ಸದಸ್ಯ:Prajna gopal/ನನ್ನ ಪ್ರಯೋಗಪುಟ
ಉಂಡೋಲ್ಗ ಒಂದು ತಿನಿಸು. ಇದು ಕರಾವಳಿ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಅಕ್ಕಿ ಯಿಂದ ಮಾಡುವ ಈ ತಿನಿಸು ನೋಡಲು ಚಿಕ್ಕ ಉಂಡೆಯಂತೆ ಇರುತ್ತದೆ. ಇದು ಕಂದು ಬಣ್ಣದಲ್ಲಿರುತ್ತದೆ. ತಿನ್ನಲು ಬಹಳ ಗಟ್ಟಿಯಾಗಿರುತ್ತದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು:
- ಬೆಳ್ತಿಗೆ ಅಕ್ಕಿ
- ತೆ೦ಗಿನಕಾಯಿ
- ಮೆಣಸು
- ಕೊತ್ತ೦ಬರಿ
- ಜೀರಿಗೆ
- ಎಣ್ಣೆ
ಬೆಳ್ತಿಗೆ ಅಕ್ಕಿ, ತೆ೦ಗಿನಕಾಯಿ ತುರಿ, ಮೆಣಸು, ಕೊತ್ತಂಬರಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಡೆದು, ಮಸಾಲೆ ತಯಾರಿಸಿಕೊಳ್ಳಬೇಕು.ಬಾಣೆಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ, ಕಡೆದ ಮಸಾಲೆಯನ್ನು ಚಿಕ್ಕ ಚಿಕ್ಕ ಉ೦ಡೆಗಳನ್ನಾಗಿ ಮಾಡಿ ಎಣ್ಣೆ ಯಲ್ಲಿ ಬಿಡಬೇಕು. ಉಂಡೆ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆ ಯಿಂದ ಮೇಲಕ್ಕೆತ್ತಿದ್ದರೆ ಉಂಡೋಲ್ಗ ಸವಿಯಲು ಸಿಧ್ಧ.
ಸಿಗಡಿ ಚಟ್ನಿ ಸಿಗಡಿ ಚಟ್ನಿ ಯು ಕರಾವಳಿ ಭಾಗದಲ್ಲಿ ಕಂಡುಬರುತ್ತದೆ. ಬೇಕಾಗುವ ಸಾಮಗ್ರಿಗಳು:
- ತೆ೦ಗಿನ ತುರಿ
- ಮೆಣಸು
- ಬೆಳ್ಳುಳ್ಳಿ
- ಉಪ್ಪು
- ಹುಣಸೆ ಹಣ್ಣುhttps://en.wikipedia.org/wiki/Pouteria_campechiana
ಕೊಡೇರಿ
ಕೊಡೇರಿ ಒಂದು ಸ್ಥಳಾವಾಗಿದ್ದು,ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿದೆ.ನಾಗೂರನ್ನು ಹಾಯ್ದು ಒಳ ದಾರಿಯಲ್ಲಿ ಹೋದರೆ ಸಿಗುವುದೇ ಕೊಡೇರಿ.ಬಹಳ ಪುರಾತನವಾದ ಹನುಮಂತ ದೆವಸ್ಥಾನವನ್ನು ಇಲ್ಲಿ ಕಾಣಬಹುದಾಗಿದೆ.
ಅತ್ಯಂತ ದಟ್ಟವಾದ ಕಾಡುಗಳಿಂದ ತುಂಬಿದ ಪ್ರದೇಶ ಇದಾಗಿದ್ದು,ಹರಿಯುವ ನದಿಯನ್ನು ಕಾಣಬಹುದಾಗಿದೆ.ನದಿ ದಾಟಿ ಒಳ ಹಾದಿಯಲ್ಲಿ ಹೋದರೆ ಮನುಷ್ಯರ ವಾಸಸ್ಥಾನಗಳನ್ನು ಕಾಣಬಹುದು.ಮೊದಲು ಕೇವಲ ಮರಗಳೇ ತುಂಬಿದ ಊರು ಇದಾಗಿತ್ತು.ನಗರೀಕರಣದಿಂದಾಗಿ ಇಂದು ಅಲ್ಲಿ ರಸ್ತೆಗಳನ್ನು ಕಾಣಬಹುದಾಗಿದೆ.ಸ್ವಲ್ಪ ಮುಂದೆ ಹೋದರೆ ಕೊಡೇರಿ ಸಮುದ್ರವನ್ನು ಕಾಣಬಹುದಾಗಿದೆ.
