ನಂದಮೂರಿ ತಾರಕ ರಾಮಾರಾವ್

ನಂದಮೂರಿ ತಾರಕ ರಾಮಾರಾವ್

ನಂದಮುರಿ ತಾರಕ ರಾಮರಾವ್ (೨೮ ಮೇ ೧೯೨೩-೧೮ ಜನವರಿ ೧೯೯೬) ಅವರನ್ನು ಎನ್.ಟಿ.ರಾಮರಾವ್ ಅಥವಾ ಎನ್.ಟಿ.ಆರ್ ಎಂದು ಜನ ಗುರುತ್ತಿಸಿದಾರೆ. ಎನ್.ಟಿ.ಆರವರು ಭಾರತದ ಒಬ್ಬ ಚಲನಚಿತ್ರ ನಟ, ಬರಹಗಾರ,ನಿರ್ದೇಶಕ, ನಿರ್ಮಾಪಕ ಹಾಗು ಹನ್ನೆರಡು ವರ್ಷಗಳ ಕಾಲ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದರು.


ಆರಂಭಿಕ ಜೀವನ

ಬದಲಾಯಿಸಿ

೨೮ ಮೇ ೧೯೨೩ರಂದು ಕೃಷ್ಣ ಜಿಲ್ಲೆಯ ಗುಡಿವಾಡ ತಾಲುಕಿನ ನಿಮ್ಮಕೂರಿನಲ್ಲಿ ಎನ್.ಟಿ.ಆರವರು ಜನಿಸಿದರು. ಈ ಊರು ಸ್ವತಂತ್ರ ಭಾರತದ ಹಿನ್ನೆಲೆಯ ಮದ್ರಾಸ್ ಪ್ರೆಸಿದೆನ್ಸಿಯ ಭಾಗವಾಗಿತ್ತು. ಅವರು ನಂದಮುರಿ ಲಕ್ಷ್ಮಯ್ಯ ಚೌಧರಿ ಹಾಗು ವೆಂಕಟ ರಾಮಮ್ಮ ಎಂಬ ಕೃಷಿ ದಂಪತಿಗಳಿಗೆ ಹುಟ್ಟಿದರು. ಆದರೆ ಎನ್.ಟಿ.ಆರವರನ್ನು ಅವರ ಚಿಕ್ಕಪ್ಪನಿಗ ದತ್ತು ಮಗನಾಗಿ ನೀಡಲಾಗಿತ್ತು.ಅವರು ಮೊದಲು ಶಾಲೆಗೆ ಹೋಗಿದು ತಮ್ಮ ಊರಿನಲ್ಲಿ ನಂತರ ವಿಜಯವಾಡದಲ್ಲಿ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಪಡೆದರು. ಅವರು ೧೯೪೦ರಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆ ತೇರ್ಗಡೆಯಾದ ನಂತರ ಎಸ್.ಆರ್.ಆರ್ ಮತ್ತು ಸಿ.ವಿ.ಆರ್ ಕಾಲೇಜು ಹಾಗು ಗುಂಟೂರಿನಲ್ಲಿರುವ ಆಂಧ್ರ-ಕ್ರಿಶ್ಚಿಯನ್ ಕಾಲೇಜುಗಳಲ್ಲಿ ಓದಿದರು. ೧೯೪೭ರಲ್ಲಿ ಎನ್.ಟಿ.ಆರವರು ಉಪರಿಜಿಸ್ಟ್ರಾರರಾಗಿ ಮದ್ರಾಸ್ ಆಯೋಗವು ಸೇರಿದರು. ನಟನೆಯನ್ನು ಸ್ವತ್ಃ ವಿನಯೋಗಿಸಲು ಮೂರು ವಾರಗಳಲ್ಲಿಯೇ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರು. ಅವರು ತಮ್ಮ ಯವನದಲೇ ಶಾಸ್ತ್ರೀಯ ಸಂಗೀತದಲ್ಲಿ ನಿಪುಣರಾಗಿದರು.

