ನಮಸ್ಕಾರ

ನಾನು ಇಲ್ಲಿಗೆ ಬಂದು ಬಿಟ್ಟೆ.. :D

ನನ್ನ ಗೂಡು

೧೭:೫೯ ಗುರುವಾರ ೨೬ ಡಿಸೆಂಬರ್ ೨೦೨೪ (UTC)

ನಿತ್ಯೋತ್ಸವ

ಬದಲಾಯಿಸಿ

--- ನಿಸಾರ್ ಅಹ್ಮದ್

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿತ್ಯೋತ್ಸವ ನಿನಗೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ
ಗತಸಾಹಸ ನಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿತ್ಯೋತ್ಸವ ನಿನಗೆ ನಿತ್ಯೋತ್ಸವ

ಒಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲನುಡಿಯ ಲೋಕಾಮೃತ ಸೀಮೆಯೆ
ಈ ವರ್ಷದ ಈ ಹರ್ಷದ ಮನ ಉದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿತ್ಯೋತ್ಸವ ನಿನಗೆ ನಿತ್ಯೋತ್ಸವ

"https://kn.wikipedia.org/w/index.php?title=ಸದಸ್ಯ:Ramaml&oldid=17390" ಇಂದ ಪಡೆಯಲ್ಪಟ್ಟಿದೆ