ಸದಸ್ಯ:Ramya karnan/ನನ್ನ ಪ್ರಯೋಗಪುಟ
ಆಧಾರಗಳು |
---|
ಆಧಾರಗಳು
ಬದಲಾಯಿಸಿಆಧಾರದ ಅರ್ಥ
ಬದಲಾಯಿಸಿ೧೮೮೨ನೇ ಭಾರತೀಯ ಸ್ವತ್ತು ವರ್ಗವಣೆ ಶಾಸನದ ೫೮ರಿಂದ ೧೦೪ನೇ ಪ್ರಕರಣಗಳು ಸ್ಥಿರ ಸ್ವತ್ತುಗಳ ಆಧಾರಕ್ಕೆ ಸಂಬಂಧಪಟ್ಟ ನ್ಯಾಯವನ್ನು ಒಳಗೋಡಿವೆ. "ಆಧಾರ ಹಣದ ಹೊಣೆಗಾರಿಕೆಯನ್ನು ಹುಟ್ಟುಸುವಂಥೆ ಒಂದು ವ್ಯವಹಾರದ ಆಚರನಣೆಯ ಅಥವಾ,ಇಂದಿನ ಅಥವಾ ಮುಂದಿನ ಒಂದು ಸಾಲದ ಅಥವಾ ಸಾಲ ರೊಪಾವಾಗಿ ಕೊಟ್ಟಿರುವ ಅಥವಾ ಕೊಡಲಿರುವ ಒಂದು ಮುಂಗಡ ಮೊಬಲಗಿನ ಹಣಪಾವತಿ ಖಾತ್ರಿಗೋಸ್ಕರ,ಒಂದು ನಿರ್ದಿಷ್ಟ ಸ್ಥಿರಸ್ವತ್ತಿ ನಲ್ಲಿನ ಹಿತ ಅಥವಾ ಹಕ್ಕು ವರ್ಗಾವಣೆಯೇ"
ಆಧಾರದ ಆವಶ್ಯಕ ಅಂಶಗಳು
ಬದಲಾಯಿಸಿಒಂದು ಸ್ಥಿರಸ್ವತ್ತಿನಲ್ಲಿನ ಹಿತ ಅಥವಾ ಹಕ್ಕುವರ್ಗಾವಣೆ,ಎರಡು ಹಿತ ಅಥವಾ ಹಕ್ಕು ವರ್ಗಾವಣೆಯಾಗಿರುವ ಸ್ವತ್ತು ಗುರುತಿಸಲರ್ಹವಾದ ಒಂದು ನಿರ್ದಿಷ್ಟ ಸ್ವತ್ತಾಗಿರುವುದು ಮುತ್ತು ಮೊರನೆಯದು ಸಾಲದ ಹಣ ಪಾವತಿ ಖಾತ್ರಿಗೋಸ್ಕರ ಆ ಸ್ಥಿರಸ್ವತ್ತಿನಲ್ಲಿನ ಹಿತ ಅಥವಾ ಹಕ್ಕಿನ ವರ್ಗಾವಣೆಯನ್ನು ಮಾಡಲಾಗಿರುವುದು.ಆಧಾರದ ಒಂದು ಆಪ್ಪಂದದಲ್ಲಿ ವರ್ಗಕೊಟ್ಟವನನ್ನು ಆಧಾತ್ರ ಆಥವಾ ಆಥಾರಮಾಡಿದವನು ವರ್ಗಪಡೆದವನನ್ನು ಆಧಿಗ್ರಾಹಕ ಆಧಾರಮಾಡಿಕೊಂಡವನು,ಹಣ ಪಾವತಿ ಖಾತ್ರಿಯಾಗಿರುವ ಆಸಲು ಮುತ್ತು ಬಡ್ಡಿಯನ್ನು ಆಧಾರವೂ ಒಂದು ಒಪ್ಪಂದವಾಗಿರುವುದರಿಂದ,ಒಂದು ನ್ಯಾಯಸಮ್ಮತ ಒಪ್ಪಂದಕ್ಕಿರ ಬೇಕಾದ ಅವಶ್ಯಕ ಅಂಶಗಳನೆಲ್ಲಾ,ಅಂದರೆ ಆಧಾರಕೊಟ್ಟವನ ಒಪ್ಪಂದ ಸಾಮರ್ಥ್ಯ,ದೋಷರಹಿತ ಸಮ್ಮತಿ,ಪ್ರತಿಫಲ ಆಧಾರಗುರಿಯ ನ್ಯಾಯಪರತೆ,ಇತ್ಯಾದಿಗಳನ್ನೊಳಗೊಂಡಿರಬೇಕು.
