ಕೋಲಾರ ಸೊಗಡು ಸಂಕ್ರಾಂತಿ

ಆತ್ಮೀಯರೆ,

ವಿಶ್ವದ ಎಷ್ಠೋ ದೇಶಗಳಲ್ಲಿನ ಸಾಂಪ್ರದಾಯಗಳ ಉನ್ಕತ ಸಾಂಪ್ರದಾಯಗಳನ್ನು ಹೊಂದಿರುವ, ಭಾರತ ದೇಶದ ಕರುನಾಡು ಎಂದೇ ಪ್ರಖ್ಯಾತಿಯಾಗಿರುವ ಕರ್ನಾಟಕ ರಾಜ್ಯದ ಸ್ವಾಂತಂತ್ರ ನಂತರ ಮೊಟ ಮೊದಲ ಮುಖ್ಯಮಂತ್ರಿಯಾದ ಕೆ,ಸಿ ರೆಡ್ಡಿ ಜನಿಸಿದ ಕೋಲಾರ ಜಿಲ್ಲೆ ಹಾಗೊ ಅವರು ಜನಿಸಿದ ಕ್ಯಾಸಂಬಳ್ಳಿ ಊರಿನವರಾದ ನಾವು ಸೊಗಡು ಸಂಕ್ರಾಂತಿ, ಬಗ್ಗೆ ಹೇಳ ಬಯಸುವುದೇನೆಂದರೆ,,,ನಮ್ಮ ಜಿಲ್ಲೆಯಲ್ಲಿ ರಾಷ್ಠಕವಿ ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಗಾರ್ ಮುಂತಾದ ಮಹಾನ್ ಕವಿಗಳು ಜನಿಸಿರುತ್ತಾರೆ ವಿಶ್ವಕ್ಕೆ ಚಿನ್ನ ರಪ್ತು ಮಾಡುವಷ್ಠು ಸಾಮರ್ಥ್ಯಕ್ಕೆ ಹೆಸರುವಾಸಿ ಯೊಗಿತ್ತು..ಈ ಜಿಲ್ಲೆ ಇಂತಹ ಉನ್ನತ ಸಾಂಪ್ರದಾಯಗಳ ಸಂಸ್ಕತಿಗಳ ಮೌಲ್ಯಗಳ ಸನಾತನ ದರ್ಮಗಳ ಜನರ ಸಹ ಜೀವನಗಳ ಹಾಗು ಆಂದ್ರ ತಮಿಳುನಾಡು ರಾಜ್ಯಗಳಿಗೆ ಗಡಿ ಜಿಲ್ಲೆಯಾದ ಇಲ್ಲಿ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತೇವೆ… ಪ್ರತಿ ವರ್ಷವು ಖಾಯಂಆಗಿ ಮೊಟ್ಟ ಮೊದಲ ಹಬ್ಬವು ಜನವರಿ 14 ರಂದು ಆರಂಭವಾಗಿ ಅಂದಿನಿಂದ ಸುಮಾರು ಒಂದು ತಿಂಗಳವರೆಗೊ ಹಳ್ಲಿಗಳ ಅಗು ಹೋಗುಗಳಿಗೆ ಅನುಸಾರವಾಗಿ ಹಬ್ಬವನ್ನು ಆಚರಿಸುತಾರೆ ಹಿಂದು ದರ್ಮದ ಪಂಚಾಂಗದಂತೆ ಜನವರಿ 14ಕ್ಕೊ 1ತಿಂಗಳ ಹಿಂದಯೇ ಮಾರ್ಗಶಿರ ವಾಸ ಆರಂಭವಾಗುತ್ತದೆ ಆ ಮಾಸದ ಮೊದಲದಿನದ ಮುಂಚಾನೆ 3 ಗಂಟೆಗೆ ದ್ಯವ ಭಕ್ತರು,ಭಜನೆಕಲಾವಿದರು, ಪೋಷಕರು, ಮಕ್ಕಳು ಎಲ್ಲರು ಭಜನೆ ಮಂದಿರ ಅಥವಾ ವಿಷ್ಣು ದೇವಾಲಯಗಳಲ್ಲಿ ಸೇರಿ, ಅಖಂಡ ವಾದ್ಯ ಮತ್ತು ಭಜನೆಗಳೊಂದಿಗೆ ಅಖಂಡ ಜ್ಯೋತಿಯನ್ನು ಎತ್ತಿಕೊಂಡು, ಊರಿನ ಸುತ್ತಲು ಮೆರವಣಿಗೆ ಮಾಡುತ್ತಾ ಕಾಣಿಕೆ ಹಾಗೊ ದಾನ್ಯಗಳನ್ನು ಪಡೆಯುತ್ತಾರೆ ಆಮೆರವನಿಗೆ ಸಂದರ್ಬದಲ್ಲಿ ಅಖಂಡ ಜ್ಯೋತಿಗೆ ಪೊಜೆ ಮಾಡುತ್ತಿದ್ದರು..