ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಲೇಖನ ಇದೆ.

ಮಾಹಿತಿ ಸಂಗ್ರಹಣೆ ಬದಲಾಯಿಸಿ

ಒಂದು ರೀತಿಯಲ್ಲಿ ಮೊದಲಿನ ಸಮಾಜ ವಿಜ್ಞಾನಿಗಳು ವಿಷಯದ ಪ್ರಾಯೋಗಿಕ ಅನುಭವವಿಲ್ಲದೆ ಸಿದ್ದಾಂತಗಳನ್ನು ಮಾಡಿದ್ದರು. ಈಗ ಪ್ರಾಯೋಗಿಕ ಅಧ್ಯಯನ ಮಾಡಲು ಹೆಚ್ಚಾಗಿ ಇಷ್ಟಪಡುತ್ತಾರೆ. ಮೊದಲ ಭಾಗದಲ್ಲಿ ಸಂಶೋಧನೆ ಸಮಸ್ಯೆಯನ್ನು ತಿಳಿದುಕೊಂಡ ನಂತರ ಸಂಶೋಧಕ ತೆರೆದ ಸಾಹಿತ್ಯ ಸಮೀಕ್ಷೆ ನಡೆಸುತ್ತಾನೆ.ಇದೆಲ್ಲ ಸಿಕ್ಕ ನಂತರ ಸಂಶೋಧನೆ ಹಾಗೂ ನಮೂನೆ ವಿನ್ಯಾಸಗಳು ತಯಾರಾದನಂತರ ಸಂಶೋಧಕನು ಮಾಹಿತಿ ಕಲೆ ಹಾಕಲು ಪ್ರಾರಂಭಿಸುತ್ತಾನೆ.

ನಂಬಿಕಾರ್ಹ ಮೂಲಗಳು ಸಪ್ರಮಾಣಿಕ ನಿರ್ಣಯಗಳಿಗೆ ಹಾದಿಮಾಡುತ್ತದೆ. ಮಾಹಿತಿಗಳನ್ನು ಸಂಗ್ರಹಿಸಬಹುದಾದ ಎರಡು ಪ್ರಮುಖ ಮೂಲಗಳಿವೆ. ಅವುಗಳೆಂದರೆ:

  1. ದಸ್ತಾವೇಜು ಅಥವಾ ಪತ್ರ ಮೂಲಗಳು, ಮತ್ತು
  2. ಕ್ಷೇತ್ರ ಮೂಲಗಳು ಅಥವಾ ವ್ಯಕ್ತಿಮೂಲ

ನಿಜವಾದ ಸಂಶೋಧನೆಗಳು ಸತ್ಯ ಪ್ರಾಮಾಣಿಕತೆಗೆ ದಾರಿಯಾಗುತ್ತದೆ. ಪ್ರಪ್ರಥಮವಾಗಿ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ಉಪಯೋಗಿಸಲು ಬಳಸಬಹುದಾದ ಸಾಧನೆಗಳೆಂದರೆ ಪ್ರಶ್ನಾವಳಿ ಹಾಗೂ ಸಂದರ್ಶನ.

ದಸ್ತಾವೇಜು ಮೂಲಗಳು ಬದಲಾಯಿಸಿ

ದಸ್ತಾವೇಜು ಮೂಲದ ಮಾಹಿತಿಯೆಂದರೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬಗ್ಗೆ ದೊರಕುವ ದಾಖಲೆಗಳಿಂದ ಸಿಗುವ ವಿಷಯಗಳಿಗೆ ದಸ್ತಾವೇಜು ಎನ್ನುತ್ತಾರೆ. ಇವು ಹಿಂದಿನ ಕಾಲದ ಮಾಹಿತಿಯಾಗಿರುತ್ತದೆ.

ವೈಯಕ್ತಿಕ ದಸ್ತಾವೇಜುಗಳು ಬದಲಾಯಿಸಿ

ಪ್ರತಿಯೊಬ್ಬ ವ್ಯಕ್ತಿಯ ವರ್ತನೆ, ಅನುಭವ ಮತ್ತು ನಂಬಿಕೆಗಳನ್ನು ಕುರಿತು ಸ್ವಂತವಾಗಿ ತನ್ನ ಇಚ್ಚೆಯಿಂದ ಬರೆದ ವಿವರಣೆಯಾಗಿರುತ್ತದೆ. ಇದರಲ್ಲಿ ಕೆಲವು ಪ್ರಾಯುಕ್ತವಾದುದು, ಯಾವುವೆಂದರೆ ಆತ್ಮಚರಿತ್ರೆ, ದಿನಚರಿಗಳು ಮತ್ತು ಪತ್ರಗಳು, ತುಂಬಾ ಮುಖ್ಯವಾದ ವೈಯಕ್ತಿಕ ದಸ್ತಾವೇಜುಗಳಾಗಿರುತ್ತದೆ.

