RAKSHITH N 1910252
ವೈಯಕ್ತಿಕ ವಿವರಣೆ
ಬದಲಾಯಿಸಿನನ್ನ ಹೆಸರು ರಕ್ಷಿತ್.ಎನ್. ನಾನು ೨೪ ಆಗಸ್ಟ್ ೨೦೦೧ರಂದು ಸಿಟಿ ಕ್ಲಿನಿಕ್ ಆಸ್ಪತ್ರೆಯಲ್ಲಿ ಜನಿಸಿದೆ.ನನ್ನ ತಂದೆ ನಾಗರಾಜು ಹಾಗೂ ತಾಯಿ ಚಂದ್ರಕಲಾ.ನನ್ನ ತಂದೆ ಚಾಲಕರಾಗಿದ್ದಾರೆ ಹಾಗೂ ನನ್ನ ತಾಯಿ ಒಬ್ಬ ಗೃಹಿಣಿ. ನಾನು ಬೆಳೆದಿದ್ದು ಬೆಂಗಳೂರುನಲ್ಲಿ. ನಾನು ಜನಿಸಿದ ಆಸ್ಪತ್ರೆಯ ವೈದ್ಯರನ್ನು ನಾವು ನಮ್ಮ ಕುಟುಂಬದವರಂತೆ ಕಾಣುತ್ತೇವೆ. ಎಂದಿಗೂ ನಮ್ಮ ಹಾಗೂ ಅವರ ಒಡನಾಟ ಚೆನ್ನಾಗಿಯೇ ಇದೆ. ನಾನು ನನ್ನ ತಂದೆ - ತಾಯಿಯರ ಎರಡನೇ ಮಗ.
ಬಾಲ್ಯ ಹಾಗೂ ಪ್ರಾಥಮಿಕ ಶಾಲೆಯ ನೆನಪುಗಳು
ಬದಲಾಯಿಸಿನಾನು ನಾಲ್ಕನೇ ವಯಸಿನಲ್ಲಿ ಇದ್ದಾಗ ನನ್ನನು ಮೊದಲನೇ ಬಾರಿಗೆ ನನ್ನ ತಂದೆ - ತಾಯಿ ಶಾಲೆಗೆ ಕಳುಹಿಸಿದರು. ನನನಗೆ ಅಮ್ಮನ ಜೊತೆ ಮನೆಯಲ್ಲಿ ಇದ್ದು ಶಾಲೆಗೆ ಹೋಗಲು ಇಷ್ಟವೇ ಇರಲಿಲ್ಲ. ಬಲವಂತಿದ ಮೊದಲನೇ ಬಾರಿ ಹೋದಾಗ ಅದೊಂದು ಬೇರೆಯ ಪ್ರಪಂಚದ ಹಾಗೆ ಅನುಭವ ನೀಡಿತು. ನಂತರ ಅಲ್ಲಿನ ಶಿಕ್ಷಕರು ಹಾಗೂ ನನ್ನ ಗೆಳೆಯರೊಂದಿಗೆ ಹೊಂದಿಕೊಂಡೆ. ನಾನು ನನ್ನ ಪ್ರಾಥಮಿಕ ಹಾಗೂ ಹಿರಿಯ ವಿದ್ಯಾಭ್ಯಾಸವನ್ನು ಕಾವೇರಿ ವಿದ್ಯಾ ಕ್ಷೇತ್ರಂ ಪಬ್ಲಿಕ್ ಸ್ಕೂಲ್ನಲ್ಲಿ ಮಾಡಿದ್ದೇನೆ. ನನ್ನ ಅಕ್ಕ ಅದೇ ಶಾಲೆಯಲ್ಲಿ ಓದುತ್ತಿದ್ದರಿಂದ ನಾನು ಮೊದಲೇ ಅಲ್ಲಿನ ಶಿಕ್ಷಕರಿಗೆ ಪರಿಚಯವಿದ್ದೆನು. ಎಲರೂ ನನ್ನ ಹತ್ತಿರ ಚೆನ್ನಾಗಿ ವರ್ತಿಸುತ್ತಿದ್ದರು. ನಾನು ನನ್ನ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಓದಿನಲ್ಲಿ ಸಲ್ಪ ಕಡಿಮೆಯೇ. ಅಷ್ಟು ಚಾಣುಕ್ಯನು ಅಲ್ಲ. ನನ್ನ ಜೀವನವನ್ನು ಬೇರೆ ವಿಷಯಗಳಲ್ಲಿ ಮುಳುಗಿಸಿಕೊಂಡಿದ್ದೆನು. ಸದಾಕಾಲ ಸ್ನೇಹಿತರೊಂದಿಗೆ ಆಟವಾಡಿ, ಮಜಾ ಮಾಡಿಕೊಂಡು, ತಾಯಿಯ ಕೋಪಕ್ಕೆ ತುತ್ತಾದ ಸಂದರ್ಭಗಳೂ ಉಂಟು. ನನಗೆ ಸಂಗೀತ, ನೃತ್ಯ ಹಾಗೂ ಚರ್ಚೆಯಲ್ಲಿ ಆಸಕ್ತಿ ಇತ್ತು. thumb|237x237px
ನನ್ನ ಮೊದಲ ಕ್ರಿಕೆಟ್ ಮತ್ತು ಕಬ್ಬಡಿ ಪಂದ್ಯಾವಳಿ
ಬದಲಾಯಿಸಿthumb|239x239px|ನಮ್ಮ ಕ್ರಿಕೆಟ್ ತಂಡ ನಾನು ಅಂಡರ್ ೧೬ ನ್ಯಾಷನಲ್ ಲೆವೆಲ್ ಕ್ರಿಕೆಟ್ ಆಟದ್ದಲ್ಲಿ ಭಾಗವಹಿಸಿದ್ದೇನೆ. ಅದಕ್ಕಾಗಿ ನಾನು ಉತ್ತರ ಪ್ರಾದೇಶ ಬಲಿಯಾಕ್ಕೆ ತೆರಳಬೇಕಾಗಿತ್ತು. ಪ್ರವಾಸ ಮಾಡುವ ಅವಕಾಶ ದೊರೆಯಿತು. ನನಗೆ ಅಲ್ಲಿ ಉತ್ತಮ ಅನುಭವ ಸಿಕ್ಕಿತು. ನಂತರ ನಾನು ಕಬ್ಬಡಿಯಲ್ಲಿ ಡಿಸ್ಟ್ರಿಕ್ಟ್ ಲೆವೆಲ್ ಆಟಗಾರ ಸಹಾ ಆಗಿದ್ದೇನೆ ಮತ್ತು ಶಾಲೆಯಲ್ಲಿ ಇದ್ದಾಗ ಚದುರಂಗದ ಆಟದ ಮೇಲೆ ತುಂಬಾ ಆಸಕ್ತಿ ಇತ್ತು.ಇಂತಹ ಚಟುವಟಿಕೆಗಳಲ್ಲಿ ಮುಳುಗಿದ ನನಗೆ,೧೦ನೇ ತರಗತಿಗೆ ಬಂದಾಗ ಇವೆಲ್ಲವೂ ನನಗೆ ಮುಂದೆ ನನ್ನ ಓದಿನೊಂದಿಗೆ ಮುಂದುವರಿಸಲು ಕಷ್ಟವೆನಿಸಿತು ಹಾಗೂ ನನ್ನ ಶಿಕ್ಷಕರು ನನಗೆ ನನ ಭವಿಷ್ಯದ ಬಗ್ಗೆ ತಿಳಿಸಿದರು. ಇವನ್ನೆಲ್ಲ ತಲೆಯಲ್ಲಿ ಇಟುಕೊಂಡು, ನಾನು ಶ್ರಮದಿಂದ ಓದಿ ೧೦ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು, ಪದವಿ ಪೂರ್ವ ಶಿಕ್ಷಣಕ್ಕೆ ಕ್ರೈಸ್ಟ್ ಜೂನಿಯರ್ ಕಾಲೇಜ್ ನಲ್ಲಿ ಸೇರಿಕೊಂಡೆ.
