ಸದಸ್ಯ:Pruthviraj pruthvi/ನನ್ನ ಪ್ರಯೋಗಪುಟ೩

ಕಮಲ ದೇವಿ ಹ್ಯಾರಿಸ್ (ಅಕ್ಟೋಬರ್ ೨೦, ೧೯೬೪)[] ಅಮೆರಿಕಾ ರಾಜಕಾರಣಿ ಮತ್ತು ವಕೀಲರಾಗಿದ್ದಾರೆ. ಪ್ರಸ್ತುತ ಅಮೆರಿಕಾದ ೪೯ನೇ ಉಪಾದ್ಯಕ್ಷೆಯಾಗಿದ್ದು, ಈ ಹುದ್ದೆಯನ್ನು ಪಡೆದ ಮೊದಲ ಮಹಿಳೆಯಾಗಿದ್ದಾರೆ. ಡೆಮಾಕ್ರೆಟ್ಪಕ್ಷದ ಸದಸ್ಯೆಯಾದ ಇವರು ೨೦೧೧ ರಿಂದ ೨೦೧೭ರ ವರೆಗೆ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ, ೨೦೧೭ರಿಂದ ೨೦೨೧ರ ವರೆಗೆ ಸೆನೆಟರ್ ಆಗಿ ಕ್ಯಾಲಿಫೋನಿ‍ಯಾವನ್ನು ಪ್ರತಿನಿಧಿಸಿದ್ದಾರೆ.[][] ಕಮಲಾ ಹ್ಯಾರಿಸ್ ಅವರು ಕ್ಯಾಲಿಫೋನಿ‍ಯಾದ ಓಕ್ಲ್ಯಾಂಡ್ ನಲ್ಲಿ ಜನಿಸಿ, ಹೊವರ್ಡ್ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಹ್ಯಾಸ್ಟಿಂಗ್ ಲಾ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಅಲಮೆಡ ಕೌಂಟಿಯ ಜಿಲ್ಲಾ ಅಟಾರ್ನಿಯಾಗಿ ಆರಂಭಿಸಿದರು. ಸ್ಯಾನ್ ಫ್ರಾನ್ಸಿಸ್ಕೊ ​​​​ಡಿಎ ಕಚೇರಿಗೆ ನೇಮಕಗೊಳ್ಳುವ ಮೊದಲು ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದಾರೆ.[] ನಂತರ ೨೦೦೩ ರಲ್ಲಿ ಅವರು ಸ್ಯಾನ್ ಫ್ರಾನ್ಸಿಸ್ಕೋದ ಡಿಎ ಆಗಿ ಆಯ್ಕೆಯಾದರು. ೨೦೧೦ರಲ್ಲಿ ಕ್ಯಾಲಿಫೊರ್ನಿಯಾದ ಎಜಿ ಯಾಗಿ ಆಯ್ಕೆಯಾದ ಇವರು ೨೦೧೪ರಲ್ಲಿ ಅದೇ ಹುದ್ದೆಗೆ ಮರು ಆಯ್ಕೆಯಾಗುತ್ತಾರೆ. ಹ್ಯಾರಿಸ್ ೨೦೧೭ ರಿಂದ ೨೦೨೧ ರವರೆಗೆ ಕ್ಯಾಲಿಫೋರ್ನಿಯಾದಿಂದ ಕಿರಿಯ ಯುಎಸ್ ಸೆನೆಟರ್ ಆಗಿ ಸೇವೆ ಸಲ್ಲಿಸಿ, ೨೦೧೬ ರ ಸೆನೆಟ್ ಚುನಾವಣೆಯಲ್ಲಿ ಲೊರೆಟ್ಟಾ ಸ್ಯಾಂಚೆಜ್ ಅವರನ್ನು ಸೋಲಿಸಿ ಎರಡನೇ ಆಫ್ರಿಕನ್-ಅಮೇರಿಕನ್ ಮಹಿಳೆ ಮತ್ತು ಯುಎಸ್ ಸೆನೆಟ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ದಕ್ಷಿಣ ಏಷ್ಯಾದ ಅಮೆರಿಕನ್ ಆಗಿದ್ದಾರೆ.[] ಸೆನೆಟರ್ ಆಗಿ ಇವರು ಆರೋಗ್ಯ ಸುಧಾರಣೆ, ಕ್ಯಾನಬಿಸ್‌ಗಳ ಮರು ವಸತಿ ಕಾಯ‍ಕ್ರಮ, ದಾಖಲೆರಹಿತ ವಲಸಿಗರಿಗೆ ಪೌರತ್ವ ಪಡೆಯಲು ಸಹಾಯ, ಡ್ರೀಮ್ ಆಕ್ಟ್, ಆಕ್ರಮಣಕಾರಿ ಶಸ್ತ್ರಾಸ್ತ್ರಗಳ ಮೇಲಿನ ನಿಷೇಧ ಮತ್ತು ಪ್ರಗತಿಪರ ತೆರಿಗೆ ಸುಧಾರಣೆಗಾಗಿ ಕೆಲಸ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಎರಡನೇ ಸುಪ್ರೀಂ ಕೋರ್ಟ್ ನಾಮನಿರ್ದೇಶಿತ ವಕೀಲ ಬ್ರೆಟ್ ಕವನಾಗ್ ಸೇರಿದಂತೆ, ಸೆನೆಟ್ ವಿಚಾರಣೆಯ ಸಮಯದಲ್ಲಿ ಟ್ರಂಪ್ ಆಡಳಿತದ ಅಧಿಕಾರಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಕ್ಕಾಗಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರು.[] ಕಮಲ ಹ್ಯಾರಿಸ್ ೨೦೨೦ ರ ಡೆಮಾಕ್ರಟಿಕ್ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಮನಿರ್ದೇಶನವನ್ನು ಬಯಸಿದರಾದರೂ ಪ್ರಾರಂಭಿಕ ಹಂತದಲ್ಲಿಯೇ ಸ್ಪರ್ಧೆಯಿಂದ ಹಿಂದೆ ಸರಿದರು. ಆದರೆ ಈ ಚುನಾವಣೆಯಲ್ಲಿ ಹ್ಯಾರಿಸ್ ಅವರನ್ನು ಜೋ ಬಿಡೆನ್ ಅವರ ಸಹವರ್ತಿಯಾಗಿ ಆಯ್ಕೆ ಮಾಡಿದರು. ೨೦೨೦ ರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಸೋಲನುಭವಿಸಿದರು. ಹ್ಯಾರಿಸ್ ಮತ್ತು ಬಿಡೆನ್ ಅವರು ಜನವರಿ ೨೦, ೨೦೨೧ ರಂದು ಅಮೆರಿಕಾದ ಅಧ್ಯಕ್ಷ ಮತ್ತು ಉಪಾದ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

  1. https://www.mercurynews.com/2020/08/18/heres-kamala-harris-birth-certificate-end-of-debate/
  2. https://edition.cnn.com/2020/08/11/politics/harris-indian-roots/index.html
  3. https://www.deccanherald.com/india/karnataka/bengaluru/indian-origin-politicians-around-the-world-918148.html
  4. https://web.archive.org/web/20201014130548/https://www.harris.senate.gov/about
  5. https://en.wikipedia.org/wiki/Deccan_Herald
  6. https://www.washingtonpost.com/politics/kamala-harris-enters-2020-presidential-race/2019/01/21/d68d15b2-0a20-11e9-a3f0-71c95106d96a_story.html