ಆತ್ಮಚರಿತ್ರೆ ಬದಲಾಯಿಸಿ

ಆತ್ಮಚರಿತ್ರೆ ಎಂದರೆ ತಾನೇ ಬರೆದ ವ್ಯಕ್ತಿಯ ಸ್ವಂತ ಅನುಭವದ ಮೊಟ್ಟ ಮೊದಲ ವಿಷಯವಾಗಿರುತ್ತದೆ. ಕೆಲವು ಸಲ ಅವರ ಸ್ವಂತ ವಿಷಯಗಳನ್ನು ಮುಕ್ತವಾಗಿ ಹೇಳಲು ಇಚ್ಚಿಸದೆ, ಉದ್ದೇಶಪೂರಿತವಾಗಿ ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಆಗ ಅವಲಂಬನೆ ಕುಂಠಿತವಾಗುತ್ತದೆ. ಇದು ಹೇಳುವ ವ್ಯಕ್ತಿಯ ಹತ್ತಿರದ ಜೀವನದ ದೃಶ್ಯವಾಗಿರುತ್ತದೆ.

ದಿನಚರಿಗಳು ಬದಲಾಯಿಸಿ

ಎಲ್ಲೋ ಹಲವು ಮಂದಿ ಅವರ ಜೀವನದ ಮುಖ್ಯವಾದ ಸಂಗತಿಗಳನ್ನು ನೆನಪಿಸಿಕೊಳ್ಳಲು ದಿನಚರಿ ಬರೆಯುತ್ತಾರೆ. ಮತ್ತೆ ಕೆಲವರು ಬೇರೆಯವರಿಗೆ ಹೇಳಲು ಸಾಧ್ಯವಿಲ್ಲದ ವಿಷಯವನ್ನು ದಿನಚರಿಯಲ್ಲಿ ಬರೆದಿಟ್ಟಿರುತ್ತಾರೆ. ಇದು ಒಂದು ಸ್ವಂತವಾಗಿ ಬರೆಯುವ ಪದ್ಧತಿ.

ಪತ್ರಗಳು ಬದಲಾಯಿಸಿ

ಪತ್ರಗಳಲ್ಲಿ ಎರಡೂ ಕಡೆ ಕಾಗದ ಪತ್ರಗಳು ದೊರೆತರೆ ಅವು ನಿಜವಾದ ಸತ್ಯವಾದ ಮಾಹಿತಿಯೆಂದು ಕಂಡು ಹಿಡಿಯಬಹುದು. ಹಾಗೂ ನಿರೂಪಿಸಬಹುದು. ಭಾವನೆ, ಸ್ನೇಹ, ಪ್ರೀತಿ, ವೈವಾಹಿಕ ಸಂಬಂಧ, ಉದ್ವೇಗ ಇವುಗಳನ್ನು ತಿಳಿಯಬಹುದು.


ಸಾರ್ವಜನಿಕ ಅಥವಾ ಕಛೇರಿ ದಸ್ತಾವೇಜುಗಳು ಬದಲಾಯಿಸಿ

ಸಾರ್ವಜನಿಕ ದಸ್ತಾವೇಜುಗಳು ಮಾಧ್ಯಮಿಕ ಮೂಲದ ಮಾಹಿತಿಗಳ ಬಹುಮುಖ್ಯ ಭಾಗವಾಗಿದೆ. ಸರ್ಕಾರಿ ಸಂಸ್ಥೆಗಳಿಂದ ಸಂಗ್ರಹಿಸಿದ ಮಾಹಿತಿ ಇದಾಗಿದೆ. ಇವು ಪ್ರಕಟಿತ ಇಲ್ಲವೇ ಅಪ್ರಕಟಿತ ಇರಬಹುದು. ಈ ಕೆಳಗಿನವು ಕೆಲವೊಂದು ಪ್ರಮುಖ ಸಾರ್ವಜನಿಕ ದಸ್ತಾವೇಜುಗಳಾಗಿವೆ.