ನಟನಾವೃತ್ತಿ

ಬದಲಾಯಿಸಿ

ಎನ್.ಟಿ.ಆರವರು ತಮ್ಮ ವೃತ್ತಿ ಜೀವನವನ್ನು 'ಮನದೇಶಂ' ಎನ್ನುವ ಚಲನಚಿತ್ರದಲ್ಲಿ ಒಬ್ಬ ಪೋಲಿಸ್ ಪೇದೆಯ ತುಣುಕುಪಾತ್ರದಲ್ಲಿ ಕಾಣಿಸಿಕೊಂಡರು. ಅವರು ಶ್ರೀಕೃಷ್ಣನ್ ಪಾತ್ರದಲ್ಲಿ ನಟಿಸಿದ ಮೊದಲ ಪೌರಾಣಿಕ ಚಲನಚಿತ್ರ 'ಮಾಯಾಬಜ಼ಾರ್' ಅವರ ವೃತ್ತಿ ಜೀವನದಲ್ಲಿ ಸಂಚಲನ ಸೃಷ್ಟಿಸಿತ್ತು. 'ಶ್ರೀ ಕೃಷ್ಣಾರ್ಜುನ್ ಯುದ್ಧಂ'(೧೯೬೨), ತಮಿಳು ಚಲನಚಿತ್ರ 'ಕರ್ಣನ್'(೧೯೬೪), 'ದಾನವೀರ ಶೂರ ಕರ್ಣ'(೧೯೭೭) ಮುಂತಾದ ಒಟ್ಟು ಹದಿನೇಳು ಚಲನಚಿತ್ರಗಳಲ್ಲಿ ಶ್ರೀ ಕೃಷ್ಣನ್ ಪಾತ್ರವಹಿಸಿದಾರೆ. ಅವರು 'ಸೀತಾರಾಮ ಕಲ್ಯಾಣಂ'(೧೯೬೧), 'ಲವ ಕುಶ'(೧೯೬೩), 'ಶ್ರೀ ರಾಮಾಂಜನೇಯ ಯುದ್ಧಂ'(೧೯೭೪) ಚಲನಚಿತ್ರಗಳಲ್ಲಿ ಶ್ರೀ ರಾಮನ ಪಾತ್ರದಲ್ಲಿ ಅಭಿನಯಿಸಿದಾರೆ. 'ಭೂಕೈಲಾಸಂ'(೧೯೫೮) ಚಿತ್ರದಲ್ಲಿ ರಾವಣನ್ ಪಾತ್ರ, 'ಶ್ರೀ ವೆಂಕಟೇಶ್ವರ ಮಹತ್ವಂ'(೧೯೬೦) ಚಿತ್ರದಲ್ಲಿ ಮಹಾವಿಷ್ಣು ಪಾತ್ರ, 'ದಾಕ್ಷಾಯಗ್ನಂ'(೧೯೬೨) ಚಿತ್ರದಲ್ಲಿ ಶಿವನ ಪಾತ್ರಗಳಲ್ಲಿ ಕಾಣಿಸಿಕೊಂಡಿದಾರೆ. ಎನ್.ಟಿ.ಆರವರು ಧಾರ್ಮಿಕ ಹಾಗು ಪೌರಾಣಿಕ ಪಾತ್ರಗಳಲ್ಲದೆ ಮಹಾಭಾರತದ ಕರ್ಣ, ಭೀಷ್ಮ ಹಾಗು ಅರ್ಜುನನ ಪಾತ್ರಗಳಲ್ಲಿಯೂ ಅಭಿನಯಿಸಿದಾರೆ. ನಂತರ ತಮ್ಮ ವೃತ್ತಿ ಜೀವನದಲ್ಲಿ ಅಸ್ತಿತ್ವದಲಿರುವ ವ್ಯವಸ್ಥೆಯ ವಿರುದ್ಧ ಹೋರಡುವ ಬಡವರ ಪಾಲಿನ ವೀರ ಯುವಕನ ಪಾತ್ರಗಳಲ್ಲಿ ಅಭಿನಯಿಸುವುದನು ಆರಂಭಿಸಿದರು. ಸಾಮಾನ್ಯ ಮಾನವನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಲನಚಿತ್ರಗಳೆಂದರೆ 'ದೇವುಡು ಚೇಸಿನ ಮನುಷ್ಯುಲು'(೧೯೭೩),'ಅಡವಿ ರಾಮುಡು'(೧೯೭೭), 'ಡ್ರೆವರ್ ರಾಮುಡು'(೧೯೭೯), 'ವೇಟಗಾಡು'(೧೯೭೯), 'ಸರದಾರ್ ಪಾಪರಾಯ್ಡು'(೧೯೮೦). ಈ ಚಲನಚಿತ್ರಗಳ ಮುಖ್ಯ ಉದೇಶ ಸಾಮಾನ್ಯ ಜನರ ಆಲೋಚನೆ ಹಾಗು ಅವರ ಭಾವನೆಗಳು ತಲುಪುವುದಾಗಿತ್ತು. ಮದ್ರಾಸಿನಲ್ಲಿರುವ ತಮ್ಮ ರಾಷ್ಟ್ರೀಯ ಆರ್ಟ್ ಥಿಯೇಟರ್ ಪ್ರೈವೇಟ್ ಲಿಮಿಟೆಡ್ ಮೂಲಕ ಎನ್.