ಹಾರ್ಧಿಕ್ ಪಾಂಡ್ಯ ಅತ್ಯನ್ತ ತಾಳ್ಮೆಯ ನಾಯಕ.[೧] ಮಲೆನಾಡಿನಲ್ಲಿ ಹಿಂದೆ ಸೀಮೆಗೊಂದೊಂದು ನಾಟಕವಿದ್ದ ದಾಖಲೆ ಇದೆ. ಈಗ ಅದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉಳಿದಿದೆ.[೨]
--Prajna gopal (ಚರ್ಚೆ) ೦೮:೫೫, ೨೫ ಜೂನ್ ೨೦೨೨ (UTC)
ಸಾಕುಪ್ರಾಣಿ | ಕಾಡುಪ್ರಾಣಿ |
---|---|
ನಾಯಿ | ಹುಲಿ |
ಬೆಕ್ಕು | ಚಿರತೆ |
ದನ | ಚಿಂಪಾಂಜಿ |
ಹೆಸರು | ಗುಳಿಗ |
---|---|
ಲಿಂಗ | ಗಂಡು |
ಊರು | ತುಳುನಾಡು |
ಪ್ರಸಿಧ್ದಿ | ಕಾರ್ಣಿಕ |
ಚಟುವಟಿಕೆ | ಸಕ್ರಿಯ |
ಅಲೆವೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪಡು ಅಲೆವೂರು, ಸುವರ್ಣ ಸಂಭ್ರಮದ ಭಜನಾ ಮಂಗಲೋತ್ಸವ - ೨೦೨೫
ಉದಯ ಸೇರಿಗಾರ್, ಕೆಳಮನೆ ಉಪಾಧ್ಯಕ್ಷರು, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಸುವರ್ಣ ಸಂಭ್ರಮ ಸಮಿತಿ ಇವರು ೬-೧೧-೧೯೬೪ ರಲ್ಲಿ ಕೃಷ್ಣ ಸೇರಿಗಾರ್ ಮತ್ತು ಪದ್ಮ ಸೇರಿಗಾರ್ತಿ ದಂಪತಿಗಳ ಏಳು ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದ್ದಾರೆ. ಇವರು ಪ್ರಾತಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಮುಗಿಸಿರುತ್ತಾರೆ. ಅಲ್ಲಿಂದ ಬದುಕನ್ನು ಪ್ರಾರಂಭಿಸಿ ಕೃಷಿಕರಾಗಿ ಹಾಗೂ ಮಣಿಪಾಲ ಪವರ್ ಪ್ರೆಸ್‌ನಲ್ಲಿ ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲಿಂದ ಅಂಗಡಿ ವ್ಯಾಪಾರವನ್ನು ನಡೆಸಿಕೊಂಡು ಬಂದಿರುತ್ತಾರೆ. ಇವರು ಸಮುದಾಯ ಅಲೆವೂರು ಇದರ ಸ್ಥಾಪಕ ಸದಸ್ಯನಾಗಿ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿರುತ್ತಾರೆ. ಇವರು ಸುಗುಣಾ ಎಂಬವರನ್ನು ವಿವಾಹವಾಗಿ, ಚಿನ್ಮಯಿ ಹಾಗೂ ತನ್ಮಯಿ ಎಂಬ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೆ. ಇವರು ಸುಮಾರು ೪ ದಶಕಗಳಿಗೂ ಮಿಕ್ಕಿ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಭಜನಾ ಸೇವೆ ಮಾಡಿಕೊಂಡು ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಮನೆಯಲ್ಲಿ ದೈವದ ಮುಕ್ಕಾಲ್ದಿ ಸೇವೆಯನ್ನೂ ಮಾಡಿಕೊಂಡು ಬಂದಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ. ನಿಮಗೆ ದೇವಿಯು ಆಯುರಾರೋಗ್ಯ, ಐಶ್ವರ್ಯ ನೀಡಿ ಕಾಪಾಡಲೆಂದು ಬಯಸುತ್ತೇವೆ.
ಅಧ್ಯಕ್ಷರು JC. ಅಶೋಕ್ ಶೇರಿಗಾರ್, ಅಲೆವೂರು, ಪ್ರಧಾನ ಕಾರ್ಯದರ್ಶಿ ಜಯಕರ್ ಸೇರಿಗಾರ್, ಕೆಳಮನೆ , ಗೌರವಾಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ಊರಿನ ಹತ್ತು ಸಮಸ್ತರು
ಜಯಕರ್ ಸೇರಿಗಾರ್
ಇವರು ಉಡುಪಿ ತಾಲೂಕಿನ ಅಲೆವೂರು ಗ್ರಾಮದಲ್ಲಿ ದಿ. ರಾಮ ಸೇರಿಗಾರ್ ಮತ್ತು ದಿ. ರಾಧ ಸೇರಿಗಾರ್ತಿ ಇವರ ದ್ವಿತೀಯ ಪುತ್ರನಾಗಿ ಜನಿಸಿದರು. ಇವರು ಹತ್ತನೇ ತರಗತಿಯವರೆಗೆ ವಿಧ್ಯಾಭ್ಯಾಸವನ್ನು ಪೂರೈಸಿರುತ್ತಾರೆ. ನಂತರ ಅಲೆವೂರಿನಲ್ಲಿ ೨೫ ವರ್ಷಗಳ ಕಾಲ ಜನರಲ್ ಸ್ಟೋರ್ ಮತ್ತು ಹೋಟೆಲ್ ಉದ್ಯಮವನ್ನು ನಡೆಸಿರುತ್ತಾರೆ. ಇವರು ಪಡು ಅಲೆವೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಕೂಡ ಆಗಿದ್ದರು ಮತ್ತು ಸಮುದಾಯ ಅಲೆವೂರು ಸಂಘದ ಸಕ್ರಿಯ ಸದಸ್ಯರೂ ಆಗಿರುತ್ತಾರೆ. ಇವರು ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುತ್ತಾರೆ.ಇವರು ಚಿಕ್ಕಂದಿನಿಂದಲೂ ಭಜನಾಸಕ್ತಿ ಹೊಂದಿದ್ದು, ಹತ್ತು ಹಲವಾರು ಭಜನಾ ಮಂಡಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯ-ಅಂತರ್‌ರಾಜ್ಯ ಮಟ್ಟದಲ್ಲೂ ತಮ್ಮ ಛಾಪು ಮೂಡಿಸಿ ಜನಮಣ್ಣನೆ ಗಳಿಸಿದ್ದಾರೆ. ಇವರು ಪತ್ನಿ ನಾಗವೇಣಿ ಮತ್ತು ಮಕ್ಕಳಾದ ಪ್ರತೀಕ್ಷಾ, ಪ್ರಜನಾ ಹಾಗೂ ಒಡಹುಟ್ಟಿದವರೊಂದಿಗೆ ಸಹಬಾಳ್ವೆ ನಡೆಸಿಕೊಂಡಿರುತ್ತಾರೆ.