ಕಡತಗಳು ಬದಲಾಯಿಸಿ

ಎಲ್ಲಾ ರೀತಿಯಲ್ಲಿ ಸಾರ್ವಜನಿಕವಾಗಿ ದೊರಕುವ ದಾಖಲೆಗಳಿಗೆ ವಿಶಿಷ್ಟ ಸ್ಥಾನವಿದೆ. ಇವು ಸಂತೃಪ್ತಿಕರ ಮತ್ತು ಅವಲಂಬನೆಯಾಗಿರುತ್ತದೆ. ಇದರಲ್ಲಿ ಮುಖ್ಯವಾದುವು ಕಾನೂನಿನ ಕಡತ, ಪೊಲೀಸ್ ಕಡತ, ನ್ಯಾಯಾಲಯದ ಕಡತ, ವ್ಯಾಪಾರದ ಕಡತ, ಇಂತಹುವುಗಳು ಆಗಿವೆ. ಇವು ಉಪಯೋಗಕರ ಹಾಗೂ ನಂಬಿಕೆಗೆ ಅರ್ಹವಾದ ಮಾಹಿತಿಯನ್ನು ನೀಡಬಹುದಾಗಿದೆ.

ಪುಸ್ತಕಗಳು ಬದಲಾಯಿಸಿ

ಇವು ಹೆಚ್ಚು ಜ್ಞಾನವನ್ನು ಕೊಡುತ್ತದೆ. ಸಂಶೋಧನೆಗೆ ಈ ಪುಸ್ತಕಗಳು ಪ್ರಾಯೋಗಿಕ ವಿಷಯಗಳ ಬಗ್ಗೆ ಸಹಾಯ ಮಾಡುತ್ತವೆ. ಇದರ ಬಗ್ಗೆ ಜ್ಞಾನ ಸಂಪಾದಿಸಲುಸಂಶೋಧಕ ಪುಸ್ತಕ ಸಾಹಿತ್ಯಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಬೇಕು.

ಕಛೇರಿ ಪ್ರಕಟಣೆಗಳು ಬದಲಾಯಿಸಿ

ಸರ್ಕಾರಿ ಕಛೇರಿಗಳಾಗಿರಲಿ ಅಥವಾ ಖಾಸಗಿ ಕಛೇರಿಗಳಾಗಿರಲಿ ಪ್ರತಿಯೊಂದು ಕಾಲದಲ್ಲಿಯೂ ಪ್ರಕಟಿಸುವ ಔಪಚಾರಿಕ ಮಾಹಿತಿಗಳೇ ಕಛೇರಿ ಪ್ರಕಟಣೆಗಳಾಗಿರುತ್ತವೆ. ವಾರ್ಷಿಕ ಉತ್ಪನ್ನ, ಸರಾಸರಿ ಆದಾಯ, ರಾಷ್ಟ್ರೀಯ ಆದಾಯ, ವಿದೇಶೀ ವ್ಯಾಪಾರ, ವಿನಿಮಯ ದರ, ಅಪರಾಧ, ಜನನ ಪ್ರಮಾಣ ಮತ್ತು ಮರಣಪ್ರಮಾಣ, ವಿಚ್ಛೇಧನ ಇತ್ಯಾದಿ ವಿಷಯಗಳ ಮೇಲೆ ಇವು ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತವೆ. ಉದಾಹರಣೆ: "ಇಂಡಿಯಾ -ಎ ರೆಫರೆನ್ಸ್ ಅನ್ಯುಯಲ್".

ದಿನಪತ್ರಿಕೆಗಳು ಬದಲಾಯಿಸಿ

ದಿನನಿತ್ಯ ನಡೆಯುವ ಘಟನೆಗಳನ್ನು ಪತ್ರಕರ್ತ ಪತ್ರಿಕೆಗಳಿಗೆ ವರದಿ ನೀಡುತ್ತಾನೆ. ಈ ವರದಿಗಳು ಬಹು ಮುಖ್ಯವಾಗಿರುತ್ತದೆ. ಆದರೆ ವ್ಯಕ್ತವಾಗುವ ಘಟನೆಗಳ ವರದಿಯನ್ನು ಸಂಪೂರ್ಣವಾಗಿ ನಂಬಲಾಗದು. ಪತ್ರಿಕಾ ವರದಿಗಾರ ಹಲವಾರು ರೀತಿಯ ಒತ್ತಡಗಳಿಂದ ವರದಿ ನೀಡಿರುತ್ತಾನೆ.

ಸಮೀಕ್ಷೆ ವರದಿಗಳು ಬದಲಾಯಿಸಿ

ಖಾಸಗಿ, ಸರ್ಕಾರಿ ಮತ್ತು ಇತರೆ ಸಂಘ ಸಂಸ್ಥೆಗಳು ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು, ಶೈಕ್ಷಣಿಕ ಅಂತಸ್ತು, ಮಾರುಕಟ್ಟೆ ಪರಿಸ್ಥಿತಿಗಳು ಇತ್ಯಾದಿಗಳ ಮೇಲೆ ಇವು ಉಪಯುಕ್ತ ಮಾಹಿತಿ ನೀಡುವುದೇ ಸಮೀಕ್ಷೆ ವರದಿಯಾಗಿರುತ್ತದೆ. ಸಂಶೋಧಕ ಬಳಸಿಕೊಳ್ಳುವ ಬಹುಮುಖ್ಯ ಸಾರ್ವತ್ರಿಕ ದಾಖಲೆಯೆಂದರೆ "ರಾಷ್ಟ್ರೀಯ ನಮೂನೆ ಸಮೀಕ್ಷೆ ವರದಿಗಳು".

