ಸದಸ್ಯ:Prajna gopal/ನನ್ನ ಪ್ರಯೋಗಪುಟ2
ಪಿಲಿಕುಳ ವಿಜ್ಞಾನ ಕೇಂದ್ರ
ಪಿಲಿಕುಳ ವಿಜ್ಞಾನ ಕೇಂದ್ರವು ಮಂಗಳೂರಿನ ಮೂಡುಶೆಡ್ದೆ ಗ್ರಾಮದಲ್ಲಿದೆ.ಇದನ್ನು ಸಂಸ್ಕ್ರತಿ ಸಚಿವಾಲಯದ ಅಡಿಯಲ್ಲಿ ರಾಷ್ಟೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿಯು ಜಂಟಿಯಾಗಿ ಸ್ಥಾಪಿಸಿದೆ.ಪಿಲಿಕುಳ ನಿಸರ್ಗಧಾಮದ ಸನಿಹ ಪಿಲಿಕುಳ ವಿಜ್ಞಾನ ಕೇಂದ್ರವನ್ನು ನಿರ್ಮಿಸಲಾಗಿದೆ.ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪ್ರಯೋಗಗಳನ್ನು ಅಲ್ಲಿ ಅಳವಡಿಸಲಾಗಿದೆ.ಕೇಂದ್ರದ ಹೊರಭಾಗದಲ್ಲಿಯೂ ಸಹ ವಿಜ್ಞಾನ ಪ್ರಯೋಗಗಳನ್ನು ಕಾಣಬಹುದು.ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಯಾದ ಜಾಗದಲ್ಲಿಯೇ ತಾರಾಲಯವನ್ನೂ ನಿರ್ಮಿಸಲಾಗಿದೆ. ಸಂದರ್ಶಕರು ಒಂದೇ ಸ್ಥಳದಲ್ಲಿ ವಿಜ್ಞಾನ,ತಂತ್ರಜ್ಞಾನ ಹಾಗೂ ಖಗೋಳಶಾಸ್ತ್ರದ ಮಾಹಿತಿಯನ್ನು ಹೊಂದಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಕರ್ನಾಟಕದ ಕರಾವಳಿ ಪ್ರದೆಶದಲ್ಲಿ ಬೇರೆ ಯಾವುದೇ ತಾರಾಲಯಗಳಿಲ್ಲ.ಪಿಲಿಕುಳ ತಾರಾಲಯವು ಕರ್ನಾಟಕದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮತ್ತು ಕೇರಳದ ನೆರೆಯ ಜಿಲ್ಲೆಗಳಿಗೆ ಪೂರೈಸುತ್ತದೆ.[೧]ತಾರಾಲಯವು ೧೫ ಮೀಟರ್ ವ್ಯಾಸದ ೨೩೦ ಸಾಮರ್ಥ್ಯ ಹೊಂದಿದೆ.ಇದು ದೇಶದಲ್ಲೇ ಇತ್ತೀಚಿನದು.ಮಂಗಳೂರಿನ ಈ ಪ್ರಾದೇಶಿಕ ವಿಜ್ಞಾನ ಕೇಂದ್ರವು ಉದ್ಯಾನವನಗಳ ಪ್ರಮುಖ ವ್ಯವಹಾರಗಳಲ್ಲಿ ಒಂದಾಗಿದೆ.