RPrerana1810276
Prerana | |
---|---|
ಜನನ:
ಬದಲಾಯಿಸಿನನ್ನ ಹೆಸರು ಪ್ರೇರಣ ಆರ್. ನಾನು ಡಿಸೆಂಬರ್ ೨೫ರಂದು ತುಮಕೂರು ಜಿಲ್ಲೆಯಲ್ಲಿ ಜನಿಸಿದೆ. ತಂದೆಯ ಹೆಸರು ರಮೇಶ್ ಮತ್ತು ತಾಯಿಯ ಹೆಸರು ಪ್ರೇಮ. ನನಗೊಬ್ಬ ಅಣ್ಣನಿದ್ದಾನೆ ಅವನ ಹೆಸರು ಪ್ರವೀಣ್. ಅವನು ಉತ್ತಮ ವಿದ್ಯಾಭ್ಯಾಸ ಪಡೆದು ಅಮೇರಿಕದಲ್ಲಿ ಕೆಲಸದಲ್ಲಿದ್ದಾನೆ.
ಆಸಕ್ತಿ ಕ್ಷತ್ರಗಳು:
ಬದಲಾಯಿಸಿನೃತ್ಯ ವೆಂದರೆ ನನಗೆ ಆಸಕ್ತಿ ಹೆಚ್ಚು. ಪ್ರತಿ ವರುಷದ ಕೊನೆಯಲ್ಲಿ ಬರುವ ಶಾಲಾ ವಾರ್ಷಿಕೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದೆ. ಇದರಿಂದಾಗಿ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದೆ. ನನಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಹೆಚ್ಚು ಆಸಕ್ತಿ ಹೊಂದಿದ್ದೇನೆ. ಪ್ರತಿ ವರುಷ ಶಾಲೆಯ ವತಿಯಿಂದ ಏರ್ಪಡಿಸುತ್ತಿದ್ದ ಚಾರಣ ಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಕುಮಾರಪರ್ವತ, ಕೊಡಚಾದ್ರಿ ಮುಂತಾದ ತಾಣಗಳಿಗೆ ಹೋಗಿದ್ದೇನೆ. ಚಾರಣದಿಂದಾಗಿ ನನ್ನ ಮನಸ್ಸಿಗೆ ಪುಳಕ ಉಂಟಾಗಿ, ಮನಸ್ಸು ಉಲ್ಲಾಸ ಮಯವಾಗುತಿತ್ತು.
ಶಿಕ್ಷಣ:
ಬದಲಾಯಿಸಿನಾನು ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಢ ಶಿಕ್ಷಣವನ್ನು ಮಾರುತಿ ಇಂಟರ್ನ್ಯಾಶನಲ್ ಶಾಲೆಯಲ್ಲಿ ಮುಗಿಸಿದೆ.ಆಲ್ಲಿ ಓದಿನಲ್ಲೂ ಮುಂದಿದ್ದು, ಬಹಳ ಲವಲವಿಕೆಯಿಂದ ಕೂಡಿ ಯೆಲ್ಲ ವಿಧದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ.ಹೀಗೆ ನಲಿಯುತ್ತ ಕಲಿಯುತ್ತಾ ನನ್ನ ಶಾಲಾ ದಿನಗಳನ್ನು ಖುಷಿಯಿಂದ ಕಳೆದೆ. ೧೦ ನೇ ತರಗತಿಯ ಪರೀಕ್ಷೆ ಹತ್ತಿರ ಬಂದಂತೆ ಓದಿನ ಕಡೆಗೆ ಹೆಚ್ಚು ಸಮಯ ಕೊಡಲು ಆರಂಭಿಸಿದೆ. ಪರೀಕ್ಷೆಯಲ್ಲಿ ಶೇಖಡ ೮೯ ರಷ್ಟು ಅಂಕಗಳನ್ನು ಪಡೆದೆ.
ನಂತರ ಪದವಿ ಪೂರ್ವ ಶಿಕ್ಷಣಕ್ಕೆ, ನನಗೆ ಹೆಚ್ಚು ಆಸಕ್ತಿ ಇದ್ದ ವಾಣಿಜ್ಯ ಶಾಸ್ತ್ರ ವಿಶಯವನ್ನು ಆರಿಸಿಕೊಂಡು ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿಗೆ ಪ್ರವೇಶ ಪಡೆದೆ.ನನಗೆ ಆಸಕ್ತಿಯಿದ್ದ ನೃತ್ಯ ಕಲೆಯನ್ನು ಮತ್ತೆ ಮುಂದುವರಿಸಿದೆ. ಪ್ರಸಿದ್ಧಿಯನ್ನು ಪಡೆದೆ.ಓದು ತುಂಟಾಟ ಇವೆಲ್ಲವುಗಳಿಂದ ನನ್ನ ದ್ವಿತೀಯ ಪಿ.ಯು ಶಿಕ್ಷಣವನ್ನು ಮುಗಿಸಿದೆ, ಕೊನೆಗೆ ಪರೀಕ್ಷೆಯಲ್ಲಿ ಶೇಖಡ ೯೪ ಅಂಕಗಳನ್ನು ಪಡೆದೆ.ನನ್ನ ಉತ್ತಮ ಸಾಧನೆಗಳನ್ನು ಗುರುತಿಸಿ ಅನೇಕ ಪ್ರತಿಭಾ ಪುರಸ್ಕಾರಗಳು ಸಂದವು.
ಉತ್ತಮ ಅಂಕಗಳು ಪಡೆದ ಕಾರಣ, ನನ್ನ ಆಸೆಯಂತೆ, ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು ಪ್ರಸಿದ್ಧವಾದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರಕಿಸಿಕೊಂಡೆ.ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನನ್ನ ಜೀವನದಲ್ಲಿ ಮುಖ್ಯ ಹಾಗು ವಿಭಿನ್ನ ಹಂತಗಳು. ಈ ಅನುಭವ ಬಹಳ್ ವಿಭಿನ್ನ ಏಕೆಂದರೆ ಬೇರೆಯ ಊರಿನಿಂದ ಬಂದು ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತ ಬೇರೆ ಬೇರೆ ರಾಜ್ಯಗಳಿಂದ ಊರಿನಿಂದ ಬಂದ ವಿದ್ಯಾರ್ಥಿಗಳೊಂದಿಗೆ ಬೆರೆಯುವುದು ಹೊಸದಾಗಿತ್ತು. ವಿಶ್ವವಿದ್ಯಾಲಯದ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯಿತು.ಎಲ್ಲವೂ ಹೊಸಆಗಿತ್ತು. ಬೇರೆ ರಾಜ್ಯದವರ ಪರಿಚಯ ಮತ್ತು ಕೆಲವರ ಆತ್ಮೀಯವಾದ ಸ್ನೇಹ ದೊರೆಯಿತು. ಇಲ್ಲೂ ನನ್ನ ನೃತ್ಯ ಕಲೆಯನ್ನು ಪರಿಚಯಿಸಲು ಆರಂಭಿಸಿದ್ದೇನೆ. ಮುಂದೆ ಬರುವ ವಿಶ್ವವಿದ್ಯಾಲಯದ ವಾರ್ಷಿಕೋತ್ಸವದ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದೇನೆ. ಹೀಗೆ ಬೆಂಗಳೂರಿನ ಸದ್ದು ಗದ್ದಲ, ಗಲಿ ಬಿಲಿಗಳ ಮಧ್ಯೆ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಿದ್ದೇನೆ.ಮುದದಿಂದ ಜೀವನ ಸಾಗಿಸುತ್ತಿದ್ದೇನೆ.