Preethi 1940558
Joined ೧೧ ಜುಲೈ ೨೦೧೯
ನನ್ನ ಹೆಸರು ಪ್ರೀತಿ .ನಾನು ೧೪ ಜನವರಿ ೨೦೦೧ರಲ್ಲಿ ಜನಿಸಿದ್ದೇನೆ .ನನ್ನ ಜನ್ಮಸ್ಥಳ ನೆರಳೂರು ಆನೇಕಲ್ ತಾಲ್ಲೂಕು . ನನ್ನ ತಂದೆಯ ಹೆಸರು ಶಿವಪ್ಪ .ನನ್ನ ತಾಯಿಯ ಹೆಸರು ಗೌರಮ್ಮ .ನನ್ನ ತಂದೆ ಮತ್ತು ತಾಯಿ ಇಬ್ಬರೂ ರೈತಾಪಿ ಕುಟುಂಬದಿಂದ ಬಂದವರು . ಈ ವಿಷಯಕ್ಕೆ ನಾನು ಹೆಮ್ಮೆ ಪಡುತ್ತೇನೆ .ಪೋಷಕರ ಸಹಾಯ ಮತ್ತು ಪ್ರೋತ್ಸಾಹದಿಂದ ಬೆಳೆದ ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಛಲ ತೊಟ್ಟು ಮುಂದುವರಿದೇ.ನನಗೆ ಹಿರಿಯ ಸಹೋದರಿ ಒಬ್ಬರು ಇದ್ದಾರೆ ಅವರು ಕೂಡ ನನಗೆ ಯಾವಾಗಲೂ ಸಹಾಯ ಮಾಡುತ್ತಾರೆ .ನಾನು ಶಾಲಾ ಕಾಲೇಜು ಎರಡು ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಕೇಂದ್ರದಲ್ಲಿ ಮುಗಿಸಿದೆ .ನಾನು ನನ್ನ ಈಗಿನ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮಾಡುತ್ತಿದ್ದೇನೆ .ಇನ್ನು ನಮ್ಮ ಊರಿನ ಬಗ್ಗೆ ಹೇಳಬೇಕೆಂದರೆ ನಮ್ಮ ಊರಿನಲ್ಲಿ ಅನೇಕ ಅನೇಕ ದೇವಸ್ಥಾನಗಳಿವೆ ಆ ದೇವಸ್ಥಾನಗಳಲ್ಲಿ ಶಿವನ ದೇವಸ್ಥಾನ ಬಹಳ ಅದ್ಭುತವಾಗಿದೆ ,ಅದನ್ನು ನೋಡಲು ಎರಡು ಕಣ್ಣುಗಳು ಸಾಲದು .ಹಾಗೂ ನಮ್ಮ ಊರಿನಲ್ಲಿ ಒಂದು ಗ್ರಂಥಾಲಯ ಕೂಡ ಇದೇ ,ಅದರಲ್ಲಿ ಅನೇಕ ಪುಸ್ತಕಗಳು ಪುರಾತನ ಪುಸ್ತಕಗಳು ಕೂಡ ಲಭ್ಯವಿದೆ . ನನ್ನ ಜೀವನದಲ್ಲಿ ನನ್ನ ಮೇಲೆ ಹೆಚ್ಚಾಗಿ ಪ್ರಭಾವ ಬೀರಿದ್ದು ಯೋಗ ,ನಮ್ಮೆಲ್ಲರಿಗೂ ತಿಳಿದ ಹಾಗೆ ಯೋಗದಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ .ಯೋಗದಿಂದ ರೋಗ ಮಾಯ ಎಂಬ ಮಾತು ನಮಗೆ ತಿಳಿದಿದೆ, ಹಾಗೆ ನನ್ನ ಜೀವನದಲ್ಲಿ ಕೂಡ ಯೋಗಾಸನವು ಹೆಚ್ಚಿನ ಪಾತ್ರ ವಹಿಸಿದೆ .ಈ ಕಲೆಯನ್ನು ಏಳು ವರ್ಷದಿಂದ ಅಭ್ಯಾಸ ಮಾಡುತ್ತಿದ್ದೇನೆ ಹಾಗೆ ನನ್ನ ಮುಂದಿನ ಗುರಿಯು ಯೋಗಾಸನವೇ ಆಗಿದೆ. ಪ್ರತಿಯೊಬ್ಬರು, ಜೀವನದಲ್ಲಿ ಅವರವರ ಕಲೆ ಮತ್ತು ಪ್ರತಿಭೆಗಳಿಂದ ಮುಂದುವರಿಯುವುದು ಉತ್ತಮ . ನಾನು ಯೋಗವನ್ನು ಕಲಿಯುವಾಗ ಅನೇಕ ಅಡೆತಡೆಗಳು ಬಂದರೂ ನಾನು ಯೋಗದ ಅಭ್ಯಾಸವನ್ನು ಬಿಡದೆ ಮುಂದುವರಿಸಿದೆ .