ಸಂಚಿಕೆಗಳು ಮತ್ತು ನಿಯತಕಾಲಿಕೆಗಳು ಬದಲಾಯಿಸಿ

ಈ ಸಂಚಿಕೆ ಮತ್ತು ನಿಯತಕಾಲಿಕೆಗಳು ತುಂಬಾ ವಿವಿಧ ರೀತಿಯ ವಿಷಯಗಳನ್ನೊಳಗೊಂಡಿರುತ್ತದೆ. ಹೆಚ್ಚಿನವು ಅವಲಂಬಿತಾರ್ಹವಾಗಿರುತ್ತದೆ. ಸಾಮಾಜಿಕ ಸಂಶೋಧನೆಗೆ ಬಳಸಲು ಉಪಯೋಗವಾಗುತ್ತದೆ. ಇದು ಬಹುಮುಖ್ಯ ಮಾಹಿತಿಗೆ ಮೂಲವಾಗಿದೆ.

ಪ್ರವಾಸ ಕಥನಗಳು ಬದಲಾಯಿಸಿ

ಇದು ವಿಶ್ವದ ವಿವಿಧ ಸ್ಥಳಗಳಿಗೆ ಹೋಗಿ ನೋಡಿ ಬಂದ ಪ್ರಯಾಣ ಅನುಭವಗಳ ಬಗ್ಗೆ ಬರೆಯುವ ವಿಚಾರಧಾರೆ. ಸಂಶೋಧನೆಗೆ ಬಹಳ ಉಪಯೋಗವಾದ ವಿಚಾರದ ಮಾಹಿತಿ ಕೊಡುತ್ತದೆ.

ಚಾರಿತ್ರಿಕ ದಾಖಲೆಗಳು ಬದಲಾಯಿಸಿ

ಹಲವಾರು ಘಟನೆಗಳು, ಸಂಗತಿಗಳು, ವ್ಯವಸ್ಥೆ ಅಥವಾ ಸಂಸ್ಥೆಯೊಂದರ ಚಾರಿತ್ರಿಕ ದಾಖಲೆಗಳು ಮತ್ತೊಂದು ಪ್ರವರ್ಗದ ಉಪಯುಕ್ತ ದಸ್ತಾವೇಜು ಮೂಲದ ಪುರಾವೆಗಳಾಗಿವೆ.

ಜೀವನ ಚರಿತ್ರೆಗಳು ಬದಲಾಯಿಸಿ

ಜೀವನ ಚರಿತ್ರೆಯೆಂದರೆ ವ್ಯಕ್ತಿಯೊಬ್ಬನ ತನ್ನ ಜೀವನದ ವಿಷಯವನ್ನು ಬೇರೆ ವ್ಯಕ್ತಿಯು ನೀಡಿದ ವಿವರಣೆಯಾಗಿರುತ್ತದೆ. ಇಂತಹ ಚರಿತ್ರೆಗಳು ಪ್ರಖ್ಯಾತ ವ್ಯಕ್ತಿಗಳನ್ನು ಕುರಿತದ್ದಾಗಿರುತ್ತದೆ. ಪ್ರಕಟಿಸಲೆಂದೇ ಹೆಚ್ಚು ಒತ್ತು ನೀಡಿ ನಾಟಕೀಯವಾಗಿ ಬರೆಯುತ್ತಾರೆ. ಕೇಳಲು, ಓದಲು ಕುತೂಹಲಕಾರಿಯಾಗಿರುವಂತೆ ಮಾಡುತ್ತಾರೆ. ಸತ್ತವರನ್ನು ರಕ್ಷಿಸಲು ಹೆಂಡತಿ, ಮಕ್ಕಳು ಚರಿತ್ರೆಗಳನ್ನು ಬೇರೆ ಬೇರೆ ರೀತಿಯಾಗಿ ಬರೆಯುತ್ತಾರೆ.