ಟ್.ಆರವರು ತಮ್ಮದಾದ ಅನೇಕ ಚಿತ್ರಗಳು ಹಾಗು ಇನಿತರ ನಟರ ಚಲನಚಿತ್ರಗಳನ್ನು ನಿರ್ಮಿಸುತ್ತಿದರು. ಅವರು ನಲವತ್ತು ವರ್ಷದ ವಯಸ್ಸಿನಲ್ಲಿ ಪ್ರಖ್ಯತ ಕುಚಿಪುಡಿ ನರ್ತಕಿ ವೇಂಪತಿ ಚಿನ್ನಾ ಸತ್ಯಂರವರಿಂದ ತಮ್ಮ 'ನರ್ತನಸಾಲಾ' ಚಲನಚಿತ್ರಕ್ಕೆ ನೃತ್ಯವನ್ನು ಕಲಿತರು. ಎನ್.ಟಿ.ಆರವರು ಅನಂತರ ತಮ್ಮ ವೃತ್ತಿ ಜೀವನದಲ್ಲಿ ಚಿತ್ರಕಥೆಗಾರರಾದರು. ಅವರು ಬರೆದ ಹಾಗು ಚಿತ್ರಿಕರಿಸಿದ ಚಿತ್ರಗಳೆಂದರೆ 'ಶ್ರೀ ಕೃಷ್ಣ ಪಾಂಡವೀಯಂ'(೧೯೬೬), 'ಉಮಡಿ ಕುಟುಂಬಂ'(೧೯೬೭), 'ವರಕಟ್ನಂ'(೧೯೬೮), 'ಥಲಾ ಪೆಳಾಮಾ'(೧೯೭೦), 'ಕೋಡಾಲು ದಿದ್ದಿನಾ ಕಾಪುರಂ'(೧೯೭೦), 'ತಾತಮ್ಮ ಕಲಾ'(೧೯೭೪), 'ವೇಮುಲಾವಾಡ ಭೀಮ ಕವಿ'(೧೯೭೬), 'ದಾನ ವೀರಾ ಶೂರ ಕರ್ಣ'(೧೯೭೭), 'ಚಾಣಕ್ಯ ಚಂದ್ರಗುಪ್ತ'(೧೯೭೭), 'ಅಕ್ಬರ್ ಸಲೀಮ್ ಅನಾರ್ಕಲಿ'(೧೯೭೮), 'ಶ್ರೀಮದ್ ವಿರಾಟಪರವಮು'(೧೯೭೯), 'ಶ್ರೀ ತಿರುಪತಿ ವೆಂಕಟೇಶ ಕಲ್ಯಾಣಂ'(೧೯೭೯), 'ಚಂದಾ ಸಾಸನೂದು'(೧೯೮೩), 'ಶ್ರೀಮದ್ ವಿರಾಟ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರ'(೧೯೮೪), 'ಬ್ರಹ್ಮೃಷಿ ವಿಶ್ವಾಮಿತ್ರಾ'(೧೯೯೧), 'ಸಮ್ರಾಟ ಅಶೋಕ'(೧೯೯೨). ಎನ್.ಟಿ.ಆರವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಿರ್ದೇಶಿಸಿ ಹಾಗು ನಟಿಸಿದು 'ಶ್ರೀಮದ್ ವೀರಟ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರ', 'ಬ್ರಹ್ಮೃಷಿ ವಿಶ್ವಾಮಿತ್ರ' ಹಾಗು 'ಮೇಜರ್ ಚಂದ್ರಕಾಂತ್' ಚಲನಚಿತ್ರಗಳಲ್ಲಿ. ಅವರ ಕೊನೆಯ ಚಲನಚಿತ್ರ ತೆಲುಗು ಕವಿ ಶ್ರೀನಾಥರವರ ಆತ್ಮಚರಿತ್ರೆ ಆಧಾರಿತ 'ಶ್ರೀನಾಥಕವಿ ಸಾರ್ವ ಭೌಮುಡು'(೧೯೯೩) ಚಲನಚಿತ್ರ.

