ಮುಖ್ಯ ಮೆನು ತೆರೆ

ವಿಕಿಪೀಡಿಯ ಹುಡುಕು Show my notifications ಬದಲಾವಣೆಗಳು ಸದಸ್ಯ:Prajwal B Mantanavar/WEP 2019-20 (ಸಂಪಾದಿಸಿ) ೦೭:೧೪, ೧೧ ಜುಲೈ ೨೦೧೯ ನಂತೆ ಪರಿ

ಡವೆಜರ್ ಡಚೆಸ್ ಆಫ್ ಡೆವನ್‌ಶೈರ್

ಬದಲಾಯಿಸಿ

ಡವೆಜರ್ ಡಚೆಸ್ ಆಫ್ ಡೆವನ್‌ಶೈರ್, ಲೇಡಿ ಡೆಬೊರಾ ವಿವಿಯನ್ ಕ್ಯಾವೆಂಡಿಷ್ ಚಾಟ್ಸ್‌ವರ್ತ್ (೩೧ ಮಾರ್ಚ್ ೧೯೨೦ - ೨೪ ಸೆಪ್ಟೆಂಬರ್ ೨೦೧೪), ಒರ್ವ ಬ್ರಿಟಿಷ್ ರಜಮನೆತನದ ಸದಸ್ಯೆ ಹಾಗು ಹೆಸರಾಂತ ಬರಹಗಾರ್ತಿ. ೧೯೩೦ ಮತ್ತು ೧೯೪೦ರ ದಶಕಗಳಲ್ಲಿ ಇಂಗ್ಲಿಷ್ ಸಾರ್ವಜನಿಕ ಸಮಾಜದ ಪ್ರಮುಖ ಸದಸ್ಯರಾಗಿದ್ದ ಆರು ಮಿಟ್ಫೋರ್ಡ್ ಸಹೋದರಿಯರಲ್ಲಿ ಕಿರಿಯ ಮತ್ತು ಕೊನೆಯದಾಗಿ ಉಳಿದುಕೊಂಡವರಗಿದ್ದರು. "ಡೆಬೊ" ಎಂದು ತನ್ನ ಕುಟುಂಬದಿಂದ ಪರಿಚಿತವಾಗಿರುವ. ಇವರು ಇಂಗ್ಲೆಂಡಿನ ಆಕ್ಸ್‌ಫರ್ಡ್‌ಶೈರ್ನಲ್ಲಿ ಅಸ್ತಾಲ್ ಅರಮನೆಯಲ್ಲಿ ಜನಿಸಿದರು. ಇವರು ಲಾರ್ಡ್ ಡೇವಿಡ್ ಮಿಟ್ಫೋರ್ಡ್ ಹಾಗು ಲೇಡಿ ಸಿಡ್ನಿ ಮಿಟ್ಫೋರ್ಡ್ ಇವರಿಗೆ ೩೧ ಮಾರ್ಚ್ ೧೯೨೦ರಂದು ಜನಿಸಿದರು.

ಲೇಡಿ ಡೆಬೊರಾ ಅವರು ತಮ್ಮ ೧೪ನೇಯ ಶತಮಾನದ 'ಚಾಟ್ಸ್‌ವರ್ತ್ ಮ್ಯಾನರ್' ಅರಮನೆಯನ್ನು ದೇಶದಾದ್ಯಂತ ಪ್ರಸಿದ್ಧಿ ಪಡೆಸಿದ್ದರು. ಚಾಟ್ಸ್‌ವರ್ತ್ ಮ್ಯಾನರ್ ನಲ್ಲಿ ಒಟ್ಟು ಕೋಣೆಗಳಿದ್ದು, ೧೭ ಮೆಟ್ಟಿಲು, ೩೫೯ ದ್ವಾರಗಳು, ೭೮೭೩ ಗಾಜಿನ ಕಿಟಕಿಗಳಿದ್ದು ಇಂಗ್ಲೆಂಡಿನ ಪ್ರಮುಖ ಅರಮನೆಯಾದ ‘ಬಕಿಂಗ್ಹ್ಯಾಮ್’ ನಿಗಿಂತಲ್ಲೂ ಬೃಹತ್ತಾಗಿದೆ. ಇದಲ್ಲದೆ, ಐರ್ಲೆಂಡಿನಲ್ಲಿಯ ಲಿಸ್ಮೋರ್ ಕ್ಯಾಸಲ್, ಬೋಲ್ಟ್ನ್ ಅಬ್ಬೆ, ಮೆಫೇರ್ನಲ್ಲಿಯ ಈಸ್ಥಬೌರ್ನ್ ಕ್ಯಾಸ್ಲ್ ಅನ್ನುಕೂಡ ಲೇಡಿ ಡೆಬೊರಾ ಅವರು ಹೊಂದಿದ್ದರು.