ಜನಗಣತಿ ವರದಿಗಳು ಮತ್ತು ಸಂಖ್ಯಾ ಮಾಹಿತಿಗಳು ಬದಲಾಯಿಸಿ

ಇವುಗಳನ್ನು ಪರಿಣಿತರು ತಯಾರು ಮಾಢುತ್ತಾರೆ. ಇದನ್ನು ಸಮಾಜ ಶಾಸ್ತ್ರಜ್ಞರು,ವಿಜ್ಞಾನಿಗಳು ಬಳಸುತ್ತಾರೆ.

ವರದಿಗಳು ಬದಲಾಯಿಸಿ

ವರದಿ ಮಾಡಿಕೊಳ್ಳುವ ಉದ್ದೇಶ ವಿಷಯಗಳನ್ನು ಸಂಗ್ರಹಿಸುವುದು. ಘಟನೆ ನಡೆದ ಮೇಲೆ ವರದಿ ಬರೆಯುತ್ತಾರೆ. ದಸ್ತಾವೇಜು ಮೂಲದ ವರದಿಯ ವಿಷಯಗಳು ಸಂಶೋಧನೆಗೆ ತನ್ನ ಕಾರ್ಯದ ಯೋಚನೆ ಮಾಡಲು ತಳಪಾಯವಾಗುತ್ತದೆ. ಪ್ರಶ್ನೆ ಮಾಡಿ ಅವಲೋಕನ ಮಾಡಿ, ಭೇಟಿ ಮಾಡಿ ಈ ಪದ್ದತಿಯನ್ನು ಅನುಸರಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಅವಲೋಕನೆ ಬದಲಾಯಿಸಿ

ಅವಲೋಕನವೆಂದರೆ ಸಂಶೋಧನೆಯ ಶಾಸ್ತ್ರೀಯ ಪದ್ದತಿಯೆಂದಾಗಿರುತ್ತದೆ.

ಅವಲೋಕನೆಯ ಬಗೆಗಳು ಬದಲಾಯಿಸಿ

  1. ಅನಿಯಂತ್ರಿತ ಅವಲೋಕನೆ ಮತ್ತು
  2. ನಿಯಂತ್ರಿತ ಅವಲೋಕನೆ

ಇಲ್ಲಿ ಅವಲೋಕನೆಯ ಪರಿಸ್ಥಿತಿಗಳು ವಿಧಿಬದ್ಧವಾಗಿದ್ದು ಪ್ರಶ್ನಾವಳಿ, ಅನುಸೂಚಿ, ನಕ್ಷೆ, ಭಾವಚಿತ್ರ ಇತ್ಯಾದಿ ಯಾಂತ್ರಿಕ ಸಾಧನಗಳನ್ನು ಬಳಸಲಾಗುತ್ತದೆ.

ಪ್ರಶ್ನಾವಳಿ ಬದಲಾಯಿಸಿ

ಪ್ರಶ್ನಾವಳಿಯೆಂಧರೆ ಹೊರಗಿನ ಸಂಗತಿಗಳನ್ನು ಅಭ್ಯಸಿಸಲು ಸಂಶೋಧನ ಪ್ರಶ್ನಾವಳಿ ಪದ್ದತಿಯನ್ನು ಬಳಸಲಾಗುತ್ತದೆ. ಮಾಹಿತಿಯನ್ನು ಸಂಗ್ರಹಿಸಲು ಪ್ರಶ್ನಾವಳಿಯನ್ನು ಉಪಯೋಗಿಸುತ್ತಾರೆ.

ಪ್ರಶ್ನಾವಳಿಯ ಪ್ರಕಾರಗಳು ಬದಲಾಯಿಸಿ

  1. ರಚಿತ ಪ್ರಶ್ನಾವಳಿ
  2. ಅರಚಿತ ಪ್ರಶ್ನಾವಳಿ

ರಚಿತ ಪ್ರಶ್ನಾವಳಿ ಸ್ಪಷ್ಟ ನಿರ್ದಿಷ್ಟ ಪೂರ್ವ ನಿರ್ಧರಿತ ಪ್ರಶ್ನೆಗಳನ್ನು ಹೊಂದಿದ ಪ್ರಶ್ನೆ ಮಾಲಿಕೆ.