ಆಧಾರದ ಹಕ್ಕುದಾರಿ ದಾಖಲೆಗಳ
ಬದಲಾಯಿಸಿ೧೦೦ ರೂಪಾಯಿಗಳು ಅಥವಾ ಮೇಲ್ಪಟ್ಟ ಅಸಲು ಹಣ ಖಾತ್ರಿ ಯಾಗಿರುವ ಒಂದು ಆಧಾರವು ಅದು ಹಕ್ಕುದಾರಿ ದಾಖಲೆಗಳ ಠೇವಣಿಯಿಂದಾದ ಆಧಾರ ಅಗಿರುವ ವಿನಾ ಆಧಾರಕೊಟ್ಟವನ ಸಹಿ ಮತ್ತು ಕನಿಶ್ಟಪಕ್ಷ ಇಬ್ಬರ ಸಾಕ್ಷ್ಯವನ್ನು ಹೊಂದಿರುವ ರಿಜಿಸ್ಟರ್ಡ್ ಪತ್ರದಿಂದಲೇ ಆಗಿರಬೇಕು.ಆದ್ದರಿಂದ ಆ ಆಧಾರ ಒಂದನ್ನು ಬಿಟ್ಟು ಉಳಿದ ಆಧಾರಗಳಲ್ಲಿ ಆಸಲು ಹಣವು ೧೦೦ ರೂಪಾಯಿಗಳು ಆಥವಾ ಅದಕ್ಕೂ ಹೆಚ್ಚಿಗೆ ಇದ್ದರೆ ಪತ್ರದ ರಿಜಿಸ್ಟ್ರೇಷನ್ ಆಧಾರಮಾದಿದವನ ಸಹಿ ಮುತ್ತು ಇಬ್ಬರ ಸಾಕ್ಷ್ಯವು ಅಗತ್ಯವಾಗಿರುತ್ತದೆ.ಅಸಲು ಹಣವು ೧೦೦ ರೊಪಾಯಿಗಳಿಗಿಂತ ಕಡಿಮೆಯಿದ್ದರೆ ಕಕ್ಷಿಗಳು ಮೇಲ್ಕಂಡ ಕ್ರಮವನ್ನನುಸರಿಸಿ ಆಧಾರಮಾಡಿ ಕೊಳ್ಳಬಹುದು ಅಥವಾ ಅದು ಒಂದು ಸರಳಾಧಾರ ಆಗಿರುವ ವಿನಾ ಆಧಾರಮಾಡಿಕೊಂಡವನಿಗೆ ಸ್ವತ್ತು ನಶಕೊಡುವುದರ ಮೂಲಕ ಆಧಾರಮಾಡಿಕೊಳ್ಳಬಹುದು.ಆಸಲು ಹಣವು ಎಷ್ಟೇ ಇರಲಿ ಒಂದು ಸರಳಾಧಾರವನ್ನು ಮಾಡಿಕೊಳ್ಳಲು ಆಧಾರಮಾಡಿದವನ ಸಹಿ ಮತ್ತು ಇಬ್ಬರ ಸಾಕ್ಷ್ಯ ಹೊಂದಿರುವ ರಿಜಿಸ್ಟರ್ಡ್ ಪತ್ರದಿಂದಲೇ ಸಾಧ್ಯ.
