Pragathi Amin
ನನ್ನ ಕವನಗಳು
ಕನಸುಗಳ ಕೋಣೆಯಲಿ
ಚೆಲ್ಲಿದ ಮಲ್ಲಿಗೆಯು
ಕವಿತೆಯ ರಾಗದಲಿ
ಚೈತನ್ಯ ತುಂಬಿರಲಿ
ಮನಸ್ಸಿನ ಭಾವಗಳು
ನಗುವಿನ ಸಂತಸದಲಿ
ರಂಗೋಲಿ ಚೆಲ್ಲಿರಲು
ಎದೆ ತುಂಬಿ ನಗುತ್ತಿರಲು
ಮನಬಿಚ್ಚಿ ಬರೆಯುತ್ತಿರಲು
ಹೊಂಗನಸಿನ ಈ ಸಂಜೆಯ
ಸುಂದರ ದೃಶ್ಯದಲಿ
ಹಕ್ಕಿಗಳ ಕೂಗುಗಳಲಿ
ಸುಂದರ ಪ್ರಕೃತಿಯ ಲೋಕದಲಿ
ನಾ ನಿಂದೆ ಆನಂದ ಬಾಷ್ಟದಲಿ
ಹನಿಗವನ
ನನಗೊಂದು ತಿಳಿದಿದೆ ಮೌಲ್ಯ
ನಿನಗಾಗಿ ಕಾಯುತ್ತಿದೆ ಭಾಗ್ಯ
ನೋಡು ನೋಡು ಪರಿಸರ ಜನ್ಯ
ನನ್ನ ಗೆಳತಿಯ ಹೆಸರು ವನ್ಯ
ನಾವೆಲ್ಲ ಇಂದು ಸೌಖ್ಯ
ಜೀವನದಲ್ಲಿ ನೋವು-ನಲಿವು ಮುಖ್ಯ
ನಮ್ಮ ಕನಾ೯ಟಕ ರಾಜ್ಯ
ನಾವೆಲ್ಲರೂ ಯಾವಾಗಲೂ ಧನ್ಯ
ಕಟ್ಟುಕಟ್ಟು ಹೊಸ ವಾಕ್ಯ
ಬಿಚ್ಚಿ ತೋರಿಸು ಕೌಶಲ್ಯ
ನಾನು ಮುಂದೆ ಆಗುವೆ ಗಣ್ಯ
ಜನ ಸೇವೆಯಿಂದ ನಿನ್ನ ಬಾಳು ಧನ್ಯ
ನನ್ನದೊಂದು ಪುಟ್ಟ ಕವನ
ಅದರಲ್ಲಿದೆ ಸುಖ ದುಃಖದ ಜೀವನ
ಅಲ್ಲಿ ತುಂಬಿದೆ ಜನಗಳ ನತ೯ನ
ನಮ್ಮೆಲ್ಲರ ಹೃದಯಲ್ಲಿ ದೇವರ ನಮನ
ಮಂಗಳೂರಿನಲ್ಲಿ ದೆ ಒಂದು ಪುರಭವನ
ದಿನ ದಿನ ಬೆಳೆಯುತ್ತಿದೆ ವಿಜ್ಞಾನ
ಆಕಾಶದಲ್ಲಿ ನೋಡು ಕೆಂಪು ಬಣ್ಣದ ವಿಮಾನ
ಅದು ಸಾಗುವ ದಾರಿಯೆ ಗಗನ
ಬಾಲ್ಯದಲ್ಲಿ ನಗುವೆ ಕಾಣುವೆ
ಕವಿತೆಯಲ್ಲಿ ರಾಗ ಕಾಣುವೆ
ನೃತ್ಯದಲ್ಲಿ ನಾಟ್ಯ ಕಾಣುವೆ
ಚಿತ್ರದಲ್ಲಿ ಸಾಧನೆ ಕಾಣುವೆ
ಮನದಲ್ಲಿ ಆನಂದ ಕಾಣುವೆ
ಪರಿಸರದಲ್ಲಿ ಸ್ವಚ್ಚತೆ ತಾಣುವೆ
ಶಾಲೆಯಲ್ಲಿ ಮಕ್ಕಳ ಕಾಣುವೆ
ಮಕ್ಕಳಲ್ಲಿ ಶಿಸ್ತು ಕಾಣುವೆ
ಶಿಸ್ತಿನಲ್ಲಿ ಗುಣ ಕಾಣುವೆ
ಗುಣದಲ್ಲಿ ಅಂದ ಕಾಣುವೆ
ಪ್ರಕೃತಿಯಲ್ಲಿ ಹೂವ ಕಾಣುವೆ
ಹೂವಿನಲ್ಲಿ ಮಕರಂದ ಕಾಣುವೆ
ಮಕರಂದದಲ್ಲಿ ನಿನ್ನ ಸುಂದರ ನಗೆ ಕಾಣುವೆ
ನಗೆಯಲ್ಲಿ ಆ ದೇವರ ಕಾಣುವೆ