ಅಂಚೆ ಪ್ರಶ್ನಾವಳಿ ಬದಲಾಯಿಸಿ

ಸಂದರ್ಶನಕ್ಕೆ ಜನರು ಸಿಗದೆ ಇದ್ದಾಗ ಬೇರೆ ಕಡೆ ಹರಡಿಕೊಂಡಿರುವವರ ಬಗ್ಗೆ ಮಾಹಿತಿ ಕಲೆ ಹಾಕಲು ಇರುವ ಸಾಧನವೆಂದರೆ ಅಂಚೆ ಪ್ರಶ್ನಾವಳಿ. ಇದನ್ನು ಉತ್ತರಿಸಿ ಅಂಚೆ ಮೂಲಕ ಪ್ರಶ್ನಾವಳಿಯನ್ನು ಕಳುಹಿಸಿಕೊಡಬಹುದು. ಅಂಚೆ ಪ್ರಶ್ನಾವಳಿ ವಿಧಾನವನ್ನು ಬಳಸುವ ಸಂಶೋಧಕ ಈ ಕೆಳಗಿನ ಅಂಶಗಳನ್ನು ಮೊದಲಿಗೇ ಗಮನಿಸಬೇಕು:

  1. ಬೇಕಾದ ಮಾಹಿತಿಯ ಪ್ರಕಾರ
  2. ತಲುಪಿದ ಸೂಚನದಾತನ ಪ್ರಕಾರ
  3. ಸೂಚನದಾತನ ಲಭ್ಯತೆ
  4. ಪ್ರಾಕ್ಕ್ ಲ್ಪನೆಯ ನಿಕರತೆ.

ಪ್ರಶ್ನಾವಳಿಯ ಅನುಕೂಲಗಳು ಬದಲಾಯಿಸಿ

ಶೀಘ್ರ ಅಂಚೆಯ ಮೂಲಕ ಕಳುಹಿಸಿಕೊಡುವುದು. ಒಂದು ವೇಳೆ ಹೆಚ್ಚು ಜನರನ್ನು ತಲುಪಿಸಲು ಸಾಧ್ಯವಾಗದೆ ಇದ್ದಾಗ ಅಂಚೆ ವಿಳಂಬ ಪದ್ಧತಿ ತಪ್ಪಿಸಿ ಶೀಘ್ರವಾಗಿ ಕಾಲ ಉಳಿಯುವುದು ಮತ್ತು ಇದರ ಹಣ, ಶ್ರಮ ಉಳಿಸಲು ಇದು ಉಪಯೋಗವಾಗುತ್ತದೆ.

ಪ್ರಶ್ನಾವಳಿಯ ಅನಾನುಕೂಲಗಳು ಬದಲಾಯಿಸಿ

ಅನಾನುಕೂಳ ಪ್ರಶ್ನಾವಳಿಯನ್ನು ಹಿಂದಕ್ಕೆ ಕಳುಹಿಸುವುದು ಅನೇಕ ಅಂಶಗಳಿಂದ ಕೂಡಿದೆ. ಕೆಲವು ಸಲ ಜನರು ಪ್ರಶ್ನಾವಳಿಗಳನ್ನು ಹಿಂತಿರುಗಿಸುವುದಿಲ್ಲ.

ಸಂದರ್ಶನ ಪದ್ಧತಿ ಬದಲಾಯಿಸಿ

ಸಾಧಾರಣ ಸಂದರ್ಶನವೆಂದರೆ ಮುಖಾ-ಮುಖಿಯಾಗಿ ಪ್ರಶ್ನಿ ಕೇಳುವುದು. ಇದರಲ್ಲಿ ಎರಡು ವಿಧಗಳು.

ಸಂದರ್ಶನದ ಬಗೆಗೆಳು ಬದಲಾಯಿಸಿ

  • ರಚಿತ

ರಚಿತ ಸಂದರ್ಶನವೆಂದರೆ ನಿರ್ಧೇಶಿತ, ನಿಯಂತ್ರಿತ ಸಂದರ್ಶನವೆನ್ನುತ್ತಾರೆ. ಮೊದಲೇ ಪ್ರಶ್ನೆಯನ್ನು ತಯಾರಿಟ್ಟುಕೊಂಡು ಪ್ರಶ್ನೆಗಳನ್ನು ಕೇಳುವುದೇ ರಚಿತ ಸಂದರ್ಶನವಾಗಿದೆ.

  • ಅರಚಿತ

ಅರಚಿತ ಸಂದರ್ಶನದಲ್ಲಿ ಬಳಸಿದ ತಂತ್ರಗಳು ತುಂಬಾ ನಿಜವಾಗಿ, ಸತ್ಯವಾಗಿರುವುದಿಲ್ಲ. ಏನು ವಿಷಯ ಮಾಹಿತಿಗಾಗಿ ಕೊಡುತ್ತೇವೆಂದು ಸಂದರ್ಶಕರಿಗೆ ಗೊತ್ತಿರುವುದಿಲ್ಲಿ. ಸಂದರ್ಶನ ಪದ್ಧತಿ ಸ್ವಂತವಾಗಿ ಹಾಗೂ ಪ್ರತ್ಯಕ್ಷ ಜ್ಞಾನವನ್ನು ಪಡೆಯಲು ಸಾಧನವಾಗಿದೆ. ಇದರಲ್ಲಿ ಕೊಡುವ ಮಾಹಿತಿ ನಂಬಿಕೆಗೆ ಅರ್ಹವಾಗಿರುತ್ತದೆ. ಇದರಿಂದ ಎಲ್ಲರನ್ನು ಸಂಪರ್ಕಿಸಬಹುದು ಹಾಗೂ ಎಲ್ಲರಿಗೂ ಉತ್ತರಿಸಬಹುದು.