ಮೆರವಣಿಗೆ ಮುಗಿಸಿ ಮಂದಿರಕ್ಕೆ ಮರಳಿದ ನಂತರ ಅಕಿ ಭಕ್ತಿಯಿಂದ ದೇವರುಗಳಿಗೆ ಪೊಜೆ ಮಾಡಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸುತ್ತಾರೆ ಆ ತಿಂಗಳಿನಲ್ಲಿ ಪ್ರತಿ ಮುಂಚಾನೆ ಮೇಲ್ಕಂಡತೆ ಮಾಡುತ್ತಾರೆ . ತಾವು ಬೇಸಯ ಮಾಡಿ ಬೆಳೆದಿರುವ ಬೆಳೆಗಳು ಕಟಾವಿಗೆ ಬಂದಿರುವ ಕಾಲ ಹಾಗು ಧನಕರುಗಳಿಗೆ ಹಸಿರು ಮೇವುಗಳನ್ನು ತಿನ್ನಿಸಿ ಗಟ್ಟಿಮಸ್ತಾಗಿ ಬೆಳೆಸುತ್ತಾರೆ .ಇದನ್ನು ಸುಗ್ಗಿಯ ಕಾಲವೆಂತಲೂ ಹೇಳುತ್ತಾರೆ.ರೈತರು ಹಾಗೂ ಧನಗಳು ಒಂದು ವರ್ಷದ ಕಾಲ ಶ್ರಮ ಪಟ್ಟು ಬೆಳೆಗಳನ್ನು ಬೆಳೆಸಿ ಜನರಿಗೆ ದವಸ ಧಾನ್ಯಗಳು, ಹಾಗೂ ಧನಕರುಗಳಿಗೆ ಮೇವು ಸಂಗ್ರಹಿಸಿ ವರ್ಷ ಪೂರ್ತಿ ತಿನ್ನಲು ಅನುಮಾಡಿಕೊಳ್ಳುವ ಕಾಲವಾಗಿರುತ್ತದೆ.ಇದೇ ಕಾಲವನ್ನು ನಮ್ಮ ಪೂರ್ವಜರು ತಲೆ ತಾಲಂತರುಗಳಿಂದ ಮಕರ ಸಂಗ್ರಾಂತಿಯಂದು ಹಬ್ಬವಾಗಿ ಆಚಾರಿಸುತ್ತಾರೆ. 2 ಆಯ ಆಯಾನುಗಳಗಳು ಬದಲಾಗುವ ಕಾಲ ಅಂದರೆ ಅವುಗಳು ಉತ್ತರಾಯಣ ದಕ್ಷಿಣಾಯಣ ಕಾಲಗಳೆಂದು ಕರೆಯುತ್ತಾರೆ. ಉತ್ತರಾಯಣ ಹುಟ್ಟುವ ಮೊದಲೆ ದಿನದೆಂದೆ ರಹಬ್ಬಕ್ಕೆ ಪ್ರಾಮುಖ್ಯತೆ ನೀಡಿ ಕರ್ನಾಟಕ, ಆಂದ್ರ ರಾಜ್ಯಗಳಲ್ಲಿ ಸಾರ್ವರ್ತಿಕ ಸರ್ಕಾರಿ ರಜೆ ಸಹ ನೀಡುತ್ತಾರೆ.ಹಬ್ಬದ ಮುಂಚೆಯೇ ತಮ್ಮ ಎಲ್ಲಾ ಬಂದುಗಳಿಗೆ ಇಂತಹ ದಿನದಂದು ಹಬ್ಬ ಆಚರಿಸುತ್ತೇವೆಂದು ಆಹ್ವಾನ ಮುಟ್ಟಿಸಿ ಮನೆಯಲ್ಲಿನ ಎಲ್ಲರಿಗೂ ಹೊಸ ಬಟ್ಟಗಳನ್ನು ಹೊಲಿಸಿ ಧನ ಕರುಗಳಿಗೆ ಅಲಂಕರಿಸುವ ವಸ್ತುಗಳನ್ನು ಬಟ್ಟಗಳನ್ನು ಪೂರ್ವ ತಯಾರಾಗಿ ತರಿಸಿ ಇಟ್ಟು ಕೊಳ್ಳುತ್ತಾರೆ.