ನನ್ನ ಮೊದಲ ಮತ್ತು ಎರಡನೆಯ ಪಿಯುಸಿ ವಿವರಣೆ
ಬದಲಾಯಿಸಿಕಾಲೇಜಿಗೆ ಸೇರಿಕೊಳ್ಳಲು ಮುನ್ನ ನಮಗೆ ಬೇಸಿಗೆಯ ರಜೆ ಇದ್ದವು. ಆಗ ನಾನು ಬೇಸಿಗೆ ಶಿಬಿರಗಳಿಗೆ ಸೇರಿಕೊಂಡೆ. ಅಲ್ಲಿ ನನಗೆ ನೀರಿನ ಭಯ ಹೋಗುವಂತೆ ನನ್ನ ಈಜು ಗುರುಗಳು ತರಬೇತಿ ನೀಡಿದರು. ಆ ಒಂದು ತಿಂಗಳ ಕಾಲ ನಾನು ಅಲ್ಲಿ ಅಭ್ಯಾಸ ಮಾಡಿದೆ. ಇದನ್ನು ಮುಗಿಸಿ ನಾನು ನನ್ನ ಕಾಲೇಜಿಗೆ ಹೋಗಲು ಆರಂಭಿಸಿದೆ. ಅಲ್ಲಿ ನಾನು ಹೊಸ ಜನಗಳ ನಡುವೆ ಬೆರೆಯುವುದು ಸಲ್ಪ ಆರಂಭದಲ್ಲಿ ಕಷ್ಟವಾಯಿತು. ಆದರು ಸಹ ನಾನು ಎಲ್ಲರೊಂದಿಗೆ ಹೊಂದಿಕೊಂಡು, ಎಲ್ಲರಜೊತೆ ಧೈರ್ಯದಿಂದ ಮಾತಾಡುವುದನ್ನು ಕಲಿತೆ. ಮೊದಲ ಆರು ತಿಂಗಳು ಕಾಲೇಜಿನಲ್ಲಿ ಏನೂ ನಡೆಯುತ್ತಿದೆ ಎಂಬ ಅರಿವೇ ಇರಲಿಲ್ಲ ಹಾಗೂ ಕಾಲೇಜಿನಲ್ಲಿ ಇದ್ದ ಕ್ಯಾಂಟೀನ್ ತುಂಬಾ ಆಕರ್ಷಣೆ ಇಂದ ಹಾಗೂ ರುಚಿ ರುಚಯಾದ ಊಟ ನಮಗೆ ದೊರೆಯುತ್ತಿತ್ತು. ನಂತರ ಎಲ್ಲವನು ಮೆಲ್ಲಗೆ ತಿಳಿದುಕೊಂಡು ಶಿಕ್ಷಕರ ಜೊತೆಯಲ್ಲಿ ಒಳ್ಳೆಯ ಸಂಬಂಧವನ್ನು ಹೊಂದಿದೆ. ನ ಅವರು ನಮ್ಮನು ಸ್ನೇಹಿತರ ಹಾಗೆ ನೋಡಿಕೊಳ್ಳುತ್ತಿದ್ದರು. ಏನಾದರೂ ತೊಂದರೆಯೂ ಉಂಟಾದರೆ ಅದನ್ನು ಪರಿಹರಿಸುತ. ಕಾಲೇಜಿನಲ್ಲಿ ನಡೆದ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿದೆ. ಕ್ಲಾಸ್ ಕಲ್ಚರಲ್,ಕ್ರಿಕೆಟ್ ಆಟದಲ್ಲಿ ಭಾಗವಹಿಸಿ ಪಿಯುಸಿಯ ವಿಜೇತನಾದೇನು. ಕಾಲೇಜಿನಲ್ಲಿ ನಡೆಯುತಿದ್ದ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಹೊಸ ಚಟುಟಿಕೆಗಳಲ್ಲಿ ನಾನು ಭಾಗವಹಿಸಲು ಪ್ರಯತ್ನಿಸುತ್ತಿದೆ ಹಾಗೂ ಹೊಸತನ್ನು ಕಲಿಯುವುದು ಮತ್ತು ಅನ್ವೇಷಿಸುವುದರಲ್ಲಿ ನನಗೆ ಆಸಕ್ತಿ ಇತ್ತು. ಇದರಿಂದಾಗಿ ನಾನು ಚಟುವಟಿಕೆಗಳಲ್ಲಿ ತೊಡಗುತ್ತಿದ್ದೆ. ಇದೆಲ್ಲ ನನ್ನ ಮೊದಲ ಪಿಯುಸಿಯಲ್ಲಿ ನಡೆದಂತಹ ವಿಷಯಗಳು. ನನ್ನ ಜೀವನದಲ್ಲಿ ಅದ್ಭುತವಾದ ಕ್ಷಣಗಳನ್ನು ಕಳೆದದ್ದು ನನ್ನ ದ್ವಿತೀಯ ಪಿಯುಸಿನಲ್ಲಿ. ಆ ವರ್ಷದಲ್ಲಿ ನಾನು ಜಾಬ್ ಸ್ಕಿಲ್ಸ್ ಕೋರ್ಸನಲ್ಲಿ ಭಾಗವಹಿಸಿದೆ. ನನ್ನ ಭವಿಷ್ಯದ ಸೋಪಾನ ನನಗೆ ಅಲ್ಲಿ ದೊರೆಯಿತು. ನಾನು ಆಡುವುದನ್ನು ಹಾಗೂ ಓದುವುದನ್ನು ಸಮವಾಗಿ ನಡೆಸಿಕೊಂಡು ಹೋಗಲು ಕಲಿತೆ. ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದೆ ಹಾಗು ತರಗತಿಯಲ್ಲಿ ಚರ್ಚೆಯನ್ನು ಆಸಕ್ತಿಯಿಂದ ಕೇಳುತ್ತಿದ್ದೆ. ನಂತರ ನನ್ನ ಕಡೆಯಿಂದ ಆಗುವಷ್ಟು ವಿಚಾರಗಳನ್ನ ನನ್ನ ಸ್ನೇಹಿತರಿಗೆ ತಿಳಿಸುತ್ತಿದೆ. ಇದರಿಂದ ಈಡಲೂ ನನಗೆ ಹಾಗೂ ನನ್ನ ಸ್ನೇಹಿತರಿಗೆ ಉಪಯೋಗವಾಗುತ್ತಿದೆ. ನಂತರ ಕಣ್ಣು ಮುಚ್ಚಿ ತೆಗದಂತೆಯೆ ಒಂದು ವರ್ಷ ಕಳೆದು ಹೋಗಿತ್ತು. ನಂತರ ನಮ್ಮ ಎಥ್ನಿಕ್ ದಿನ ಎಲ್ಲರೂ ಸೇರಿ ಆಚರಿಸಿ ಕೊನೆಯಲ್ಲಿ ನೃತ್ಯವನ್ನು ಮಾಡಿ. ಕಾರ್ಯಕ್ರಮವನ್ನು ಯಶಸ್ವಿ ಪಡಿಸಿದೆವು. ಒಂದು ತಿಂಗಳು ಬೋರ್ಡ್ ಪರೀಕ್ಷೆಗೆ ಸಿದ್ಧತೆಗೆ ಸಮಯವನ್ನು ಕೊಟ್ಟಿದ್ದರು. ನಾನು ಅದರ ಸಮಯವನ್ನು ಅರ್ಥಪೂರ್ಣವಾಗಿ ಉಪಯೋಗಿಸಿಕೊಂಡು, ನನ್ನ ಗುರುಗಳಿಂದ ಉತ್ತಮ ಶಿಕ್ಷಣ ದೊರಕಿದ್ದರಿಂದ, ನನ್ನ ಸ್ನೇಹಿತರು ಹಾಗೂ ನನ್ನ ಸಹದ್ಯೋಗಿಗಳೂ ನನಗೆ ಸಹಾಯ ಮಾಡಿದ್ದರಿಂದ. ಈ ಎಲ್ಲಾ ಕಾರಣದಿಂದಾಗಿ ನಾನು ನನ್ನ ದ್ವಿತೀಯ ಪಿಯುಸಿ ಅಲ್ಲಿ ಶೇಖಡಾ ೯೫ರಷ್ಟು ಅಂಕಗಳನ್ನು ಗಳಿಸಿದೆ. ಇದರಿಂದಾಗಿ ನನ್ನ ತಂದೆ ತಾಯಿ ನನ್ನ ಶಿಕ್ಷಕರು ಹಾಗೂ ಸ್ನೇಹಿತರು ಖುಷಿ ಪಟ್ಟರು. ಇವೆಲ್ಲವೂ ಅವರ ಬೆಂಬಲದಿಂದ ಸಾಧ್ಯವಾದ ಕೆಲಸ.
ನನ್ನ ಪ್ರವಾಸ ಕಥನ
ಬದಲಾಯಿಸಿನಾನು ಮತ್ತು ನನ್ನ ಕುಟುಂಬ ನಮ್ಮ ಬೇಸಿಗೆ ರಜೆಗಾಗಿ ಡೆಲ್ಹಿಗೆ ಹೋಗಿದ್ದೆವು. ನಾವು ಕುತುಬ್ ಮಿನಾರ್, ಕಮಲ ದೇವಾಲಯ, ಇಂಡಿಯಾ ಗೇಟ್, ಜಂತರ್ ಮಂತರ್ ಮತ್ತು ರೆಡ್ ಫೋರ್ಟ್ ಭೇಟಿ ನೀಡಿದ್ದೇವೆ. ನಂತರ ನಾವು ಆಗ್ರಾ ಕೋಟೆ ಮತ್ತು ತಾಜ್ ಮಹಲ್ ನೋಡಲು ಉತ್ತರ ಪ್ರದೇಶಕ್ಕೆ ಹೋದೆವು. ಪಿಯುಸಿ ಪರೀಕ್ಷೆಯ ಸಿದ್ಧತೆಗಳಿಂದಾಗಿ ನಾನು ಯಾವುದೇ ಪ್ರವಾಸಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಪರೀಕ್ಷೆಯ ನಂತರ ಈ ಸ್ಥಳಕ್ಕೆ ಭೇಟಿ ನೀಡುವುದು ನನಗೆ ಮನಸ್ಸಿನ ಶಾಂತಿ ನೀಡಿತು. ಇದು ನನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಲು ಸಹಾಯ ಮಾಡಿತು.
ಕಾಲೇಜಿನ ಬಗ್ಗೆ ನನ್ನ ಅಭಿಪ್ರಾಯ
ಬದಲಾಯಿಸಿಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಮ್ ವ್ಯಾಸಂಗ ಮಾಡುತ್ತಿದ್ದೇನೆ.ಈ 3 ತಿಂಗಳಲ್ಲಿ ಈ ಕಾಲೇಜು ನನಗೆ ಸಾಕಷ್ಟು ತರಬೇತಿ ನೀಡಿದೆ. 3 ವರ್ಷಗಳಲ್ಲಿ ನಾನು ಇನ್ನೂ ಹೆಚ್ಚಿನದನ್ನು ಕಲಿಯುತ್ತೇನೆ ಎಂದು ನಾನು ಭಾವಿಸುತ್ತೇನೆ.