ರಾಜಕೀಯ ವೃತ್ತಿ

ಬದಲಾಯಿಸಿ

೨೯ನೆ ಮಾರ್ಚ ೧೯೮೨, ಹೈದರಬಾದನಲ್ಲಿ "ತೆಲುಗು ದೇಸಂ ಪಾರ್ಟಿ" [ಟಿಡಿಪಿ] ಸ್ಥಾಪಿಸಿದಾಗ ಎನ್.ಟಿ.ಆರವರು ರಾಜಕೀಯವನ್ನು ಪ್ರವೇಶಿಸಿದರು. ಅವರ ರೀತಿ-ನೀತಿಗಳು ಸಮಾಜವಾದಿ ಹಾಗು ಜನ ಸಾಮಾನ್ಯರ ದೃಷ್ಟಿಕೋಣಗಳನ್ನು ಪ್ರತಿಬಿಂಬಿಸುತ್ತಿದವು. ಬಡವರಿಗೆ ಮೂಲಭೂತ ಅಗತ್ಯವಾದ ಮನೆ-ಮಠಾ, ಬಟ್ಟೆ ಹಾಗು ಊಟ ಲಭಿಸುವಂತೆ ಮಾಡಿದರು. ಅವರು ಮಹಿಳೆಯರಿಗೆ ಪುರ್ವಿಕರ ಆಸ್ತಿಯಲ್ಲಿ ಸಮಾನ ಹಕ್ಕು ಸಿಗಬೇಕೆಂದು ವಕೀಲರಾಗಿ ಹೋರಾಡಿ, ಸೂಕ್ತ ಕಾನೂನನ್ನು ೧೯೮೬ರಲ್ಲಿ ಜಾರಿಗೆ ತಂದರು. ಅವರು ಬಡವ ಮಕ್ಕಳಿಗೆ ಮಧ್ಯಾಹ್ನ ಊಟದ ಯೋಜನೆ, ಅನುದಾನಿತ ವಿದ್ಯುತ್, 'ಮದ್ಯಾಪಾನ ಮಾರಟ ನಿಷೇಧಿತ' ಎಂಬ ಯೋಜನೆಗಳನ್ನು ಪರಿಚಯಿಸಿದರು. ಎನ್.ಟಿ.ಆರವರು ಇ.ಎ.ಎಂ.ಸಿ.ಇ.ಟಿ[ಎಂಜಿನಿಯರಿಂಗ, ಕೃಷಿ ಮತ್ತು ವೈದ್ಯಕೀಯ ಕಾಮನ್ ಎನಟ್ರೆಂಸ್ ಟೆಸ್ಟ್] ಪ್ರಾರಂಭಿಸಿದರು. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳು ತಮ್ಮ ತಿಳುವಳಿಕೆಯ ಅರ್ಹತೆಯ ಮೇಲೆ ವೃತ್ತಿಪರ ಕಾಲೇಜುಗಳಲ್ಲಿ ದಾಖಿಲಾಗುವ ಅವಕಶಗಳನ್ನು ಎನ್.ಟಿ.ಆರವರು ಕಲ್ಪಿಸಿಕೊಟ್ಟರು. ಅವರು ಪರಿಚಯಿಸಿದ ಕ್ರಮಗಳು ಹಲವಾರು ಪ್ರದೇಶಗಳಲ್ಲಿ ಮೇಲ್ಜಾತಿಯ ಪ್ರಾಬಲ್ಯವನ್ನು ಮುರಿಯಿತ್ತು. ಎನ್.ಟಿ.ಆರವರು ತಮ್ಮ ಸಮಾಜಿಕ ಕೌಶಲ್ಯದ ಆಲೋಚನೆ ಹಾಗು ನಿರ್ಧಾರಗಳಿಂದ ಆಂಧ್ರ ಪ್ರದೇಶದ ಕೇಂದ್ರದಲ್ಲಿ ಬಡವರಿಗೆ ಒಂದು ಸ್ಥಾನವನ್ನು ಗಳಿಸಿದಾರೆ. ೧೯೮೩ರಿಂದ ೧೯೯೫ವರೆಗು ಎನ್.ಟಿ.ಆರವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದಾರೆ.

ವೈಯುಕ್ತಿಕ ಜೀವನ

ಬದಲಾಯಿಸಿ

ಇಪ್ಪತ್ತು ವರ್ಷ ಪ್ರಾಯದ ಎನ್.ಟಿ.ಆರವರು ಇಂಟರ್ ಮೀಡಿಯೆಟ್ ಓದುತ್ತಿದಾಗ ತಮ್ಮ ಸೋದರ ಮಾವನ ಮಗಳಾದ ಬಸವ ತಾರಕಂರವರನ್ನು ಮದುವೆಯಾದರು. ಎನ್.ಟಿ.ಆರ್ ದಂಪತಿಗಳಿಗೆ ಎಂಟು ಪುತ್ರರು ಹಾಗು ನಾಲ್ಕು ಸುಪುತ್ರಿಯರು. ಎನ್.ಟಿ.ಆರವರ ಹಿರಿಯ ಮಗನಾದ ನಂದಮುರಿ ರಾಮಕೃಷ್ಣ(ಸೀನಿಯರ್) ೧೯೬೨ರಲ್ಲಿ ನಿಧನರು. ತಮ್ಮ ಮಗನ ನೆನಪಿಗಾಗಿ ನಚಾರಾಮನಲ್ಲಿ ರಾಮಕೃಷ್ಣ ಸ್ಟುಡಿಯೋ ಎಂಬ ಚಲನಚಿತ್ರ ಸ್ಟುಡಿಯೋ ಸ್ಥಾಪಿಸಿದರು. ಅವರ ನಾಲ್ಕನೇ ಮಗನಾದ ನಂದಮುರಿ ಹರಿಕೃಷ್ಣ ಬಾಲನಟರಾಗಿದರು. ಟಿಡಿಪಿ ಪಕ್ಷವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಲು ಹರಿಕೃಷ್ಣರವರು ರಾಜಕರಣಿಯಾಗಿ ಆಯ್ಕೆಯಾಗಿದರು. ಎನ್.ಟಿ.ಆರವರ ಆರನೇ ಮಗನಾದ ನಂದಮುರಿ ಬಾಲಕೃಷ್ಣರವರು ೧೯೮೦ರ ಮಧ್ಯಾವಧಿಯಿಂದ ಟಾಲಿವುಡ್ ಪ್ರಮುಖ ನಟರಲ್ಲಿ ಒಬ್ಬರಾಗಿದರು. ಬಾಲಕೃಷ್ಣರವರು ತಮ್ಮ ವೃತ್ತಿ ಜೀವನವನ್ನು ಬಾಲಕಲಾವಿಧೆಯಾಗಿ ಪ್ರಾರಂಭಿಸಿದರು. ಅವರ ಏಳನೇ ಮಗನಾದ ನಂದಮುರಿ ರಾಮಕೃಷ್ಣ(ಜ್ಯೂನಿಯರ್)ರವರು ಚಲನಚಿತ್ರ ನಿರ್ಮಾಪಕರು. ನಂದಮುರಿ ಜಯಕೃಷ್ಣ ಹಾಗು ನಂದಮುರಿ ಗೋಪಾಲಕೃಷ್ಣರವರು ಚಲನಚಿತ್ರ ಛಾಯಗ್ರಾಹಕರು. ಅವರ ಎರಡನೇ ಮಗಳಾದ ದಘುಬತಿ ಪುರಂದೇಶ್ವರಿಯವರು ಲೋಕಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದಾರೆ ಮತ್ತು ಕೇಂದ್ರಿಯ ಸಚಿವರಾಗಿದರು. ೧೯೮೫ರಲ್ಲಿ ಬಸವ ತಾರಕಂರವರು ಕ್ಯಾನ್ಸರಿಂದ ನಿಧನರಾದರು. ಅವರ ನೆನಪಿಗಾಗಿ ಎನ್.ಟಿ.ಆರವರು ೧೯೮೬, ಹೈದರಬಾದಿನಲ್ಲಿ "ಬಸವ ತಾರಕಂ ಇಂಡೋ-ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ" ಕಟ್ಟಿಸಿದರು. ೧೯೯೩ರಲ್ಲಿ ಎಪ್ಪತ್ತು ವರ್ಷಗಳ ಆಯುವಿನ ಎನ್.ಟಿ.ಆರವರು ಲಕ್ಷ್ಮಿ ಪಾರ್ವತಿ ಎಂಬ ಲೇಖಕಿಯನ್ನು ಎರಡನೇ ಮದುವೆಯಾದರು. ೧೮ನೆ ಜನವರಿ, ೧೯೯೬ರಂದು ಹೈದರಬಾದಿನಲ್ಲಿರುವ ತಮ್ಮ ನಿವಾಸದಲ್ಲಿ ಎಪ್ಪತ್ತೆರುಡು ವರ್ಷ ವಯಸ್ಸಿನ ಎನ್.ಟಿ.ಆರವರು ಹೃದಯಘಾತದಿಂದ ಸಾವನ್ನಪಿದರು, ಎಂಟು ವರ್ಷಗಳ ನಂತರ ೨೦೦೪ರಲ್ಲಿ ಅವರ ಚಿತ್ತಭಸಮವನ್ನು ಲಕ್ಷ್ಮಿ ಪಾರ್ವತಿಯವರು ಶ್ರೀರಂಗಪಟ್ಟಣದಲ್ಲಿ ವಿಸರ್ಜಿಸಿದರು. ಅವರ ಜೀವನ ಚರಿತ್ರೆಯನ್ನು ಲಕ್ಷ್ಮಿ ಪಾರ್ವತಿಯವರು ಎರಡು ಸಂಪುಟಗಳಲ್ಲಿ ಬರೆದು ಎನ್.ಟಿ.ಆರವರ ತೀರಿಕೊಂಡ ನಂತರ ಪ್ರಕಟಿಸಿದರು.