ಆಧಾರಗಳು ವಿಧಗಳು
ಬದಲಾಯಿಸಿ೧.ಸರಳಾಧಾರ ಅಥವಾ ತೋರಾಧಾರ ೨.ಕ್ರಯ ಷರತ್ತಿನ ಆಧಾರ ೩.ಭೋಗ್ಯಾಧಾರ ೪.ಇಂಗ್ಲಿಷ್ ಆಧಾರ ೫.ಧರ್ಮಸಮ್ಮತ ಆಧಾರ ಅಥವಾ ಹಕ್ಕುದಾರಿ ದಾಖಲೆಗಳ ಟೇವಣಿಯಿಂದಾದ ಆಧಾರ ೬.ಅಸಂಗತಿ ಅಥವಾ ಅಸಾಧಾರಣ ಆಧಾರ. ೧.ಸರಳಾಧಾರ ಅಥವಾ ತೋರಾಧಾರ:ಆಥಾರಮಡಿರುವ ಸ್ವತ್ತು ವಶಕೊಡದೆ ಆಧಾರಮಾಡಿದವನು ಆಧಾರ ಮೊತ್ತಕೊಡಲು ವೈಯಕ್ತಿಕ ಜವಾಬ್ದಾರಿಯನ್ನು ಹೊತ್ತು ತಾನು ಒಪ್ಪಂದದನುಸಾರ ಸಾಲ ಹಿಂತಿರುಗಿಸಲು ತಪ್ಪಿದರೆ ಆಧಾರಮಾಡಿ ಕೊಂಡವನು ನ್ಯಾಯಾಲಯದ ಮೂಲಕ ಸ್ವತ್ತು ಹರಾಜು ಕ್ರಯಮಾಡಿಸಿ ಸಾಲ ತೀರುವಳಿ ಮಾಡಿಕೊಳ್ಳುವ ಹಕ್ಕು ಇದೆಯಂದು ಅವನು ಸ್ವಷ್ಟ ಅಥವಾ ಸೂಚ್ಯವಾಗಿ ಒಪ್ಪಿರುವಾಗ ಆ ವ್ಯವಹಾರವನ್ನು ಸರಳಾಧಾರ ಅಥವಾ ತೋರಾಧಾರ ಎಂದು ಕರೆಯತ್ತಾರೆ.ಆಧಾರಮಾಡಿದವನು ವೈಯಕ್ತಿಕ ಜವಾಬ್ದಾರಿಯನ್ನು ಹೊತ್ತಿರುತ್ತಾನೆ.ಸ್ವತ್ತಿನ ಸ್ವಾಧೀನವು ಒಬ್ಬನಿಂದ ಇನ್ನೊಬ್ಬನಿಗೆ ಸಾಗದೆ ಆಧಾರಮಾಡಿವದವನಲ್ಲೇ ಇರುತ್ತದೆ.ಸಾಲ ಹಿಂತಿರುಗಿಸಲು ತಪ್ಪಿದರೆ ಆಧಾರಮಾಡಿಕೊಡವನು ನ್ಯಾಯಾಲಯದ ಮೂಲಕ ಸ್ವತ್ತು ಹರಜು ಕ್ರಯಮಾಡಿಸಿ ಸಾಲ ತೀರುವಳಿ ಮಾಡಿಕೊಳ್ಳಬಹುದೆಂದು ಆಧಾರಮಾಡಿದವನು ಒಪ್ಪಿರುತ್ತಾನೆ.ಆದರೆ ಆಧಾರ ಮಾಡಿಕೊಂಡವನು ಸ್ವತ್ತನ್ನು ನ್ಯಾಯಾಲಯದ ಹೊರಗೆ ಅಂದರೆ ಖಾಸಗಿಯಾಗಿ ಹರಾಗಿಕ್ರಯ ಮಾಡಿಸಲಾರ ಅಥವಾ ಋಣಮೂಕ್ತಯ ಹಕ್ಕನ್ನು ಮುನ್ರದ್ದು ಪಡಿಸಲಾರ ಅಸಲು ಹಣವಿ ಎಷ್ಟೇ ಇರಲಿ ಆಧಾರಮಾಡಿದವನ ಸಹಿ ಮತ್ತು ಕನಿಷ್ಠ ಪಕ್ಷ ಇಬರ ಸಾಕ್ಷ್ಯ ಹೊಂದಿರುವ ರಿಜಿಸ್ಟರ್ಡ್ ಪತ್ರದಿಂದಲೇ ಇದನ್ನು ಮಾಡಿಕೊಳ್ಳಲು ಸಾಧ್ಯಾ.