ಇವರ ಈ ಎಲ್ಲಾ ಸೇವೆಯನ್ನು ಗುರುತಿಸಿ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ. ನಿಮಗೆ ದೇವಿಯು ಆಯುರಾರೋಗ್ಯ, ಐಶ್ವರ್ಯ ನೀಡಿ ಕಾಪಾಡಲೆಂದು ಬಯಸುತ್ತೇವೆ.
ಅಲೆವೂರು ಗೋಪಾಲ್ ಸೇರಿಗಾರ್ ಅಲೆವೂರು ಗೋಪಾಲ್ ಸೇರಿಗಾರ್ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಪಡು ಅಲೆವೂರಿನ ಕೆಳಮನೆಯವರು. ಇವರು ಹತ್ತು ಹಲವಾರು ಸಂಘ ಸಂಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಿರುತ್ತಾರೆ. ಇವರು ಐದು ವರ್ಷಗಳ ಕಾಲ ಮಂಡಲ ಪಂಚಾಯತ್‌ನ ಸದಸ್ಯರಾಗಿ ಹಾಗೂ ಐದು ವರ್ಷಗಳ ಕಾಲ ಗ್ರಾಮ ಪಂಚಾಯತಿನ ಸದಸ್ಯರಾಗಿ ಜನರ ನೋವು ಮತ್ತು ಸಂಕಷ್ಟಗಳಿಗೆ ಸ್ಪಂದಿಸಿ ಜನಮನ್ನಣೆ ಗಳಿಸಿರುತ್ತಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು ಅಲೆವೂರು ಇದರ ಎಸ್‌ಡಿಎಂಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪಿಡಬ್ಲ್ಯೂಡಿ ಕಾಂಟ್ರ್ಯಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಸುಶೀಲಾ, ಮಕ್ಕಳಾದ ಅನುಷಾ ಮತ್ತು ಪ್ರಜ್ಞಾ ಹಾಗೂ ಒಡಹುಟ್ಟಿದವರೊಂದಿಗೆ ಸಹಬಾಳ್ವೆ ನಡೆಸುತ್ತಿರುತ್ತಾರೆ. ೫೦ ವರ್ಷಗಳ ಕಾಲ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿ ಹತ್ತು ಹಲವಾರು ಊರುಗಳಲ್ಲಿ ಭಜನಾ ಸೇವೆಗಳಲ್ಲಿ ಭಾಗಿಯಾಗಿರುತ್ತಾರೆ. ಇವರ ಈ ಎಲ್ಲಾ ಸೇವೆಯನ್ನು ಗುರುತಿಸಿ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ. ನಿಮಗೆ ದೇವಿಯು ಆಯುರಾರೋಗ್ಯ, ಐಶ್ವರ್ಯ ನೀಡಿ ಕಾಪಾಡಲೆಂದು ಬಯಸುತ್ತೇವೆ.
ಲೀಲಾವತಿ ದೇವಾಡಿಗ ಸಮಾಜ ಸೇವಕಿ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಪಡು ಅಲೆವೂರಿನ ಲೀಲಾವತಿಯಯವರು ದಿ. ಶಂಕರ್ ದೇವಾಡಿಗ ಅವರ ಪತ್ನಿ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮತ್ತು ಊರಿನ ಹಲವಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ವಿವಾಹಕ್ಕೆ ಸಹಾಯಹಸ್ತ ಚಾಚಿರುತ್ತಾರೆ. ತಮ್ಮ ಬಿಡುವಿನ ಸಮಯದಲ್ಲಿ ಹತ್ತು ಹಲವಾರು ದೇವಸ್ಥಾನ ಹಾಗೂ ಇನ್ನಿತರ ಪುಣ್ಯಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖಾಂತರ ಧಾರ್ಮಿಕ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿರುತ್ತಾರೆ. ಅಲ್ಲದೇ ಇವರು ತಮ್ಮ ಐದು ಎಕರೆ ಕೃಷಿ ಭೂಮಿಯಲ್ಲಿ ಎರಡು ಬೆಳೆ ಕೃಷಿ ಮಾಡಿ ಆದರ್ಶ ಕೃಷಿಕರೆಂದೆನಿಸಿ 'ಮಹಿಳಾ ಕೃಷಿ ರತ್ನ ಪುರಸ್ಕಾರ' ವನ್ನು ಪಡೆದಿರುತ್ತಾರೆ. ಇವರ ಈ ಎಲ್ಲಾ ಸೇವೆಯನ್ನು ಗುರುತಿಸಿ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ. ನಿಮಗೆ ದೇವಿಯು ಆಯುರಾರೋಗ್ಯ, ಐಶ್ವರ್ಯ ನೀಡಿ ಕಾಪಾಡಲೆಂದು ಬಯಸುತ್ತೇವೆ.