ಇತರೆ ಪ್ರಕಾರದ ಸಂದರ್ಶನಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ ಬದಲಾಯಿಸಿ

  1. ಕೇಂದ್ರೀಕೃತ ಸಂದರ್ಶನ
  2. ಪುನರಾವರ್ತಿ‍ತ ಸಂದರ್ಶನ
  3. ರೋಗಶ್ಯ್ಯೆಯ ಸಂದರ್ಶನ
  4. ಅ-ನಿರ್ದೇಶಿತ ಸಂದರ್ಶನ
  5. ಆಳವಾದ, ಗಹನವಾದ ಸಂದರ್ಶನ
  6. ದೂರವಾಗಿ ಸಂದರ್ಶನ

ಸಂದರ್ಶನ ಪದ್ಧತಿಯ ಅನುಕೂಲಗಳು ಬದಲಾಯಿಸಿ

  • ಸಂದರ್ಶನ ಪದ್ಧತಿಯಲ್ಲಿ ವ್ಯಕ್ತಿಯು ಪ್ರತ್ಯಕ್ಷ ಜ್ಞಾನವನ್ನು ಪಡೆದುಕೊಳ್ಳುವ ಸಾಧನವಾಗಿರುವುದರಿಂದ ಮಾಹಿತಿ ಹೆಚ್ಚು ನಂಬಿಕಾರ್ಹವಾಗಿರುತ್ತದೆ.

ಸಂದರ್ಶನ ಪದ್ಧತಿಯ ಅನಾನುಕೂಲಗಳು ಅಥವಾ ದೋಷಗಳು ಬದಲಾಯಿಸಿ

  • ಸಂದರ್ಶನದ ಪರಿಣಾಮ ಸಂದರ್ಶಕನ ಕುಶಲತೆ ಹಾಗೂ ಬುದ್ಧಿಗೆ ಅವಲಂಬಿಸಿದೆ. ತರಬೇತಿಗೆ ತೀವ್ರ ನಿಗಾ ಕೂಡ ಇರಬೇಕು. ಇಲ್ಲದಿದ್ದರೆ ಅರ್ಧ ಮಾಹಿತಿ ಹಾಗೂ ಸರಿಯಾದ ಮಾಹಿತಿ ಸಿಗುವುದಿಲ್ಲ.
  • ಹೊಸಬರ ಮುಂದೆ ಸಂದರ್ಶನಕ್ಕೆ ಕುಳಿತುಕೊಳ್ಳಲು ಇಷ್ಟಪಡದೆ ಹಲವರು ಪ್ರಶ್ನಾವಳಿ ಭರ್ತಿಸಲು ಇಚ್ಚಿಸುತ್ತಾರೆ.

ವಿಷಯ ಅಧ್ಯಯನ ಪದ್ಧತಿ ಬದಲಾಯಿಸಿ

ಇದು ಒಂದು ಗುಣಾತ್ಮಕ ಚಿಂತನೆ ಹಾಗೂ ವಿವರಣೆಯಾಗಿದೆ. ಮನೋವಿಜ್ಞಾನ, ಶಿಕ್ಷಣ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ, ಔಷಧಶಾಸ್ತ್ರ ಮುಂತಾದವುಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಹಳೆ ಮಾಹಿತಿ ಸಂಗ್ರಹಣೆಯ ಪದ್ಧತಿ. ಸಾಮಾಜಿಕ ಘಟಕದ ವಸ್ತು ವಿಷಯದ ಅಂಶವನ್ನು ಲಕ್ಷಣವನ್ನು ಜೋಪಾನ ಮಾಡಲು ಸಾಮಾಜಿಕ ಮಾಹಿತಿ ಒಟ್ಟಿಗೆ ಸೇರಿಸುತ್ತಾರೆ. ಈ ದಾರಿಯನ್ನು ವಿಷಯ ಅಧ್ಯಯನ ಪದ್ಧತಿ ಎನ್ನುತ್ತಾರೆ.

