ಸೇವಾಲಾಲ್ ಮಹಾರಾಜ್
ಸೇವಾಲಾಲ್ ಮಹಾರಾಜ್ (15 ಫೆಬ್ರವರಿ 1739 - 4 ಡಿಸೆಂಬರ್ 1806) ಒಬ್ಬ ಭಾರತೀಯ ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಸಮುದಾಯ ನಾಯಕ. ಇವರನ್ನು ಗೋರ್ ಬಂಜಾರ ಸಮುದಾಯದವರಿಂದ ಆಧ್ಯಾತ್ಮಿಕ ಗುರು ಎಂದು ಗೌರವಿಸಲಾಗುತ್ತದೆ.
ಶ್ರೀ ಸೇವಾಲಾಲ್ ಮಹಾರಾಜ್ | |
---|---|
ಜನನ | ಸೇವಾಲಾಲ್ ೧೫ ಫೆಬ್ರವರಿ ೧೭೩೯ |
ಮರಣ | 4 December 1806 ರೂಹಿಘರ್, ಯವತ್ಮಲ್ ಜಿಲ್ಲೆ, ಮಹಾರಾಷ್ಟ್ರ, ಭಾರತ | (aged 67)
Resting place | ಪೊಹರಘರ್, ವಾಸ್ಸಿಮ್ ಜಿಲ್ಲೆ, ಮಹಾರಾಷ್ಟ್ರ, ಭಾರತ |
ವೃತ್ತಿ | ಸಮಾಜ ಸುಧಾರಕ |
ಪೋಷಕರು |
|
ಜನನ
ಬದಲಾಯಿಸಿ೧೫ ಫೆಬ್ರುವರಿ ೧೭೩೯ ರಂದು, ಭೀಮ ನಾಯ್ಕ ಹಾಗೂ ಧರ್ಮಣಿ ಬಾಯಿ ದಂಪತಿಗಳಿಗೆ, ಬಂಜಾರ ಸಮುದಾಯದ ಖಾತೆಗಳ ಪ್ರಕಾರ, ಇವರು ರಾಮ್ ಜೀ ನಾಯಕ್ ತಾಂಡಾ, ಬಾವನ್ ಬರಾಡ್, ಗುತ್ತಿ- ಬಳ್ಳಾರಿ ಪ್ರಾಂತ್, ರಸ್ತುತ ಕರೆಯಲ್ಪಡುವ, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ತಾಲ್ಲೂಕಿನ, ಸೇವಾಗಡ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ ಮತ್ತು ಭಾರತೀಯ ಪತ್ರಿಕಾ ಸೂಚನಾ ಕಾರ್ಯಾಲಯ (PIB) ಪ್ರಕಾರ ಇವರು ಕರ್ನಾಟಕ ರಾಜ್ಯದ, ಈಗಿನ ಶಿವಮೊಗ್ಗ ಜಿಲ್ಲೆಯ, ಸೂರಗೊಂಡನಕೊಪ್ಪದಲ್ಲಿ ಜನಿಸಿದರು ಎಂದು ಉಲ್ಲೇಖಿಸಲಾಗಿದೆ.[೧]
ಜೀವನ
ಬದಲಾಯಿಸಿಇವರು ವೃತ್ತಿಯ ಮೂಲಕ ಪಶು ಸಾಕಣೆ ಹಾಗೂ ಸಂಗೋಪನೆ ಮಾಡುವ ವ್ಯಕ್ತಿ. ಅವರು ಸಂಗೀತಗಾರ, ದೈರ್ಯಶಾಲಿ ಯೋಧ, ಮೂಢನಂಬಿಕೆ ವಿರುಧ ಹೋರಾಡಿದ ವಿವೇಚನಾಶೀಲ ವ್ಯಕ್ತಿಯಂದು ಹಾಗೂ ಜಗದಂಬಾ ದೇವಿಯ ಭಕ್ತರು ಆಗಿದ್ದರು ಎಂದು ಹೇಳಲಾಗುತ್ತಿದೆ. ವಸಾಹತುಶಾಹ ಬ್ರಿಟಿಷ್ ಆಡಳಿತಗಾರರು ತಮ್ಮ ಕಥೆಗಳನ್ನು ಇವರ ಬಗ್ಗೆ ಉಲ್ಲೇಖಿಸುತ್ತಾರೆ. ಆದರೆ ಅವರು ೧೯ನೇ ಶತಮಾನದಲ್ಲಿ ಇಟ್ಟು ಅವರ ಮೂಲ ಹೆಸರನ್ನು ಸೆವ ರಾಥೋಡ್ ಎಂದು ಗುರುತಿಸುತ್ತಾರೆ.[೨]
ಮರಣ
ಬದಲಾಯಿಸಿಸೇವಾಲಾಲರು ೦೪ ಡಿಸೆಂಬರ್ ೧೮೦೬ ರಂದು ನಿಧನರಾದರು.
ಜಾನಪದ ಹಾಡುಗಳು
ಬದಲಾಯಿಸಿಸೇವಾಲಾಲ್ ಮಹಾರಾಜನ್ನು ಪ್ರಸನ್ನಿಸುವ ಜಾನಪದ ಹಾಡುಗಳು ಬಂಜಾರ ಉತ್ಸವಗಳಲ್ಲಿ ಜನಪ್ರಿಯವಾಗಿವೆ.
ಸೇವಾಲಾಲ್ ಮಹಾರಾಜ್ ದೇವಸ್ತಾನಗಳು
ಬದಲಾಯಿಸಿಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೋಹೊರಾ ದೇವಿ ಎಂಬ ಗ್ರಾಮದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಪ್ರಮುಖ ದೇವಾಲಯವಿದೆ. ಬಂಜಾರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಗದಾಂಬ ಮಾತಾ ದೇವಸ್ಥಾನ, ಜಗದಾಂಬ ಯಾಡಿ ಮಂದಿರ ಕೂಡ ಇಲ್ಲಿದೆ. ಮತ್ತೊಂದು ಸೇವಾಲಾಲ್ ಮಹಾರಾಜ್ ದೇವಸ್ಥಾನವು ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲುಕಿನ ಸುರಗೊಂಡನಕೊಪ್ಪ ಗ್ರಾಮದಲ್ಲಿದೆ.ದೇವಸ್ಥಾನಗಳಿಗೆ ಸೇವಾಲಾಲ್ ಮಹಾರಾಜರ ಭಕ್ತರು ಮಾಲಾಧಾರಣೆ ಮಾಡಿ ವ್ರತದಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಮತ್ತು ಜಪ ಮಾಡುತ್ತಾ ಪಾದಯಾತ್ರೆ ಹೋಗುತ್ತಾರೆ.
ಇದನ್ನೂ ಓದಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಬಂಜಾರ ಧರ್ಮಗುರು ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಮೊದಲ ಬಾರಿಗೆ ಆಚರಿಸುತ್ತಿದೆ". ಭಾರತೀಯ ಪತ್ರಿಕಾ ಸೂಚನಾ ಕಾರ್ಯಾಲಯ (PIB India). Retrieved 23 February 2023.
- ↑ http://m.goarbanjara.com/sant-sevalal-samajsudharak-maharaourush/