ಇವರು ತಮ್ಮ ಬಳಿ ರಷ್ಯಾದ ದ್ವಿತೀಯ ತ್ಸಾರ್ ನಿನಿಕೋಲಸ್ ಅವರ ಪಟ್ಟಾಭಿಷೇಕಕ್ಕಾಗಿ ಬಳಸಿದ ವಜ್ರಕಚಿತ ಕಿರೀಟವನ್ನು ಹೊಂದಿದ್ದರು. ೧೯೭೦ರ ಪ್ರಸಿದ್ದ ಚಿತ್ರಗಾರನಾದ ಲೆಸಿಡರ್ ಅವರಿಂದ ಹಲವಾರು ನಯನಮನೋಹರವಾದ ಚಿತ್ರಗಳನ್ನು ಅವರು ರಚಿಸಿ ತಮ್ಮ ಅರಮನೆಯನ್ನು ಶೃಂಗರಿಸಿದ್ದರು. ಇವರ ಸೋದರ ಮಾವ ಅಮೇರಿಕದ ಅಧ್ಯಕ್ಷರಾದ ಜಾನ್ ಎಫ್ ಕೆನಡಿಯ ತಂಗಿಯನ್ನು ವಿವಾಹವಾಗಿದ್ದರು. ಅಂದಿನ ಬ್ರಿಟಿಷ್ ಪ್ರಧಾನ ಮಂತ್ರಿಯಾದ ಲಾರ್ಡ್ ಹೇರಾಲ್ಡ್ ಮ್ಯಾಕ್ಮಿಲನ್ ಅವರು ಲೇಡಿ ಡೆಬೊರಾ ಅವರ ಅತೀ ಹತ್ತಿರದ ಸಂಬಂಧಿಯಾಗಿದ್ದರು. ಸರ್ ಆಸ್ವಾಲ್ಡ್ ಮಾಸ್ಲೆ ಇವರ ಅಕ್ಕಳಾದ ಲೇಡಿ ಡಯಾನಾ ಮಾಸ್ಲೆ ಯನ್ನುವಿವಾಹಿಸಿದ್ದರು. ಎರಡನೆಯ ವಿಶ್ವ ಯುದ್ಧದ ಹಿಂದನ ದಿನಗಳಲ್ಲಿ ಲೇಡಿ ಡೆಬೊರಾ ಮತ್ತು ಜೆರ್ಮನಿಯ ನಾಜಿ ನಾಯಕನಾದ ಅಡಾಲ್ಫ್ಹಿಟ್ಲರ್ ಅವರೊಂದಿಗೆ ಉದ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದರು. ಅಲ್ಲದ್ದೆ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರೊಂದಿಗೆ ಶ್ವೇತ ಭವನದಲ್ಲಿ ನೃತ್ಯಿಸಿರುವ ಸಂಧರ್ಭವೂ ಇದೆ.