ವಿಷಯ ಅಧ್ಯಯನದ ಲಕ್ಷಣಗಳು ಬದಲಾಯಿಸಿ

  1. ಸಂಪೂರ್ಣ ಘಟಕದ ಅಧ್ಯಯನ
  2. ತೀವ್ರ, ಗಹನ ಅಧ್ಯಯನ
  3. ಬಹುಪದ್ಧತಿಗಳ ಬಳಕೆ
  4. ಏಕಾಂತಕವಾದುದು

ವಿಷಯ ಅಧ್ಯಯನವನ್ನು ಯೋಜಿಸುವುದು ಬದಲಾಯಿಸಿ

ಇದನ್ನು ಯೋಜಿಸುವುದೆಂದರೆ ಒಂದು ಪ್ರಾರಂಭಿಕ ಪ್ರಶ್ನೆಗಳ ನಿರೂಪಣೆ. ಇದು ಏಕೆ, ಯಾವಾಗ, ಎಲ್ಲಿ, ಹೇಗೆ, ಎಷ್ಟು ಎಂಬ ವಿಷಯಗಳ ಅಧ್ಯಯನವಾಗಿದೆ.

  1. ಪ್ರಾರಂಭಿಕ ಪ್ರಶ್ನೆಗಳ ರೂಪಣೆ
  2. ನಿರ್ದಿಷ್ಠ ಪ್ರಶ್ನೆಗಳು
  3. ವಿಶ್ಲೇಷಣೆಯ ಘಟಕ
  4. ವಿಶ್ಲೇಷಣೆ ಮತ್ತು ನಿರ್ಣಯ

ವಿಷಯ ಅಧ್ಯಯನದ ಅನುಕೂಲಗಳು ಬದಲಾಯಿಸಿ

ಸಾಮಾಜಿಕ ಸಂಶೋಧನೆಯ ಕ್ಷೇತ್ರದಲ್ಲಿ ವಿಷಯದ ತಿಳುವಳಿಕೆ ಮುಖ್ಯ ಸ್ಥಾನವನ್ನು ಪಡೆದಿದೆ. ಇದರಲ್ಲಿ ಹಲವಾರು ರೀತಿ ಇರುತ್ತದೆ. ಸ್ವಭಾವತಃ ತೀವ್ರವಾದುದು. ಇದು ವಿಷಯವನ್ನು ಸಂಪೂರ್ಣ‍ವಾಗಿ ಅಭ್ಯಸಿಸುತ್ತದೆ.

ವಿಷಯ ಅಧ್ಯಯನ ಪದ್ಧತಿಯ ದೋಷಗಳು ಬದಲಾಯಿಸಿ

ಇದರ ದೋಷಗಳೆಂದರೆ ವ್ಯಕ್ತಿನಿಷ್ಟ, ಪೂರ್ವ ಗ್ರಾಹಕಗಳು ಅಂದರೆ ತಾನು ಸಂಗ್ರಹಿಸಿದ ಮಾಹಿತಿಯನ್ನು ಸೇರಿಸುವ ಇಲ್ಲವೆ ಬಿಡುವ ಸ್ವಾತಂತ್ರ್ಯ ಅವನಿಗಿರುತ್ತದೆ. ಹೆಚ್ಚು ಹಣ ಮತ್ತು ಕಾಲದ ಅಭಿವೃದ್ಧಿ ತುಂಬಾ ಬೇಕಾಗುತ್ತದೆ. ಇದು ಇನ್ನೊಂದು ಅನಾನುಕೂಲ ಸಂಗತಿ. ಇದರಲ್ಲಿ ಘಟಕವನ್ನು ಎಲ್ಲಾ ತರಹದ ಮತ್ತು ಆಳವಾಗಿ ಅಭ್ಯಸಿಸಲಾಗುತ್ತದೆ. ಹಣ ಹೆಚ್ಚಾಗಿ ಬೇಕಾಗಿರುವುದರಿಂದ ಇದು ಒಂದು ದುಬಾರಿ ಪದ್ಧತಿ ಹಾಗೂ ಅನಾನುಕೂಲ ಪದ್ಧತಿಯಾಗಿರುತ್ತದೆ.

[೧]

ಉಲ್ಲೇಖ ಬದಲಾಯಿಸಿ

</ref>

ಉಲ್ಲೇಖ ಬದಲಾಯಿಸಿ

[೧] </ref>

ಜಿ.ಸುಬ್ರಹ್ಮಣ್ಯ,(2007),ಸಾಮಾಜಿಕ ಸಂಶೋಧನೆ ಪದತಿಗಳು ಮತ್ತು ತಂತ್ರಗಳು,ಸಪ್ನಾ ಪಬ್ಲಿಷರ್ಸ್

  1. https://kn.wikipedia.org/wiki/%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86