ಅಲೆವೂರು ಐತು ದೇವಾಡಿಗ ಗೌರವಾಧ್ಯಕ್ಷರು, ಸುವರ್ಣ ಸಂಭ್ರಮ ಸಮಿತಿ, ಪಡು ಅಲೆವೂರು ಪಡು ಅಲೆವೂರು ಗ್ರಾಮದ ಶ್ರೀಯುತ ಐತು ದೇವಾಡಿಗ ಅವರು ದಿ. ಶೀನಾ ಶೇರಿಗಾರ್ ಹಾಗೂ ಲಕ್ಷ್ಮೀ ಶೇರಿಗಾರ್ತಿ ದಂಪತಿಗಳ ಸುಪುತ್ರನಾಗಿ ಕೃಷಿ ಕುಟುಂಬದಲ್ಲಿ ಜನಿಸಿರುತ್ತಾರೆ. ಇವರು ಊರಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ನಡೆಸುತ್ತಾ ಬಂದಿರುವ ಇವರು ಕಳೆದ ಐದು ದಶಕಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತುಳುನಾಡಿನ ಜನಪ್ರಿಯ ಕ್ರೀಡೆಯಾದ ಕಂಬಳದಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದು ಕಂಬಳದ ಉಳಿವಿಗಾಗಿ ಸೇವೆ ಮಾಡಿದ ಕೀರ್ತಿಯನ್ನು ಹೊಂದಿದ್ದಾರೆ. ಮಡದಿ ಪ್ರೇಮ ಶೇರಿಗಾರ್ತಿ ಹಾಗೂ ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಅಲ್ಲದೇ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಸ್ಥಾಪಕ ಸದಸ್ಯನಾಗಿ ನಿರಂತರ ೫೦ ವರ್ಷ ಭಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ೨೦೨೫ ರ ಸುವರ್ಣ ಸಂಭ್ರಮದ ಗೌರವಾಧ್ಯಕ್ಷರೂ ಹೌದು. ಇವರ ಈ ಎಲ್ಲಾ ಸೇವೆಯನ್ನು ಗುರುತಿಸಿ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ. ನಿಮಗೆ ದೇವಿಯು ಆಯುರಾರೋಗ್ಯ, ಐಶ್ವರ್ಯ ನೀಡಿ ಕಾಪಾಡಲೆಂದು ಬಯಸುತ್ತೇವೆ.
ಶ್ರೀ ಲಕ್ಷ್ಮೀ ರಮಣ ಉಪಾಧ್ಯಾಯ ಪ್ರಧಾನ ಅರ್ಚಕರು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಪಡು ಅಲೆವೂರು ಇವರು ದಿ.೧೨-೦೭-೧೯೫೬ ರಂದು ದಿ. ವಾಸುದೇವ ಉಪಾಧ್ಯಾಯ ಹಾಗೂ ಶ್ರೀಮತಿ ಕೃಷ್ಣವೇಣಿ ಅಮ್ಮನವರ ಮಗನಾಗಿ ಪಡು ಅಲೆವೂರಿನಲ್ಲಿ ಜನಿಸಿದರು. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿರುತ್ತಾರೆ. ತಮ್ಮ ೧೫ನೇ ವಯಸ್ಸಿನಲ್ಲಿ ತಂದೆಯ ಒತ್ತಾಸೆಯಂತೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪೂಜಾದಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಧಾರ್ಮಿಕ ಕ್ಷೇತ್ರದಲ್ಲಿಯೂ ಹೆಸರು ಪಡೆದು ಅಲೆವೂರು ಪರಿಸರದಲ್ಲಿ 'ಗುಂಡಣ್ಣ'ನೆಂದೇ ಖ್ಯಾತಿಯಾಗಿರುತ್ತಾರೆ. ಇವರ ಪೂಜಾವಧಿಯಲ್ಲಿ ಅನೇಕ ಧಾರ್ಮಿಕ ಕೆಲಸಗಳು ಮತ್ತು ಅಭಿವೃದ್ಧಿ ಕೆಲಸಗಳು ನಡೆದಿವೆ. ಇವರು ಪ್ರಗತಿಪರ ಕೃಷಿಕರೆನಿಸಿಕೊಂಡು ಪತ್ನಿ ಶ್ರೀದೇವಿ, ೨ ಜನ ಗಂಡು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಹೊಂದಿ ಸುಖೀಜೀವನವನ್ನು ನಡೆಸುತ್ತಿದ್ದಾರೆ. ತಾವು ಶ್ರೀ ದೇವಿಯ ಸಾನಿಧ್ಯಕ್ಕೆ ಬರುವ ಭಕ್ತರ ಅಭೀಷ್ಟಗಳನ್ನು ನೆರವೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ ಹಾಗೂ ನಿರಂತರ ೫೦ ವರ್ಷದಿಂದ ದುರ್ಗಾಪರಮೇಶ್ವರಿಯ ಭಜನಾ ಮಂಗಲೋತ್ಸವದ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿರುತ್ತೀರಿ.
ಶ್ರೀ ಲಕ್ಷ್ಮೀ ನಾರಾಯಣ ಉಪಾಧ್ಯಾಯ ಅರ್ಚಕರು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಪಡು ಅಲೆವೂರು ಇವರು ದಿ.೧೪-೧೧-೧೯೫೦ ರಂದು ದಿ. ವಾಸುದೇವ ಉಪಾಧ್ಯಾಯ ಹಾಗೂ ಶ್ರೀಮತಿ ಕೃಷ್ಣವೇಣಿ ಅಮ್ಮನವರ ಪ್ರಥಮ ಪುತ್ರನಾಗಿ ಪಡು ಅಲೆವೂರಿನಲ್ಲಿ ಜನಿಸಿದರು. ತಾವು ಸುಮಾರು ೪೦ ವರ್ಷಗಳಿಂದ ಪಡು ಅಲೆವೂರು ಮತ್ತು ಮೂಡು ಅಲೆವೂರು ದೇವಸ್ಥಾನದಲ್ಲಿ ದೇವರ ಸೇವೆಯನ್ನು ಮಾಡುತ್ತಾ ಬಂದಿದ್ದೀರಿ. ಚಿಕ್ಕಂದಿನಿಂದಲೂ ಪ್ರತಿನಿತ್ಯ ಉಷಾಕಾಲ ಪೂಜೆಯನ್ನು ಮಾಡುತ್ತಾ ಬಂದಿದ್ದೀರಿ. ೩೮ ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸಿರುತ್ತೀರಿ ಹಾಗೂ ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೀರಿ. ನಮ್ಮ ದುರ್ಗಾಪರಮೇಶ್ವರಿ ಭಜನಾ ಮಂಡಳಿಗೂ ಕಳೆದ ೪೯ ವರ್ಷಗಳಿಂದ ಸಹಕಾರ ನೀಡುತ್ತಾ ಬಂದಿದ್ದೀರಿ.
ಕೌಶಿಕ್ ಗೋಪಾಲಕೃಷ್ಣ ಉಪಾಧ್ಯಾಯ ಸಮಾಜ ಸೇವಕರು ನಿಮ್ಮ ಹಿರಿಯರಾದ ಶ್ರೀ ಲಕ್ಷ್ಮೀ ನಾರಾಯಣ ರಾಮಕೃಷ್ಣ ಉಪಾಧ್ಯಾಯ ಇವರು ಭಜನೆಗೆ ನೀಡಿದ ಮೂರ್ತಿ ಹಾಗೂ ತಾಳದ ಸೇವೆಯನ್ನು ಗುರುತಿಸಿ ನಿಮಗೆ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ. ನಿಮಗೆ ದೇವಿಯು ಆಯುರಾರೋಗ್ಯ, ಐಶ್ವರ್ಯ ನೀಡಿ ಕಾಪಾಡಲೆಂದು ಬಯಸುತ್ತೇವೆ.
ವೇದಮೂರ್ತಿ ವಿದ್ವಾನ್ ಹೆರ್ಗ ಜಯರಾಮ ತಂತ್ರಿ
ಪ್ರಧಾನ ತಂತ್ರಿಗಳು, ದುರ್ಗಾಪರಮೇಶ್ವರಿ ದೇವಸ್ಥಾನ, ಪಡು ಅಲೆವೂರು
ಅಜ್ಜನಾದ ವಾಸುದೇವ ತಂತ್ರಿಗಳ ಮೊಮ್ಮಗನಾಗಿ ದುರ್ಗಾ ಪರಮೇಶ್ವರಿ ದೇವಸ್ಥಾನ ಪಡು ಅಲೆವೂರು ಇದರ ಪ್ರಧಾನ ತಂತ್ರಿ ವರ್ಯರಾಗಿ ತಾವು ಅತ್ಯಂತ ಶ್ರದ್ಧಾ ಪೂರ್ವಕವಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿರುವಿರಿ. ತಮ್ಮ ನೇತೃತ್ವದಲ್ಲಿ ದೇವಸ್ಥಾನವು ಸಮಗ್ರ ಜೀರ್ಣೋದ್ಧಾರಗೊಂಡು ಅನೇಕ ಬ್ರಹ್ಮಕಲಶ , ಶತಚಂಡಿಕಾಯಾಗ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರೈಸಿದೆ. ಅಲ್ಲದೆ, ನಮ್ಮ ಊರಿನ ಭಕ್ತರಿಗೂ ಆಶೀರ್ವಚನ ನೀಡುತ್ತಾ ಬಂದಿದ್ದೀರಿ.