ನನ್ನ ಶಿಕ್ಷಕರು ಕೂಡ ಈ ವಿಷಯಕ್ಕೆ ನನಗೆ ಹೆಚ್ಚಿನ ಸಹಾಯ ಮಾಡಿದ್ದಾರೆ ಇದುವರೆಗೂ ನಾನು ಒಂಬತ್ತು ರಾಜ್ಯಗಳಲ್ಲಿ ಯೋಗ ಪ್ರದರ್ಶನ ಮಾಡಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದೇನೆ ಇದಕ್ಕೆ ಸ್ಫೂರ್ತಿಯಾದವರು ಪುಟ್ಟರಾಜ ಗವಾಯಿಗಳು ನನ್ನ ಹಿರಿಯ ಗುರುಗಳು. ಹೀಗೆ ನನ್ನ ಜೀವನದ ಪುಟದಲ್ಲಿ ಈ ಯೋಗವು ಒಂದು ಮುಖ್ಯ ಪುಟವಾಗಿದೆ .ಅನಂತರ ನನ್ನ ವಿದ್ಯಾಭ್ಯಾಸದ ಬಗ್ಗೆ ಹೇಳಬೇಕೆಂದರೆ ನನಗೆ ಪುಸ್ತಕಗಳನ್ನು ಓದುವ ಅಭ್ಯಾಸವಿದೆ ಮತ್ತು ಆಗಾಗ ಸಣ್ಣಪುಟ್ಟ ಕವನಗಳನ್ನು ಬರೆಯುತ್ತಿರುತ್ತೇನೆ ಮೊದಲಿನಿಂದಲೂ ನಾನು ನನ್ನ ವಿದ್ಯಾಭ್ಯಾಸದಲ್ಲಿ ಚೆನ್ನಾಗಿ ಮುಂದುವರಿಯುತ್ತಾ ಬಂದಿದ್ದೇನೆ . ನನ್ನ ಹವ್ಯಾಸಗಳು ಹಾಡು, ಕುಣಿತ ಓದುವುದು ,ಚಿಕ್ಕ ಮಕ್ಕಳೊಂದಿಗೆ ಸಮಯ ಕಳೆಯುವುದು. ನನಗೆ ಇಷ್ಟವಾದ ಆಹಾರಗಳು ,ರಾಗಿ ಮುದ್ದೆ, ಚಪಾತಿ, ಶಾವಿಗೆ ಪೈಸಾ. ನನ್ನ ಜೀವನದಲ್ಲಿ ನನಗೆ ಬಹಳ ಅಚ್ಚುಮೆಚ್ಚಿನ ಗೆಳತಿ ಒಬ್ಬಳು ಇದ್ದಾಳೆ ,ಅವಳಿಂದ ನಾನು ಧೈರ್ಯ ವನ್ನು ಕಲಿತೆ ಮತ್ತು ಬಹಳ ಕಲೆಗಳನ್ನು ಕೂಡ ಕಲಿತು ಅರಿತೇ .ನನ್ನ ಜೀವನದಲ್ಲಿ ಹೊರ ಪ್ರಪಂಚ ಕಂಡಿದ್ದು ನಾನು ಪಿಯುಸಿ ಓದುವಾಗ ಏಳು ಗಂಟೆಯಿಂದ ರಾತ್ರಿ ಎಂಟು ರವರೆಗೆ ಕಾಲೇಜಿನಲ್ಲಿಯೇ ಇರುತ್ತಿದ್ದೆ. ಭಾನುವಾರ ದಿನದಂದು ಎಲ್ಲರೂ ಮಜಾ ಮಾಡುತ್ತಿದ್ದರೆ ನಾವು ಮಾತ್ರ ಕಾಲೇಜಿಗೆ ಹೋಗಿ ಪರೀಕ್ಷೆ ಬರೆಯುತ್ತಿದ್ದೆವು .ಆದರೆ ನನಗೆ ನನ್ನ ಕಾಲೇಜಿನ ನೆನಪುಗಳು ಮರುಕಳಿಸುತ್ತಿವೆ. ಇನ್ನು ನನ್ನ ಸ್ನೇಹಿತರು ಮಜಾ ಮನುಜರು ಪ್ರತಿದಿನವೂ ನಗು ನಗುತ್ತಲೇ ಇರುತ್ತಿದ್ದೆವು.ಪ್ರತಿನಿತ್ಯವೂ ಕಾಲೇಜಿನಲ್ಲಿ ಒಂದು ಒಳ್ಳೆಯ ವಿಷಯವನ್ನು ಕಲಿತು ಬರುತ್ತಿದ್ದೆವು .