೨.ಕ್ರಯ ಷರತ್ತಿನ:ನಿಗದಿಯಾದ ದಿನ ಆಧಾರಮೊತ್ತವನ್ನು ಕೊಡಲು ತಪ್ಪಿದರೆ ಮಾಡಿದ ಕ್ರಯವು ಪರಿಪೂರ್ಣವಸಗುವುದು ಅಥವಾ ಆ ಮೊತ್ತವನ್ನು ಆದಿನ ಕೊಟ್ಟರೆ ಮಾಡಿದ ಕ್ರಯವು ಅನೂರ್ಜಿತವಾಗುವುದು ಅಥವಾ ಆ ಮೊತ್ತವನ್ನು ಆ ದಿನ ಕೊಟ್ಟರೆ ಕೊಂಡ ವನು ಮಾರಿದವನಿಗೆ ಸ್ವತ್ತನ್ನು ಪುನರ್ವರ್ಗಾಯಿಸಬೇಕು ಎಂಬ ಷರತ್ತಿನಮೇಲೆ ಆಧಾರಮಾಡಿದವನು ಆಧಾರಸ್ವತ್ತನು ತೋರಿಕೆಯಾಗಿ ಕ್ರಯಮಾಡಿರುವಾಗ ಆ ವ್ಯವಹರವನ್ನು ಕ್ರಯ ಷರತ್ತಿನ ಆಧಾರವೆಂದು ಕರೆಯುತರೆ. ಈ ಆಧಾರವನ್ನು ಒಂದು ಕ್ರಯ ರೊಪದಲಿ ಮಾದಿಕೊಳ್ಳಲಾಗುತದೆ.ಆಧಾರಮಾಡಿದವನ್ನು ಆಧಾರಮಾಡಿಕೊಂಡವನಿಗೆ ತೋರಿಕೆಯಾಗಿ ಕ್ರಯ ಮಾಡುತ್ತಾನೆ.ಆಧಾರಮೊತ್ತವನ್ನು ಹಿಂತಿರುಗಿಸಲು ತಪ್ಪಿದರೆ ಕ್ರಯ ಪರಿಪೂರ್ಣವಾಗುವುದೆಂದು ಅಥವಾ ಆಧಾರಮೊತ್ತವನ್ನು ವಾಯಿದೆಗೆ ಸರಿಯಾಗಿ ಪಾವತಿಮಾಡಿದರೆ ಆಧಾರಮಾಡಿಕೊಂಡವನ್ನು ಪುನರ್ವರ್ಗಾವಣೆ ಮಾಡಬೇಕೆಂದು ಅಥವಾ ಕ್ರಯವು ಆನೂರ್ಜಿತವಾಗುವುದೆಂದೂ ಒಪ್ಪುತಾನೆ.ಈ ಒಂದು ಕ್ರಯಷರತ್ತಿನ ಆಧಾರಕ್ಕೂ ಮತ್ತು ಪುನರ್ಕೊಳ್ಳಿಕೆಯ ಷರತ್ತು ಜೊತೆಗೂಡಿದ ಕ್ರಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಬೇಕು.
೩.ಭೋಗ್ಯಾಧಾರ:ಆಧಾರ ಮಾಡಿದವನು ಆಧಾರ ಮಾಡಿಕೊಂಡವನಿಗೆ ಆಧಾರಸ್ವತ್ತಿನ ಸ್ವಾಧೀನ ವಹಿಸಿಕೊಟ್ಟು ಆಥವಾ ವಹಿಸಿಕೊಡುವುದಾಗಿ ಸ್ಪಷ್ಟ ಆಥವಾ ಸೂಚ್ಯ ವಾಗ್ದಾನಮಾಡಿ ಮತ್ತು ಆಧಾರಮೊತ್ತ ತೀರುವಳಿ ಆಗುವವರೆಗೂ ಆ ಸ್ವಾದೀನವನ್ನಿಟ್ಟುಕೊಂಡು ಆದರಿಂದ ಬರುವ ಆದಾಯವನ್ನು ಸ್ವೀಕರಿಸಿ ಆ ಆದಾಯವನ್ನು ಬಡ್ಡಿ ತೀರುವಳಿಗೆ ಮತ್ತು ಸ್ವಲ್ಪ ಭಾಗ ಆಧಾರ ಮೊತ್ತ ತೀರುವಳಿಗೆ ವಿನಿಯೋಗಿಸಲು ಅಧಿಕಾರ ಕೊಟ್ಟಿರುವಾಗ ಅಂತಹ ಆಧಾರವನ್ನು ಭೋಗ್ಯಾಧಾರ ಎಂದು ಕರೆಯುತರೆ.ವ್ಯಯಕ್ಕಿಕ ಜವಾಬ್ದಾರಿಯನ್ನೂ ಒಳಗೊಂಡಿದೆ.ಇದು ಕತ್ವ ವರ್ಗಾವಣೆಯನ್ನೂ ಮುತ್ತು ಆಧಾರಮಾಡಿದವನ.