ಪ್ರತಿ ಊರಿಗೆ ಅನಾದಿ ಕಾಲದಿಂದಲೂ ಯಜಮಾನರು ನಿಯಮಿಸಿರುತ್ತಾರೆ, ಆ ಯಜಮಾನರ ಮನೆಯಿಂದಲೇ ಮೊಟ್ಟ ಮೊದಲಿಗೆ ಎತ್ತುಗಳನ್ನು ಹದ್ದಿನ ರಸ್ತೆಯಲ್ಲಿ ಒಡಿಸಿದ ನಂತರ ಊರಿನ ಎಲ್ಲರು ತಮ್ಮ ದನ ಕರುಗಳನ್ನು ಅಲ್ಲಿ ಬಿಡಬೇಕು ಎಂಬ ಸಾಂಪ್ರದಾಯವಿದೆ.ಪ್ರತಿ ಮನೆ ಬಾಗಿಲು ಮುಂದೆ ಸ್ವಚ್ಚ ವಾಗಿ ಶುಚಿ ಕೊಳಿಸಿ ರಂಗೋಲೆ ಹಾಕಿ ಅದರ ಮದ್ಯೆ ಸಂಗಣಿಯಲ್ಲಿ ಗೊಂಬೆ ತಯಾರಿಸಿ ಅದಕ್ಕೆ ಹರಿಶಿನ ಕುಂಕಮ ಹೂವುಗಳನ್ನು ಇಟ್ಟು ಪೂಜೆಮಾಡಿ ಭದ್ರವಾಗಿ ಮುಚ್ಚಿಡುತ್ತಾರೆ. ಹಸುಗಳನ್ನು ಬಿಡುವಾಗ  ತೆಗೆದು ಹಾಕತ್ತಾರೆ . ಎತ್ತುಗಳನ್ನು ಬಿಡುವ ಬೀದಿಯ ಆರಂಭದ  ಅದ್ದು ಹಾಗೂ ಮುಕ್ತಾಯದ ಜಾಗದಲ್ಲಿ ಗಂಗಾದೇವಿಯನ್ನು ಕೆತ್ತಿರುವ ಮರದ ಹಲಗೆಯನ್ನು ಇಟ್ಟು ವಿಶೇಷವಾಗಿ ಪೂಜೆ ಮಾಡುತ್ತಾರೆ. ಈ ಪೂಜೆಯ ತಟ್ಟಯನ್ನು ಊರಿನ ಯಜಮಾನರ ಮನೆಯಿಂದಲೇ ತರಬೇಕು.ಧನಕರುಗಳಿಗೆ ಸ್ನಾನ ಮಾಡಿಸಿ  ಕೊಂಬುಗಳನ್ನು ಸುಚಿಗೊಳಿಸಿ ಬಣ್ಣ ಹಚ್ಚುತ್ತಾರೆ ಮೈಮೇಲೆ ಬಟ್ಟೆ ದರಿಸುತ್ತಾರೆ. ಮೈಯಲ್ಲಾ ಬಲೂನುಗಲನ್ನು, ಕತ್ತಿಗೆ ಪಂಚೆ ಮತ್ತು ಘಂಟೆಗಳನ್ನು ಕೊಂಬುಗಳ ಮುಂದೆ ಸಿಂಗರಿಸಿದ ಪಲಕಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಅವುಗಳ ಜೊತೆ ಬಾವ ಚಿತ್ರಗಳನ್ನು ತೆಗೆಸಿಕೊಳ್ಳುತ್ತಾರೆ. ಅಂದು ಹೆಚ್ಚಿನ ಜನರು ತಮ್ಮಮನೆಗಳಲ್ಲಿ ಮಾಂಸದ ಆಹಾರವನ್ನು ಸೇವಿಸುತ್ತಾರೆ ಅಲ್ಲದೆ ಬೇರೆ ಊರಿಂದ ಬಂದ ಜನರಿಗೆ ಆತ್ಮೀಯವಾಗಿ ಕರೆಸಿ ಊಟ ಬಡೆಸುತ್ತಾರೆ.ಹೋರಿಗಳಿ ವಸ್ರ್ತಗಳನ್ನು  ಕಟ್ಟಿ ಹದ್ದಿನ ಬಳಿ ನೆರೆದಿರುವ ಜನರು ಕಿತ್ತುಕೊಳ್ಳೂವಂತೆ ಅಥವಾ ಆಗದಿದ್ದರೆ ಹೋರಿಗಳ ಮಾಲಕನಿಗೆ ಅದು ಬಿಡುತ್ತಾರೆ.ಹಬ್ಬಕ್ಕೆ ಬಾಗವಹಿಸುವ ಹೋರಿಗಳ ಪೈಕಿ ಯಾವ ಮೂರು ಅತಿ ವೇಗ ವಾಗಿ ಓಡಿ ಹದ್ದನ್ನು  ದಂಟುತ್ತವೆಯೋ ಅವುಗಳಿಗೆ ಪ್ರಥಮ ದ್ವೀತೀಯ ಹಾಗೂ ತೃತೀಯವೆಂಬ ನಾನಾ ವಿದದ ಬಹುಮಾನಗನ್ನು ಅವುಗಳ ಮಾಲಿಕರಿಗೆ  ನೀಡಿ ಗೌರವಿಸುತ್ತಾರೆ.ನಮ್ಮ ಜೆಲ್ಲಿಗೆ ಮಾತ್ರ ಸೀಮೀತ ವಲ್ಲದೆ ಎರಡು ರಾಜ್ಯಗಳಲ್ಲಿ ತಮ್ಮ ಮನೆಗೆ ಬರುವ ಪಸಲಿನ ಸಂತೋಷಕ್ಕೂ ತಮ್ಮ ದನಕುರುಗಳಿಗೆ ಮೇವು ಸಂಗ್ರಹಿಸುವ ಸಂತೋಷಕ್ಕೂ ಅದೇ ಕಾಲ ವಾಗಿರುವುದರಿಂದ ಮಕರ ಸಂಕ್ರಾತಿಯಂದು ಅತಿ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ವಿಶೇಷತೆಗಳು ಸಂಕ್ರಾಂತಿ ಹಬ್ಬದಂದ್ದು ದನಕುರಿಗಳನ್ನ ಒಂದೇ ಬೀದಿಯಲ್ಲಿ ಕ್ರಮವಾಗಿ ಒಬ್ಬರ ಹಿಂದೆ ಮತ್ತೋಬ್ಬರ ನಿದಾನವಾಗಿ ಒಂದು ಬಾರಿ ನಡೆಸಿಕೊಂಡು ಹೋಗುತ್ತಾರೆ.ನಂತರ ಹಲವು ಬಾರಿ ಜೋರಾಗಿ ಓಡಿಸುತ್ತಾರೆ.ಊರಿನಲ್ಲಿ ಸಮಪ್ರದಾಯದಂತೆ ಹಲಿಗೆ ಬಾರಿಸಲು ಒಂದು    ಕುಟುಂಬಸ್ತರು ತಲಾಂತರಗಳಿಂದ ಇರುತ್ತಾರೆ.