ಎಷ್ಟೋ ಬಾರಿ ಏನು ಮಾಡಬೇಕೆಂದು ತಿಳಿಯದೆ ಸಮಯವನ್ನು ಹಾಳು ಮಾಡಿದ್ದುಂಟು. ಇಂದಿಗೂ ಕೂಡ ಅವರ ನೆನಪಿನಲ್ಲೇ ನಾನು ಇದ್ದೇನೆ ಅವರ ಗೆಳೆತನವನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ . ಎಷ್ಟೋ ಬಾರಿ ನಮ್ಮ ಅತಿಯಾದ ನಗುವಿಗೆ ಶಿಕ್ಷಕರ ಬೈಗುಳಕ್ಕೆ ಒಳಗಾಗಿ ತರಗತಿಯಿಂದ ಹೊರ ಬಂದಿದ್ದುಂಟು. ಇನ್ನೂ ಈಗಿನ ಜೀವನವಂತೂ ಅದ್ಭುತ ಒಂದು ಬಾರಿ ಕೂಡ ಬೆಂಗಳೂರಿಗೆ ಒಬ್ಬಳೇ ಬಸ್ಸಿನಲ್ಲಿ ಬಂದವಳಲ್ಲ ಆದರೆ ಈಗ ಪ್ರತಿನಿತ್ಯವೂ ಒಬ್ಬಳೇ ಪ್ರಯಾಣ ಮಾಡುವುದು ಆಶ್ಚರ್ಯದ ಸಂಗತಿ. ನನಗೆ ಸಂಪೂರ್ಣವಾದ ನಂಬಿಕೆ ಇದೆ ನಾನು ಜೀವನದಲ್ಲಿ ಅಪ್ಪ ಅಮ್ಮನ ಹೆಸರನ್ನು ಉಳಿಸಿ ನಾನು ಅಂದುಕೊಂಡಿರುವ ಗುರಿಯನ್ನು ತಲುಪುತ್ತೇನೆ .ಯೋಗ ಕ್ಷೇತ್ರದಲ್ಲಿ ನಾನು ಚೆನ್ನಾಗಿ ಕಲಿತು ಪ್ರವೀಣೆ ಯಾಗಬೇಕೆಂದು ಕೊಂಡಿದ್ದೇನೆ . ಎಲ್ಲರಂತೆ ನನ್ನ ಜೀವನದಲ್ಲಿ ಕೂಡ ಒಂದು ಕಹಿ ಘಟನೆ ನಡೆದಿದೆ ಅದು ನಮ್ಮ ತಾತ ನಿಧನರಾದ ವಿಷಯ ನಾನು ಇಂದು ಜೀವಂತವಾಗಿ ಇರುವುದಕ್ಕೆ ಕಾರಣವೇ ಅವರು .ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ಬಂದ ಒಂದು ಕಾಯಿಲೆಯಿಂದ , ಬದುಕುವ ಅವಕಾಶಗಳು ನನಗೆ ಕಡಿಮೆ ಇತ್ತು. ಆದರೆ ನಮ್ಮ ತಾತ ಎಷ್ಟೋ ದಿನಗಳು ನಿದ್ದೆ ಮಾಡದೆ ನನ್ನ ರೋಗಕ್ಕೆ ಔಷಧಿಯನ್ನು ಹುಡುಕಿ ತಂದು ನನಗೆ ಸೇವಿಸಿದರು .ಆದ್ದರಿಂದ ದೇವರು ನಮಗೆ ಬದುಕಿನಲ್ಲಿ ತುಂಬಾ ಅವಕಾಶಗಳನ್ನು ಕೊಡುತ್ತಾನೆ ಆದರೆ ನಾವುಗಳು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ನಾವು ಯಾವ ಕೆಲಸ ಮಾಡುತ್ತಿರಲಿ ನಮಗೆ ಅದರ ಮೇಲೆ ಆಸಕ್ತಿ ಇದ್ದರೆ ಯಾರೂ ಕೂಡ ಅದನ್ನು ತಡೆಯಲು ಸಾಧ್ಯವಿಲ್ಲ .ಸೋತರೂ ಖುಷಿ ಪಡಿ ,ಗೆದ್ದರೂ ಖುಷಿ ಪಡಿ. ಏಕೆಂದರೆ ,ಸೋತರೆ ನಾವು ಅದೇ ತಪ್ಪನ್ನು ಮುಂದುವರಿಸುವುದಿಲ್ಲ ಗೆದ್ದರೆ ನಾವು ಆ ಕೆಲಸವನ್ನು ಕಲಿತು ಮುಂದೆ ಹೋಗಲು ಅವಕಾಶ ದೊರೆಯುತ್ತದೆ .ಆದ್ದರಿಂದ ನನಗೆ ಯಾವ ಕಷ್ಟ ಬಂದರೂ ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ .ಸೋಲೇ ಗೆಲುವಿನ ಮೆಟ್ಟಿಲು.