೪.ಇಂಗ್ಲಿಷ್ ಆಧಾರ:ಆಧಾರ ಮಾದಿದವನು ಗೊತ್ತಾದ ಒಂದು ದಿನ ಆಧಾರಮೊತ್ತವನ್ನು ವಾಪಸು ಮಾಡುವುದಾಗಿ ವಾಗ್ದಾನಮಾಡಿದ್ದು ಮುತ್ತು ಒಪ್ಪಿದಂತೆ ಆಧಾರ ಮೊತ್ತವನ್ನು ವಾಪಸು ಮಾಡಿದಾಗ ಆಧಾರಮಾಡಿಕೊಂಡವನು ಸ್ವತ್ತು ಪುನರ್ ಸ್ವತ್ತನ್ನು ಸಂಪೂರ್ಣವಾಗಿ ವರ್ಗಾಯಿಸಿದಾಗ ಅಂತಹ ವ್ಯವಹಾರವನ್ನು ಇಂಗ್ಲಿಷ್ ಆಧಾರವೆಂದು ಕರೆಯುತರೆ.ಇದು ಸ್ವತ್ತಿನಲ್ಲಿನ ಮಾಲೀ ಕತ್ವ ವರ್ಗಾವಣೆಯನೂ ಮತ್ತು ಆಧಾರಮಾಡಿದವನ ವೈಯಕ್ಕಿಕ ಜವಾಬ್ದಾರಿಯನ್ನೂ ಒಳಗೊಂದಿದೆ.ಆಧಾರಮೊತಾವನ್ನು ವಾಪಸು ಮಾಡಿದಗ ಆಧಾರಮಾಡಿದವನಿಗೆ ಸ್ವತ್ತಿನಲ್ಲಿನ ಮಾಲೀಕತ್ವವನ್ನು ಸಂಪೂರ್ನ ವರ್ಗಾವಣೆಯನ್ನು "ರೊಪದಲ್ಲಿ"ಹೋಲುತ್ತದೆ.ಅಸಲು ಹಣ್ಣವು ೧೦೦ ರೂಪಾಯಿಗಳು ಅಥವಾ ಅದಕ್ಕೂ ಹೆಚ್ಚಿಗೆ ಇದ್ದರೆ ಆಧಾರಮಾಡಿದವನ ಸಹಿ ಮತ್ತು ಇಬ್ಬರ ಸಾಕ್ಷ್ಯ ಹೊಂದಿರುವ ರಿಜಿಸ್ಟರ್ಡ್ ಪತ್ರದಿಂದಲೇ ಇದನ್ನುಮಾಡಿಕೊಳ್ಳಲು ಸಾಧ್ಯ.
೫.ಹಕ್ಕುದ್ದರಿ ದಾಖಲೆಗಳ ಠೇವಣಿಯಿಂದಾದ ಆಧಾರ ಅಥವಾ ಧರ್ಮಸಮ್ಮತ ಆಧಾರ:ಬೊಂಬಾಯಿ ಮದ್ರಾಸು ಕಲ್ಕತ್ತ ಮ್ತ್ತು ರಾಜ್ಯಸರ್ಕಾರವು ಒಂದು ಪ್ರಕಟಣೆಯಲ್ಲಿ ನಮೂದಿಸಬಹುದಾದ ಇತರ ನಗರಗಳಲ್ಲಿ ಒಬ್ಬನು ಒಂದು ಸ್ಥಿರಸ್ವತ್ತಿನ ಮೇಲೆ ಒಂದು ಅಧಾರ ಸೈಜಿಸುವ ಉದೇಶದಿಂದ ತನ್ನ ಸಾಲಿಗನಿಗೆ ಆ ಸ್ಥಿರಸ್ವತ್ತಿನ ಹಕ್ಕುದಾರಿ ದಾಖಲೆಗಳ ಠೇವಣಿಯಿಂದಾದ ಆಧಾರ ಅಥವಾ ಧರ್ಮಸಮ್ಮತ ಆಧಾರವೆಂದು ಕರೆಯುತರೆಈ ಆಧಾರದ ಅಗತ್ಯ ಅಂಶಗಳೆಂದರೆ ಖಾತರಿಯಾಗಿರುವ ಒಂದು ಸಾಲ ಹಕ್ಕುದಾರಿ ದಾಖಲೆಗಳ ಠೇವಣಿ ಆ ದಾಖಲೆಗಳು ಸಾಲಕ್ಕೋಸ್ಕಾರ ಖಾತರಿಯಾಗಿರುವಂತೆ ಮಾಡುವ ಉದ್ದೇಶ.ಬರವಣಿಗೆ ಅಥವಾ ರಿಜಿಸ್ಟ್ರೇಷನ್ನಿನ ಆವಶ್ಯಕತೆ ಇರುವುದಿಲ್ಲ.ಆಧಾರಮೊತ್ತವನ್ನು ವಾಪಸುಮಾಡಿದಿದ್ದರೆ ಆಧಾರಮಾಡಿಕೊಂಡವನು ಸ್ವತ್ತು ಹರಾಜು ಕ್ರಯಕ್ಕೋಸ್ಕರ ದಾವ ಹೂಡಬಹುದು.