ಅಲೆವೂರು ಗಣಪತಿ ಕಿಣಿ ಸಮಾಜ ಸೇವಕರು ಇವರು ಅಲೆವೂರು ಗಣಪತಿ ಕಿಣಿ ಹಾಗೂ ಜಯಂತಿ ಕಿಣಿಯವರ ಪ್ರಥಮ ಪುತ್ರನಾಗಿ ಜನಿಸಿರುತ್ತಾರೆ. ಇವರು ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವು ಕಾಲ ಮುಂಬೈಯಲ್ಲಿ ಉದ್ಯೋಗದಲ್ಲಿದ್ದು ನಂತರ ಊರಿಗೆ ಮರಳಿ ಸ್ವಉದ್ಯೋಗ ಆರಂಭಿಸಿ ಕೃಷಿಕರಾಗಿ, ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿ, ಹೈನುಗಾರಿಗೆ, ರೈಸ್ ಮಿಲ್, ಎಣ್ಣೆ ಮಿಲ್, ಹಿಟ್ಟಿನ ಗಿರಣಿ, ಶಾಮಿಯಾನ ಹಾಗೂ ಕ್ಯಾಟರಿಂಗ್ ನಡೆಸಿ ಯಶಸ್ಸನ್ನು ಕಂಡವರು. ಕೊರಂಗ್ರಪಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನೆಹರೂ ಹೈಸ್ಕೂಲಿನ ಆಡಳಿತ ಸದಸ್ಯರಾಗಿದ್ದರು. ಪ್ರಸ್ತುತ ಶಾಂತಿ ನಿಕೇತನ ಶಾಲೆಯ ಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಮೂಲಕ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಣಿಪುರ, ಮರ್ಣೆ, ಅಲೆವೂರು ಗ್ರಾಮಗಳನ್ನೊಳಗೊಂಡ ಮಂಡಲ ಪಂಚಾಯತಿನ ಪ್ರಧಾನರಾಗಿ ೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸರ್ವಧರ್ಮ ಸಂಘಗಳಲ್ಲಿಯೂ, ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡು ಅನೇಕ ದಾನ-ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ಭಜನಾ ಮಂಡಳಿಗೂ ಹಲವಾರು ವರ್ಷಗಳಿಂದ ಶಾಮಿಯಾನ ಹಾಗೂ ಕುರ್ಚಿಯ ಸಹಕಾರ ನೀಡುತ್ತಾ ಬಂದಿದ್ದಾರೆ.
ಶ್ರೀಧರ್ ಶೆಟ್ಟಿ, ಅಲೆವೂರು, ದೊಡ್ಡಮನೆ ಸಮಾಜ ಸೇವಕರು ಮಾನ್ಯರೇ, ತಾವು ಹಾವಂಜೆ ಮುಗ್ಗೇರಿ ತಲಕಟ್ಟು ಮನೆ ಕೃಷ್ಣ ಶೆಟ್ಟಿ ಹಾಗೂ ದೊಡ್ಡಕ್ಕ ಶೆಡ್ತಿ ದಂಪತಿಗಳ ಸುಪುತ್ರನಾಗಿ ದಿ.೧೦-೦೫-೧೯೪೩ ರಂದು ಜನಿಸಿರುವಿರಿ. ತಾವು ಪದವಿ ವರೆಗಿನ ಶಿಕ್ಷಣವನ್ನು ಪೂರ್ಣಗೊಳಿಸಿರುತ್ತೀರಿ. ಕೃಷಿ ಕುಟುಂಬದವರಾದ ತಾವು ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಮಾಡಿ, ಇದರೊಂದಿಗೆ ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿಯೂ ಹಲವಾರು ಸರಕಾರದ ಕಾರ್ಯಗಳನ್ನು ಮಾಡಿರುತ್ತೀರಿ. ಅನೇಕ ಸೊಸೈಟಿಗಳಲ್ಲಿ ಪದಾಧಿಕಾರಿಯಾಗಿ ಹಾಗೂ ಅಧ್ಯಕ್ಷರಾಗಿ, ಪಡು ಅಲೆವೂರು ವ್ಯಾಘ್ರ ಚಾಮುಂಡಿ ಹಾಗೂ ಧೂಮಾವತಿ ದೈವಸ್ಥಾನದ ಆಡಳಿತ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತೀರಿ. ಅಲೆವೂರು ಕುಕ್ಕಿಕಟ್ಟೆಯ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮುಖ್ಯಸ್ಥರಾಗಿ, ಲಯನ್ಸ್ ಕ್ಲಬ್ ಹಾಗೂ ಇನ್ನಿತರ ಸಹಕಾರಿ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಿರಿ. ರಂಜನಾ ಶೆಟ್ಟಿಯವರನ್ನು ವರಿಸಿ, ರಂಜಿತ್ ಹಾಗೂ ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳು, ರಶ್ಮಿತಾ ಎಂಬ ಹೆಣ್ಣು ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ಸುಖವಾದ ಜೀವನ ನಡೆಸುತ್ತಿದ್ದೀರಿ. ತಮ್ಮ ದ್ವಿತೀಯ ಪುತ್ರನಾದ ರಕ್ಷಿತ್ ಶೆಟ್ಟಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ತಮ್ಮದು. ತಾವು ಹತ್ತು ಹಲವಾರು ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ಮಾಡಿ ನಮ್ಮ ಭಜನಾ ಮಂಡಳಿಗೂ ಸಹಕಾರ ನೀಡುತ್ತಾ ಬಂದಿದ್ದೀರಿ.
ನಾಗರಾಜ ರಾವ್, ಅಲೆವೂರು ಸಾನಿಕ ಸೇವೆ ತಾವು ವೆಂಕಟರಾಯರ ಗಂಡುಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದಿರಿ. ಪದವಿ ಶಿಕ್ಷಣವನ್ನು ಪೂರೈಸಿದ ನಂತರ ಕರ್ನಾಟಕ ಸರ್ಕಾರದ ಕೆಳಹಂತದ ಅಧಿಕಾರಿಯಾಗಿ ನೇಮಕವಾದ ತಾವು, ತಮ್ಮ ೩೪ ವರ್ಷಗಳ ಸೇವಾವಧಿಯಲ್ಲಿ ತಹಶೀಲ್ದಾರರಾಗಿ, ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೀರಿ. ನಿಮ್ಮ ಉತ್ತಮ ಸಾರ್ವಜನಿಕ ಸೇವೆಗಾಗಿ ಹತ್ತು ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವಿರಿ. ತಾವು ಪತ್ನಿ ಶಾಂತಾರವರಲ್ಲಿ ರೂಪಾ ಹಾಗೂ ರೇಖಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಪಡೆದಿದ್ದೀರಿ. ಮಕ್ಕಳಿಬ್ಬರಿಗೂ ಉನ್ನತ ಶಿಕ್ಷಣ ನೀಡಿ, ವಿವಾಹ ಮಾಡಿ ನಿಮ್ಮ ಜೀವನವನ್ನು ಸಂತೃಪ್ತಿಯಿಂದ ನಡೆಸುತ್ತಿರುತ್ತೀರಿ. ನೀವು ಎಲ್ಲಾ ಸಹೋದರರೂ ಉನ್ನತ ಮಟ್ಟದ ಅಧಿಕಾರಿಯಾಗಿದ್ದರೂ ಕೂಡ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದೀರಿ. ನಿಮ್ಮ ತಂದೆಯವರಾದ ವೆಂಕಟರಾಯರು ಜೀವಿತಾವಧಿಯಲ್ಲಿ ೭೦ ವರ್ಷಗಳ ಕಾಲ ದೇವಸ್ಥಾನದ ದರ್ಶನ ಪಾತ್ರಿಯಾಗಿ ಗಮನ ಸೆಳೆದವರು. ವೆಂಕಟರಾಯರು ಹಾಗೂ ನೀವು ಸಹೋದರರು ದೇವರ ಚಾಕರಿಯನ್ನು ಅತ್ಯಂತ ನಿಷ್ಠೆಯಿಂದ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದೀರಿ. ಸಾರ್ವಜನಿಕ ಸೇವೆಯಲ್ಲಿ ನೀವು ಗಳಿಸಿದ ಖ್ಯಾತಿ, ಈ ಗ್ರಾಮದ ಜನತೆಗೆ ಸರಕಾರದ ವಿವಿಧ ಸೌಲಭ್ಯಗಳನ್ನು ದೊರಕಿಸುವಲ್ಲಿ ನಿಮ್ಮ ಶ್ರಮ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸುದೀರ್ಘ ಅವಧಿಯ ಸೇವೆಯನ್ನು ಸಲ್ಲಿಸಿ ಇಂದಿಗೂ ನೆನಪನ್ನು ಉಳಿಸಿರುವ ದಿ. ವೆಂಕಟರಾಯರ ಸೇವೆಯನ್ನು ಸ್ಮರಿಸಿ ತಮಗೆ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ.
ಡಾ. ಕೆ. ಕೃಷ್ಣರಾಜ್ ಭಟ್ ಅನುವಂಶಿಕ ಆಡಳಿತ ಮುಖ್ಯಸ್ಥರು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಪಡು ಅಲೆವೂರು ಇವರು ೧೯೫೨ ಫೆಬ್ರವರಿ ೨೩ ರಂದು ಶ್ರೀ ಕುಂಜಾರು ರಂಗಣ್ಣ ಭಟ್ ಹಾಗೂ ಶ್ರೀಮತಿ ಲಕ್ಷ್ಮೀ ಭಟ್‌ರವರ ಸುಪುತ್ರರಾಗಿ ಜನಿಸಿದರು. ವೈದ್ಯಕೀಯ ವೃತ್ತಿಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಉಡುಪಿಯ ಮತ್ತು ಅಲೆವೂರಿನ ಹೆಸರನ್ನು ಜಗತ್ತಿನಾದ್ಯಂತ ಪಸರಿಸಿ ದೇಶ ವಿದೇಶಗಳಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ ಅದ್ಭುತ ವೈದ್ಯ ಇವರು. ಎಲ್ಲಾ ವರ್ಗದ ರೋಗಿಗಳನ್ನು ಸಮಾನವಾಗಿ ಕಾಣುತ್ತಾ ಮಾತಿನಲ್ಲೇ ರೋಗವನ್ನು ಗುಣಪಡಿಸುವ ಅದ್ಭುತ ಶಕ್ತಿ ಹೊಂದಿರುವ ಇವರು ಮಾನವ ಕುಲಕ್ಕೆ ಸಿಕ್ಕ ಅಮೂಲ್ಯ ರತ್ನ. ಅದಲ್ಲದೆ ರಂಗಣ್ಣ ಭಟ್‌ರ ಮಗನಾಗಿ ಪರಂಪರೆಯಿಂದ ಬಂದಿರುವ ಪಡುಅಲೆವೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರಾಗಿರುತ್ತಾರೆ. ಆಡಳಿತವನ್ನು ಪರಂಪರಾಗತವಾಗಿ ಮಾಡಿಕೊಂಡು, ಅವರ ಅವಧಿಯಲ್ಲಿ ಬೇಕಾದಷ್ಟು ದೆವಸ್ಥಾನದ ಅಭಿವೃದ್ಧಿ ಕೆಲಸಗಳನ್ನು ದೇವಪರವಾಗಿ ಮಾಡಿದ್ದಾರೆ. ಅವರ ೪೦ ವರ್ಷದ ಅವಧಿಯಲ್ಲಿ ದೇವಸ್ಥಾನದಲ್ಲಿ ೪ ಬ್ರಹ್ಮಕಲಶ, ಅವಿರತವಾಗಿ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ. ಇತ್ತೀಚೆಗೆ ನಡೆದಿರುವ ಪುನರ್ ಜೀರ್ಣೋದ್ಧಾರ ಕಾರ್ಯದಲ್ಲೂ ಅವರು ನೇತೃತ್ವ ವಹಿಸಿದ್ದು, ಈ ಎಲ್ಲಾ ಕರ್ಮಾಂಗಗಳ ಕರ್ತೃವಾಗಿ ಇಂದು ನಮಗೆ ಕಾಣುವ ಈ ಕ್ಷೇತ್ರಕ್ಕೆ ಮೂಲ ರುವಾರಿಯಾಗಿದ್ದಾರೆ. ಸಮಗ್ರ ಭಕ್ತ ಜನತೆಯ ಒಳಿತಿಗಾಗಿಯೂ ಶ್ರಮವಹಿಸಿದ ಇವರು ನಮ್ಮ ಇಂದಿನ ಸುವರ್ಣ ಸಂಭ್ರಮದ ಗೌರವಾಧ್ಯಕ್ಷರು ಎಂದು ಹೇಳಿಕೊಳ್ಳಲು ಹರ್ಷಿಸುತ್ತೇವೆ. ದಿನಾಂಕ : 03-01-2025
ಎ ವಾಸು ಸೇರಿಗಾರ ಶ್ರೀ ಎ ವಾಸು ಸೇರಿಗಾರ, ಪಡುಅಲೆವೂರಿನ ನಿವಾಸಿಯಾಗಿದ್ದು ದಿ. ಎ.ವೆಂಕ ಸೇರಿಗಾರ ಮತ್ತು ದಿ. ಮೀನಾಕ್ಷಿ ಅಮ್ಮನವರ ತೃತೀಯ ಪುತ್ರರಾಗಿ ಜನಿಸಿರುತ್ತಾರೆ. ಶ್ರೀ ದೇವಿಯ ಪರಮ ಭಕ್ತರಾದ ಇವರು ಭಜನೆ ಮತ್ತು ದೈವ ದೇವರ ಕೆಲಸದಲ್ಲಿ ಅಪಾರ ನಂಬಿಕೆ ಮತ್ತು ಆಸಕ್ತಿಯನ್ನು ಹೊಂದಿದ್ದು ೧೯೭೪ ರಲ್ಲಿ ತಮ್ಮ ಕುಟುಂಬ ಹಾಗೂ ಗೆಳೆಯರೊಂದಿಗೆ ಸೇರಿಕೊಂಡು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಸ್ಥಾಪನೆಗೆ ಕಾರಣರಾಗಿರುತ್ತಾರೆ. ಆ ಮಂಡಳಿಯು ಇಂದಿಗೆ ಸುವರ್ಣ ಸಂಭ್ರಮವನ್ನು ಆಚರಿಸುತ್ತಿದೆ. ಇವರು ವೃತ್ತಿಯಲ್ಲಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ವಾಹನ ಚಾಲಕರಾಗಿರುತ್ತಾರೆ. ಕೃಷಿ ಕುಟುಂಬದವರಾದ ಇವರು ಕೃಷಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕರ್ತವ್ಯ ನಿಷ್ಠೆ, ಶಿಸ್ತು ಹಾಗೂ ಒಳ್ಳೆಯತನವನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರ ಇವರಿಗೆ ೨೦೦೭ ರಲ್ಲಿ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಹಾಗೂ "ಅತ್ಯುತ್ತಮ ನಾಗರಿಕ ಸೇವಾ ಸಿಬ್ಬಂದಿ ಪ್ರಶಸ್ತಿ"ಯನ್ನು ನೀಡಿ ಗೌರವಿಸಿದೆ. ಊರ ಸಂಘ ಸಂಸ್ಥೆ ಭಜನಾ ಮಂಡಳಿ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದಿಂದ ಪುರಸ್ಕಾರ ಹಾಗೂ ಸನ್ಮಾನಗಳನ್ನು ಪಡೆದಿರುತ್ತಾರೆ. ಇವರು ಶ್ರೀಮತಿ ಕಲ್ಯಾಣಿ ಇವರನ್ನು ವಿವಾಹವಾಗಿ, ದಾಂಪತ್ಯ ಜೀವನದಲ್ಲಿ ಸುಧೀರ್, ವಿದ್ಯಾಲಕ್ಷ್ಮಿ, ವಿನಯ, ಸುದರ್ಶನ ಎಂಬ ಮಕ್ಕಳನ್ನು ಹೊಂದಿ ಸಂತೃಪ್ತ ಜೀವನವನ್ನು ನಡೆಸುತ್ತಿರುತ್ತಾರೆ. ಇವರು ಇಂದಿಗೂ ತಮ್ಮ ಮನೆಯಲ್ಲಿ ಭಜನಾ ಮಂಗಲೋತ್ಸವವನ್ನು ಆಚರಿಸಿಕೊಂಡು ಬಂದಿರುತ್ತಾರೆ. ಇವರು ನಮ್ಮ ಸುವರ್ಣ ಸಂಭ್ರಮದ ಗೌರವಾಧ್ಯಕ್ಷರೂ ಹೌದು.
ಇವರ ಈ ಎಲ್ಲಾ ಸೇವೆಯನ್ನು ಗುರುತಿಸಿ " ಶೀ ದುರ್ಗಾನುಗ್ರಹ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದ್ದೇವೆ. ಶ್ರೀ ದೇವಿಯ ಕೃಪಾಕಟಾಕ್ಷ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ ಎಂದು ನಾವು ಹರಸುತ್ತೇವೆ.