ಊರಿನ ಯಜಮಾನರ ಮನೆಯಿಂದ ಹೋರಿಗಳನ್ನು ಹಲಗೆ ವಾರೈಗಳಿಂದ  ಹಾಗೂ ಪೊಜೆಯ ತಟ್ಟಗಳನ್ನು ಮೆರವಣಿಗೆಯಲ್ಲಿ ತರಿಸುತ್ತಾರೆ ಆನಂತರ(ಹಸುಗಳನ್ನು) ದನ ಕರುಗಳನ್ನು ಓಡಿಸುವುದು ಮೂಗಿಯುವವರೆಗೂ ಅಲ್ಲಿಯೇ ಜೋರಾಗಿ ಹಲಿಗೆಗಳನ್ನು ಬಾರಿಸುತ್ತಾ ಇರುತ್ತಾರೆ ಹದ್ದಿನ ಬಳಿ ನೂರಾರು ಜನ ಹೋಲಿಗೆಗಳನ್ನು ಹಿಡಿದು ಅವುಗಳಿಗೆ ಕಟ್ಟಿರುವ ಟವಲು ಪಂಚೆಗಳನ್ನು ಹಾಗೂ ಹಣವನ್ನು ಕಿತ್ತೂಕೂಳ್ಳಲು ಪ್ರಯತ್ನಿಸುತ್ತಾರೆ,ಅವುಗಳಿಂದ  ಯಾರು ಬಿಡಿಸಿಕೊಂಡರೆ ಅವರಿಗೆ  ಅವಸ್ತೃ ತೆಗೆದುಕೊಳ್ಳುತ್ತಾರೆ ಅಂದು ದ್ವನಿವರ್ದಕ, ಬಣ್ಣ ಬಣ್ಣದ ಕಾಗದಗಳನ್ನು  ಹಸಿರು ತೋರಣ,ಮಾವಿನ ಎಲೆಗಳಿಂದ ಎಲ್ಲಿ ನೋಡಿದರು ಕಟ್ಟಿ ಇಡೀ  ಊರಿನ ಮನೆಗಳನ್ನು  ಹಾಗೂ ಬೀದಿಗಳನ್ನು ಸಿಂಗರಿಸುತ್ತಾರೆ,ದನಕರುಗಳನ್ನು ಸಿಂಗರಿಸುವುದರಲ್ಲಿ ಒಬ್ಬರಿಗಿಂತ ಮತೋಬ್ಬರು ಪೈಪೋಟಿಗಳನ್ನು ಸಿಂಗಾರಿಸಿ ಪ್ರಶಂಸೆಗಳನ್ನು ಬಯಸುತ್ತಾರೆ ಹಾಗೂ ಅವುಗಳನ್ನು ನೋಟದಲ್ಲೊ ಮೊಲ್ಯಗಳಲ್ಲು ಮೇಲಿನ ಪ್ರಶಂಸೆ ಬಯಸಿ ಸಾಕಿರುತ್ತಾರೆ ದನ ಕರುಗಳನ್ನು ಹದ್ದಿನಲ್ಲಿ ಬಿಡುವುದು ಮುಗಿದ ನಂತರ ಹಲಿಗೆ ಬಾರಿಸುತ್ತಾ ಮನೆ ಮನೆಗೆ ತೆರಳಿ ಹಣ ದಾನ್ಯಗಳನ್ನು  ಪಡೆಯತ್ತಾರೆ,

ಇಷ್ಠೆಲ್ಲಾ ಆಚರಣೆ ಊರಿನ ದನಕರುಗಳನ್ನು ಸೀಮಿತವಾಗಿ ನಡೆಯುತ್ತಾದೆಇದನ್ನು ದೊಡ್ಡಹಬ್ಬವೆಂದು ಎರಢಿ ವಿದಾಗಳಾಗಿ ಮಾಡುತ್ತಾರೆ, ಆ ಹಬ್ಬಕ್ಕೆ ಬೇರೆ ಬೇರೆ ಊರುಗಳಿಂದ ಹೋರಿಗಳನ್ನು ತಂದು ಬಿಡುತ್ತಾರೆ.