Prashasthi J T
ಆಹಾರ ಮತ್ತು ಘಟಕಗಳು ಎಲ್ಲಾ ಜೀವಿಗಳಿಗೂ ತಮ್ಮ ಬೆಳವಣಿಗೆ ಹಾಗೂ ಚಟುವಟಿಕೆ ಹಾಗೂ ಉಳಿವಿಗೆ ಅನೇಕ ವಸ್ತುಗಳ ಅವಶ್ಯಕತೆ ಇದೆ. ಅದರಲ್ಲಿ ಗಾಳಿ ನೀರು ಮತ್ತು ಆಹಾರ ಮುಖ್ಯವಾದುವು ಆಹಾರವಿಲ್ಲದೆ ಯಾವ ಜೀವಿಯೂ ಹೆಚ್ಚು ಕಾಲ ಬದುಕುಳಿಯಲಾರವು ಎಲ್ಲಾ ಜೀವಿಗಳಲ್ಲೂ ಕಂಡು ಬರುವ ಒಂದು ಸಾಮಾನ್ಯ ಅಂಶವೆಂದರೆ ಅವು ಆರೋಗ್ಯವಾಗಿ ಬದುಕುಳಿದು ತಮ್ಮ ಚಟುವಟಿಕೆಗಳನ್ನು ವ್ಯಕ್ತಪಡಿಸಲು ಆಹಾರದ ಅವಶ್ಯಕತೆ ಇರುವುದು. ಇದಕ್ಕೆ ಮಾನವರು ಹೊರತಲ್ಲ ಆಹಾರವಿಲ್ಲದೆ ಒಬ್ಬ ಮನುಷ್ಯ ಎಷ್ಟು ಕಾಲ ಬದುಕಿರಬಲ್ಲ? ಹೆಚ್ಚು ಕಾಲವಂತು ಅಲ್ಲ ಆಹಾರವೇ ನಮ್ಮ ರಕ್ತ ಮೂಳೆಗಳು ಮೆದುಳು ಹಾಗೂ ಮಾಂಸಖಂಡಗಳಾಗಿ ಮಾಪಡುತ್ತದೆ. ಸ್ವರೂಪ ಮತ್ತು ಪರಿಣಾಮವು ನಮ್ಮ ಗಾತ್ರ ಮತ್ತು ಬಲ ಹಾಗೂ ಗಾತ್ರವನ್ನು ನಿಧರಿಸುತ್ತದೆ. ಆಹಾರವು ನಮ್ಮ ದೇಹ ಪ್ರಕ್ರತಿ ಕಾಯಕ್ಷಮತೆ ಹಾಗು ಮಾನಸಿಕ ಬಲವನ್ನು ನಿಧರಿಸುತ್ತದೆ. ನಾವು ಬಾಯಿಯ ಮೂಲಕ ಆಹಾರವನ್ನು ತೆಗೆದುಕೊಳ್ಳುತ್ತೇವೆ. ಆಹಾರವನ್ನು ಬಾಯಿಯ ಮೂಲಕ ಸೇವಿಸಿ ನಂತರ ಅದು ಸುಲಭವಾಗಿ ಜೀಣಗೆಒಳಪಟ್ಟು ನಮಗೆ ಅವಶ್ಯಕವಾದ ಶಕ್ತಿ ಮತ್ತು ಪೋಷಕಗಳನ್ನು ಒದಗಿಸುತ್ತದೆ.ಆಹಾರದ ಸಾಮಾನ್ಯ ಕಾಯಗಳು ಮನುಷ್ಯನು ಸೇರಿ ಎಲ್ಲಾ ಜೀವಿಗಳಿಗೂ ಶಕ್ತಿಯ ಅವಶ್ಯಕತೆ ಇದೆ ಶಕ್ತಿ ನಮ್ಮ ಚಲನೆ ಬೆಳವಣಿಗೆ ಸಂತನೋತ್ಮತಿಗಳಿಗೆ ಅವಶ್ಯ. ಆಹಾರದ ಉದ್ದೇಶ ಇಷ್ಟಕ್ಕೆ ಸೀಮಿತವಲ್ಲ ಆಹಾರ ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ. ಆಹಾರವು ಬೆಳವಣಿಗೆಗೆ ಕಾರಣವಾಗುತ್ತದೆ. ಶಕ್ತಿಯನ್ನು ಒದಗಿಸುತ್ತದೆ. ಹಾಗು ದೇಹದ ಭಾಗಗಳ ರಿಪೇರಿಗೆ ಅವಶ್ಯವಾದ ವಸ್ತುಗಳನ್ನು ಒದಗಿಸುತ್ತದೆ. ನಮ್ಮ ಪ್ರತಿ ಉಸಿರು ಪ್ರತಿ ಅಲೋಚನೆ ಪ್ರತಿ ಚಲನೆ ನಮ್ಮ ದೇಹದ ಭಾಗಗಳನ್ನು ಸವೆಸುತ್ತದೆ. ಹೀಗೆ ಸವೆದ ಹಾಗೂ ಉಪಯುಕ್ತವಲ್ಲದ ಭಾಗಗಳನ್ನು ದೇಹದ ಬೇರೆ ಬೇರೆ ಪ್ರಕ್ರಿಯೆಗಳ ಮೂಲಕ ಹೊರಹಾಕಲಾಗುತ್ತದೆ. ಆಹಾರ ಮತ್ತು ಪಾನೀಯಗಳಲ್ಲಿರುವ ಅಂಶಗಳನ್ನು ಪಡೆಯುವ ಮೂಲಕ ದೇಹವು ಈ ನಷ್ಟವನ್ನು ಸರಿದೂಗಿಸುತ್ತದೆ.