ಸದಸ್ಯ:Rathi.mt/sandbox
ಪಟ್ಟೋಲೆ ಪಳಮೆ ಕೊಡವರ ಪಾಲಿಗೆ ಅಮೂಲ್ಯವಾದ ಗ್ರಂಥ.ಈ ಹೊತ್ತಿಗೆಯಲ್ಲಿ ಕೊಡವ ಜನಾಂಗದ ಆಚಾರ,ವಿಚಾರ, ಆಚರಣೆ,ಪದ್ದತಿ ಹಬ್ಬ ಹರಿದಿನಗಳ ಸಂಪೂರ್ಣಾ ವಿವರವಿದೆ.ಕೊಡವರ ಕೈಲ್ಪೊಳ್ದ್, ಕಾವೇರಿ ಸಂಕ್ರಮಣ,ಸುಗ್ಗಿ ಹಬ್ಬವಾದ ಹುತ್ತರಿ ಹಬ್ಬಗಳ ಬಗ್ಗೆ ಸುದೀರ್ಘ ವಿವರವಿದೆ.ಕೊಡವರ ಹುಟ್ಟೂ, ಸಾವು,ಮದುವೆ ಆಚರಣೆಗಳ ಬಗ್ಗೆ ತಿಳಿದುಕೊಳ್ಳಬಹುದು.ಕೊಡವರು ಪ್ರತೀ ಆಚರಣೆಯಲ್ಲಿ ಹಾಡುವ ಬಾಳೋಪಾಟ್,ಸತ್ತಾಗ ಹಾಡುವ ಪೊಲಚಿಪಾಟ್,ಹುತ್ತರಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಾಡುವ ಮನೆಪಾಟ್ ಕೊಡವ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತದೆ.ಪೂರ್ವದಲ್ಲಿ ಕೊಡಗನ್ನು ನಾಡುಗಳಾಗಿ ವಿಂಗಡಿಸಲಾಗಿತ್ತು.ಒಟ್ಟು ೩೫ ನಾಡುಗಳಿದ್ದವೆಂದೂ ಆ ೩೫ ನಾಡುಗಳಿಗೆ ತಕ್ಕ( ಮುಖ್ಯಸ್ಥ)ರಿದ್ದರೆಂಬ ವಿವರವನ್ನು "ದೇಶಕಟ್ಟ್ ಪಾಟ್"ನಲ್ಲಿ ಕಟ್ಟಿ ಹಾಡಲಾಗಿದೆ.ಕೊಡಗನ್ನು ಆಳಿದ ಕೊಡಗು ರಾಜರೆಂದೇ ಹೆಸರಾದ ಚಿಕ್ಕವೀರಪ್ಪ,ಮುದ್ದುರಾಜ,ದೇವಪ್ಪರಾಜ,ಲಿಂಗರಾಜ,ದೊಡ್ಡವೀರರಾಜೇಂದ್ರ ಒಡೆಯ,ಲಿಂಗರಾಜೇಂದ್ರ ಒಡೆಯ ಮತ್ತು ಕೊಡಗಿನ ಕೊನೆಯ ಅರಸ ಚಿಕರಾಜೇಂದ್ರ ಆಳ್ವಿಕೆಯ ಸಮಯದಲ್ಲಿ ಕೊಡಗು ಅನುಭವಿಸಿದ ಕೋಟಲೆಗಳ ಚರಿತ್ರೆಯನ್ನು ತಿಳಿಯಬಹುದು. ಕೊಡವರಲ್ಲಿ೧ ಕನ್ನಿಮಂಗಲ(ಕನ್ನಿಮದುವೆ),೨ಕೂಡಾವಳಿ ಮಂಗಲ(ಕೂಡಾವಳಿ ಮದುವೆ-ಒಂದನೇ ತರದ ಕೂಡಾವಳಿ,ಎರಡನೇ ತರದ ಕೂಡಾವಳಿ,ಮೂರನೇ ತರದ ಕೂಡಾವಳಿ)೩ ಕಳ್ಳ ಬಸುರಾದರೆ ಹೆತ್ತ ಮೇಲೆ ಮದುವೆಯಾಗುವುದು,೪ ಒಕ್ಕಪರಜೆ" ಅಂದರೆ ಒಂದು ಮನೆತನವು ನಷ್ಟಾವಾಗಿ ಒಂದು ಹೆಣ್ಣು ಮಾತ್ರವಿದ್ದರೆ, ಆ ಹೆಣ್ಣನ್ನು ಅವಳ ಮನೆಯಲ್ಲೇ ಮದುವೆಯಾದ ಗಂಡು ಆವಳ ಮನೆತನವನ್ನು ಬೆಳೆಸಿಕೊಂಡು ಹೋಗುವುದು.ಈ ಮದುವೆ ಪದ್ದತಿಯನ್ನು" ಕುತ್ತಿಕ್ ನಿಪ್ಪದ್" ಎಂದು ಕೂಡ ಹೇಳುತ್ತಾರೆ.೫ "ಪಚ್ಚಡಕ್ ನಡಪದ್"-ಮಕ್ಕ ಪರಜೆ ಅಂದರೆ ಒಂದು ಮನೆತನದಲ್ಲಿ ಗಂಡು ಮಕ್ಕಳಿಲ್ಲದೆ ಒಂದು ಹೆಣ್ಣು ಮಾತ್ರವಿದ್ದಾಗ ವಂಶೋದ್ದಾರಕ್ಕಾಗಿ ಆ ಹೆಣ್ಣನ್ನು ಮದುವೆಯಾದ ಗಂಡೇ ಅವಳ ಮನೆಗೆ ಆಸರೆಯಾಗಿ ನಿಲ್ಲುವುದು.೬." ಬೆಂದು ಪರಜೆ' ಇದು ಇನ್ನೊಂದು ರೀತಿಯ ಮದುವೆ ಪದ್ದತಿ. ಅದೇನೆಂದರೆ ಒಬ್ಬ ವ್ಯಕ್ತಿ ಒಬ್ಬಳು ಕನ್ಯೆಯೊಂದಿಗೆ ಕೂಡ್ಯಾಡಿ ಅವಳು ಬಸುರಿಯಾದರೆ ಅಥವಾ ಮಗುವಿಗೆ ಜನ್ಮ ನೀಡಿದರೆ ಅವಳನ್ನು ವರಿಸಬೇಕೆಂದು ಕೇಳಿಕೊಂಡರೆ ಊರಿನವರಿಗೆಲ್ಲ ಊಟ ಕೊಟ್ಟು ನಂತರ ಊರ ಸಮ್ಮುಖದಲ್ಲಿ ಆ ಕನ್ಯೆ ಹಾಗು ಹುಟ್ಟಿದ ಮಗುವಿಗೆ ಸಂಬಂಧ ಕಲ್ಪಿಸಿಕೊಡಬೇಕು.೭. " ನರಿ ಮಂಗಲ" -ಹುಲಿಯನ್ನು ಕೊಂದ ವೀರನಿಗೆ ಊರ ಸಮ್ಮುಖದಲ್ಲಿ ಮದುವೆ ಮಾದುವುದು.ಈ ಆಚರಣೆ ಕನ್ನಿ ಮದುವೆಯಂತೆ ಇರುತ್ತದೆ.ಈ ಸಂಧರ್ಭದಲ್ಲಿ ಕೊಂದ ಹುಲಿಯಾಗಲಿ, ಅದರ ಚರ್ಮವಾಗಲಿ ಇಲ್ಲವೇ ಆದರ ಬಾಲವಾಗಲಿ ಇರಬೇಕು.
ಆಧಾರ
ಬದಲಾಯಿಸಿ- ↑ ಪಟ್ಟೋಲೆ ಪಳಮೆ, ನಡಿಕೇರಿಯಂಡ ಚಿನ್ನಪ್ಪ, ಕನ್ನಡ ಪುಸ್ತಕ ಪ್ರಾಧಿಕಾರ, ಚಾಮರಾಜ ಪೇಟೆ, ೧೯೯೫