್ಷಕರು ನನ್ನಿದ ತಪ್ಪಾಗದಂತೆ ನೋಡಿಕೊಳ್ಳಲ್ಲು ಆದೇಶಿಸಿದ್ದರು .ನನ್ನ ಮೇಲಿ ಇದ್ದ ಜವಬ್ದಾರಿ ಹೆಚ್ಚು, ಈ ಕಾಯ೯ಕ್ರಮ ನಡೆಸುವ ಮೂಲಕ ನಾನು ಕಲೆತ ವಿಷಯ ವೇನೆಂದರೆ ಒಬ್ಬ ನಾಯಕನಾದವನು ಕೇವಲ ತನ್ನದೇ ಮಾತ್ತು ನಡೆಯಬೇಕು ಎನ್ನದೆ ತನ್ನ ಸಹಪಾಟಿಗಳ ಮಾತನ್ನು ತಾಳ್ಮೆ ಇಂದ ಕೇಳಬೇಕು ಆಗ ಮಾತ್ರ ಯಾವುದೇ ಕೆಲಸ ಯಶಸ್ವಿಯಾಗುವುದು .ಇವೆಲ್ಲದರ ನಡುವೆ ನನ್ನ ಹನ್ನೊಂದನೆಯ ತರಗತಿ ಯಾವಾಗ ಮುಗಿದಿತೋ ತಿಳಿದೆ ಇಲ್ಲಿ .


ಹನ್ನೆರಡನೆಯ ತರಗಳಿಗೆ ಕಾಳಿಟ್ಟೆವು ಆಫ್ಲೈನ್ ಕ್ಲಾಸ್ ಪ್ರಾರಂಬವಾಗಿತ್ತು ಇದರೊಂದಿಗೆ ಹೊಸ ಗೆಳೆಯರ ಬಳಗ ಹುಟ್ಟಿ ನಮ್ಮಡೊನೆ ಇದ್ದ ಗೆಳತನ, ಕೆಲವೊಮ್ಮೆ ಕೊಳಿ ಜಗಳ ಮನಸ್ಥಾಪಗಳು ಇವೆಲ್ಲ ನಮ್ಮ ಬಾಂಡವ್ಯವನ್ನು ಇನ್ನು ಹೆಚ್ಚಾಗಿ ಸುತ್ತಿತ್ತು .ಇವೆಲ್ಲದರ ನಡುವೆ ನಮ್ಮ ವಾರ್ಷಿಕ ಪರೀಕ್ಷೆ ಮುಗಿದಿತ್ತು .

ಏಳು ತಿಂಗಳು ನಂತರ ಕ್ರೈಸ್ಟ್ ಯೂನಿವರ್ಸಿಟಿಗೆ ನನ್ನ ಮುಂದಿನ ವಿಧ್ಯಾಬ್ಯಸ ಪುಣ೯ಗೂಳಿಸಲು ಸೆರಿದೆನು. ಹೊಸ ವಾತವರಣ ಅದೇಷ್ಟೋ ವಿದ್ಯಾರ್ಥಗಳು ಬೇರೆ ರಾಜ್ಯ , ದೇಶದವರು ಇವರೆಲ್ಲರನ್ನು ನೋಡಿದರೆ  ನನಗೆ ಅನಿಸೋದು ಒಂದೆ ನಮ್ಮ ಭಾರತ ಅದೆಷ್ಟು ಸಂಸ್ಕೃತಿ, ಕಲೆಗೆ, ಮನೆಯಾಗಿದೆ.

ನನು ಮೊದಲನೆಯ ದಿನ ಕಾಲೇಜಿಗೆ ಲೇಟ್ ಹೊಸ ಮುಖಗಳು ನಡುವೆ ನಾನೊಬ್ಬ. ಕೆಲವು ದಿನಗಳು ಕಳೆದಿತು ಗಳೆಯರಾದರು, ಗೆಳೆಯರೊಂಗಿದೆ ಹೊರಗೆ ಹೋಗುವುದು , ಅವರೋಡನೆ ಮಾತಾಡುವುದು ಕನ್ನಡ ಬರದವರಿಗೆ ಕನ್ನಡ ಹೇಳಿಕೊಡುವುದು ಅವರ ಭಾಷೆಯನ್ನು ನಾವು ಕಲೆಯುವುದು ಊಟದ ಸಮಯದಲ್ಲಿ ಅವರೊಡನೆ ಆಡುವುದು ಇವೆಲ್ಲ ಒಂದು ಒಳ್ಳೆಯ ನೆನಪಾಗಿ ಉಳಿದಿಕೊಳುತ್ತದೆ. ಕೊನೆಗೆ ನಮ್ಮ ಕಾಲೇಜಿನಲ್ಲಿ ನಡೆದ ಜನಾಂಗೀಯ ದಿನ ಒಂದು ಮರೆಯಲಾಗದ ದಿನ . ಆ ದಿನದಂದು ಗೆಳೆಯರೊಂದಿಗೆ ನಮ್ಮ ಕರ್ನಾಟಕದ ಸಂಸ್ಕೃತಿ , ನೃತ್ಯ, ಗಾಯನವನ್ನು ಪ್ರರ್ಧಶಿಸಿದೆವು.

ನನಗೆ ನನ್ನ ಮೊದಲ ಭಾಷಣ ನೀಡಿದಾಗ ನನ್ನಲ್ಲಿದಂತಹ ಹೆದರಿಕೆ ,ಹಿಂಜರಿಕೆ ನೆನಪಿಗೆ ಬರುತ್ತದ್ದೆ . ಆಗ ನಮ್ಮ  ಶಾಲೆಯ ಪ್ರಾಂಶುಪಾಲರು ಹೇಳಿದ ಮಾತು ಇನ್ನೂ ನನ್ನ ಮನಸಿನಲ್ಲಿ ಹಾಗೆ ಇದೆ

"ಹೆದರಿಕೆ ಇದ್ದಲ್ಲಿ ಮನುಷ್ಯ ಏನನ್ನು ಸಾದಿಸುವುದಿಲ್ಲ"

ಕೊನೆಗೆ ನೆಲ್ಸನ್ ಮಂಡೇಲಾರವರು ಹೇಳಿರುವ ಮಾತಿನೊಂದ್ದಿಗೆ ಮುಕ್ತಾಯಗೊಳಿಸುತ್ತಿದ್ದೇನೆ ...

"ಧೈರ್ಯವು ಭಯದ ಅನುಪಸ್ಥಿತಿಯಲ್ಲ, ಆದರೆ ಅದರ ಮೇಲಿನ ವಿಜಯ ಎಂದು ನಾನು ಕಲಿತಿದ್ದೇನೆ. ಧೈರ್ಯಶಾಲಿ ಎಂದರೆ ಭಯಪಡದವನಲ್ಲ, ಆದರೆ ಭಯವನ್ನು ಜಯಿಸುವವನು."

                                       --ನೆಲ್ಸನ್ ಮಂಡೇಲಾ