೬.ಅಸಂಗತ ಅಥವಾ ಅಸಾಧಾರಣ ಆಧಾರ:ಸರಳಾಧಾರ ಕ್ರಯ ಷರತ್ತಿನ ಆಧಾರ ಭೋಗ್ಯಾಧಾರ ಇಂಗ್ಲಿಷ ಆಧಾರ ಮತ್ತು ಹಕ್ಕುದಾರಿ ದಾಖಲೆಗಳ ಠೇವಣಿಂದಾದ ಆಧಾರವಾಗಿರದ ಒಂದು ಆಧಾರವೇ ಅಸಂಗತ ಅಥವಾ ಅಸಾಧಾರಣ ಆಧಾರ. ಅಂದರೆ ಮೊದಲಿನ ಐದು ಆಧಾರಗಳಲ್ಲಿ ಯಾವುದಾದರೊಂದು ಆಧಾರವಾಗಿರದ ಆಧಾರ .ಈ ಅಸಂಗತ ಆಧಾರಗಳು ಮೊದಲಿನ ಐದು ಆಧಾರಗಳಲ್ಲಿ ಎರಡು ಅಥವಾ ಆಯಾಯ ಸ್ಥಳ ರೂಡಿಯಿಂದ ಹುಟ್ಟಬಹುದು.ಆಧಾರಮಾಡಿಕೊಂಡವನಿಗಿರುವ ಪರಿಹಾರವು ಆಯಾಯ ಆಧಾರ ದೊಳಗಿನ ವಚನಗಳನ್ನವಲಂಬಿರುತ್ತದೆ.ಓಂದು ಆಧಾರಪತ್ರವು ಅಧಾರಮೊತ್ತ ಪಾವತಿಯ ವಾಯಿದೆ ದಿನವನ್ನು ಸಾಧಾರಣವಾಗಿ ಗೊತ್ತುಪಡಿಸುತ್ತದೆ.
ಕೊನೆಯ ವಿವರನೆ
ಬದಲಾಯಿಸಿಆದರೆ ಆಧಾರ ಮಾಡಿಕೊಂಡವನು ಸ್ವತ್ತನ್ನು ನ್ಯಾಯಾಲಯದ ಹೊರಗೆ ಅಂದರೆ ಖಾಸಗಿಯಾಗಿ ಹರಾಗಿಕ್ರಯ ಮಾಡಿಸಲಾರ ಅಥವಾ ಋಣಮೂಕ್ತಯ ಹಕ್ಕನ್ನು ಮುನ್ರದ್ದು ಪಡಿಸಲಾರ ಅಸಲು ಹಣವಿ ಎಷ್ಟೇ ಇರಲಿ ಆಧಾರಮಾಡಿದವನ ಸಹಿ ಮತ್ತು ಕನಿಷ್ಠ ಪಕ್ಷ ಇಬರ ಸಾಕ್ಷ್ಯ ಹೊಂದಿರುವ ರಿಜಿಸ್ಟರ್ಡ್ ಪತ್ರದಿಂದಲೇ ಇದನ್ನು ಮಾಡಿಕೊಳ್ಳಲು ಸಾಧ್ಯಾ.[೧]