ಸದಸ್ಯ:Pruthviraj pruthvi/ನನ್ನ ಪ್ರಯೋಗಪುಟ ೫
ಪದ್ಮಿನಿ ಚೆಟ್ಟೂರ್ (ಜನನ 1970) ಭಾರತೀಯ ಸಮಕಾಲೀನ ನೃತ್ಯಗಾರ್ತಿ, ನೃತ್ಯ ನಿರ್ದೇಶಕಿ ಚಂದ್ರಲೇಖಾ ಅವರಿಂದ ತರಬೇತಿ ಪಡೆದಿರುವ ಇವರು ಭಾರತದ ಚೆನ್ನೈನಲ್ಲಿ ತಮ್ಮದೇ ಆದ ಪದ್ಮಿನಿ ಚೆಟ್ಟೂರ್ ಡ್ಯಾನ್ಸ್ ಕಂಪನಿಯನ್ನು ನಡೆಸುತ್ತಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ 1970 ರಲ್ಲಿ ಜನಿಸಿದ ಪದ್ಮಿನಿ ಚೆಟ್ಟೂರ್ ಬಾಲ್ಯದಲ್ಲಿಯೇ ಭಾರತೀಯ ಶಾಸ್ತ್ರೀಯ ನೃತ್ಯ-ಶೈಲಿಯ ಭರತ ನಾಟ್ಯದಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಿದರು. ಅವರು 1991 ರಲ್ಲಿ ಪಿಲಾನಿಯ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಬಿ.ಐ.ಟಿ.ಎಸ್) ನಿಂದ ಪದವಿ ಪಡೆದಿದ್ದಾರೆ. ವೃತ್ತಿ ಬದುಕು ಪದ್ಮಿನಿ ತನ್ನ ಮೊದಲ ನೃತ್ಯ ಪ್ರಯೋಗವನ್ನು 1989 ರಲ್ಲಿ ಪ್ರಸ್ತುತಪಡಿಸಿದರು. 1991 ರಲ್ಲಿ ಚಂದ್ರಲೇಖಾ ನಡೆಸುತ್ತಿದ್ದ ನೃತ್ಯ ಕಂಪನಿಗೆ ಸೇರಿಕೊಂಡು ೨೦೦೧ರ ವರೆಗೆ ಜೊತೆಯಲ್ಲಿಯೇ ಕೆಲಸ ಮಾಡುತ್ತಾ, 'ಲೀಲಾವತಿ,' 'ಪ್ರಾಣ,' 'ಅಂಗಿಕ,' 'ಶ್ರೀ,' 'ಭಿನ್ನ ಪ್ರವಾಹ,' 'ಯಂತ್ರ,' 'ಮಹಾಕಾಲ್' ಮತ್ತು 'ಶರೀರಾ' ನಿರ್ಮಾಣಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇದರ ಜೊತೆಯಲ್ಲಿ ತಮ್ಮ ಮೊದಲ ಏಕ ವ್ಯಕ್ತಿ ನೃತ್ಯ `ವಿಂಗ್ಸ್ ಅಂಡ್ ಮಾಸ್ಕ್' (೧೯೯೯) ಪ್ರಸ್ತುತಪಡಿಸಿದರು. ಇದರ ನಂತರ 'ಬ್ರೌನ್' ಪ್ರೇಮ ಗೀತೆಯಾದ 'ಅನ್ ಸಾಂಗ್', ಗುಂಪು ನರ್ಮಾಣದ 'ಫ್ರಾಜಿಲಿಟಿ' ಮತ್ತು 'ಸೋಲೋ' (೨೦೦೩) ಈ ಮೂರು ವಿಭಾಗಗಳ ನಂತರ ಮತ್ತೊಂದು ಗುಂಪು ನಿಮಾಣದ 'ಪೇಪರ್ ಡಾಲ್' ಬಂದಿತು. ಇವರು ನಿರ್ಮಾಣದ 'ಪುಶ್ಡ್' ಎನ್ನುವ ಪ್ರದರ್ಶನವು ಸಿಯೋಲ್ ಪರ್ಫಾಮಿಂಗ್ ಆರ್ಟ್ಸ್ ಫೆಸ್ಟಿವಲ್ (ಎಸ್.ಪಿ.ಎ.ಎಫ್) ೨೦೦೬ರಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿತು ಮತ್ತು ಬ್ರಸೆಲ್ಸ್, ಹಾಲೆಂಡ್, ಸಾಲ್ಜ್‌ಬರ್ಗ್, ಪ್ಯಾರಿಸ್ ಮತ್ತು ಲಿಸ್ಬನ್‌ಗಳಲ್ಲಿ ಪ್ರದರ್ಶನ ಮಾಡಲಾಯಿತು. 'ಬ್ಯೂಟಿಫುಲ್ ಥಿಂಗ್ 1' ಮತ್ತು 'ಬ್ಯೂಟಿಫುಲ್ ಥಿಂಗ್ 2' ಅನ್ನು ಕ್ರಮವಾಗಿ ಗುಂಪು ಮತ್ತು ಏಕವ್ಯಕ್ತಿ ಕೃತಿಯಾಗಿ ರಚಿಸಿ ಇದರಲ್ಲಿ ದೇಹ ಮತ್ತು ಬಾಹ್ಯಾಕಾಶದ ಸೌಂದರ್ಯದ ರಾಜಕೀಯವನ್ನು ಅನ್ವೇಷಿಸಿತು.