ಲೇಡಿ ಡೆಬೊರಾ ಅವರ ಪತಿ, ೧೧ನೇಯ ಡ್ಯೂಕ್ ಆಫ್ ಡೆವನ್‌ಶೈರ್, ಲಾರ್ಡ್ ಆಂಡ್ರೂ ಕ್ಯಾವೆಂಡಿಷ್ ಚಾಟ್ಸ್‌ವರ್ತ್, ಸರ್ ಪಿ ಜಿ ವುಡ್ಹೌಸ್ ಅವರ ಕಥೆಗಳಲ್ಲಿ ಸಾಮಾನ್ಯವಾಗಿ ಮೂಡಿಬರುವ ಕಾಲ್ಪನಿಕ ನಾಯಕನಂತೆ ಇದ್ದರು. ಲಾರ್ಡ್ ಆಂಡ್ರೂ ಅವರು ೨೦೦೪ರಲ್ಲಿ ತಮ್ಮ ಕೊನೆಯ ಉಸಿರೆಳೆದರು. ಲಾರ್ಡ್ ಮತ್ತು ಲೇಡಿ ಚಾಟ್ಸ್‌ವರ್ತ್ ದಂಪತಿಗಳು ಬ್ರಿಟಿಷ್ ಮೌಲ್ಯಗಳನ್ನ, ಪದ್ದತಿಗಳನ್ನ ಮತ್ತು ನೈತಿಕ ಗುಣಗಳನ್ನು ಎತ್ತಿ ಹಿಡಿದು, ದೇಶಕ್ಕೆ ಮಾದರಿಯಾಗಿದ್ದರು. ಇವರಿಗೆ ಹುಟ್ಟಿದ ಏಳು ಮಕ್ಕಳಲ್ಲಿ ಕೇವಲ ನಾಲ್ಕು ಜನರು ಮಾತ್ರ ಬದುಕುಳಿದರು. ಲಾರ್ಡ್ ಆಂಡ್ರೂ ಅವರ ಬಳಿ ೩೦೦ಕ್ಕೂ ಅಧಿಕ ಅತ್ಯಂತ ಬೆಲೆಬಾಳುವ ರೇಷ್ಮೇಯ ಟೈಗಳು, ಹಲವಾರು ಮಿಲಿಟರಿ ಕ್ರಾಸ್ ಪದಕಗಳು ಹಾಗು ಲೂಸಿಯನ್ ಫ್ರ್ಯಾಡ್ ಮತ್ತು ಎಲಿಸಬೆತ್ ಫ್ರಿನ್ಕ್ಸ್ ಎಂಬ ಕಲಾವಿದರು ರಚಿಸಿದ ಸಹಸ್ತ್ರಾರು ಚಿತ್ರಗಳನ್ನು ಸಂಪಾದಿಸದ್ದರು. ತಮ್ಮ ಬಳಿ ಚಾಲನಾ ಪರವಾನಿ ಇಲ್ಲದಿದ್ದರೂ, ಇಂಗ್ಲೆಂಡ್ ದೇಶದ ಸಾರಿಗೆ ಸಚಿವಾಲಯದ ವಕ್ತಾರರಾಗಿ ಲಾರ್ಡ್ ಆಂಡ್ರೂ ಚಾಟ್ಸ್‌ವರ್ತ್ ಕೆಲಸ ಮಾಡಿದ್ದರು. ಲಾರ್ಡ್ ಆಂಡ್ರೂ ಮತ್ತು ಲೇಡಿ ಡೆಬೊರಾ ಅವರು ಜಾನ್ ಎಫ್ ಕೆನೆಡಿ ಅವರ ಪ್ರಮಾಣ ವಚನ ಸ್ವೀಕಾರ ಹಾಗು ಅವರ ಅನಿರೀಕ್ಷಿತ ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಂಡಿದ್ದರು. ಅವರು ಹಾರುತ್ತಿದ್ದ ಬೋಯಿಂಗ್ ೭೦೭ ವಿಮಾನದಲ್ಲಿ ಕೇವಲ ಬ್ರಿಟಿಷ್ ಮಹಾರಾಣಿ ದ್ವಿತೀಯ ಕ್ವೀನ್ ಎಲಿಜಬೆತ್ ಅವರ ಪತಿಯಾದ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್, ಅವರು ಪಯಣಿಸುತಿದ್ದರು. ಇವರು ಹಲವಾರು ಪುಸ್ತಕಗಳನ್ನು ಬರೆದಿರುವರು. ಅವುಗಳಲ್ಲಿ ‘ಚಾಟ್ಸ್‌ವರ್ತ್: ದಿ ಹೌಸ್’, ‘ದಿ ಚಾಟ್ಸ್‌ವರ್ತ್ ಕೂಕ್ಕರಿ ಬುಕ್’, ‘ಟ್ರೆಶರ್ಸ್ ಆಫ್ ಚಾಟ್ಸ್‌ವರ್ತ್: ಎ ಪ್ರೈವೇಟ ವ್ಯೂ’ ಅತೀ ಜನಪ್ರಿಯವಾದವು. ಡವೆಜರ್ ಡಚೆಸ್ ಆಫ್ ಡೆವನ್‌ಶೈರ್, ಲೇಡಿ ಡೆಬೊರಾ ವಿವಿಯನ್ ಕ್ಯಾವೆಂಡಿಷ್ ಚಾಟ್ಸ್‌ವರ್ತ್ ಅವರು ೨೪ ಸೆಪ್ಟೆಂಬರ್ ೨೦೧೪ರಲ್ಲಿ ತಮ್ಮ ೯೪ನೇಯ ಇಳಿವಯಸ್ಸಿನ್ನಲ್ಲಿ ತಮ್ಮ ಕೊನೆ ಉಸಿರೆಳೆದರು.