ಪ್ರಶಸ್ತಿ ಹಾಗು ಸನ್ಮಾನಗಳು

ಬದಲಾಯಿಸಿ

ನಾಗರಿಕ ಸನ್ಮಾನ ೧೯೬೮ರಲ್ಲಿ ಭಾರತ ಸರ್ಕಾರದಿಂದ "ಪದ್ಮಶ್ರೀ"

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

೧೯೫೪ - ಅತ್ಯುತ್ತಮ ನಿರ್ಮಾಪಕನಾಗಿ ತೆಲುಗು ಚಲನಚಿತ್ರ 'ತೋಡು ದೊಂಗಲು'ಗೆ ಮೆರಿಟ ಪ್ರಮಾಣ್ ಪತ್ರ

೧೯೬೦ - ಅತ್ಯುತಮ ನಿರ್ಮಾಪನಾಗಿ ತೆಲುಗು ಚಲನಚಿತ್ರ 'ಸೀತಾರಮ ಕಲ್ಯಾಣಂ'ಗೆ ಮೆರಿಟ ಪ್ರಮಾಣ ಪತ್ರ

೧೯೬೮ - ಅತ್ಯುತ್ತಮ ನಿರ್ದೇಶಕನಾಗಿ ತೆಲುಗು ಚಲನಚಿತ್ರ 'ವರಕಟ್ನಂ'ಗೆ

ರಾಷ್ಟ್ರಪತಿ ಪ್ರಶಸ್ತಿಗಳು

೧೯೫೪ - 'ರಾಜು ಪೆಧ' ಚಲನಚಿತ್ರಕ್ಕೆ ಅತ್ಯುತ್ತಮ ನಟನೆ

೧೯೬೩ - 'ಲವಕುಶ' ಚಿತ್ರಕ್ಕೆ ಅತ್ಯುತ್ತಮ ನಟನೆ

ದಕ್ಷಿಣ ಭಾರತ ಫ಼ಿಲ್ಮ್ಪೆರ್ ಪ್ರಶಸ್ತಿಗಳು

೧೯೭೨ - 'ಬಡಿ ಪಂತುಲು' ಚಲನಚಿತ್ರಕ್ಕೆ ಅತ್ಯುತ್ತಮ ತೆಲುಗು ನಟ್

ಇತರ ಸನ್ಮಾನ

೧೯೭೮ - ಆಂಧ್ರ ವಿಶ್ವವಿದ್ಯಾನಿಲಯದಿಂದ ಗೌರವನೀಯ "ಡಾಕ್ಟ್ರೇಟ್" ಪದವಿ ಪಡೆದರು

ಉಲ್ಲೇಖಗಳು: ೧.https://en.wikipedia.org/wiki/N._T._Rama_Rao ೨.http://timesofindia.indiatimes.com/entertainment/telugu/movies/news/NTR-is-the-greatest-Indian-actor/articleshow/18860418.cms ೩.http://www.dff.nic.in/iffi.asp